ಕೋವಿಡ್ ಬಂದಾಗಲಿಂದ ನಮ್ಮಲ್ಲಿ ಜ್ವರ, ನೆಗಡಿ, ಕೆಮ್ಮು ಬಂದರೆ ಬಹಳ ಭ’ಯ ಬೀಳುತ್ತೇವೆ. ಆದರೆ ಕೋವಿಡ್ ಬಂದ ಕಾರಣಕ್ಕಿಂತ ಕೋವಿಡ್ ನ ಭ’ಯದಿಂದ ಮ’ರ’ಣ ಹೊಂದಿದವರ ಸಂಖ್ಯೆಯೇ ಹೆಚ್ಚು ಎಂದು ಹೇಳಬಹುದು. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ನಿಂದ ಮರಣ ಹೊಂದಿದವರ ಸಂಖ್ಯೆ ಬಹಳ ಕಡಿಮೆ ಯಾಕೆಂದರ ಭಾರತೀಯರ ರೋಗನಿರೋಧಕ ಶಕ್ತಿ ಪ್ರಪಂಚದಲ್ಲಿಯೇ ಬೆಸ್ಟ್.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಜ್ವರ ಬರುತ್ತದೆ ನೆಗಡಿ ಕೆಮ್ಮು ಕೂಡ ಬರುತ್ತದೆ ಇದು ಮಾಮೂಲಿ ಜ್ವರ ಆಗಿದ್ದರೆ ಎಲ್ಲದಕ್ಕೂ ಕೂಡ ತಕ್ಷಣ ಮೆಡಿಸನ್ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಯಾಕೆಂದರೆ ಜ್ವರ ಬರುವುದೇ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶರೀರ ಹೊರಗಿನ ಇನ್ಫೆಕ್ಷನ್ ಗಳ ವಿರುದ್ಧ ಹೋರಾಡುವಾಗ ದೇಹದ ಟೆಂಪರೇಚರ್ ಹೆಚ್ಚಾಗುವುದು ತುಂಬಾ ಕಾಮನ್ ಹೀಗಾಗಿ ಹಾಗಾಗಿ ನಮಗೆ ಜ್ವರ ಬರುತ್ತದೆ.
ಜ್ವರ ಬಂದಾಗ ದ್ರವರೂಪದ ಆಹಾರ ಪದಾರ್ಥ ಸೇವಿಸಬೇಕು, ಹಣ್ಣಿನ ರಸ ಅಥವಾ ಗಂಜಿ ಸೇವಿಸಬೇಕು, ಸಾಧ್ಯವಾದಷ್ಟು ಚೆನ್ನಾಗಿ ರೆಸ್ಟ್ ಮಾಡಬೇಕು, ಆಗ ತನ್ನಿಂದ ತಾನೇ ಜ್ವರ ಕಡಿಮೆ ಆಗುತ್ತದೆ. ಒಂದು ವೇಳೆ ಒಂದು ಅಥವಾ ಎರಡು ದಿನ ಕಳೆದು ಇದು ಕಡಿಮೆ ಆಗಿಲ್ಲ ದೇಹದಲ್ಲಿ ನಿರ್ಜಲೀಕರಣ ಆಗುತ್ತಿದೆ, ಊಟ ಮಾಡಲು ಮನಸಾಗುತ್ತಿಲ್ಲ
ದೇಹದ ಟೆಂಪರೇಚರ್ ಕಡಿಮೆ ಕೂಡ ಆಗಿಲ್ಲ ಅಂದರೆ ಆಗ ಮಾತ್ರ ತಪ್ಪದೇ ವೈದ್ಯರ ಬಳಿ ಹೋಗಬೇಕು. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಚಿಕ್ಕ ಜ್ವರ ಎಲ್ಲರಿಗೂ ಬರುತ್ತದೆ. ಬೇಕಾದರೆ ನೀವು ಆ ಸಮಯದಲ್ಲಿ ಅದ್ಭುತವಾದ ಕೆಲವು ಮನೆಮದ್ದುಗಳನ್ನು ಮಾಡುವುದರ ಮೂಲಕ ಮನೆಯಲ್ಲಿಯೇ ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು.
20ml ನೀರಿಗೆ, 80ml ನೀರು ಹಾಕಿ ಅದಕ್ಕೆ ಸ್ವಲ್ಪ ಅರಿಶಿನ ಲವಂಗ ಏಲಕ್ಕಿ ಹಾಗೂ ಕರಿಮೆಣಸುವನ್ನು ಕುಟ್ಟಿ ಪುಡಿ ಮಾಡಿ ಹಾಕಿ 100ml ನೀರು 50ml ಆಗುವವರೆಗೂ ಕೂಡ ಚೆನ್ನಾಗಿ ಕುದಿಸಿ, ದಿನದಲ್ಲಿ 3-4 ಬಾರಿ ತೆಗೆದುಕೊಂಡರೆ ಜ್ವರ ತನ್ನಿಂದ ತಾನೇ ಕಡಿಮೆ ಆಗುತ್ತದೆ ಮತ್ತು ದೇಹದ ರೋಗನಿರೋಧಕ ಶಕ್ತಿ ಇನ್ನಷ್ಟು ಗಟ್ಟಿ ಆಗುತ್ತದೆ.
ಹಾಗಾಗಿ ಜ್ವರ ಬಂದ ತಕ್ಷಣ ಭ’ಯ ಬೀಳದೆ ಮಾನಸಿಕವಾಗಿ ಧೈರ್ಯವಾಗಿರಬೇಕು ಅದು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬೂಸ್ಟ್ ಮಾಡುತ್ತದೆ. ನೆಗಡಿ ಬಂದಾಗ ಕೂಡ ನಾವು ಮೆಡಿಸನ್ ತೆಗೆದುಕೊಂಡರೂ ಖಂಡಿತ ಎರಡು ವಾರಗಳ ಸಮಯ ಸಂಪೂರ್ಣವಾಗಿ ನೆಗಡಿ ವಾಸಿ ಆಗುವುದಕ್ಕೆ ಬೇಕೇ ಬೇಕು. ಹಾಗಾಗಿ ಮೆಡಿಸನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
ಒಂದು ವೇಳೆ ನೀವು ವಿಪರೀತವಾಗಿ ನೆಗಡಿಯಿಂದ ಸಮಸ್ಯೆಪಡುತ್ತಿದ್ದೀರಿ ನಿಮ್ಮಿಂದ ಅಕ್ಕಪಕ್ಕದವರಿಗೆ ಕಿರಿಕಿರಿ ಆಗುತ್ತಿದೆ ತಡೆಯಲು ಆಗುತ್ತಿಲ್ಲ, ಮೂಗು ತುಂಬಾ ಸೋರುತ್ತದೆ, ಕೆಲಸ ಮಾಡಲು ಆಗುತ್ತಿಲ್ಲ ಎಂದಾಗ ವೈದ್ಯರು ಬಳಿ ಹೋಗಬಹುದು ಅದನ್ನು ಹೊರತುಪಡಿಸಿ ಈ ಮೇಲೆ ಹೇಳಿದ ಮನೆಮದ್ದನ್ನು ಅನುಸರಿಸಿದರೆ ನೆಗಡಿ ಕೂಡ ಕಡಿಮೆ ಆಗುತ್ತದೆ.
ಇದರೊಂದಿಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಬೆಳಿಗ್ಗೆ ಎದ್ದ ಕೂಡಲೇ ಎರಡು ತುಳಸಿ ಎಲೆಯನ್ನು ಶುದ್ಧ ಜೇನುತುಪ್ಪಕ್ಕೆ ಅದ್ದಿ ಚೆನ್ನಾಗಿ ಜಗಿದು ತಿನ್ನಬೇಕು. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಳೆಯ ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಹೇರಳವಾಗಿದೆ.
ಈ ರೀತಿಯ ಪದಾರ್ಥಗಳನ್ನು ತಿಂದು ಮಾನಸಿಕವಾಗಿ ಸ್ಥೈರ್ಯ ತೆಗೆದುಕೊಂಡು ನ್ಯಾಚುರಲ್ ಆಗಿ ನಾವು ನಮ್ಮ ಖಾಯಿಲೆಗಳನ್ನು ಗುಣಪಡಿಸಿಕೊಳ್ಳುವುದು ಉತ್ತಮ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಮೆಡಿಸನ್ ತೆಗೆದುಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ ಎನ್ನುತ್ತದೆ ಆಯುರ್ವೇದ.