ನಾವೀಗ 21ನೇ ಶತಮಾನದಲ್ಲಿ ಇಂಟರ್ನೆಟ್ ಯುಗದಲ್ಲಿ ಇದ್ದೇವೆ. ಇದನ್ನು ಯಂತ್ರಗಳ ಯುಗ ಎಂದು ಕೂಡ ಕರೆಯುತ್ತಾರೆ. ಈಗ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ ಮನುಷ್ಯ ದಶಕದ ಹಿಂದೆ ಯೋಚನೆಯು ಮಾಡಿರದ ಊಹಿಸಲು ಅಸಾಧ್ಯವಾಗಿದ್ದಂತಹ ಎಷ್ಟೋ ವಿಷಯಗಳನ್ನು ಸಾಧಿಸಿ ಮುಂದೆ ಹೋಗಿದ್ದಾನೆ. ಭೂಮಿಯನ್ನ ಬಿಟ್ಟು ಬೇರೊಂದು ಗ್ರಹದಲ್ಲಿ ಬಿಡಾರ ಕೂಡಲು ರೆಡಿ ಆಗುತ್ತಿರುವ ಮನುಷ್ಯನ ಆಲೋಚನೆಯನ್ನು ಗಮನಿಸಿದರೆ ಈಗಿನ ಕಾಲದಲ್ಲಿ ಸೈನ್ಸ್ ಮತ್ತು ಟೆಕ್ನಾಲಜಿಯನ್ನು ಯಂತ್ರಶಕ್ತಿಯನ್ನು ಎಷ್ಟು ನಂಬಲಾಗುತ್ತದೆ ಎನ್ನುವುದು ಅರಿವಿಗೆ ಬರುತ್ತದೆ.
ಆದರೆ ನಮ್ಮ ದೇಶದಲ್ಲಿ ಹಿಂದೆ ಒಂದು ಕಾಲವಿತ್ತು ಅದನ್ನು ಸಹ ನಾವು ಕಂಡಿದ್ದೇವೆ, ಕೇಳಿದ್ದೇವೆ. ಅದೇನೆಂದರೆ ಮಂತ್ರಗಳ ಮೂಲಕವೇ ಸಕಲ ಕಾರ್ಯವನ್ನು ಸಿದ್ದಿಸಿಲಾಗುತ್ತಿತ್ತು. ನಮ್ಮ ಪುರಾಣಗಳಲ್ಲಿ ಇವುಗಳ ಉಲ್ಲೇಖವಿದೆ. ಜೊತೆಗೆ ಇಂದಿಗೂ ಕೂಡ ನಾವು ಧಾರ್ಮಿಕ ಕ್ಷೇತ್ರದಲ್ಲಿ ಅದರ ಪ್ರಭಾವವನ್ನು ಕಾಣುತ್ತಿದ್ದೇವೆ, ಅರಿಯುತ್ತಿದ್ದೇವೆ. ಈ ಯಂತ್ರಶಕ್ತಿಗಳನ್ನು ಬಳಕೆ ಮಾಡಿಕೊಂಡು ಎಲ್ಲವನ್ನು ಚಾಲೆಂಜ್ ಮಾಡಿ ಮುಂದೆ ಹೋಗುತ್ತಿರುವ ಈ ಟೆಕ್ನಾಲಜಿ ಯುಗ ಹಾಗೂ ಮಂತ್ರ ಶಕ್ತಿಗಳನ್ನು ನಂಬಿಕೊಂಡು ದೇವರ ಮೇಲೆ ನಂಬಿಕೆ ಹಾಕಿ ಬದುಕು ನೂಕುತ್ತಿರುವ ಜನರ ಮಧ್ಯೆ ಇನ್ನೂ ಕೆಲವರು ತಂತ್ರಶಕ್ತಿಯನ್ನು ನಂಬಿದ್ದಾರೆ.
ಕಲಿಗಾಲದಲ್ಲಿ ಇದೆಲ್ಲವೂ ವರ್ಕ್ ಆಗುತ್ತದೆಯಾ ಎನ್ನುವ ಅನುಮಾನ ಪಟ್ಟವರು ಕೂಡ ಈ ರೀತಿ ಉಪಾಯಗಳಿಗೆ ತಂತ್ರಗಳಿಗೆ ಸೋತು ಶರಣಾಗಿರುವ ಉದಾಹರಣೆಗಳು ಇವೆ. ಯಾವುದೇ ಹೆಚ್ಚು ಖರ್ಚಿಲ್ಲದೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಂತ್ರಗಳನ್ನು ಉಪಾಯಗಳನ್ನು ಮಾಡುವ ಮೂಲಕ ನಮಗೆ ಬೇಕಾದನ್ನು ನಾವು ಸಾಧಿಸಿಕೊಳ್ಳಬಹುದು ಜೊತೆಗೆ ನಮ್ಮ ಇಷ್ಟಾರ್ಥಗಳನ್ನು ಕೂಡ ಸಿದ್ಧ ಮಾಡಿಕೊಳ್ಳಬಹುದು. ಇದನ್ನು ಉದಾಹರಣೆಯೊಂದಿಗೆ ಹೇಳಬೇಕು ಎಂದರೆ ನಿಮಗೆ ಯಾವುದಾದರೂ ಒಂದು ಆಸೆ ಇದ್ದರೆ ಅದನ್ನು ಈ ಒಂದು ಉಪಾಯ ಮಾಡಿ ನೀವು 24 ಗಂಟೆಗಳಲ್ಲಿ ನೆರವೇರುವ ಹಾಗೆ ಮಾಡಬಹುದು.
ಇದನ್ನು ಬೇಕಾದರೆ ನೀವು ಚಾಲೆಂಜ್ ಆಗಿ ತೆಗೆದುಕೊಂಡು ಮಾಡಿ ನೋಡಿ. ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ಅದೇ ರೀತಿ ಮಾಡಿ ಆಗ ನಿಮ್ಮ ಇಷ್ಟಾರ್ಥ ಖಂಡಿತವಾಗಿಯೂ ಸಿದ್ದಿ ಆಗುತ್ತದೆ. ಆದರೆ ಅದನ್ನು ಪಾಲಿಸುವುದಕ್ಕೆ ಮುನ್ನ ಇದು ವರ್ಕ್ ಆಗುತ್ತದೆ ಎನ್ನುವ ಮನಸ್ಥಿತಿ ತುಂಬಾ ಮುಖ್ಯ. ನಂಬಿಕೆಯಿಂದ ಈ ಉಪಾಯ ಮಾಡಿದರೆ ಖಂಡಿತ ಅದು ಸಕ್ಸಸ್ ಆಗುತ್ತದೆ. ಅದೇನೆಂದರೆ ನಿಮ್ಮ ಮನೆಯಲ್ಲಿ ಬೆಂಕಿ ಪಟ್ಟಣ ಇದ್ದೇ ಇರುತ್ತದೆ ಆ ಬೆಂಕಿ ಪಟ್ಟಣದ ಒಂದೇ ಒಂದು ಕಡ್ಡಿಯನ್ನು ಬಳಕೆ ಮಾಡುವ ಮೂಲಕ ಈ ಉಪಾಯ ಮಾಡಬಹುದು. ನಿಮಗೆ ಮನಸ್ಸಿನಲ್ಲಿ ಮದುವೆ ಉದ್ಯೋಗ ಮಕ್ಕಳು ಹಣಕಾಸು ಈ ರೀತಿ ಯಾವುದೇ ಸಮಸ್ಯೆ ಅಥವಾ ಕನಸು ಇದ್ದರೂ ಕೂಡ ಇದನ್ನು ಈ ಬೆಂಕಿ ಕಡ್ಡಿ ಮೇಲೆ ಬರೆಯಿರಿ.
ಪೂರ್ತಿ ಬರೆಯಲು ಸಾಧ್ಯವಿಲ್ಲ ಎನ್ನುವುದು ಖಂಡಿತ ಹೌದು, ಹಾಗಾಗಿ ಮುಖ್ಯವಾದ ಪದವನ್ನು ಮಾತ್ರ ಬರೆಯಿರಿ. ಮದುವೆ ಸಂಬಂಧಿತ ಸಮಸ್ಯೆ ಆಗಿದ್ದರೆ ಮದುವೆ ಎಂದು ಬರೆಯಿರಿ. ವಿದ್ಯಾಭ್ಯಾಸದ ಸಮಸ್ಯೆ ಆಗಿದ್ದರೆ ಎಜುಕೇಶನ್ ಎಂದು ಬರೆಯಿರಿ. ಈ ರೀತಿ ಬರೆಯುವಾಗ ಯಾವುದೇ ಕಾರಣಕ್ಕೂ ಕಪ್ಪು ಇಂಕನ್ನು ಬಳಸಬಾರದು ಕಪ್ಪು ಬಣ್ಣ ಬಿಟ್ಟು ಬೇರೆ ಯಾವುದೇ ಪೆನ್ನಿನಿಂದ ಈ ರೀತಿ ಬರೆಯಿರಿ. ಇದಕ್ಕೆ ಇದೇ ವಾರ ಮಾಡಬೇಕು ಎನ್ನುವ ನಿಯಮ ಇಲ್ಲ. ಯಾವ ವಾರ ಬೇಕಾದರೂ ಇದನ್ನು ಬರೆಯಬಹುದು ಬರೆದ ಮೇಲೆ ಇದನ್ನು ಸುಡಬೇಕು.
ಸುಡುವುದಕ್ಕೂ ಮುನ್ನ ಈ ನಿಯಮಗಳನ್ನು ಪಾಲಿಸಿ ನಂತರ ಸುಡಬೇಕು. ನೀವು ನಿಮ್ಮ ಕೋರಿಕೆಯನ್ನು ಬರೆದ ಮೇಲೆ ಆ ಕಡ್ಡಿಯನ್ನು ಬಲಗೈನ ಮಧ್ಯದ ಬೆರಳಿನ ಮೇಲೆ ಇಡಿ. ನೀವು ಬರೆದಿರುವ ಅಕ್ಷರ ಕವರ್ ಆಗುವಂತೆ ಹೆಬ್ಬೆರಳಿನಿಂದ ಅದನ್ನು ಹಿಡಿದಿಟ್ಟುಕೊಳ್ಳಿ. ನಂತರ ಅದನ್ನು ನಿಮ್ಮ ಎದೆಯ ಮೇಲೆ ಇಟ್ಟುಕೊಂಡು ಎಡಗೈನು ಕೂಡ ಮುಚ್ಚಿಕೊಳ್ಳಿ ಮನಸ್ಸಿನಲ್ಲಿ ಪಾಸಿಟಿವ್ ಆಗಿ ಥಿಂಕ್ ಮಾಡಿ, ಯುನಿವರ್ಸ್ ಗೆ ಪಾಸಿಟಿವ್ ವೈಬ್ರೇಶನ್ ರವಾನೆ ಮಾಡಿ.
ನೀವು ಯಾವ ಉದ್ದೇಶಕ್ಕಾಗಿ ಬರೆದಿದ್ದೀರ ಅದು ಕೈಗೂಡಿದೆ ಎಂದು ಹೇಳಿ. ಮಕ್ಕಳ ವಿದ್ಯಾಭ್ಯಾಸ ತೊಂದರೆ ಕುರಿತು ನಿಮ್ಮ ಕೋರಿಕೆ ಬರೆದಿದ್ದರೆ ಈಗ ನನ್ನ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಎಂದುಕೊಳ್ಳಿ ಅಥವಾ ಮನೆ ಕಟ್ಟುವ ವಿಚಾರಕ್ಕೆ ಬರೆದಿದ್ದರೆ ಸೈಟ್ ನೋಡಿದೆ, ಅದು ಸೆಟಲ್ಮೆಂಟ್ ಕೂಡ ಆಯ್ತು, ಮನೆ ಪೂರ್ತಿ ಆಯಿತು, ಗೃಹಪ್ರವೇಶವನ್ನು ಮಾಡಿಬಿಡುತ್ತೇನೆ ಈ ರೀತಿ ಪಾಸಿಟಿವ್ ಆಗಿ ಹೇಳಿಕೊಳ್ಳಿ. ಹೇಳಿಕೊಂಡ ನಂತರ ಆ ಬೆಂಕಿಕಡ್ಡಿಯನ್ನು ನೀವು ಸುಡಬೇಕು, ಆ ಕಡ್ಡಿಯ ಮೇಲೆ ನೀವು ಬರೆದಿರುವ ಕೋರಿಕೆ ಪೂರ್ತಿ ಸುಡುವಂತೆ ಬರೆಯಬೇಕು.
ಆದರೆ ನಿಮ್ಮ ಕೈಸುಟ್ಟು ಕೊಳ್ಳಬಾರದು ನೀವು ಬರೆದಿರುವ ಅಕ್ಷರಗಳಲ್ಲ ಪೂರ್ತಿ ಹಾಕಿ ಸುಟ್ಟು ಇನ್ನೂ ಒಂದು ಚೂರು ಕಡ್ಡಿ ಉಳಿದಿರುವ ಆ ಕಡ್ಡಿಯನ್ನು ನೀವು ಮಣ್ಣಲ್ಲಿ ಹಾಕಿ ಮುಚ್ಚಬೇಕು. ಹೂವಿನ ಪಾಟ್ ಅಲ್ಲೇ ಆಗಲಿ ಅಥವಾ ಯಾವುದೇ ನೆಲದ ಮೇಲಿನ ಮಣ್ಣಿನಲ್ಲಿ ಆಗಲಿ ಅನುಕೂಲತೆ ಇಲ್ಲದಿದ್ದರೆ ಒಂದು ಇಂಚು ಮಣ್ಣು ತೆಗೆದು ಹಾಕಿ ಮುಚ್ಚಿದರು ಸಾಕೂ ಈ ರೀತಿ ಮಾಡಿ ನೋಡಿ ನಿಮ್ಮ ಕೋರಿಕೆ ಖಂಡಿತ ನೆರವೇರುತ್ತದೆ.