ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!

 

ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ನಂಬಿದ ನಾಡು ನಮ್ಮದು. ಯಾವುದೇ ಊಟ ತಿಂದರೂ ಅನ್ನ ತಿಂದಷ್ಟು ತೃಪ್ತಿ ಕೊಡುವುದಿಲ್ಲ. ಆದರೆ ಎಲ್ಲಾ ಕಡೆ ಅನ್ನ ತಿನ್ನುವುದರಿಂದ ಯಾವ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ, ತುಂಬಾ ಅನ್ನ ತಿನ್ನಬಾರದು, ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಇಂತಹ ಮಾತುಗಳೇ ಚರ್ಚೆ ಆಗುತ್ತಿವೆ. ಅನ್ನದಿಂದ ಆರೋಗ್ಯನ ಅಥವಾ ಅನ್ನದಿಂದ ಕಾಯಿಲೆನಾ ಯಾವುದು ಎನ್ನುವುದೇ ಅರ್ಥ ಆಗದೆ ಜನರಿಗೆ ಸಾಕಷ್ಟು ಗೊಂದಲ ಉಂಟಾಗಿದೆ.

ಪ್ರತಿದಿನದ ನಮ್ಮ ಆಹಾರದ ಬಹು ಮುಖ್ಯ ಭಾಗ ಆಗಿರುವ ಈ ಅನ್ನದ ಕುರಿತು ಕೆಲವು ವಿಶೇಷ ಸುದ್ದಿಯನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಈ ವಿಷಯ ಪೂರ್ತಿ ತಿಳಿದ ಮೇಲೆ ಯಾವುದು ಸರಿ ನೀವೇ ನಿರ್ಧರಿಸಿ. ಅನ್ನ ಎನ್ನುವ ಈ ಪದ ಇಂದು ನೆನೆಯದಲ್ಲ, ಸಾಕಷ್ಟು ವರ್ಷಗಳಿಂದ ಇದು ಪ್ರಚಲಿತದಲ್ಲಿದೆ. ಆದರೆ ಅನ್ನ ಎನ್ನುವ ಪದವನ್ನು ಇಂದು ನಾವು ತಿನ್ನುವ ರೈಸ್ ಬದಲಾಗಿ ಪೂರ್ತಿಯಾಗಿ ತಿನ್ನುವ ಎಲ್ಲಾ ಪದಾರ್ಥಗಳಿಗೂ ಸೇರಿಸಿ ಹೇಳುತ್ತಿದ್ದರು.

ಒಂದರ್ಥದಲ್ಲಿ ತಟ್ಟೆಯಲ್ಲಿರುವ ಸಂಪೂರ್ಣ ಆಹಾರಕ್ಕೆ ಅನ್ನ ಎಂದು ಕರೆಯುತ್ತಿದ್ದರು ಹಾಗಾಗಿ ಅನ್ನ ದೇವರಿಗೆ ಸಮಾನ ಎನ್ನುವ ವಾಕ್ಯ ಜನಪ್ರಿಯ. ಜನ ಅನ್ನಕ್ಕೆ ದೇವರಂತೆ ನಮಸ್ಕರಿಸಿ ಸೇವಿಸುತ್ತಿದ್ದರು. ತಿನ್ನುವ ಯಾವುದೇ ಪದಾರ್ಥ ಆದರೂ ಅದು ದೇಹಕ್ಕೆ ಶಕ್ತಿ ಕೊಡುತ್ತದೆ ಚೈತನ್ಯ ಕೊಡುತ್ತದೆ ಜೀವವನ್ನು ಉಳಿಸಿರುವುದೇ ಅದು ಎನ್ನುವ ಕಾರಣಕ್ಕೆ ಅದನ್ನು ಪರಮಾತ್ಮನಂತೆ ಕಾಣುತ್ತಿದ್ದರು. ಆದರೆ ಇಂದು ಅನ್ನ ಎಂದರೆ ರೈಸ್ ಅನ್ನು ನೀರಿಗೆ ಹಾಕಿ ಬೇಯಿಸಿದ ಮೇಲೆ ತಯಾರಾಗುವ ಆಹಾರ ಪದಾರ್ಥಕ್ಕೆ ಅನ್ನ ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದೇವೆ.

ಅಕ್ಕಿಕಾಳಿನ ಬಗ್ಗೆ ನೋಡುವುದಾದರೆ ಅಕ್ಕಿಯಲ್ಲಿ ಮೂರು ಪದರಗಳು ಇರುತ್ತದೆ. ಹೊರಗಿನ ಪದರ ಬ್ರಾನ್, ಒಳಗಿನ ಪದರ ವೈಟ್ ರೈಸ್ ಮಧ್ಯಂತರ ಪದರ ಜಮ್. ಈ ಹೊರಗಿನ ಪದರವಾದ ಬ್ರಾನ್ ಉಪಯೋಗಿಸಿಕೊಂಡು ಎಣ್ಣೆ ಕೂಡ ತಯಾರಿಸುತ್ತಾರೆ. ಸಾಮಾನ್ಯವಾಗಿ ಅಕ್ಕಿ ಎಂದ ಕೂಡಲೇ ಅದು ಕಾರ್ಬೋಹೈಡ್ರೇಟ್ ಎಂದು ಬಿಡುತ್ತಾರ, ಅದರಲ್ಲಿ ಅಷ್ಟೇ ಇರುವುದು ಎಂದು ಕೂಡ ವಾದ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ಮೂರು ಪದರಗಳನ್ನು ಒಳಗೊಂಡಿರುವ ಅಕ್ಕಿಯನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ.

ಯಾಕೆಂದರೆ ಕಾರ್ಬೋಹೈಡ್ರೇಟ್ಸ್ ಮಾತ್ರ ಅಲ್ಲ ಅದರೊಂದಿಗೆ ವಿಟಮಿನ್ ಗಳು ಇರುತ್ತದೆ. ಮಾನವನ ದೇಹಕ್ಕೆ ಅತ್ಯಂತ ಅವಶ್ಯಕತೆ ಆಗಿರುವ ಥಯಾಮಿನ್, ನಯಾಸಿನ್, ವಿಟಮಿನ್ ಇ ಕೂಡ ಅಕ್ಕಿಯಲ್ಲಿ ಇರುತ್ತದೆ. ಇದರೊಂದಿಗೆ ಮಿನರಲ್ಸ್ ಕೂಡ ಇರುತ್ತದೆ. ಮ್ಯಾಂಗನೀಸ್, ಮೆಗ್ನೀಷಿಯಂ, ಝಿಂಕ್, ಪಾಸ್ಪರಸ್ ಮತ್ತು ಪೊಟ್ಯಾಶಿಯಂ ಇದೆಲ್ಲವೂ ಕೂಡ ಕಾರ್ಬೋಹೈಡ್ರೇಟ್ಸ್ ಜೊತೆಗೆ ಇರುತ್ತದೆ. ಇದೆಲ್ಲವೂ ಕೂಡ ಮೂರು ಪದಗಳು ಇರುವ ಅಕ್ಕಿಯಲ್ಲಿ ಮಾತ್ರ ಇರುತ್ತದೆ ಅದು ಆರೋಗ್ಯಕ್ಕೆ ತುಂಬಾ ಪೂರಕ ಅದನ್ನು ಅನ್ನ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆದರೆ ಇಂದು ನಾವು ಅಂಗಡಿಗಳಲ್ಲಿ ಖರೀದಿಸಿ ತಿನ್ನುತ್ತಿರುವಂತಹ ಅಕ್ಕಿಯು ಮೂರು ಪದರಗಳನ್ನು ಒಳಗೊಂಡಿಲ್ಲ. ಅಕ್ಕಿ ಪಾಲಿಶ್ ಆದಾಗಲೇ ಅದರ ಎರಡು ಪದರಗಳು ಹೋಗಿರುತ್ತವೆ. ಎಣ್ಣೆ ತಯಾರಿಸುವ ಕಾರಣಕ್ಕಾಗಿ ಬ್ರಾಂಡ್ ಲೇಯರ್ ಮತ್ತು ಪಾಲಿಶ್ ಮಾಡುವಾಗ ಜಮ್ ಲೇಯರ್ ಕೂಡ ಹೋಗಿ ಉಳಿದ ವೈಟ್ ರೈಸ್ ಮಾತ್ರ ಮಾರಾಟವಾಗುತ್ತಿದೆ. ಆದ ಕಾರಣ ಅದು ಬರಿ ಕಾರ್ಬೋಹೈಡ್ ಎಂದು ಹೇಳಲಾಗುತ್ತಿದೆ. ಈ ವಿಷಯದ ಕುರಿತು ಇನ್ನು ವಿಸ್ತಾರವಾದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment