ಏಪ್ರಿಲ್ 9, 2024ರಂದು ಯುಗಾದಿ ಹಬ್ಬ ಬರುತ್ತಿದೆ. ಯುಗಾದಿ ಹೊಸ ಆರಂಭ ಎಂದು ಅರ್ಥ. ಈ ಹೊಸ ವರ್ಷವನ್ನು ನಾವು ಹೇಗೆ ಆರಂಭಿಸುತ್ತೇವೆ ವರ್ಷಪೂರ್ತಿ ಅದೇ ರೀತಿ ಇರುತ್ತದೆ ಎನ್ನುವುದು ನಮ್ಮ ನಂಬಿಕೆ. ಶುಭಕೃತ್ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರವನ್ನು ಆಹ್ವಾನಿಸುತ್ತಿದ್ದೇವೆ.
ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಕೂಡ ಅದರದ್ದೇ ಆದ ಮಹತ್ವ ಇದೆ ಅದೇ ರೀತಿ ಯುಗಾದಿ ಹಬ್ಬಕ್ಕೂ ಕೂಡ ಆದರೆ ಅನೇಕರಿಗೆ ಯುಗಾದಿ ಹಬ್ಬದ ದಿನದಂದು ಯಾವ ದೇವರನ್ನು ಪೂಜಿಸಬೇಕು ಹಬ್ಬದ ಆಚರಣೆ ಹೇಗಿರುತ್ತದೆ ಎನ್ನುವುದೇ ತಿಳಿದಿಲ್ಲ. ಸಾಮಾನ್ಯವಾಗಿ ಗಣೇಶ ಹಬ್ಬದಂದು ಗಣೇಶನನ್ನು ಶಿವರಾತ್ರಿಯಂದು ಶಿವನನ್ನು ಪೂಜಿಸುವ ನಾವು ಯುಗಾದಿ ದಿನ ಹೇಗೆ ಪೂಜೆ ಮಾಡುವುದು ಎಂದರೆ ಗೊಂದಲಕ್ಕೊಳಗಾಗುತ್ತೇವೆ.
ನಿಮಗೆ ತಿಳಿಯದೆ ಇದ್ದರೂ ಈಗ ನಾವು ಹೇಳುವ ಈ ಸರಳ ಆಚರಣೆ ಮಾಡಿ ಸಾಕು ನಿಮ್ಮ ಬದುಕಿನ ದಿಕ್ಕು ಯುಗಾದಿ ನಂತರ ಬದಲಾಗುತ್ತದೆ. ಯುಗಾದಿ ಹಬ್ಬದ ದಿನದಂದು ಪ್ರಕೃತಿಯನ್ನೊಮ್ಮೆ ಗಮನಿಸಿ ಇಡೀ ಪ್ರಕೃತಿ ಒಂದು ಹೊಸ ಆರಂಭಕ್ಕೆ ತಯಾರಾಗಿರುತ್ತದೆ ಹಾಗೆ ಮನೆ ಮನಸ್ಸು ಕೂಡ ಲವಲವಿಕೆಯಿಂದ ತಯಾರಾಗಬೇಕು.
ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!
ಹಾಗಾಗಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಎಣ್ಣೆ ಸ್ನಾನ ಮಾಡಬೇಕು, ಹಳೆ ಕೊಳೆ ನೆಪದಲ್ಲಿ ಹಳೆಯ ನೆನಪು ಕೆಟ್ಟ ಸಂಗತಿ ನೆಗೆಟಿವಿಟಿ ಎಲ್ಲವನ್ನು ತೊಳೆದು ಇಂದಿನಿಂದ ಹೊಸ ಬದುಕು ಹೊಸ ಭಾವನೆ ಹೊಸ ಬದಲಾವಣೆ ಎನ್ನುವ ರೀತಿ ಹೊಸ ವರ್ಷವನ್ನು ಆಹ್ವಾನಿಸಿದರೆ ಹಳೆಯ ತಪ್ಪುಗಳಿಂದ ಅಥವಾ ನೋವುಗಳಿಂದ ಕಲಿತ ಪಾಠ ತೆಗೆದುಕೊಂಡು ಹೊಸ ವರ್ಷಕ್ಕೆ ಹೆಜ್ಜೆ ಇಟ್ಟರೆ ಈ ವರ್ಷ ಪೂರ್ತಿ ನೀವು ಯಶಸ್ಸಿನಲ್ಲಿ ಇರುತ್ತೀರಿ.
ಹೊಸ ಬಟ್ಟೆಯನ್ನು ಧರಿಸಿ ಮನೆದೇವರಿಗೆ ಕುಲ ದೇವರಿಗೆ ಪೂಜೆ ಮಾಡಿ ಮತ್ತು ಕೆಲವು ಕಡೆ ಪ್ರಾಂತ್ಯಕ್ಕನುಸಾರವಾಗಿ ಹೊಸ ವರ್ಷದಿಂದ ರೈತನು ದುಡಿಮೆ ಕೆಲಸವನ್ನು ಆರಂಭಿಸುವುದಕ್ಕೆ ಅಂದೇ ನಾಂದಿ ಪೂಜೆ ಮಾಡುತ್ತಾರೆ, ಸಾಧ್ಯವಾದರೆ ಭಾಗಿಯಾಗಿ. ಇಂದು ಹೊಸ ಪಂಚಾಂಗ ತೆರೆದು ವರ್ಷ ಭವಿಷ್ಯ ನೋಡುವ ದಿನ ಈ ವರ್ಷ ಮಳೆ ಬೆಳೆ ಪ್ರವಾಹ ಹೇಗಿದೆ ಎನ್ನುವುದನ್ನು ನೋಡುತ್ತಾರೆ.
ನಿಮಗೆ ಹೇಗೆ ನೋಡಬೇಕು ತಿಳಿದಿಲ್ಲ ಎಂದರೆ ಹಿರಿಯರು ಹೇಳುವುದನ್ನು ಕೇಳಬೇಕು ನಂತರ ನಿಮ್ಮ ರಾಶಿಗೆ ಲಾಭ-ನಷ್ಟ ಆಯ-ವ್ಯಯ ಸುಖ-ದುಃಖ ಆರೋಗ್ಯ-ಅನಾರೋಗ್ಯ ಹೇಗಿದೆ ಎನ್ನುವುದನ್ನು ಸರಳವಾಗಿ ತಿಳಿಸುತ್ತಿರುತ್ತಾರೆ ಅದನ್ನು ನೋಡಿ ತಿಳಿದುಕೊಳ್ಳಬೇಕು.
ಈ ಸುದ್ದಿ ಓದಿ:-ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!
ಮನೆಯಲ್ಲಿ ಸಿಹಿ ಅಡುಗೆ ಮಾಡಿ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ನೀವು ಕೂಡ ಸಿಹಿ ತಿನ್ನಬೇಕು. ಇದನ್ನು ಸೇವಿಸುವ ಮುನ್ನ ಯುಗಾದಿ ಹಬ್ಬದಂದು ಮಾಡುವ ಒಂದು ವಿಶೇಷ ಅಭ್ಯಾಸವಾದ ಬೇವು-ಬೆಲ್ಲವನ್ನು ಸೇವನೆ ಕೂಡ ಮಾಡಬೇಕು, ಬಳಿಕವೇ ಹಬ್ಬದ ಅಡುಗೆಯನ್ನು ಸೇವಿಸಬೇಕು.
ಮನೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡುವುದಕ್ಕಾಗಿ ಮತ್ತು ವರ್ಷಪೂರ್ತಿ ಸಮಯ ಚೆನ್ನಾಗಿರಲಿ ಎನ್ನುವುದಕ್ಕಾಗಿ ಕಾಲ ಪುರುಷನನ್ನು ಆರಾಧನೆ ಮಾಡಬೇಕು. ಕಾಲ ಎಂದರೆ ಸಮಯ ನಮ್ಮ ಟೈಮ್ ಚೆನ್ನಾಗಿಲ್ಲ ಒಳ್ಳೆ ಕಾಲ ಬರಲಿ ಈಗೆಲ್ಲ ಮಾತನಾಡುವುದನ್ನು ಕೇಳಿರಬಹುದು.
ಈ ಸುದ್ದಿ ಓದಿ:-ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
ಈ ಕಾಲಪುರುಷರನ ಕೃಪೆ ಇದ್ದರೆ ಎಲ್ಲವೂ ಶುಭ ಹಾಗಾಗಿ ಆಶೀರ್ವಾದಕ್ಕಾಗಿ ಪುರುಷ ಸೂಕ್ತ ಶ್ರವಣ ಮಾಡುವುದು, ವಿಷ್ಣು ಸಹಸ್ರನಾಮ ಪಾರಾಯಣ, ರಾಮ ಕೃಷ್ಣ ನಾರಾಯಣರ ಜಪ ಮಾಡುವುದು ಈ ರೀತಿ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗಬಹುದು. ಆದಷ್ಟು ಒಳ್ಳೆಯ ಮಾತುಗಳನ್ನೇ ಆಡಿ, ಒಳ್ಳೆ ಕೆಲಸಗಳನ್ನು ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.