Friday, June 9, 2023
HomeEntertainmentಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?

ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?

ನೆಪೋಟಿಸಂ, ಪವರ್, ಬ್ಯಾಕ್ ಗ್ರೌಂಡ್ ಈ ರೀತಿಯಾಗಿ ಸಿನಿಮಾಗೆ ಬಂದು ಜಾಗ ಗಿಟ್ಟಿಸಿಕೊಳ್ಳುವ ಕಾಲ ಮುಗಿದು ಹೋಯಿತು. ಹೀಗೇನಿದ್ದರೂ ಯಾರು ಯಾರನ್ನು ಹೀರೋ ಆಗಿ ಮಾಡುವುದಿಲ್ಲ ಸ್ವ ಪ್ರಯತ್ನದಿಂದ ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ಸಾಕಾರ ಮಾಡಿಕೊಳ್ಳಬೇಕು. ಈ ರೀತಿ ಹಠಕ್ಕೆ ಬಿದ್ದು ಸಾಧನೆ ಮಾಡುವವರಲ್ಲಿ ಸಿನಿಮಾ ಇಂಡಸ್ಟ್ರಿಯವರ ಹೆಸರನ್ನು ಮೊದಲಿಗೆ ಹೇಳಬಹುದು. ಯಾಕೆಂದರೆ ಸ್ಟಾರ್ ಎಂದ ತಕ್ಷಣ ಜನರು ಕ್ರಿಕೆಟ್ಗಿಂತ ಸಿನಿಮಾವನ್ನೇ ಮೊದಲು ನೆನೆಯುವುದು.

ಈಗ ವಿಷಯವು ಸಹ ಸಿನಿಮಾ ಇಂಡಸ್ಟ್ರಿಯ ಕುರಿತೆ ಆಗಿದೆ. ಸದ್ಯಕ್ಕಿಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವಂತ ಪ್ರತಿಭೆಯಿಂದ ಮೇಲು ಬರುತ್ತಿರುವ ಹೀರೋಗಳ ಸಂಖ್ಯೆ ಹೆಚ್ಚಾಗಿದೆ, ನಿರ್ದೇಶಕರಾಗಿ ಕೂಡ ಹೊಸ ಪ್ರತಿಭೆಗಳು ಹೆಸರು ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ಕರಾವಳಿ ಭಾಗದ ಶೆಟ್ಟರ ಬಳಗವು ಈ ವರ್ಷ ಬಾರಿ ಸಾಧನೆ ಮಾಡಿದ್ದು ಕಿರುತೆರೆಯಲ್ಲೂ ಸಹ ಈಗ ಶೆಟ್ಟರುಗಳದ್ದೇ ಹವಾ ಆಗಿದೆ.

ಈ ವರ್ಷದ ಆರಂಭದಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ದೇಶನ ಮತ್ತು ಅಭಿನಯವನ್ನು ಸಹ ಮಾಡಿ ರಾಜ್ ಬಿ ಶೆಟ್ಟಿ ಅವರು ಭರವಸೆಯ ಆಕ್ಟರ್ ಮತ್ತು ಡೈರೆಕ್ಟರ್ ಆದರು. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಸಾಥ್ ನೀಡಿದ್ದರು, ಈ ಸಿನಿಮಾ ಅವರಿಗೂ ಸಹ ಅಷ್ಟೇ ಹೆಸರು ತಂದು ಕೊಟ್ಟಿತ್ತು. ನಂತರ ಬಂದಿದ್ದೆ ಚಾರ್ಲಿ 777 ಎನ್ನುವ ಸಿನಿಮಾ ನಾಯಿ ಮರಿಯ ಭಾವನೆಗಳ ಸುತ್ತ ಕಥೆ ಹೆಣೆದಿದ್ದ ಸಿನಿಮಾ. ಈ ಚಿತ್ರದಿಂದ ರಕ್ಷಿತ್ ಶೆಟ್ಟಿ ಅವರು ಇಡೀ ದೇಶವನ್ನೇ ಗೆದ್ದರು.

ಬಹಳ ದಿನದಿಂದ ಇಂತಹ ಒಂದು ಬ್ರೇಕ್ ಗೆ ಕಾಯುತ್ತಿದ್ದ ರಕ್ಷಿತ್ ಶೆಟ್ಟಿ ಅವರಿಗೆ 100 ಕೋಟಿ ಕ್ರೋರ್ ದಾಟಿ ಹಣ ಗಳಿಸಿ ಚಾರ್ಲಿ ಹೊಸ ಹುರುಪನ್ನು ನೀಡಿತು. ನಂತರ ವರ್ಷದ ಅಂತ್ಯದಲ್ಲಿ ಬಂತು ರಿಷಭ್ ಶೆಟ್ಟಿ ಅವರ ನಿರ್ದೇಶನದ ಮತ್ತು ಅವರೇ ನಾಯಕ ನಟನಾಗಿ ಕೂಡ ಅಭಿನಯಿಸಿದ ಕಾಂತರಾ ಸಿನಿಮಾ ಎಷ್ಟರಮಟ್ಟಿಗೆ ಹೆಸರು ಮಾಡಿತು ಎಂದು ಎಲ್ಲರಿಗೂ ತಿಳಿದೇ ಇದೆ.

ಕರಾವಳಿ ಭಾಗದ ಕಾಡಂಚಿನ ಜನರ ಆಚರಣೆ ನಂಬಿಕೆ ದೈವ ಧರ್ಮ ಇಂತಹ ವಿಷಯವನ್ನು ಇಟ್ಟುಕೊಂಡು ಮಾಡಿದ ಸಣ್ಣ ಬಜೆಟಿನ ಸಿನಿಮಾ ಒಂದು ಎಲ್ಲರ ನಿರೀಕ್ಷೆಯನ್ನು ಮೀರಿ ದೇಶ ಮಾತ್ರವಲ್ಲದೆ ದೇಶದ ಗಡಿಯನ್ನು ದಾಟಿ ನಾಲ್ಕು ನೂರು ಕೋಟಿ ಹಣ ಗಳಿಕೆ ಮಾಡಿ ಎಲ್ಲರಿಗೂ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿತು. ಹಾಗಾಗಿ ವರ್ಷ ಪೂರ್ತಿ ಶೆಟ್ಟರುಗಳ ಲಕ್ ಬಹಳ ಚೆನ್ನಾಗಿತ್ತು ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ.

ಈಗ ಕಿರುತೆರೆಲ್ಲೊಬ್ಬ ಶೆಟ್ಟರು ಅದೇ ರೀತಿ ಗೆಲುವಿನ ಭಾಗವಾಗಿದ್ದಾರೆ. ರಿಯಾಲಿಟಿ ಶೋಗಳ ಬಾಸ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ರೂಪೇಶ್ ಶೆಟ್ಟಿ ಅವರು ಗೆದ್ದು ಬೀಗಿದ್ದಾರೆ. ತುಳು ಭಾಷೆಯ ಸಿನಿಮಾಗಳಲ್ಲಿ ಹೆಸರು ಮಾಡಿದ ಇವರು ಕನ್ನಡದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು.

ದೊಡ್ಡ ಬಿಗ್ ಬಾಸ್ ಗೆ ಸೆಲೆಕ್ಟ್ ಆಗಿ ಫಿನಾಲೆ ತನಕ ಬಂದಿದ್ದ ಇವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಈ ಹಿಂದೆ ಕೂಡ ಶೈನ್ ಶೆಟ್ಟಿ ಅವರು ಬಿಗ್ ಬಾಸ್ 7ನೇ ಸೀಸನ್ ಗೆದ್ದಿದ್ದರು ಮತ್ತು 5ನೇ ಸೀಸನ್ ನಲ್ಲಿ ಚಂದನ್ ಶೆಟ್ಟಿ ಅವರ ಗೆದ್ದಿದ್ದರು. ಹಾಗಾಗಿ ಶೆಟ್ಟರ ಬಗ್ಗೆ ಈಗ ಮತ್ತೊಮ್ಮೆ ಅಭಿಮಾನ ಹೆಚ್ಚಾಗುತ್ತಿದ್ದು, ಜನ ಅವರುಗಳ ಬುದ್ಧಿವಂತಿಕೆಗೆ ಮತ್ತು ವ್ಯಕ್ತಿತ್ವಕ್ಕೆ ಫಿದಾ ಆಗುತ್ತಿದ್ದಾರೆ.