ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅ.ಗ.ಲಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಎಲ್ಲರ ಬಾಯಲ್ಲೂ ಅಪ್ಪು ಎಂಬ ಹೆಸರು ಕೇಳಿ ಬರುತ್ತಿದೆ. ಅಪ್ಪು ಅವರನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಆಗಿರಬಹುದು ಸ್ನೇಹಿತರೆ ಆಗಿರಬಹುದು ಪರಿಚಯ ಆಗಿರಬಹುದು ನಮ್ಮನ್ನು ಬಿಟ್ಟು ಅ.ಗ.ಲಿ.ದಾ.ಗ ಒಂದೆರಡು ದಿನ ಅವರ ನೆನಪಿನಲ್ಲಿ ಇರುತ್ತೇವೆ ಹೆಚ್ಚೆಂದರೆ ಎರಡು ಮೂರು ತಿಂಗಳು ಅವರ ನೆನಪಿನಲ್ಲಿಯೇ ಕುಳಿತಿರುತ್ತೇವೆ. ತದನಂತರ ಪ್ರಕೃತಿಯ ನಿಯಮದಂತೆ ಅವರನ್ನು ಮರೆತು ನಮ್ಮ ಕೆಲಸ ಕಾರ್ಯದತ್ತ ಗಮನವನ್ನು ವಹಿಸುತ್ತೇವೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಆದರೆ ಅಪ್ಪು ಅವರು ಅ.ಗ.ಲಿ 11 ತಿಂಗಳು ಕಳೆದು ಹೋದರು ಕೂಡ ಅವರನ್ನು ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಇದು ಕೇವಲ ರಾಜಕುಮಾರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜನತೆಗೂ ಕೂಡ ಅಪ್ಪು ಅವರನ್ನು ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾನೇ ಹೇಳಬಹುದು. ಹೌದು ಯಾವುದೇ ಕಾರ್ಯಕ್ರಮ ಇರಬಹುದು ಹಬ್ಬ ಹರಿದಿನ ಇರಬಹುದು ಜಾತ್ರೆ ಇರಬಹುದು ಸಿನಿಮಾರಂಗ ಆಗಿರಬಹುದು ಕಿರುತೆರೆ ಆಗಿರಬಹುದು ಎಲ್ಲಿ ಹೋದರೂ ಕೂಡ ಎಲ್ಲಿ ಬಂದರೂ ಕೂಡ ಅಪ್ಪು ಹೆಸರು ರಾರಾಜಿಸುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ವಾತಂತ್ರ್ಯ ದಿನಾಚರಣೆಯ ಅಂಗದಂದು ಲಾಲ್ಬಾಗ್ನಲ್ಲಿ ಅಪ್ಪು ಅವರ ಪುಷ್ಪ ನಮನ ಕಾರ್ಯಕ್ರಮವನ್ನು ಆಯೋಜಿಸಿದರು.
ಅದಾದ ನಂತರ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಫಿನಾಲೆ ದಿನದಂದು ಕೂಡ ಅಪ್ಪು ಅವರ ಹೆಸರಿನಲ್ಲಿಯೇ ಟ್ರೋಫಿಯನ್ನು ವಿತರಿಸಲಾಯಿತು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಯುವ ದಸರಾ ಚಾಲನೆಯನ್ನು ಕೂಡ ಅಪ್ಪು ಅವರ ಹೆಸರಿನಲ್ಲಿಯೇ ಆಯೋಜಿಸಲಾಗಿದೆ. ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ನಮನವನ್ನು ಏರ್ಪಡಿಸಲಾಯಿತು ಈ ಒಂದು ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು ಇವರ ಜೊತೆ ರಾಘವೇಂದ್ರ ರಾಜ್ ಕುಮಾರ್ ಅವರ ಧರ್ಮಪತ್ನಿ ಆದಂತಹ ಮಂಗಳ ಅವರು ಕೂಡ ದೀಪವನ್ನು ಬೆಳಗುವ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಇನ್ನು ಅಪ್ಪು ಅವರ ಕೊನೆಯ ಹಾಗೂ ಕನಸಿನ ಕೂಸು ಆದಂತಹ ಗಂಧದಗುಡಿ ಟೀಸರ್ ಅನ್ನು ಯುವ ದಸರಾ ವೇದಿಕೆಯ ಮೇಲೆ ಪ್ರಸಾರ ಮಾಡಲಾಯಿತು. ಈ ಟೀಸರ್ ಅನ್ನು ನೋಡಿದಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ. ಈ ವಿಡಿಯೋ ಮತ್ತು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಈ ವಿಡಿಯೋ ನೋಡಿ ತುಂಬಾನೇ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರು ನಮ್ಮನ್ನು ಬಿಟ್ಟು ಇಷ್ಟು ಬೇಗ ಹೋಗಬಾರದಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಒಂದು ಯುವ ದಸರಾ ವೇದಿಕೆಗೆ ಅರ್ಜುನ್ ಜನ್ಯ ವಿಜಯ್ ಪ್ರಕಾಶ್ ಗುರುಕಿರಣ್ ಸೇರಿದಂತೆ ಸ್ಯಾಂಡಲ್ ವುಡ್ನ ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದರು.
ಹಾಡುಗಳನ್ನು ಹಾಡುವ ಮೂಲಕ ಅಪ್ಪು ಅವರ ಹಾಡಿಗೆ ಹೆಜ್ಜೆಯನ್ನು ಆಡುವ ಮೂಲಕ ಬಹಳ ವಿಜೃಂಭಣೆಯಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆದರೆ ಈ ಎಲ್ಲ ಸಂಭ್ರಮವನ್ನು ನೋಡುವಂತಹ ಭಾಗ್ಯ ಮಾತ್ರ ಆ ದೇವರು ಅಪ್ಪು ಅವರಿಗೆ ನೀಡಲೇ ಇಲ್ಲ ಒಂದು ವೇಳೆ ಅಪ್ಪು ಬದುಕಿದ್ದರೆ ಇವೆಲ್ಲವನ್ನು ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರು ಏನೋ ಆದರೂ ಕೂಡ ಅಪ್ಪು ಅವರು ಇಲ್ಲದೇ ಇರುವಂತಹ ನೋವನ್ನು ಬರಿಸುವಂತಹ ಶಕ್ತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.