ರಾಧಿಕಾ ಪಂಡಿತ್ ಮತ್ತು ಯಶ್ ಅವರು ಸ್ಯಾಂಡಲ್ವುಡ್ ಕಂಡ ಅದ್ಭುತ ಯಶಸ್ವಿ ಜೋಡಿ. ತೆರೆ ಮೇಲು ಕೂಡ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿವೆ ಮತ್ತು ಇಬ್ಬರು ಕೂಡ ಒಂದೇ ಸಮಯದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟವರಾಗಿದ್ದಾರೆ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇಬ್ಬರು ಭೇಟಿ ಆಗಿದ್ದರು, ಈ ಧಾರಾವಾಹಿಯಲ್ಲಿ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಅಭಿನಯಿಸಿದ್ದರೆ ಅವರ ಅಣ್ಣನ ಪಾತ್ರದಲ್ಲಿ ಯಶ್ ಅವರು ಕಾಣಿಸಿಕೊಂಡಿದ್ದರು.
ಆಗ ಪರಸ್ಪರ ಪರಿಚಯವಿದ್ದ ಈ ಎರಡು ಮುಖಗಳು ನಂತರ ಸ್ನೇಹಿತರಾಗಿ ಬದಲಾಗಿದ್ದು ಶಶಾಂಕ್ ಅವರ ನಿರ್ದೇಶನದ ಮೊಗ್ಗಿನ ಮನಸ್ಸು ಎನ್ನುವ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮೊದಲ ಬಾರಿಗೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಂಡರು. ಕಾಲೇಜು ಹುಡುಗಿಯರ ಕಥೆ ಹೇಳುವ ಸಿನಿಮಾ ವಾಗಿದ್ದರೂ ಕೂಡ ಸಿನಿಮಾದ ಪ್ರಮುಖ ಆಕರ್ಷಣೆ ಇವರಿಬ್ಬರ ಕಾಂಬಿನೇಷನ್ ಎಂದೇ ಹೇಳಬಹುದು. ನಂತರ ಇಬ್ಬರ ಅದೃಷ್ಟ ಬದಲಾಗಿ ಹೋಯಿತು.
ಅದೃಷ್ಟದ ಜೊತೆಗೆ ಇವರ ಸತತ ಪ್ರಯತ್ನ, ಹಠ, ಕನಸು ಎಲ್ಲವೂ ಕೂಡ ಇಂದು ಯಶ್ ಅವರು ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆಯುವುದಕ್ಕೆ ಕಾರಣ ಆಗಿದ್ದರೆ ಅವರ ಎಲ್ಲಾ ಕನಸುಗಳಿಗೆ ಸ್ಪೂರ್ತಿಯಾಗಿ ಹಾಗೂ ಬೆನ್ನೆಲುಬಾಗಿ ನಿಂತಿದ್ದು ಅವರ ಅರ್ಧಾಂಗಿ ರಾಧಿಕಾ ಪಂಡಿತ್ ಅವರು. ಇಬ್ಬರು ಸಿನಿಮಾ ಲೋಕದಲ್ಲಿ ಒಟ್ಟೊಟ್ಟಿಗೆ ಬೆಳೆಯುತ್ತಿದ್ದರು. ಯಶ್ ಅವರು ರಾಕಿಂಗ್ ಸ್ಟಾರ್ ಆಗಿ ತೆರೆ ಮೇಲೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದರೆ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ವುಡ್ನ ಲಕ್ಕಿ ಡಾಲ್ ಎಂದು ಕರೆಸಿಕೊಂಡರು. ಇವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ನಡೆಯಿತು.
ಈ ಮಧ್ಯೆ ಇಬ್ಬರೂ ಕೂಡ ಡ್ರಾಮಾ ಎನ್ನುವ ಸಿನಿಮಾದಲ್ಲಿ ಮತ್ತೊಮ್ಮೆ ಜೋಡಿ ಆಗಿ ಕಾಣಿಸಿಕೊಂಡರು. ಆ ಸಮಯದಲ್ಲಿ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರ ಮೇಲೆ ಪ್ರೀತಿ ಆಗಿತ್ತು. ಆಗಲೇ ಅನೇಕರ ಬಳಿ ಹೇಳಿಸುವ ಪ್ರಯತ್ನ ಹಾಗೂ ಸಣ್ಣಪುಟ್ಟ ಕ್ಲೂ ಕೊಡುವ ಪ್ರಯತ್ನ ಮಾಡಿದರು ರಾಧಿಕಾ ಪಂಡಿತ್ ಅವರಿಗೆ ಅದು ಅರ್ಥವಾಗಲಿಲ್ಲವಂತೆ ಹಾಗಾಗಿ ಇನ್ನು ಕೂಡ ರಾಧಿಕಾ ಪಂಡಿತ್ ಅವರನ್ನು ಯಶ್ ಅವರು ಫೂಲ್ ಎನ್ನುತ್ತಾರೆ. ಅವರ ನಂಬರ್ ಅನ್ನು ಕೂಡ ಅದೇ ರೀತಿ ಸೇವ್ ಮಾಡಿಕೊಂಡಿದ್ದಾರಂತೆ.
ನಂತರ ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾಗಳಲ್ಲಿ ಇವರಿಬ್ಬರು ನಾಯಕ ಆಗಿ ಕಾಣಿಸಿಕೊಂಡರು. ಮಿಸಸ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಇವರಿಬ್ಬನು ನೋಡಿದ ಮೇಲೆ ಎಲ್ಲರಿಗೂ ಕೂಡ ಇವರಿಬ್ಬರು ನಿಜ ಜೀವನದಲ್ಲಿ ಕೂಡ ಜೋಡಿ ಆದರೆ ಎಷ್ಟು ಚೆಂದ ಎನಿಸುತ್ತಿತ್ತು. ಯಶ್ ಅವರು ಮೊದಲಿಗೆ ರಾಧಿಕಾ ಪಂಡಿತ್ ಅವರಿಗೆ ಪ್ರಪೋಸ್ ಮಾಡಿದರಂತೆ ಆದರೆ ಪ್ರಪೋಸ್ ಮಾಡಲು ಇವರಿಗೆ ಬಹಳ ಆತ್ಮವಿಶ್ವಾಸದ ಕೊರತೆ ಇತ್ತಂತೆ ಕಾರಣ ಅವರು ಪ್ರೀತಿ ಒಪ್ಪಿಕೊಳ್ಳದೆ ಹೋದರೆ ಇರುವ ಸ್ನೇಹವನ್ನು ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡುತ್ತಿತ್ತಂತೆ.
ಹಾಗಾಗಿ ರಾಧಿಕಾ ಪಂಡಿತ್ ಅವರ ಸ್ನೇಹ ಕಳೆದುಕೊಳ್ಳಲು ಯಶ್ ಅವರಿಗೆ ಇಷ್ಟ ಇಲ್ಲದ ಕಾರಣ ಬಹಳ ಯೋಚನೆ ಮಾಡಿ ಒಂದು ದಿನ ಪ್ರಪೋಸ್ ಮಾಡಿದರಂತೆ. ಯಶ್ ಅವರು ಪ್ರಪೋಸ್ ಮಾಡಿದ ತಕ್ಷಣ ರಾಧಿಕಾ ಪಂಡಿತ್ ಅವರು ಎಸ್ ಎಂದು ಹೇಳಲಿಲ್ಲ ಬದಲಿಗೆ ಸಮಯ ತೆಗೆದುಕೊಂಡು ಯೋಚಿಸಿ ನಂತರ ಪ್ರೀತಿ ಒಪ್ಪಿಕೊಂಡರಂತೆ ಇದೀಗ ಈ ಮುದ್ದಾದ ಜೋಡಿಗೆ ಮದುವೆಯಾಗಿ ಎರಡು ಮಕ್ಕಳು ಇದೆ. ಇಂದಿಗೂ ಪ್ರೀತಿಸಿ ಮದುವೆ ಆಗುವವರಿಗೆ ಇವರು ಮಾದರಿ ಜೋಡಿ ರೀತಿ ಇದ್ದಾರೆ. ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.