Sukanya Samruddhi Scheme:
ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಅನೇಕ ಯೋಜನೆಗಳನ್ನು ದೇಶದ ನಾಗರಿಕರಿಗಾಗಿ ಜಾರಿಗೆ ತಂದಿದೆ. ಅದರಲ್ಲೂ ಹಣವನ್ನು ಉಳಿತಾಯ ಮಾಡಲು ಬಯಸುವವರು ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮತ್ತು ಭವಿಷ್ಯದ ಸಲುವಾಗಿ ಹಣ ಕೂಡಿಡುವವರು ಅಥವಾ ತಮ್ಮ ನಿವೃತ್ತಿ ಜೀವನದ ಆಸರೆಗಾಗಿ ಹಣ ಉಳಿಸುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲಕರವಾಗಿದೆ.
ಈಗ ದೇಶದಾದ್ಯಂತ ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಇತ್ಯಾದಿ ಯೋಜನೆಗಳು ಪ್ರಚಲಿತವಾಗಿವೆ. ಇಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕೆಲವು ಯೋಜನೆಗಳಿವೆ, ಹಿರಿಯ ನಾಗರಿಕರಿಗಾಗಿಯೇ ಪ್ಯತ್ಯೇಕ ಯೋಜನೆಗಳಿವೆ ಮತ್ತು ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಸೌಲಭ್ಯ ಸಿಗುವ ಕೆಲವು ಯೋಜನೆಗಳು ಇವೆ. ಅವುಗಳೆಲ್ಲದರ ಬಗ್ಗೆ ವಿವರವಾಗಿ ಈ ಅಂಕಣದಲ್ಲೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಸುಕನ್ಯ ಸಮೃದ್ಧಿ ಯೋಜನೆ ಯಂತಹ ಯೋಜನೆ ದೇಶದಲ್ಲಿ ಎಲ್ಲಾ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರ ಹೊಂದಿರುವ ಯೋಜನೆಗಳಾಗಿವೆ. ಆದರೆ ಈ ಯೋಜನೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಅಷ್ಟೇ ಮಾಡಿಸಬಹುದು. ಅದರಲ್ಲೂ ಸಹ ತಮ್ಮ ಮೊದಲ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯನ್ನು ಖರೀದಿಸಬಹುದು. ಒಂದು ವೇಳೆ ಎರಡನೇ ಮಗು ಜನಿಸುವ ವೇಳೆ ಹುಟ್ಟಿದ ಮಗು ಅವಳ ಜವಳಿ ಆಗಿದ್ದ ಸಮಯದಲ್ಲಿ ಮಾತ್ರ ಮೂರು ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆ ಖರೀದಿಸಬಹುದು.
ಮತ್ತು ಈ ಯೋಜನೆಯನ್ನು ಹೆಣ್ಣು ಮಕ್ಕಳಿಗೆ 10 ವರ್ಷ ತುಂಬುವ ಒಳಗೆ ಖರೀದಿಸಬೇಕಾಗುತ್ತದೆ. ಈ ಯೋಜನೆಯ ಮೆಚುರಿಟಿ ಅವಧಿ 21 ವರ್ಷಗಳು ಆಗಿರುತ್ತದೆ ಆದರೆ ಪ್ರೀಮಿಯಂ ಅನ್ನು 14 ವರ್ಷಗಳು ಪಾವತಿಸಿದರೆ ಸಾಕು. ವಾರ್ಷಿಕವಾಗಿ 250ಗಳಿಂದ 1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಅವರ ಮದುವೆ ಖರ್ಚಿಗೆ ಅವಶ್ಯಕತೆ ಇದ್ದರೆ ಒಟ್ಟು ಮೊತ್ತದ 50% ಹಣ ಹಿಂಪಡೆಯಬಹುದು.
ಆದರೆ ಯಾವುದೇ ಸಾಲ ಸೌಲಭ್ಯದ ಅವಕಾಶ ಇರುವುದಿಲ್ಲ. ಹೆಣ್ಣು ಮಗುವಿನ ತಂದೆ ಅಥವಾ ತಾಯಿ ಅಥವಾ ಪೋಷಕರು ಆ ಹೆಣ್ಣು ಮಗುವಿನ ಹೆಸರಿನಲ್ಲಿ ಅಕೌಂಟ್ ತೆರೆದು ಇದರಲ್ಲಿ ಪ್ರೀಮಿಯಂ ಪಾವತಿಸುತ್ತಾ ಬರಬೇಕು. ಆದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಗಳನ್ನು ಖರೀದಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ. ದೇಶದ ನಾಗರಿಕರಾದ ಪ್ರತಿಯೊಬ್ಬರು ಕೂಡ ಈ ಯೋಜನೆಯನ್ನು ಖರೀದಿಸಬಹುದು.
ಜೊತೆಗೆ ಈ ಯೋಜನೆಯ ಮೆಚ್ಯುರಿಟಿ ಅವಧಿ 15 ವರ್ಷಗಳಿರುತ್ತದೆ, ಇನ್ನು ಹೆಚ್ಚಿಗೆ ಬಯಸಿದರೆ ಮುಂದಿನ ಐದು ವರ್ಷಗಳ ಹೆಚ್ಚಿನ ಅವಧಿಗೆ ಇದನ್ನು ವಿಸ್ತರಿಸಬಹುದು. ಒಬ್ಬರು ಒಂದು ಅಕೌಂಟ್ ಮಾತ್ರ ಓಪನ್ ಮಾಡಲು ಸಾಧ್ಯ. ಈ ಯೋಜನೆಯಲ್ಲೂ ಸಹ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿಯಿಂದ 1,50.000 ದವರೆಗೂ ಕೂಡ ಹಣ ಹೂಡಿಕೆ ಮಾಡಬಹುದು.
ಈ ಯೋಜನೆ ಖರೀದಿಸಿದ ಐದು ವರ್ಷ ತುಂಬಿದ ಬಳಿಕ ನೀವು ಉಳಿತಾಯದ 50% ಯಾವಾಗ ಬೇಕಾದರೂ ಪಡೆಯಬಹುದು ಮತ್ತು ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇರುತ್ತದೆ. ಈ ಯೋಜನೆಗಳ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಡಿ ಅಥವಾ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಅಥವಾ ಯಾವುದೇ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡಿ.