ನಮಗೆ ಬರುವಂತಹ ವಾಟ್ಸಪ್ ಮೆಸೇಜ್ ಗಳ ಮೇಲೆ ನಾವು ತೋರಿಸುವ ಉತ್ಸಾಹಕಿಂತ ನಮಗೆ ಯಾರಾದರೂ ವಾಟ್ಸಪ್ ಮೆಸೇಜ್ ಕಳುಹಿಸಿ, ನಂತರ ಅದನ್ನು ಡಿಲೀಟ್ ಮಾಡಿದರೆ ಅದರ ಮೇಲೆ ತೋರುವ ಆಸಕ್ತಿಯೇ ಹೆಚ್ಚು. ಆ ವಿಷಯ ಏನಿರಬಹುದು, ಯಾಕಾಗಿ ಅವರು ಮೆಸೇಜ್ ಡಿಲೆಟ್ ಮಾಡಿರಬಹುದು, ಓದುವ ಮುನ್ನವೇ ಯಾಕೆ ಡಿಲೀಟ್ ಮಾಡಿದರು, ಬ್ಲೂ ಟಿಕ್ ಬಂದಿಲ್ಲದಿದ್ದರೂ ಸಹ ವಿಷ್ಯ ಗೊತ್ತಾಗುವ ಮುನ್ನ ಯಾಕೆ ಡಿಲೀಟ್ ಮಾಡಿದರು ಅವರು ಏನನ್ನು ಮುಚ್ಚಿಡುತ್ತಿದ್ದಾರೆ.
ಅದರ ಹಿಂದಿನ ಉದ್ದೇಶವೇನು? ಮತ್ತೆ ಈ ಬಗ್ಗೆ ಪ್ರಶ್ನೆ ಮಾಡಬಹುದಾ? ಬೇಡವಾ? ಹೀಗೆ ಒಂದು ಸೆಕೆಂಡ್ ಗೆ ನಮ್ಮ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಡಿಲೀಟ್ ಆದ ಒಂದು ಮೆಸೇಜ್ ಉದ್ದೇಶದಿಂದ ಉದ್ಬವವಾಗಿ ಬಿಡುತ್ತದೆ. ಆದರೆ ಡಿಲೀಟ್ ಮಾಡುವ ಮೆಸೇಜನ್ನು ಕೂಡ ಓದುವ ಅವಕಾಶ ಇದ್ದಿದ್ದರೆ.
ಹೌದು, ಈಗ ತಂತ್ರಜ್ಞಾನವು ಬೆಳೆಯುತ್ತಲೇ ಇದೆ. ಇಷ್ಟೆಲ್ಲಾ ಮುಂದುವರೆದಿರುವಾಗ ಡಿಲೀಟ್ ಮಾಡಿದ ಮೆಸೇಜ್ ಅನ್ನು ಓದುವ ಅವಕಾಶ ಇರುವುದಿಲ್ಲವಾ ಖಂಡಿತ ಇರುತ್ತದೆ. ಕೆಲವರು ಆಪ್ ಗಳ ಮೊರೆ ಹೋಗುತ್ತಾರೆ. ಅವುಗಳಿಂದ ಅದು ಸಾಧ್ಯವಾದರೂ ಕೂಡ ಗೌಪ್ಯತೆ ಮೌಲ್ಯಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನಿಮ್ಮ ಮೆಸೇಜ್ಗಳು ಲೀಕ್ ಆಗಬಹುದು ಅಥವಾ ನಿಮ್ಮ ಮೊಬೈಲ್ ಹ್ಯಾಕ್ ಕೂಡ ಆಗಬಹುದು.
ಡಿಲೀಟ್ ಆಗಿರುವ ವಾಟ್ಸಪ್ ಮೆಸೇಜ್ ಓದುವ ಅವಕಾಶ ಇದೆ ಎನ್ನುವುದನ್ನು ಹೇಳಿದ ತಕ್ಷಣವೇ ಜನರು ಥ್ರಿಲ್ ಆಗುತ್ತಾರೆ. ಅವರ ಆಸೆಗೆ ನಿರಾಸೆ ಮಾಡದೆ ಅದಕ್ಕಿರುವ ವಿಧಾನಗಳನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ವಾಟ್ಸಪ್ ಸೆಟ್ಟಿಂಗನ್ನು ಒಮ್ಮೆ ಚೆಕ್ ಮಾಡಿದರೆ, ಅದರಲ್ಲಿ ಬ್ಯಾಕಪ್ ಎನ್ನುವ ಒಂದು ಆಪ್ಷನ್ ಇರುತ್ತದೆ. ಅದರಲ್ಲಿ ನಾಲ್ಕು ರೀತಿಯ ಆಪ್ಷನ್ಗಳು ಇರುತ್ತವೆ.
ನೆವರ್, ಡೈಲಿ ಬ್ಯಾಕಪ್, ವೀಕ್ಲಿ ಬ್ಯಾಕಪ್ ಮತ್ತು ಮಂತ್ಲಿ ಬ್ಯಾಕಪ್ ಇವುಗಳಲ್ಲಿ ನಿಮಗೆ ಪ್ರತಿದಿನ ಮೆಸೇಜ್ ಮಾಡುವವರು ಮಾಡಿರುವ ಮೆಸೇಜ್ ಗಳನ್ನು ಏನಿದೆ ಎಂದು ತಿಳಿದುಕೊಳ್ಳಲು ಡೈಲಿ ಬ್ಯಾಕಪ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಸಾಕು. ನಿಮಗೆ ಪ್ರತಿದಿನ ಮೆಸೇಜ್ ಮಾಡುವವರು ಈ ಮೆಸೇಜ್ ಗಳನ್ನು ಡಿಲೀಟ್ ಮಾಡಿ ಹೆಚ್ಚು ಹೊತ್ತು ಆಗಿರುವುದಿಲ್ಲ, ಆದ ಕಾರಣ ಹಾಗೂ ನೀವು ಅವರ ಮೆಸೇಜ್ ಗಾಗಿ ಕಾಯುತ್ತಿದ್ದರೆ ಅವರ ಮೆಸೇಜ್ ಬಂದು ಹೆಚ್ಚು ಹೊತ್ತು ಆಗಿರುವುದಿಲ್ಲ.
ಅದಕ್ಕಾಗಿ ಡೈಲಿ ಆಪ್ಷನ್ ಸೆಲೆಕ್ಟ್ ಮಾಡಿ ನೀವು ಈಸಿಯಾಗಿ ಅವರ ಮೆಸೇಜ್ ಓದಬಹುದು. ಈ ಆಪ್ಷನ್ ಸೆಲೆಕ್ಟ್ ಮಾಡಿದ ತಕ್ಷಣ ಡಿಲೀಟ್ ಆಗಿರುವ ಚಾಟ್ ಗಳೆಲ್ಲ ಮರಳಿ ಬರುವುದರಿಂದ ಓದಲು ಸಾಧ್ಯವಾಗುತ್ತದೆ ಮತ್ತೊಂದು ವಿಧಾನ ಇದೆ ಅದನ್ನು ಆಂಡ್ರಾಯ್ಡ್ 11 ಮತ್ತು ನಂತರದ ಅಪ್ಡೇಟ್ ವರ್ಷನ್ ಸೆಟ್ಗಳನ್ನು ಬಳಸುವವರು ಮಾತ್ರ ಬಳಸಬಹುದು.
ನಿಮ್ಮ ಮೊಬೈಲ್ ಫೋನ್ ಸೆಟ್ಟಿಂಗ್ ಅಲ್ಲಿ ಹೋಗಿ ನೋಟಿಫಿಕೇಶನ್ಗಳನ್ನು ಲಿಂಕ್ ಮೂಲಕ ಮೋರ್ ಸೆಟ್ಟಿಂಗ್ ಗೆ ಹೋಗಿ ನೋಟಿಫಿಕೇಶನ್ ಹಿಸ್ಟರಿ ಆನ್ ಮಾಡಿ. ಆಗ ದಿನದ 24 ಗಂಟೆಯಲ್ಲಿ ನಿಮಗೆ ಯಾವ ಯಾವ ನೋಟಿಫಿಕೇಶನ್ ಬಂದಿರುತ್ತದೆ. ಅದೆಲ್ಲಾ ಅದರಲ್ಲಿ ಇರುತ್ತದೆ, ಆಗ ಅಲ್ಲಿ ನೀವು ನಿಮಗೆ ಬಂದಿದ್ದ ಸಂದೇಶ ನೋಡಬಹುದು. ಆದರೆ ಅದು ಟೆಕ್ಸ್ಟ್ ಮೆಸೇಜ್ ಆಗಿದ್ದರೆ ಮಾತ್ರ ನೀವು ನೋಡಲು ಸಾಧ್ಯ.