ಹೊಸ ರೇಷನ್ ಕಾರ್ಡ್ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಸರಕಾರ, ಅನರ್ಹರ ರೇಷನ್ ಕಾರ್ಡ್(Ration Card)ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಅನ್ನಭಾಗ್ಯ ಯೋಜನೆಯಡಿ ಕಳೆದ 25 ದಿನಗಳಲ್ಲಿ 1 ಕೋಟಿ ಕುಟುಂಬಗಳಿಗೆ 566.00 ಕೋಟಿ ರೂಪಾಯಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಹೊಸ ಪಡಿತರ ಚೀಟಿ ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ರೇಷನ್ ಕಾರ್ಡ್ ತಿದ್ದುಪಡಿ, ರದ್ದತಿ, ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.
ವೈಟ್ ಬೋರ್ಡ್ ಕಾರು (White Board Car) ಇರುವ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಸರ್ಕಾರ ಶುರು ಮಾಡಿದೆ. ಆಹಾರ ಇಲಾಖೆಯಿಂದ ನಾಲ್ಕು ಚಕ್ರ ವಾಹನಗಳ ಸರ್ವೆ ನಡೆಯುತ್ತಿದೆ. ಮತ್ತೊಂದು ಕಡೆ ಕೆಲವರಿಗೆ ಅನ್ನಭಾಗ್ಯ ಹಣ ತಲುಪಿಲ್ಲ.
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಅನ್ನಭಾಗ್ಯ ಯೋಜನೆ (AnnaBhagya Scheme) ಜಾರಿಯಾಗಿ 5 ಕೆ.ಜಿ ಉಚಿತ ಅಕ್ಕಿ ವಿತರಣೆ ಮತ್ತು 5 ಕೆ.ಜಿಗೆ ಅಕ್ಕಿಗೆ 170 ರೂಪಾಯಿ ಹಣ ಪಡಿತರ ಚೀಟಿದಾರರಿಗೆ ತಲುಪಿದೆ. ಈ ಮಧ್ಯೆ ವೈಟ್‍ಬೋರ್ಡ್ ಕಾರು ಇರುವ ಕಾರ್ಡ್‍ಗಳನ್ನ ರದ್ದು ಮಾಡಲು ಮುಂದಾಗಿದೆ. ಈ ಪದ್ಧತಿ ಮೊದಲಿನಿಂದ ಇದೆ ಅಂತಾ ಹೇಳಲಾಗ್ತಿದ್ದು, ಈ ವರ್ಷ ವೈಟ್ ಬೋರ್ಡ್ ಕಾರು ಹೊಂದಿರುವ ನಾಲ್ಕು ಚಕ್ರದ ವಾಹನ ಸರ್ವೆಗೆ ಆಹಾರ ಇಲಾಖೆ ಮುಂದಾಗಿದೆ. ಈ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಮುಂದಿನ ತಿಂಗಳ ಒಳಗಡೆ ಪ್ರಕ್ರಿಯೆ ಶುರು ಮಾಡಲಿದ್ದಾರಂತೆ. ಆರ್‍ಟಿಓಯಿಂದ ನಾಲ್ಕು ಚಕ್ರ ವಾಹನ ಹೊಂದಿರುವವರ ಮಾಹಿತಿ ಬರಲಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭ ಮಾಡುತ್ತೇವೆ ಅಂತಾ ಇದ್ದಾರೆ.
ಅನ್ನಭಾಗ್ಯ ಹಣ ಎಲ್ಲಾ ಜಿಲ್ಲೆಯ ಪಡಿತರ ಚೀಟಿದಾರರಿಗೆ ತಲುಪಿದ್ದು, ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಪಡಿತರದಾರರಿಗೆ ತಲುಪಿಲ್ಲ ಅಂತಾ ಹೇಳಲಾಗ್ತಿದೆ. ಕಾರಣ ಅಕೌಂಟ್ ನಂಬರ್ ಸರಿ ಇಲ್ಲದೇ ಇರುವಂತಹದ್ದು, ಆಧಾರ್ ಗೆ ಅಕೌಂಟ್ ಲಿಂಕ್ ಆಗಿಲ್ಲ ಎನ್ನುವಂತಹದ್ದು, ಈ ರೀತಿಯ ಕಾರಣದಿಂದ ಅಮೌಂಟ್ ತಲುಪಿಲ್ಲವಂತೆ ಸಮಸ್ಯೆ ಕ್ಲಿಯರ್ ಆದ ಬಳಿಕ ಅಮೌಂಟ್ ಹಾಕುತ್ತೇವೆ ಎಂದು ಹೇಳಿದ್ದಾರೆ.
ವೈಟ್ ಬೋರ್ಡ್ ಕಾರು ಇರುವ ಪಡಿತರ ಚೀಟಿ ರದ್ದಾಗಲಿದ್ದು, ಆಹಾರ ಇಲಾಖೆ ಮಾಹಿತಿ ಸಂಗ್ರಹಕ್ಕೆ ಸರ್ವೆ ಮಾಡಲು ಮುಂದಾಗಿದೆ. ಈಗಾಗಿ ಈ ವರ್ಷ ವೈಟ್‍ಬೋರ್ಡ್ ಕಾರ್ಡ್ ಸಂಬಂಧ ಎಷ್ಟು ಕಾರ್ಡ್ ರದ್ದಾಗಲಿದೆ ಕಾದು ನೋಡಬೇಕಿದೆ.
ಯಾರೆಲ್ಲ ನಕಲಿ ರೇಷನ್ ಕಾರ್ಡ್ ಹೊಂದಿದ್ದಾರೆ?
ಐಶಾರಾಮಿ ಕಾರುಳ್ಳವರು, ಸರಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ್ದವರು, ಭರ್ಜರಿ ಆದಾಯ ತೆರಿಗೆ ಪಾವತಿಸುವವರು… ಹೀಗೆ ಅನೇಕ ಸ್ಥಿತಿವಂತರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇವರಲ್ಲಿ ಸಾವಿರಾರು ನಕಲಿ ಕಾರ್ಡ್ದಾರರನ್ನು ಈಗಾಗಲೇ ಆಹಾರ ಇಲಾಖೆ ಪತ್ತೆ ಹಚ್ಚಿ ದಂಡ ವಿಧಿಸಿದೆ.
ಎಲ್ಲಾ ಸಾರ್ವಜನಿಕರಿಗೆ ಗುಡ್ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸುಮಾರು 4.6 ಲಕ್ಷ ನಕಲಿ ಕಾರ್ಡುದಾರರಿಗೆ ದಂಡ ವಿಧಿಸಿದ್ದು, ಸಾರಿಗೆ ಇಲಾಖೆಯ ಸಹಾಯದಿಂದ 12,583 ಜನ ಬಿಪಿಎಲ್ ಕಾರ್ಡ್ದಾರರು ಐಷಾರಾಮಿ ಕಾರು, ವೈಟ್ ಬೋರ್ಡ್ ಕಾರುಗಳನ್ನು ಹೊಂದಿದ್ದಾರೆ ಎಂದು ಗೊತ್ತಾಗಿದೆ.