ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ನಮ್ಮ ಬಳಿ ಹಣ ಇದ್ದರೆ ಆನೆ ಬಲ ಇರುತ್ತದೆ ಹಾಗೂ ನಮ್ಮ ಜೀವನದ ಸಂತೋಷದ ಮೂಲವೂ ಕೂಡ ಸದ್ಯದ ಪ್ರಪಂಚದ ಮಟ್ಟಿಗೆ ಹಣವೇ ಆಗಿದೆ. ಹಣ ಇಲ್ಲದ ಮನೆಯಲ್ಲಿ ನಿತ್ಯವೂ ದುಃ’ಖ, ಕ’ಷ್ಟ ತಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ತಾವು ಹಣ ಉಳಿಸಿ ಶ್ರೀಮಂತರಾಗಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ.
ಆದರೆ ಕೆಲವರಿಗೆ ದುಡಿದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ, ಇನ್ನು ಕೆಲವರು ತಮ್ಮ ಹಣವನ್ನು ಬೇರೆ ಕಡೆ ಹಾಕಿ ಕಳೆದುಕೊಂಡು ಬಿಟ್ಟಿರುತ್ತಾರೆ, ಇನ್ನು ಕೆಲವರು ಸಾಲದ ಸುಳಿಯಲ್ಲಿ ಸಿಲುಕಿ ದುಡಿದ ಹಣವನ್ನೆಲ್ಲಾ ಸಾಲ ತೀರಿಸುವುದಕ್ಕೆ ಕಳೆಯುತ್ತಿರುತ್ತಾರೆ. ಒಟ್ಟಾರೆಯಾಗಿ ಜೀವನದಲ್ಲಿ ಬಹಳ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುತ್ತಾರೆ.
ನಿಮಗೂ ಕೂಡ ಈ ರೀತಿಯ ಹಣಕಾಸಿನ ಸಮಸ್ಯೆ ಇದ್ದರೆ ಬಹಳ ಸರಳವಾಗಿ ನಾವು ಹೇಳುವ ವಿಧಾನದಲ್ಲಿ ತಾಯಿ ಮಹಾಲಕ್ಷ್ಮಿಯನ್ನು ಪೂಜಿಸಿ ಕೆಲವು ಉಪಾಯಗಳನ್ನು ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುವುದು ಗ್ಯಾರಂಟಿ.
ಈ ಸುದ್ದಿ ಓದಿ:- ಸಿವಿಲ್ ಇಂಜಿನಿಯರ್ ಕೆಲಸ ಬಿಟ್ಟು ಈಗ ಮನೆಯಲ್ಲಿ ತಿಂಗಳಿಗೆ ಒಂದು ಲಕ್ಷ ದುಡಿಯುತ್ತಿರುವ ಮಹಿಳೆ.!
* ಯಾರ ಮನೆಯಲ್ಲಿ ಈ ರೀತಿ ಮನೆ ಒಡೆಯನಿಗೆ ಹಣಕಾಸಿನ ಸಮಸ್ಯೆ ಇದೆ ಆ ಮನೆಯ ಗೃಹಿಣಿ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆ ಸ್ವಚ್ಛಗೊಳಿಸಿ ಸ್ನಾನ ಮಾಡಿ ಮಡಿ ಉಟ್ಟು ಮಹಾಲಕ್ಷ್ಮಿಯ ಫೋಟೋ ಮುಂದೆ ಜೋಡಿ ದೀಪ ಹಚ್ಚಬೇಕು ಮತ್ತು ಈ ಫೋಟೋಗೆ ನಿತ್ಯವೂ ಕೆಂಪು ಹೂವನ್ನು ಅರ್ಪಿಸಬೇಕು ಹಾಲಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯ ಮಾಡಬೇಕು.
ನೆನಪಿರಲಿ ಹಿಂದಿನ ದಿನದ ಹಾಲು ಅಥವಾ ನಾವು ಬಳಸಿ ಇಟ್ಟ ಹಾಲನ್ನು ಪೂಜೆಗೆ ಬಳಸಬಾರದು. ಆ ದಿನವೇ ಫ್ರೆಶ್ ಆಗಿ ಹಾಲು ತಂದು ಸಿಹಿ ತಿನಿಸು ಮಾಡಲು ಆಗದೆ ಇದ್ದರೆ ಆ ಹಾಲಿಗೆ ಕಲ್ಲು ಸಕ್ಕರೆ ಹಾಕಿ ನೈವೇದ್ಯ ಮಾಡಿ ನಿಮ್ಮ ಕಷ್ಟಗಳನ್ನು ತಾಯಿ ಮಹಾಲಕ್ಷ್ಮಿ ಮುಂದೆ ಹೇಳಿಕೊಳ್ಳಿ ಮತ್ತೆ ತಾಯಿಯ ಕೃಪೆಗಾಗಿ ಪರಿಪರಿಯಾಗಿ ಪ್ರಾರ್ಥಿಸಿ ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನರಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ
* ಶನಿವಾರದ ದಿನ ಆಲದ ಮರದ ಎಲೆ ತೆಗೆದು ಕೊಂಡು ಅದರ ಮೇಲೆ ಶ್ರೀ ರಾಮ ಎಂದು ಬರೆದು ಸಿಹಿ ತಿಂಡಿ ಹಾಕಿ ಹನುಮನ ದೇವಸ್ಥಾನದಲ್ಲಿ ಅರ್ಪಿಸಿ ಹನುಮನ ದರ್ಶನ ಮಾಡಿ ನಿಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡು ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸಬೇಕು, ಹನುಮನ ಕೃಪೆಯಿಂದ ಕೂಡ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹರಿಸುತ್ತವೆ.
ಈ ಸುದ್ದಿ ಓದಿ:-ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
* ನೀವು ಒಂದು ಕಾಲದಲ್ಲಿ ಬಹಳ ಚೆನ್ನಾಗಿದ್ದು ಈಗ ಹಣಕಾಸಿನ ತೊಂದರೆ ಎದುರಿಸುತ್ತಿದ್ದೀರಾ ಎಂದರೆ ಇದು ನರ ದೃಷ್ಟಿ ದೋಷವು ಆಗಿರಬಹುದು. ಇದರ ಪರಿಹಾರಕ್ಕಾಗಿ ಸಂಜೆ ಸಮಯ 5 ಕಾಳು ಮೆಣಸು ತೆಗೆದುಕೊಳ್ಳಿ ನಿಮ್ಮ ತಲೆಯ ಸುತ್ತಾ 7 ಬಾರಿ ಅಪ್ರದಕ್ಷಣೀಯ ದಿಕ್ಕಿನಲ್ಲಿ ಏಳು ಸುತ್ತು ಹಾಕಿ ನಂತರ ನಾಲ್ಕು ರಸ್ತೆಗಳು ಸೇರುವ ಜಾಗದಲ್ಲಿ ನಿಂತು ನಾಲ್ಕು ದಿಕ್ಕಿಗೂ ಒಂದೊಂದು ಕಾಳು ಹಾಕಿ ಮತ್ತೊಂದು ಕಾಳನ್ನು ಆಕಾಶದತ್ತ ಬಿಸಾಕಿ ಹೀಗೆ ಮಾಡುವುದರಿಂದ ಕೂಡ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ
* ಏಲಕ್ಕಿಯು ಕೂಡ ನಿಮ್ಮ ಕಷ್ಟಗಳಿಂದ ಮುಕ್ತಿ ನೀಡುತ್ತದೆ, ನಿರ್ವಿಘ್ನವಾಗಿ ನಿಮ್ಮ ಕೆಲಸ ಕಾರ್ಯಗಳು ನಡೆಯುವಂತೆ ಮಾಡುತ್ತದೆ. ಶುಕ್ರವಾರದಂದು ಬೆಳಗ್ಗೆ ಅಥವಾ ಸಂಜೆ 5 ಚೆನ್ನಾಗಿರುವ ಏಲಕ್ಕಿ ತೆಗೆದುಕೊಂಡು ತಾಯಿ ಮಹಾಲಕ್ಷ್ಮಿ ಫೋಟೋ ಮುಂದೆ ಇಟ್ಟು ಓಂ ಮಹಾಲಕ್ಷ್ಮಿಯೇ ನಮಃ ಈ ಮಂತ್ರವನ್ನು 28 ಬಾರಿ ಅಥವಾ 108 ಬಾರಿ ಜಪಿಸಿ, ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರಾರ್ಥಿಸಿಕೊಳ್ಳಿ.
ಬಳಿಕ ಒಂದು ಬಿಳಿ ಪೇಪರ್ ನಲ್ಲಿ ಇವುಗಳನ್ನು ಕಟ್ಟಿ ನೀವು ಹಣ ಇಡುವ ಬೀರು / ಕಪಾಟು / ಗಲ್ಲ ಪೆಟ್ಟಿಗೆ / ಪರ್ಸ್ ಗಳಲ್ಲಿ ಇಟ್ಟುಕೊಳ್ಳಿ. ತಿಂಗಳಿಗೆ ಒಂದು ಬಾರಿ ಇದನ್ನು ಬದಲಾಯಿಸಬೇಕು ಹಾಗೆಯೇ ಹಳೆಯ ಏಲಕ್ಕಿಯನ್ನು ಹರಿಯುವ ನೀರಿಗೆ ಅಥವಾ ಯಾರ ತುಳಿಯದ ಜಾಗದಲ್ಲಿ ಹಾಕಬೇಕು. ಗರ್ಭಿಣಿಯರು ಮುಟ್ಟಾದ ಮಹಿಳೆಯರು ಈ ಆಚರಣೆಯನ್ನು ಮಾಡುವಂತಿಲ್ಲ ಹಾಗೂ ಮನೆಯಲ್ಲಿ ಸೂತಕದ ವಾತಾವರಣ ಇದ್ದಾಗಲೂ ಈ ಆಚರಣೆಯನ್ನು ಮಾಡುವಂತಿಲ್ಲ.