ಲೀಲಾವತಿ ದಕ್ಷಿಣ ಭಾರತ ಕಂಡ ಹೆಸರಾಂತ ನಟಿ. ನೂರಾರು ಸಿನಿಮಾಗಳು ಸಾವಿರಾರು ಪಾತ್ರಗಳು ಆದರೆ ನಿಜ ಜೀವನ ಮಾತ್ರ ಬಹಳ ದು’ರಂ’ತ ಅಂತ್ಯ. ಸಿನಿಮಾ ತೆರೆ ಮೇಲೆ ರಾಣಿಯಾಗಿ, ದೇವತೆಯಾಗಿ, ಅಪ್ಸರೆಯಾಗಿ, ಮಡದಿಯಾಗಿ, ಅಮ್ಮನಾಗಿ ರಂಜಿಸಿದ ಈ ರಂಗನಾಯಕಿ ನಿಜ ಜೀವನದಲ್ಲಿ ಅನುಭವಿಸಿದ್ದು ಮಾತ್ರ ಸಾಲು ಸಾಲು ಕಷ್ಟಗಳು.
1937ರ ಡಿಸೆಂಬರ್ 24ರಂದು ಅಂದಿನ ಮುಂಬೈ ಪ್ರಾಂತ್ಯಕ್ಕೆ ಸೇರಿದ ಸೌತ್ ಕೆನರಾದ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರ ಮೊದಲ ಹೆಸರು ಲೀಲಾ ಕಿರಣ್. ಹೆಣ್ಣು ಮಗಳಾಗಿ ಹುಟ್ಟಿದ ಕಾರಣಕ್ಕೆ ಹುಟ್ಟಿದಾಗಲೇ ಮನೆಗೆ ಬೇಡವಾದ ಇವರಿಗೆ ಹತ್ತಿರದಲ್ಲಿದ್ದ ಕ್ರೈಸ್ತ ಕುಟುಂಬ ಆಸರೆ ನೀಡಿತ್ತು. ಕಂಕನಾಡಿಯ ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿವರೆಗೂ ಶಾಲೆ ಕಲಿತರು ಆದರೆ ಶಾಲೆಯಲ್ಲಿ ಆದ ಬಿಸಿ ಎಣ್ಣೆ ಕಾಲಿನ ಮೇಲೆ ಬಿದ್ದ ದುರಂತದಿಂದ ಶಾಲೆಯ ಬಾಗಿಲು ಅಂದೇ ಅವರ ಪಾಲಿಗೆ ಮುಚ್ಚಿಕೊಂಡಿತ್ತು.
ಹೇಗೋ ಬೆಳೆದ ಇವರಿಗೆ ಸಿನಿಮಾಗೆ ಹೋದರೆ ಹೆಚ್ಚು ದುಡ್ಡು ಸಿಗುತ್ತದೆ ಎನ್ನುವ ವಿಷಯ ತಿಳಿಯಿತು ಹಾಗಾಗಿ ಸ್ನೇಹಿತೆ ಜೊತೆಗೆ ಮಂಗಳೂರಿನಿಂದ ಮೈಸೂರಿಗೆ ತಲುಪಿದರು. ಮೈಸೂರಿನಲ್ಲಿ ಕರಾವಳಿ ಮೂಲದ ನಿರ್ದೇಶಕರಾದ ವಿಟ್ಟಲ್ ಆಚಾರ್ಯ ಎನ್ನುವವರ ಬಳಿ ಸಿನಿಮಾ ಅವಕಾಶ ಕೇಳಿದಾಗ ಅವರು ರಂಗಭೂಮಿ ತಯಾರಿಯಿಲ್ಲದೆ ಆಕ್ಟಿಂಗ್ ಮಾಡುವುದು ಕ’ಷ್ಟ ಹೇಳಿ ಎಂದು ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಸೇರಿಸಿದರು.
1953ರಲ್ಲಿ ತಮ್ಮ 16ನೇ ವಯಸ್ಸಿಗೆ ಚಂಚಲಕುಮಾರಿ ಎನ್ನುವ ಸಿನಿಮಾದಲ್ಲಿ ಸಖಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು. ಬಳಿಕ ಸಿನಿಮಾ ಅವಕಾಶಗಳು ಸಾಲಾಗಿ ಬಂದವು ಆದರೆ ಅದು ಹೊಟ್ಟೆಪಾಡಿಗೆ ಆಯಿತು ಅಷ್ಟೇ. ಸಿನಿಮಾಗಳ ಮೇಲೆ ಲೀಲಾವತಿಯವರು ಎಷ್ಟು ಅವಲಂಬಿತರಾದರು ಎಂದರೆ ಸಿನಿಮಾ ಇಲ್ಲದಿದ್ದರೆ ಹೊಟ್ಟೆ ತುಂಬಾ ಊಟ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಯಾವ ಪಾತ್ರ ಸಿಕ್ಕರು ಒಪ್ಪಿಕೊಳ್ಳುತ್ತಿದ್ದರು.
ನಿದ್ದೆ ಮಾಡುವಾಗ ಸಮಯ ಸಿಕ್ಕಾಗಲ್ಲ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದರು, ಕುದುರೆ ಓಡಿಸುವ ದೃಶ್ಯ ಇದ್ದರೆ ಗೊತ್ತಿಲ್ಲ ಎಂದರೆ ಅವಕಾಶ ತಪ್ಪು ಹೋಗುತ್ತದೆ ಎಂದು ಹೇಗೆ ಮ್ಯಾನೇಜ್ ಮಾಡುತ್ತಿದ್ದರು. ಹೀಗೆ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ರಂಗದಲ್ಲೂ ಕೂಡ ನಟಿಯಾಗಿ, ಪೋಷಕ ಪಾತ್ರದಾರಿಯಾಗಿ ಕಾಣಿಸಿಕೊಂಡ ಇವರು ತಮ್ಮ 30ನೇ ವಯಸ್ಸಿನಲ್ಲಿ ವಿನೋದ್ ರಾಜ್ ಅವರನ್ನು ಹಡೆದರು.
ಆದರೆ ಮಗು ಆದ ಸಮಯದಲ್ಲಿ ಸಿನಿಮಾರಂಗದಿಂದ ದೂರ ಇದ್ದ ಕಾರಣ ಬಹಳ ಕ’ಷ್ಟ ಅನುಭವಿಸುವಂತಾಗಿ ಒಮ್ಮೆ ಮಗುವನ್ನು ಕೊಂದು ತಾವು ಆ’ತ್ಮ’ಹ’ತ್ಯೆ ಮಾಡಿಕೊಳ್ಳಬೇಕು ಎನ್ನುವ ಕೆಟ್ಟ ಆಲೋಚನೆ ಕೂಡ ಮಾಡಿದ್ದರಂತೆ. ನಂತರ ಮನಸ್ಸು ಬದಲಾಯಿಸಿ ಬದುಕನ್ನು ಬೇರೆ ರೀತಿ ಕಟ್ಟಿಕೊಂಡ ಇವರು 2000 ವರ್ಷದಲ್ಲಿ ನೆಲಮಂಗಲ ಸಮೀಪ ಮನೆ ಹಾಗೂ ಜಮೀನು ಖರೀದಿಸಿನಲ್ಲಿ ನೆಲೆ ನಿಂತರು.
ಅದಕ್ಕೂ ಮುನ್ನ ಚೆನ್ನೈನಲ್ಲಿ ಕೆಲಸಮಯ ಜೀವಿಸಿ ಅಲ್ಲೂ ಕೂಡ ಆಸ್ತಿ ಖರೀದಿ ಮಾಡಿದ್ದರು. ಕೋವಿಡ್ ಸಮಯದಲ್ಲಿ ಆದ ಸಂಕಷ್ಟವನ್ನು ಕಣ್ಣಾರೆ ಕಂಡ ಇವರು ತಾವಿದ್ದ ಸೋಲದೇವನಹಳ್ಳಿ ಯಲ್ಲಿ ಒಂದು ಮಾದರಿ ಸರ್ಕಾರಿ ಆಸ್ಪತ್ರೆಯನ್ನು ಕಟ್ಟಿಸಿದರು ಹಾಗೂ ಒಂದು ಪಶು ಆಸ್ಪತ್ರೆ ಕೂಡ ನಿರ್ಮಿಸಿದರು. ತೀರ ಇತ್ತೀಚಿನವರೆಗೆ ವಿನೋದ್ ರಾಜಕುಮಾರ್ ಅವರು ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನು ಒಪ್ಪಿಕೊಂಡು ವಿಷಯ ಮುಚ್ಚಿಟ್ಟಿದ್ದಕ್ಕೆ ಸಮರ್ಥನೆಯನ್ನು ಕೂಡ ನೀಡಿದ್ದರು.
ಎಲ್ಲರಂತೆ ನನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಲಿಲ್ಲ, ಎಲ್ಲರಂತೆ ಮಾಡಲಾಗಲಿಲ್ಲವಲ್ಲ ಎನ್ನುವ ದುಃ’ಖ’ಕ್ಕೆ ಮುಚ್ಚಿಟ್ಟೆ ಎಂದು ಹೇಳಿದ್ದರು. ಇದರೆಲ್ಲದರ ನಡುವೆ ರಾಜ್ ಕುಮಾರ್ ಅವರ ಜೊತೆ ಲೀಲಾವತಿ ಅವರ ಹೆಸರು ತಳಕು ಹಾಕಿಕೊಂಡು ಹಲವಾರು ಬಾರಿ ಪತ್ರಿಕೆಗಳಿಗೆ ಹಾಗೂ ಮಾಧ್ಯಮಗಳಿಗೆ ಆಹಾರವಾಗಿದೆ.
ಪ್ರಕಾಶ್ ರಾಜ್ ಮೆಹು ಎನ್ನುವ ನಿರ್ದೇಶಕರು ಹಾಗೂ ರಾಜ್ ಕುಟುಂಬಕ್ಕೆ ಆತ್ಮೀಯರು ಮತ್ತು ಕನ್ನಡದ ಹೆಸರಂತ ಪತ್ರಕರ್ತರಾಗಿರುವ ಇವರು ಈ ವಿ’ವಾ’ದ’ಕ್ಕೆ ದ್ವಾರಕೀಶ್ ಕಾರಣ, ಶಿವಣ್ಣ ಸಿನಿಮಾ ಡೇಟ್ಸ್ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ ನನ್ನ ರಾಜ ಸಿನಿಮಾಗೆ ವಿನೋದ್ ರಾಜ್ ಹಾಕಿಕೊಂಡು ವಿನೋದ್ ಇದ್ದ ಹೆಸರನ್ನು ರಾಜ್ ಸೇರಿಸಿ ವಿ’ವಾ’ದ ಹುಟ್ಟು ಹಾಕಿದರು ಎಂದು ಹೇಳಿ ನಾನೇ ಸ್ವತಃ ಅಣ್ಣಾವ್ರ ಬಳಿ ಒಮ್ಮೆ ಕೇಳಿದ್ದೆ ಆಗ ವಯಸ್ಸು ಎಂತವರ ಬಳಿ ಆದರೂ ತ’ಪ್ಪು ಮಾಡಿಸುವುದು ಸಹಜ.
ಆದರೆ ವಿನೋದ್ ರಾಜ್ ಅವರು ಹುಟ್ಟುವ ವೇಳೆಗೆ ನಾನು ಅವರ ಜೊತೆ ಸಂಬಂಧ ಕಳೆದುಕೊಂಡು ಎರಡು ಮೂರು ವರ್ಷಗಳಾಯಿತು, ಆ ಸಮಯದಲ್ಲಿ ಅವರು ರಂಗಭೂಮಿ ಹಿನ್ನೆಲೆ ಹೊಂದಿರುವ ಮಹದೇವ್ ಭಾಗವತರ್ ಅವರನ್ನು ಮದುವೆ ಆಗಿದ್ದರು ಎಂದು ಸುದ್ದಿ ಈಗಲೂ ಅವರ ನನ್ನ ಹೆಸರು ಹೇಳುವುದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದರೆ ತಡೆದು ನಾನೇಕೆ ವಿ’ಲ’ನ್ ಆಗಲಿ ಎಂದಿದ್ದರು ಎಂದು ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು ಸಹ ಎಲ್ಲ ಜೋಡಿಗಳ ಬಗ್ಗೆ ಮಾತನಾಡುವಾಗ ರಾಜ್ ಲೀಲಾ ಜೋಡಿ ಕೂಡ ಚಂದ ಎಂದು ಹೇಳಿದಾಗ ಚಂದ ಎಂದು ಹೇಳಿದ ಮಾತ್ರಕ್ಕೆ ಜೋಡಿ ಆಗುವುದಿಲ್ಲ ಎಂದು ಮಾರ್ಮಿಕವಾಗಿ ಲೀಲಾವತಿಯವರು ನುಡಿದಿದ್ದರು. ಇತ್ತೀಚಿಗೆ ಪುನೀತ್ ರಾಜಕುಮಾರ್ ಅವರು ತೀ’ರಿಕೊಂಡಾಗ ಇಬ್ಬರು ಕೂಡ ಶ್ರೀರಂಗಪಟ್ಟಣದಲ್ಲಿ ಹೋಗಿ ತರ್ಪಣ ಅರ್ಪಿಸಿ ಬಂದಿದ್ದರು.
ತಾವು ರಾಜ್ ಕುಟುಂಬಕ್ಕೆ ಸೇರಿದವರು ಎಂದು ಬಿಂಬಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಪ್ರಕಾಶ್ ಮೆಹು ಅವರು ಮಾಡಿದ್ದರು. ಈ ಹಿಂದೆ ರಾಜ್ ಕುಮಾರ್ ಅವರು ತೀರಿಕೊಂಡಾಗಲು ಇಬ್ಬರು ತಲೆ ಕೂದಲು ಕೊಟ್ಟಿದ್ದರು ವಿಷಯ ಗೊತ್ತಾಗುವ ಮುನ್ನವೇ ತಿರುಪತಿಯಲ್ಲಿ ತಲೆಕೂದಲು ಕೊಟ್ಟಿದ್ದೆವು ಎಂದು ಸಂಬಾಳಿಸಿದ್ದರು. ಕೊನೆವರೆಗೂ ಕೂಡ ಇದೊಂದು ಪ್ರಶ್ನೆಗೆ ಕನ್ನಡಿಗರಿಗೆ ಸ್ಪಷ್ಟ ಉತ್ತರ ಸಿಗದೇ ಹೋಯಿತು ಎಂದು ಹೇಳಬಹುದು.