ಬಹಳ ಹಿಂದಿನ ದಿನಗಳಲ್ಲಿ ಗಂಡ ಹೆಂಡತಿ ಇವರಿಬ್ಬರ ನಡುವಿನ ಭಾಂಧವ್ಯ ಬಹಳ ಹತ್ತಿರವಾಗಿತ್ತು ಅಂದರೆ ಅವರಿಬ್ಬರ ನಡುವೆ ಒಳ್ಳೆಯ ಮನೋಭಾವಗಳು ಇದ್ದವು ಆದರೆ ಕಾಲ ಬದಲಾಗುತ್ತಾ ಇರುವ ಹಾಗೆ ಅವರಿಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಮಾಡುವಂತಹ ಸನ್ನಿ ವೇಶಗಳು ಕೂಡ ಬಂದಿದೆ.
ಅಂದರೆ ಇಬ್ಬರೂ ಕೂಡ ಯಾವುದಾದರೂ ಒಂದು ವಿಷಯಕ್ಕೆ ಹೊಂದಿಕೊಳ್ಳಲಿಲ್ಲ ಎಂದರು ಕೂಡ ಅವರು ವಿಚ್ಚೇದನ ಪಡೆದುಕೊಳ್ಳುವಂತಹ ಹಂತಕ್ಕೆ ಬಂದು ತಲುಪಿದ್ದಾರೆ. ಇದೆಲ್ಲದಕ್ಕೂ ಕೂಡ ಮೂಲ ಕಾರಣ ಏನು ಎಂದು ನೋಡುವುದಾದರೆ ಮೇಲೆ ಹೇಳಿದಂತೆ ನಮ್ಮ ಕಾಲ ಬದಲಾಗುತ್ತಿರುವುದು.
ಹೌದು ಬಹಳ ಹಿಂದಿನ ದಿನಗಳಲ್ಲಿ ಪ್ರತಿಯೊಬ್ಬ ಹೆಂಡತಿಯು ಕೂಡ ತನ್ನ ಗಂಡನನ್ನು ಹೆಸರಿಟ್ಟು ಏಕವಚನದಿಂದ ಕರೆಯುತ್ತಿರಲಿಲ್ಲ ಬದಲಿಗೆ ಅವರಿಗೆ ಗೌರವವನ್ನು ಕೊಡುತ್ತಾ ಬನ್ನಿ ಹೋಗಿ ರೀ ಎನ್ನುವ ಪದ ಬಳಕೆ ಮಾಡುತ್ತಿದ್ದರು ಆದರೆ ಕೆಲವೊಂದಷ್ಟು ಜನ ಗಂಡನನ್ನು ಹೆಸರಿಟ್ಟು ಬಹುವಚನದಲ್ಲಿ ಕರೆಯುತ್ತಾರೆ.
ಈ ರೀತಿ ಕರೆಯುವುದು ಒಳ್ಳೆಯದ? ಈ ರೀತಿ ಕರೆಯುವುದರಿಂದ ಏನೆಲ್ಲಾ ತೊಂದರೆಗಳು ಉಂಟಾಗುತ್ತದೆ? ಹಾಗೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಗಂಡನ ಹೆಸರಿಟ್ಟು ಕರೆಯುವುದರಿಂದ ಏನಾಗುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಉದಾಹರಣೆಗೆ :- ಗಂಡ ಹೆಂಡತಿ ಇಬ್ಬರ ನಡುವೆ ಏನೋ ಒಂದು ಮನಸ್ತಾಪ ಉಂಟಾಗಿ ಜಗಳ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಹೆಂಡತಿಯಾದವಳು ಗಂಡನನ್ನು ನೀವು ಈ ರೀತಿ ಮಾಡಿದ್ದು ಸರಿಯಾ ನೀವು ಈ ರೀತಿ ಮಾಡಿದ್ದು ತಪ್ಪು. ಹೀಗೆ ನೀವು ಎನ್ನುವಂತಹ ಪದ ಬಳಕೆಯನ್ನು ನಾವು ಮಾಡಿದಾಗ ಗಂಡನಾದವನ ಮನಸ್ಸಿನಲ್ಲಿ ನಾನು ಎಷ್ಟೇ ಕೋಪಿಸಿಕೊಂಡರು ಅವಳು ನನಗೆ ಮರ್ಯಾದೆಯಿಂದ ಮಾತನಾಡಿಸುತ್ತಾಳೆ ಎನ್ನುವಂತಹ ಮನೋಭಾವ ಅವರಲ್ಲಿ ಉಂಟಾಗುತ್ತದೆ.
ಆ ಒಂದು ಸಂದರ್ಭ ದಲ್ಲಿ ಆಗ ಅವರು ಎಷ್ಟೇ ಕೋಪಗೊಂಡಿದ್ದರು ಕೂಡ ಒಂದು ಕ್ಷಣದಲ್ಲಿ ಮರೆಯುತ್ತಾರೆ. ಯಾವುದೇ ಒಂದು ಸಂಬಂಧ ಇದ್ದರೂ ಕೂಡ ಅಲ್ಲಿ ಮೊದಲನೆಯದಾಗಿ ಪ್ರೀತಿ ಹಾಗೂ ಎರಡನೆಯ ದಾಗಿ ಗೌರವ ಇರಬೇಕು. ಇವೆರಡು ಇದ್ದಾಗ ಮಾತ್ರ ಆ ಒಂದು ಪ್ರೀತಿಗೆ ಆ ಒಂದು ಸಂಬಂಧಕ್ಕೆ ಬೆಲೆ ಇರುತ್ತದೆ.
ಯಾವಾಗ ನಾವು ಮಾತನಾಡು ವಂತಹ ವೈಖರಿ ಬದಲಾಗುತ್ತದೆ ಆಗ ಬೇರೆಯವರು ಮಾತನಾಡುವ ವೈಖರಿಯು ಕೂಡ ಬದಲಾಗುತ್ತದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಕೂಡ ನಮ್ಮ ಈ ಒಂದು ನಡವಳಿಕೆಯನ್ನು ಬಿಟ್ಟು ಕೊಡದೆ ನಾವು ಅದೇ ರೀತಿಯಾಗಿ ಬದುಕಬೇಕು.
ನಾವು ಒಬ್ಬ ವ್ಯಕ್ತಿಗೆ ಎಷ್ಟೇ ಕೆಟ್ಟ ಸಂದರ್ಭ ಇದ್ದರೂ ಕೂಡ ಅವರನ್ನು ಹೇಗೆ ನಾವು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತೇವೆ ಅದೇ ಒಂದು ಪ್ರೀತಿ ವಿಶ್ವಾಸ ಮುಂದಿನ ದಿನದಲ್ಲಿ ನಮಗೂ ಕೂಡ ಅವರಿಂದ ಸಿಗು ತ್ತದೆ ಅದು ಎಂತದ್ದೇ ಸಂದರ್ಭ ಆಗಿದ್ದರು ಕೂಡ. ಆದ್ದರಿಂದ ಪ್ರತಿ ಯೊಬ್ಬ ಹೆಂಡತಿಯು ಕೂಡ ತನ್ನ ಗಂಡನನ್ನು ಮಾತನಾಡಿಸುವಂತಹ ಸಂದರ್ಭದಲ್ಲಿ ಅವರನ್ನು ಬಹಳ ಗೌರವದಿಂದ ಮಾತನಾಡಿಸುತ್ತಾ ಅವರಿಗೆ ಒಂದು ಒಳ್ಳೆಯ ಪ್ರೀತಿಯನ್ನು ಕೊಡಬೇಕು.
ಆಗ ಅವರು ನಿಮ್ಮ ಮೇಲೆ ಅಷ್ಟೇ ಪ್ರೀತಿಯನ್ನು ಕೊಡುತ್ತಾರೆ. ಬದಲಿಗೆ ನೀವು ಅವರನ್ನು ಹೀಯಾಳಿಸುವುದು ಅವಮಾನಿಸುವುದು ಮಾಡಿದರೆ ಅವರಿಗೆ ನಿಮ್ಮ ಮೇಲೆ ಮತ್ತಷ್ಟು ಕೋಪ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ಏನನ್ನು ಕೊಡುತ್ತೇವೋ ಅದೇ ನಮಗೆ ಹಿಂದಿರುಗಿ ಬರುತ್ತದೆ ಎನ್ನುವುದನ್ನು ಯಾರು ಕೂಡ ತಮ್ಮ ಜೀವನದಲ್ಲಿ ಮರೆಯಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.