Home Public Vishya ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

0
ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

 

ಸದ್ಯಕ್ಕೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಹಿಂದುಗಳ ಪ್ರಕಾರ ಇಂತಹದೊಂದು ಕಾಯ್ದೆಯ ಅವಶ್ಯಕತೆ ಖಂಡಿತವಾಗಿಯೂ ಇತ್ತು. ಯಾಕೆಂದರೆ, 2016 ರಲ್ಲಿ ಚೆನ್ನೈನ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ನೀಡಿರುವ ವರದಿಯ ಪ್ರಕಾರ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತಿರುವವರ ಸಂಖ್ಯೆ ದಕ್ಷಿಣ ಭಾರತದಲ್ಲಿ ಹಾಗೂ ಉತ್ತರ ಭಾರತದ ಹೃದಯ ಭಾಗದಲ್ಲಿ ಹೆಚ್ಚಾಗಿದೆ.

ಲಾಕ್ಡೌನ್ ಸಮಯದಲ್ಲೂ ಒಂದು ಲಕ್ಷ ಮಂದಿಯನ್ನು ತಮ್ಮ ಧರ್ಮಕ್ಕೆ ಕ್ರಿಶ್ಚಿಯನ್ ಮಿಷನರಿಗಳು ಮತಾಂತರಿಸಿದ್ದಾರೆ ಎಂದು ಮತ್ತಷ್ಟು ವರದಿಗಳು ಹೇಳುತ್ತವೆ ಹಾಗಾದರೆ ನಿಧಾನವಾಗಿ ಯಾವ ರೀತಿ ಹಿಂದೂ ರಾಷ್ಟ್ರವನ್ನು ಇದು ಆವರಿಸಿಕೊಳ್ಳುತ್ತದೆ ಎನ್ನುವುದರ ಬಗ್ಗೆ ದಿಗಿಲು ಹುಟ್ಟದೇ ಇರದು.

ಇದರ ನಡುವೆ ಸಮಾಧಾನಕರ ಸಂಗತಿ ಏನೆಂದರೆ, ನಿಧಾನವಾಗಿ ಸನಾತನ ಎನ್ನುವ ಕೂಗು ಎಲ್ಲೆಡೆ ಮೊಳಗುತ್ತಿದೆ. ಭಾರತವನ್ನು ಹಿಂದು ರಾಷ್ಟ್ರವಾಗಿಯೇ ಉಳಿಸಿಕೊಳ್ಳಬೇಕು. ಜಗತ್ತಿನಾದ್ಯಂತ ಹಿಂದುಗಳಿಗಾಗಿ ಇರುವ ಇರುವ ಏಕೈಕ ನೆಲೆ ಇದು ಎನ್ನುವುದು ನಿಲುವು ಗಟ್ಟಿಯಾಗುತ್ತಿದೆ.

ಮಕ್ಕಳು ಮತಾಂಥರವಾಗಲು ಒಪ್ಪದ ಕಾರಣ ಪೋಷಕರು ಮಕ್ಕಳನ್ನು ಥಳಿಸಿರುವ ಹಾಗೂ ಮನೆಯಿಂದ ಹೊರ ಹಾಕಿರುವ ಉದಾಹರಣೆಗಳನ್ನು ಕೇಳಿದ್ದ ನನಗೆ ಸಂಪ್ರದಾಯವನ್ನು ತೊರೆದ ಮಕ್ಕಳಿಗೆ ತಮ್ಮ ಆಸ್ತಿಯು ಸೇರಬಾರದು ಎಂದು ಕುಲ ದೇವರ ಹೆಸರಿಗೆ ಬರೆದ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಕಾಂಚೀಪುರಂ ನಿವಾಸಿಯಾಗಿರುವ 85 ವರ್ಷದ ದಿನಮಲರ್ ವೇಲಾಯುಧಂ ಎನ್ನುವವರು ಈ ನಿರ್ಧಾರ ಮಾಡಿರುವ ವ್ಯಕ್ತಿ.

ಇವರು ತಮಿಳುನಾಡಿನಲ್ಲಿ ಆರೋಗ್ಯ ನಿರೀಕ್ಷಕರಾಗಿ (Health Inspector) ಕೆಲಸ ಮಾಡಿದ್ದರು. ಇವರ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಕ್ರಿಶ್ಚಿಯನ್ನರನ್ನು ಮದುವೆಯಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಾರೆ. ಕೊನೆಗೆ ಇವರ ಅಂತ್ಯ ಸಂಸ್ಕಾರವನ್ನು ಕೂಡ ಹಿಂದು ಧರ್ಮದ ಪ್ರಕಾರ ಮಾಡಲು ಒಪ್ಪದೆ ಹೋಗಿದಕ್ಕೆ ಬೇಸತ್ತು ಮನನೊಂದು ಅವರು ತಮ್ಮ ಮನೆಯನ್ನು ದೇವಸ್ಥಾನಕ್ಕೆ ನೀಡಲು ನಿರ್ಧರಿಸಿ.

ದೇವಸ್ಥಾನವು ಸರ್ಕಾರದ ನಿಯಂತ್ರಿತ ಆಸ್ತಿಗಳ ಅಡಿಯಲ್ಲಿ ಬರುವುದರಿಂದ ವೇಲಾಯುಧಂ ರವರು HRCE ಸಚಿವರಿಗೆ ಮನೆಯ ಕಾಗದಪತ್ರಗಳನ್ನ ಹಸ್ತಾಂತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದಂತೆ ಅಲ್ಲಿನ ಕೆಲ ಮಾಧ್ಯಮಗಳು ಇವರ ಇಂಟರ್ವ್ಯೂ ಮಾಡಿ ಪ್ರಶ್ನೆ ಕೇಳಿದೆ.

ಅದಕ್ಕವರು ಕೊಟ್ಟ ಉತ್ತರ ಹೀಗಿತ್ತು. ಹಿಂದೂ ಧರ್ಮದ ಅನುಯಾಯಿಯಾಗಿ ನನ್ನ ಮಕ್ಕಳು ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಬೇಕೆಂದು ನಾನು ಬಯಸಿದ್ದೆ. ಆದರೆ ನನ್ನ ಇಬ್ಬರು ಹೆಣ್ಣುಮಕ್ಕಳು ಕ್ರಿಶ್ಚಿಯನ್ ಪುರುಷರನ್ನು ಮದುವೆಯಾಗಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ, ನನ್ನ ಮಗನೂ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾನೆ.

ಈಗ ಮೂವರೂ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಾರೆ. ಹಾಗಾಗಿ ಹಿಂದೂ ಸಂಪ್ರದಾಯದಂತೆ ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನನ್ನ ಹೆಸರಿನಲ್ಲಿರುವ 2,680 ಚದರ ಅಡಿ ಆಸ್ತಿಯ ಮನೆಯು 2 ಕೋಟಿ ರೂ. ಮೌಲ್ಯದಾಗಿದ್ದು ಧರ್ಮ ಬದಲಿಸಿದವರಿಗೆ ಇದನ್ನು ಕೊಡಲು ನನಗೆ ಮನಸಿಲ್ಲ.

ಹಾಗಾಗಿ ನನ್ನ ಕುಲದೈವವಾದ ಕುಮಾರಕ್ಕೊಟ್ಟಂ ಮುರುಗನ್ ದೇವಸ್ಥಾನಕ್ಕೆ ದಾನ ಮಾಡಿದ್ದೇನೆ. ನನ್ನ ಎರಡನೇ ಮಗ ಮತ್ತು ಮಗಳು ಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಬದುಕಿರುವವರೆಗೂ ಮಾತ್ರ ಅವರಿಲ್ಲಿ ವಾಸಿಸಬಹುದು. ಆದರೆ ನಾನು ಸತ್ತ ತಕ್ಷಣ ದೇವಾಲಯಕ್ಕೆ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರವಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here