ಈಗಿನ ಕಾಲದಲ್ಲಿ ಮಕ್ಕಳಾಗುವುದೇ ಪುಣ್ಯ ಎಂದು ಹೇಳಬಹುದು. ಹೆಣ್ಣು ಮತ್ತು ಗಂಡು ಮಕ್ಕಳ ಭೇಧವಿಲ್ಲದೆ ಪ್ರತಿಯೊಬ್ಬರೂ ಕೂಡ ಮಕ್ಕಳನ್ನು ಸಮಾನವಾಗಿ ಸಾಕುತ್ತಾರೆ. ಈಗ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಮಗು ಜನಿಸುವ ಸಮಯದಲ್ಲಿ ಖಂಡಿತವಾಗಿಯೂ ಮೊದಲ ಮಗು ಗಂಡು ಮಗು ಆಗಲಿ ಎನ್ನುವ ಆಸೆ ಇರುತ್ತದೆ.
ಯಾಕೆಂದರೆ ತಾಯಿಗೆ ಗಂಡು ಮಕ್ಕಳ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ ಹಾಗೆ ತಂದೆ ಹಾಗೂ ಕುಟುಂಬದವರಿಗೆ ವಂಶೋದ್ಧಾರಕ ಬಂದ ಎನ್ನುವ ಸಂಭ್ರಮ ಹಾಗೂ ಸಮಾಧಾನ. ಮೊದಲನೇ ಮಗು ಗಂಡು ಮಗುವಾಗಿದ್ದು ಎರಡನೇ ಮಗು ಗಂಡಾದರೂ ಹೆಣ್ಣಾದರು ಯಾರಿಗೂ ಏನೂ ಟೆನ್ಶನ್ ಇರುವುದಿಲ್ಲ, ಯಾಕೆಂದರೆ ಮೊದಲನೇ ಮಗು ಮೇಲೆ ನಿರೀಕ್ಷೆ ಹೆಚ್ಚು.
ಕೆಲವರಿಗೆ ಜೀವನದಲ್ಲಿ ಬಹಳ ತೊಂದರೆ ಕಷ್ಟಗಳು ಇದ್ದರೂ ಕೂಡ ಮಕ್ಕಳಾದ ಮೇಲೆ ಅದು ಪರಿಹಾರ ಆಗಿರುವ ಉದಾಹರಣೆಗಳು ಇವೆ. ಮೊದಲನೇ ಮಗು ಹೆಣ್ಣು ಆದರೂ ಅದಕ್ಕೆ ಇರುವ ಕೆಲವು ಲಕ್ಷಣಗಳಿಂದ ಅದೃಷ್ಟ ಬರುತ್ತದೆ. ಹಾಗೆ ಮೊದಲನೇ ಮಗು ಗಂಡು ಆದರೂ ಅನೇಕರಿಗೆ ಆ ಮಗು ಹೊತ್ತು ತಂದ ಭಾಗ್ಯದಿಂದ ಅವರ ಬದುಕು ಬಂಗಾರದ ರೀತಿ ಬದಲಾಗಿರುವ ಸಾಕಷ್ಟು ಉದಾಹರಣೆಗಳು ಇವೆ.
ಅದನ್ನೇ ಸಾಮೂಹಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಮೊದಲ ಪುತ್ರನ ಜನನವಾದಾಗ ಆತನು ಹೊಂದಿರುವ ಕೆಲ ಲಕ್ಷಣಗಳ ಮೇಲೆ ಆತನಿಂದ ಎಂತಹ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲಿ ಮಚ್ಚೆಗಳಿಗೂ ಕೂಡ ವಿಶೇಷ ಸ್ಥಾನ ಇದೆ. ಹುಟ್ಟಿದಾಗಿನಿಂದಲೂ ಕೂಡ ಇರುವ ಕೆಲವು ಮಚ್ಚೆಗಳು ಅವರ ಭವಿಷ್ಯವನ್ನು ಮಾತ್ರವಲ್ಲದೆ ಅವರ ಅದೃಷ್ಟದ ಲೆಕ್ಕಾಚಾರಕ್ಕೂ ಕೂಡ ಯಹಿಡಿದ ಕನ್ನಡಿಯ.
ಹಾಗಾಗಿ ಯಾವ ಸ್ಥಳದಲ್ಲಿ ಯಾವ ರೀತಿಯ ಮಚ್ಚೆ ಇದ್ದರೆ ಏನು ಅದೃಷ್ಟ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಮಗು ಹುಟ್ಟಿದಾಗ ಮೊದಲು ತಂದೆ ತಾಯಿಗಳು ಮಗು ಆರೋಗ್ಯವಾಗಿದೆಯೇ ಎಂದು ನೋಡುತ್ತಾರೆ ಹಾಗೂ ಮಗುವಿನ ಅಂಗಾಂಗಳು ಸರಿ ಇವೆಯೇ ಎಂದು ಪರೀಕ್ಷಿಸುತ್ತಾರೆ.
ಹೀಗೆ ನೋಡುವಾಗ ತಪ್ಪದೆ ಗಂಡು ಮಕ್ಕಳ ಬಲಗೈ ಬಲ ತೊಡೆ ಹಾಗೂ ಬೆನ್ನಿನ ಭಾಗವನ್ನು ನೋಡಿ ಈ ಸ್ಥಳದಲ್ಲಿ ಹುಟ್ಟಿದಾಗಲಿಂದಲೂ ಕೂಡ ಮಚ್ಚೆ ಇದ್ದರೆ ಆ ಮಕ್ಕಳು ನಿಮಗೆ ಅದೃಷ್ಟವನ್ನು ನೀಡಲು ಬರುತ್ತಿದ್ದಾರೆ ಎಂದು ಅರ್ಥ. ಈ ರೀತಿ ಮಕ್ಕಳು ಜನಿಸಿದರೆ ಅವರ ತಂದೆ ತಾಯಿಯ ಕಷ್ಟವೆಲ್ಲ ತೀರಿತು ಎನ್ನುವುದೇ ಲೆಕ್ಕ.
ಆ ಮಕ್ಕಳು ಬೆಳೆಯುತ್ತಾ ಇದ್ದಂತೆ ಮನೆ ಕೂಡ ಪರಿವರ್ತನೆ ಆಗುತ್ತದೆ, ಮಕ್ಕಳು ಕೂಡ ಎಲ್ಲರಿಂದ ಆಕರ್ಷಣೆಗೆ ಒಳಗಾಗುತ್ತಾರೆ. ಓದಿನಲ್ಲಿ ಬುದ್ಧಿವಂತರಾಗುತ್ತಾರೆ, ಮನೆಗೆ ಗುಣವಂತರಾಗುತ್ತಾರೆ, ತಂದೆ ತಾಯಿಯ ಕೀರ್ತಿಯನ್ನು ಬೆಳಗಿಸುವಂತವರಾಗಿರುತ್ತಾರೆ ಮತ್ತು ಈ ಮಕ್ಕಳ ದೆಸೆಯಿಂದ ತಂದೆ ತಾಯಿ ಆರ್ಥಿಕ ಸಂಕಷ್ಟಗಳು ಕರಗಿ ಕುಟುಂಬದಲ್ಲಿದ್ದ ಬಿಕ್ಕಟ್ಟುಗಳು ಪರಿಹಾರವಾಗಿ ಅವರಿಗೆ ಗೌರವ ಸ್ಥಾನಮಾನಗಳು ಸಿಗುತ್ತವೆ.
ಕೆಲವು ಗಂಡು ಮಕ್ಕಳು ಹುಟ್ಟುವಾಗಲೇ ತೇಜಸ್ವಿನಿಂದ ಮುಖಲಕ್ಷಣ ಹೊಂದಿರುತ್ತಾರೆ. ಆವರ ಕಣ್ಣುಗಳನ್ನು ಹೊಳೆಯುತ್ತಿರುತ್ತದೆ, ದಪ್ಪವಾದ ಹುಬ್ಬು ಗಳನ್ನು ಹೊಂದಿರುತ್ತಾರೆ. ಇಂತಹ ಮಕ್ಕಳು ಕೂಡ ಲಕ್ಷ್ಮೀ ಕಳೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇಂತಹ ಮಕ್ಕಳು ಕೂಡ ಬೆಳೆಯುತ್ತಿದ್ದಂತೆ ಬಹಳ ಹೆಸರು ಮಾಡುತ್ತಾರೆ ಇವರು ಸಾಧಕರಾಗಿರುತ್ತಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಬಾಲ್ಯದಿಂದಲೂ ತಾವಂದು ಕೊಂಡಿದ್ದನ ಸಾಧಿಸಿ ಬಹಳ ಸಂತೋಷದ ಜೀವನ ನಡೆಸುತ್ತಾರೆ. ಹುಟ್ಟಿದಾಗ ಬಡತನದಲ್ಲಿದ್ದ ಕುಟುಂಬದಲ್ಲಿ ಕೂಡ ಬೆಳೆಯುತ್ತಾ ಹೋದಂತೆ ಪರಿಸ್ಥಿತಿ ಬದಲಾಗಿ ಧನವಂತರಾಗಿ ಬದುಕುತ್ತಾರೆ, ಇಂತಹ ಮಕ್ಕಳನ್ನು ಪಡೆಯುವುದು ಆ ಕುಟುಂಬದ ಪುಣ್ಯ ಎಂದು ಹೇಳಬಹುದು.