Sunday, May 28, 2023
HomeDevotionalಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.!...

ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ

ನಮ್ಮ ನಾಡಿನ ಒಂದೊಂದು ದೇವಾಲಯಕ್ಕೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಅನೇಕ ದೇವಾಲಯಗಳು ರಾಜರುಗಳ ಕಾಲದಲ್ಲಿ ಜೀರ್ಣೋದ್ದಾರವಾದರೂ ಅವು ಸೃಷ್ಟಿಯಾದ ಕಾಲದ ಕಥೆ ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಒಂದೊಂದು ದೇವಾಲಯ ನಿರ್ಮಾಣವಾದದ್ದರ ಹಿಂದೆ ಒಂದೊಂದು ದಂತ ಕಥೆ ಇದೆ. ದೇವಾಲಯಗಳಲ್ಲಿ ನೆಲೆ ನಿಂತಿರುವ ದೇವತೆಗಳು, ಪ್ರತಿಯೊಂದು ದೇವರ ವಿಗ್ರಹಗಳು, ದೇವಸ್ಥಾನದಲ್ಲಿ ನೆರವೇರುವ ವಿಶೇಷ ಆಚರಣೆಗಳ ಹಿನ್ನೆಲೆ ಹಿಂದೆ ಇರುವ ಕಥೆಯೇ ವಿಶೇಷ.

ಕೆಲ ದೇವಾಲಯಗಳಿಗೆ ಭೇಟಿಕೊಡುವುದರಿಂದ ಮನೆ ಕಟ್ಟುವ ಭಾಗ್ಯ ಬರುತ್ತದೆ ಎಂದು ಜನ ನಂಬುತ್ತಾರೆ, ಹಾಗೆ ಇನ್ನು ಕೆಲವು ದೇವಸ್ಥಾನಗಳಿಗೆ ಭೇಟಿ ಕೊಡುವುದರಿಂದ ಕಂಕಣಭಾಗ್ಯ ಕೂಡಿಬರುತ್ತದೆ ಎನ್ನುತ್ತಾರೆ. ಕೆಲ ದೇವಸ್ಥಾನಗಳಲ್ಲಿನ ವಿಶೇಷ ಪೂಜೆ ಮಾಡಿಸುವುದರಿಂದ ಸರ್ಪ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ಮಾತುಗಳು ರೂಢಿಯಲ್ಲಿವೆ.

ಕರ್ನಾಟಕದಲ್ಲೂ ಕೂಡ ಸರ್ಪದೋಷ ನಿವಾರಣೆಗೆ ಮತ್ತು ಸಂತಾನ ಪ್ರಾಪ್ತಿಗಾಗಿ ಇರುವ ಅನೇಕ ದೇವಾಲಯಗಳು ಫೇಮಸ್ ಆಗಿವೆ. ಅದರಲ್ಲಿ ಒಂದು ಬೆಂಗಳೂರಿನ ಹೊರಭಾಗದಲ್ಲಿರುವ ರಾಮನಗರ ಜಿಲ್ಲೆಯ ಲಕ್ಷ್ಮಿನರಸಿಂಹ ಸ್ವಾಮಿ ಮತ್ತು ಗರುಡ ದೇವಾಲಯ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧವಾದ ಲಕ್ಷ್ಮೀನರಸಿಂಹ ಸ್ವಾಮಿಯ ದೇವಸ್ಥಾನ ಇದೆ.

ಚೋಳ ರಾಜವಂಶದ ಅಸ್ತಿತ್ವದಲ್ಲಿದ್ದ ಈ ದೇವಸ್ಥಾನ ಸ್ಥಾಪಿತವಾದ ಹಿನ್ನೆಲೆ ಕಥೆ ಹೇಳುವುದಾದರೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣ ಜರುಗಿದ ನಂತರ ಶುಕ ಮಹರ್ಷಿಗಳು ಈಗ ದೇವಸ್ಥಾನ ನಿರ್ಮಾಣವಾಗಿರುವ ಜಾಗದಲ್ಲಿ ಬಂದು ಒಂದು ಬದರಿ ವೃಕ್ಷದ ಕೆಳಗೆ ತಪಸ್ಸು ಮಾಡುತ್ತಿದ್ದರಂತೆ. ಇವರ ತಪಸ್ಸಿಗೆ ಒಲಿದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯು ನಿಂತಿದ್ದ ರೂಪದಲ್ಲಿಯೇ ಬಂದು ದರ್ಶನ ಕೊಟ್ಟರಂತೆ.

ನಂತರ ಶುಕ ಮಹರ್ಷಿಗಳು ಅವರು ಯಾವ ರೂಪದಲ್ಲಿ ದೇವರನ್ನು ಕಂಡರೋ ಅದೇ ರೀತಿ ವಿಗ್ರಹ ಸೃಷ್ಟಿಸಿ ಪೂಜಾ ಕಾರ್ಯ ಆರಂಭಿಸಲು ಅಪ್ಪಣೆ ಕೊಟ್ಟರಂತೆ. ಈ ಘಟನೆಗೆ ಸಾಕ್ಷಿಯಾಗಿ ಇಂದು ಸಹ ಆ ಬದರಿ ವೃಕ್ಷದ ಕೆಳಗಡೆ ಶುಕ ಮಹರ್ಷಿಗಳ ಪಾದದ ಮುದ್ರೆ ಇರುವುದನ್ನು ಕಾಣಬಹುದು. ಸಾಮಾನ್ಯವಾಗಿ ಎಲ್ಲಾ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಗಳಲ್ಲಿ ನರಸಿಂಹ ಸ್ವಾಮಿಯು ಕುಳಿತಿರುತ್ತಾರೆ ಅವರ ಎಳೆತೊಡೆಯ ಮೇಲೆ ಲಕ್ಷ್ಮಿ ದೇವಿಯು ಆಸೀನರಾಗಿರುತ್ತಾರೆ.

ಆದರೆ ಈ ದೇವಸ್ಥಾನದಲ್ಲಿ ಮಾತ್ರ ಲಕ್ಷ್ಮಿ ನರಸಿಂಹ ಸ್ವಾಮಿಯ ನಿಂತಿರುವ ರೂಪದಲ್ಲಿಯೇ ವಿಗ್ರಹ ಇದೆ. ಇಲ್ಲಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಾತ್ರವಲ್ಲದೇ ಪರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಬರುತ್ತಾರೆ ಯಾಕೆಂದರೆ ಇಲ್ಲಿಗೆ ಬರುವುದರಿಂದ ಸರ್ಪದೋಷ ನಿವಾರಣೆ ಆಗುತ್ತದೆ ಹಾಗೂ ಸಂತಾನ ಭಾಗ್ಯ ಇಲ್ಲದೆ ಕೊರಗುವವರಿಗೆ ಮಕ್ಕಳ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ.

ಪ್ರತಿದಿನ ಗರುಡನನ್ನು ಪೂಜಿಸುವ ವಿಷ್ಣುವಿನ ಕೆಲವೇ ಕೆಲವು ದೇವಾಲಯಗಳು ಇದು ಕೂಡ ಒಂದು. ಆದ್ದರಿಂದ ಇದನ್ನು ಲಕ್ಷ್ಮಿ ಸಿಂಹ ಸ್ವಾಮಿ ದೇವಾಲಯ ಎನ್ನುವುದರ ಜೊತೆಗೆ ಗರುಡ ದೇವಾಲಯ ಎಂದು ಕೂಡ ಕರೆಯುತ್ತಾರೆ. ಇದು ಗರುಡ ಹುಟ್ಟಿದ ಸ್ಥಳ ಎಂದು ಕೂಡ ಹೇಳುತ್ತಾರೆ ಹಾಗಾಗಿ ಇದಕ್ಕೆ ಈ ಹೆಸರು ಬಂದಿರಬಹುದು. ಇದಕ್ಕೆ ಈ ಹೆಸರು ಬರುವುದರ ಹಿನ್ನೆಲೆ ಏನು ಇದರ ವೈಶಿಷ್ಟ ಏನು ಎನ್ನುವುದರ ಬಗ್ಗೆ ಕೂಡ ಇತಿಹಾಸ ಇದೆ. ಇದರ ಬಗ್ಗೆ ತಿಳಿದುಕೊಳ್ಳಲು ಮತ್ತು ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ತಪ್ಪದೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.