ವಾಸ್ತು ಎನ್ನುವುದು ಬಹಳ ಸಿಂಪಲ್ ವಿಚಾರ. ಮನೆಯಲ್ಲಿ ಯಾವ ದಿಕ್ಕುಗಳಲ್ಲಿ ಯಾವ ಸಂಗತಿಗಳು ಇದ್ದರೆ ಉತ್ತಮ ಫಲಗಳು ಸಿಗುತ್ತವೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕೆಲವೊಮ್ಮೆ ವಾಸ್ತು ಪ್ರಕಾರ ಮನೆ ಇರದೆ ಹೋದಾಗ ಅನಾರೋಗ್ಯ, ಕಲಹಗಳು, ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಮನೆ ಕಟ್ಟುವ ಮುನ್ನ ಮನೆಗೆ ಪ್ಲಾನ್ ಮಾಡಿಸುವಾಗ ವಾಸ್ತು ಪ್ರಕಾರವಾಗಿ ಹಾಕಿಸಿ ಅದರಂತೆ ಕಟ್ಟಿಸಿ ಜೀವಿಸಲು ಇಚ್ಛಿಸುತ್ತಾರೆ.
ಇನ್ನು ಕೆಲವರು ಮನೆ ಕಟ್ಟಿದ ಮೇಲೆ ಇದರ ಬಗ್ಗೆ ತಿಳಿದಾಗ ಆಲ್ಟ್ರೇಶನ್ ಮಾಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ವಾಸ್ತುವಿನ ಬಗ್ಗೆ ಕೆಲವು ಸಿಂಪಲ್ ಬೇಸಿಕ್ ವಿಷಯಗಳನ್ನು ತಿಳಿದುಕೊಂಡಿರಲೇಬೇಕು ಹಾಗಾಗಿ ಇದರ ಬಗ್ಗೆ ಕೆಲ ಸಂಗತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.
* ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ಮೂಲೆಯಲ್ಲಿ ಅಡುಗೆಮನೆ ಇರಬೇಕು. ಒಂದು ವೇಳೆ ಅಲ್ಲಿ ಸಾಧ್ಯವಾಗದೇ ಇದ್ದರೆ ವಾಯುವ್ಯ ದಿಕ್ಕಿನಲ್ಲಿ ಅಡುಗೆ ಮನೆ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಈಶಾನ್ಯ ಮೂಲೆಯಲ್ಲಿ ಅಡುಗೆ ಮನೆಯನ್ನು ಮಾಡಲೇಬಾರದು.
* ಅಡುಗೆಮನೆ ಯಿವಾಗಲೂ ಮನೆಯ ಮುಖ್ಯ ದ್ವಾರದಿಂದ ನೇರವಾಗಿ ಅಡುಗೆಮನೆಗೆ ಬರುವ ರೀತಿ ಇರಬಾರದು ಮತ್ತು ಮನೆಗೆ ಯಾರಾದರೂ ಬಂದಾಗ ಅಡುಗೆ ಮನೆ ನೇರವಾಗಿ ಎದುರು ಕಾಣುವ ರೀತಿ ಅಡುಗೆ ಮನೆ ಇರಬಾರದು.
* ದೇವರ ಫೋಟೋ ಅಥವಾ ವಿಗ್ರಹಗಳನ್ನು ಉತ್ತರ ಮುಖವಾಗಿ ಮತ್ತು ಪಶ್ಚಿಮ ಮುಖವಾಗಿ ಇಡಬಹುದು ಆದರೆ ಯಾವುದೇ ಕಾರಣಕ್ಕೂ ದಕ್ಷಿಣಾಭಿಮುಖವಾಗಿ ದೇವರ ಫೋಟೋ ಇಡಬಾರದು, ದೇವರಿಗೆ ಪೂಜೆ ಮಾಡುವವರು ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವ ರೀತಿ ಇರಬೇಕು.
* ಮನೆಯ ಮೇಲಿರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಏರುವ ರೀತಿ ಇರಬೇಕು. ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು.
* ಮನೆಯ ಪೂರ್ವ ಹಾಗೂ ಉತ್ತರದ ನಡುವೆ ಇರುವ ಮೂಲೆಗೆ ಈಶಾನ್ಯ ದಿಕ್ಕು ಈಶಾನ್ಯ ಮೂಲೆ ಅಂತಲೂ ಹೇಳಲಾಗುತ್ತದೆ. ಅಲ್ಲಿಯೇ ಈಶ್ವರನ ವಾಸ ಹಾಗಾಗಿ ಈ ಸ್ಥಳದಲ್ಲಿ ಪೂಜಾ ಕೊಠಡಿ ಕಟ್ಟಿಸಿದರೆ ಉತ್ತಮ. ಒಂದು ವೇಳೆ ಕೋಣೆ ಮಾಡಲು ಸಾಧ್ಯವಾಗದೆ ಇದ್ದವರು ದೇವರ ಮಂಟಪವನ್ನಾದರೂ ಇಟ್ಟುಕೊಂಡು ಆ ಜಾಗದಲ್ಲಿ ದೇವರನ್ನು ಪೂಜಿಸಬೇಕು.
* ಶೌಚಾಲಯವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟಬೇಕು. ತಪ್ಪಾದ ದಿಕ್ಕಿನಲ್ಲಿ ಶೌಚಾಲಯ ಕಟ್ಟಿದರೆ ಕೆ’ಟ್ಟದಾಗುತ್ತದೆ ಹಾಗಾಗಿ ಈ ಬಗ್ಗೆ ಎಚ್ಚರ ಇರಲಿ.
* ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳಲ್ಲಿ ತುಳಸಿ ಕಟ್ಟೆ ಬೃಂದಾವನವನ್ನು ಕಟ್ಟಬಾರದು. ಈ ದಿಕ್ಕಿನಲ್ಲಿ ತುಳಸಿ ಕುಂಡವನ್ನು ಕೂಡ ಇಟ್ಟು ಪೂಜಿಸಬಾರದು ಇದರ ಬದಲು ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯ ತುಳಸಿ ಬೃಂದಾವನವನ್ನು ಕಟ್ಟಿದರೆ ಒಳ್ಳೆಯದು ಅಥವಾ ಈ ಜಾಗದಲ್ಲಿ ತುಳಸಿ ಕುಂಡ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು.
* ಮನೆಯ ಪೂರ್ವ ಭಾಗ ಉತ್ತರ ಭಾಗ ಈಶಾನ್ಯ ಭಾಗ ತಗ್ಗು ಜಾಗವಾಗಿದ್ದರೆ ಬಹಳ ಶುಭ ಎಂದು ಹೇಳಲಾಗುತ್ತದೆ.
* ಮನೆಯ ಈಶಾನ್ಯ ಮೂಲೆಯಲ್ಲಿ ನೀರು ತುಂಬಿರುವ ಕೊಡ ಇಟ್ಟರೆ ಒಳ್ಳೆಯದು ಮತ್ತು ಈಶಾನ್ಯ ಮೂಲೆಯಲ್ಲಿ ನೀರು ಸಂಗ್ರಹಣೆ ಮಾಡುವುದಕ್ಕೆ ತೊಟ್ಟಿ ಆಥವಾ ಸಂಪ್ ಕಟ್ಟಿಸಿದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.