ಕಾಸಿಲ್ಲದೆ ಮನೆ ಕಟ್ಟೋದು ಹೇಗೆ.? ಮನೆ ಕಟ್ಟಬೇಕು ಅಂತ ಆಸೆ ಇರುವವರು ತಪ್ಪದೆ ಇದನ್ನು ನೋಡಿ.!

 

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಎರಡಕ್ಕೂ ಕೂಡ ಅಷ್ಟೇ ಮಹತ್ವ ಇತ್ತು. ಹೇಗೆ ಮನೆಯಲ್ಲಿರುವ ಒಬ್ಬ ಮಗಳಿಗೆ ಮದುವೆ ನಿಶ್ಚಯ ಆದಾಗ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತವೋ ಅದೇ ರೀತಿ ಮನೆ ನಿರ್ಮಾಣ ಆಗುತ್ತಿದೆ ಎಂದಾಗಲು ಕೂಡ ಅದು ನಿರ್ಧಾರವಾದ ದಿನದಿಂದಲೇ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತದೆ.

ಒಂದು ಪಕ್ಷ ಈಗಿನ ಕಾಲದಲ್ಲಿ ಸುಲಭವಾಗಿ ಮದುವೆ ಮಾಡಿ ಮುಗಿಸಬಹುದು, ಆದರೆ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಮನೆ ಎನ್ನುವುದು ಒಂದು ಕನಸು ಜೊತೆಗೆ ಅಲ್ಲಿ ನೂರಾರು ವರ್ಷಗಳ ಕಾಲ ನಾವು ಮಾತ್ರವಲ್ಲದೆ ನಮ್ಮ ಪರಿವಾರ ಹಾಗೂ ಮುಂದಿನ ಪೀಳಿಗೆ ಕೂಡ ನೆಲೆಸಬೇಕು ಹಾಗಾಗಿ ಯಾವುದೇ ದೋಷವಿಲ್ಲದ ವಾಸ್ತು ಪ್ರಕಾರವಾದ ಅಚ್ಚುಕಟ್ಟಾದ ಮನೆ ನಿರ್ಮಾಣವಾಗಬೇಕು ಎನ್ನುವುದು ಎಲ್ಲರ ಕನಸು.

ಇತ್ತೀಚಿನ ದಿನಗಳಲ್ಲಿ ವಾಸ್ತು ಬಗ್ಗೆ ಹೆಚ್ಚು ಗಮನ ಕೊಡದೆ ಇರುವುದರಿಂದ ಆ ದೋಷಗಳು ಉಂಟಾಗಿ ಮನೆ ನಿರ್ಮಾಣ ಮಾಡುವ ಕಾರ್ಯವೇ ಅರ್ಧಕ್ಕೆ ನಿಂತು ಹೋಗುತ್ತದೆ ಅಥವಾ ಮನೆ ಮಾಡಿ ಹೊಸ ಮನೆಗೆ ಹೋದ ಕೂಡಲೇ ಮನೆಯಲ್ಲಿ ಅನಾರೋಗ್ಯ, ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುವುದು ಅಥವಾ ಮನೆಯಲ್ಲಿರುವ ಸದಸ್ಯರಿಗೆ ದುಷ್ಚಟಗಳ ಅಭ್ಯಾಸ, ದುರ್ಜನರ ಸಹವಾಸವಾಗಿ ಹಣ ಲಾಸ್ ಆಗುವುದು ಈ ರೀತಿಯಾದ ಹೊಡೆತಗಳು ಬೀಳುತ್ತವೆ.

ಇದರ ಬದಲಿಗೆ ಸರಿಯಾಗಿ ವಾಸ್ತುವನ್ನು ಪಾಲಿಸಿ ಮನೆ ನಿರ್ಮಾಣ ಮಾಡಿದರೆ ಇದೆ ಫಲಿತಾಂಶ ವಿರುದ್ಧವಾಗಿ ಆಗಿ ಗುಣವಂತರ ಹಾಗೂ ಸಜ್ಜನರ ಸಹವಾಸ ಆಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಬಂಧ ನಿಶ್ಚಯ ಆಗುತ್ತದೆ. ವಿದ್ಯಾಭ್ಯಾಸದಲ್ಲೇ ಆಗಲಿ ವ್ಯಾಪಾರದಲ್ಲಿ ಆಗಲಿ ಅಭಿವೃದ್ಧಿ ಬರುತ್ತದೆ. ಮನೆ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಾಗಿ ಮನೆಯಲ್ಲಿ ನೆಮ್ಮದಿಯಾಗಿ ವಾಸಿಸುವಂತಾಗುತ್ತದೆ.

ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳಲ್ಲಿ ಎಲ್ಲವೂ ಕೂಡ ಒಳ್ಳೊಳ್ಳೆ ಗುಣಮಟ್ಟದ್ದು ಸಿಗುತ್ತದೆ, ನಿಮ್ಮಿಂದ ಸಾಲ ಪಡೆದುಕೊಂಡು ತಲೆಮರೆಸಿಕೊಂಡಿದ್ದವರು ಅವರೇ ಹುಡುಕಿಕೊಂಡು ಬಂದು ಹಣ ಕೊಡುತ್ತಾರೆ. ಇಂತಹ ಎಲ್ಲ ಸಕಾರಾತ್ಮಕ ಬದಲಾವಣೆ ಉಂಟಾಗುವುದು ನೀವು ಮನೆಯನ್ನು ಕಟ್ಟುವ ವಾಸ್ತುವಿನ ಮೇಲೆಹ ನಿಮ್ಮ ಮನೆಯ ನಿರ್ಮಾಣ ಕಾರ್ಯ ನಿಶ್ಚಿಂತೆಯಾಗಿ ಸಾಗಬೇಕು ಹಣದ ಕೊರತೆ ಬರಬಾರದು ಜೊತೆಗೆ ಮನೆ ಏಳಿಗೆ ಆಗಬೇಕು ಎಂದರೆ ಮನೆ ಈ ರೀತಿ ಶುರು ಮಾಡಿ.

ಮೊದಲಿಗೆ ನೀವು ಸೈಟ್ ನಿರ್ಧಾರ ಮಾಡಿದ ಮೇಲೆ ಮನೆ ಕಟ್ಟಬೇಕು ಎಂದುಕೊಂಡ ಮೇಲೆ ಅರ್ಧ ಕೆಜಿ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹರಡಿ ಬನ್ನಿ. ಬಳಿಕ ದಕ್ಷಿಣದಿಂದ ಮತ್ತು ಪಶ್ಚಿಮದಿಂದ ಕಾಂಪೌಂಡ್ ನಿರ್ಮಿಸಿ ಇದು L ಶೇಪ್ ಆಗುತ್ತದೆ. ಈ ರೀತಿ ಕಾಂಪೌಂಡ್ ನಿರ್ಮಿಸಿದರೆ ಅಲ್ಲಿ ಒಂದು ಎನರ್ಜಿ ಸ್ಟೋರ್ ಆಗುತ್ತದೆ ಆ ಎನರ್ಜಿ ಇಂದ ಮನೆಗೆ ಬೇಕಾದ ಎಲ್ಲ ಸಕಾರಾತ್ಮಕ ಶಕ್ತಿ ತುಂಬುತ್ತದೆ ಜೊತೆಗೆ ಮನೆಯ ಅಡಿಪಾಯವನ್ನು ಈಶಾನ್ಯ ದಿಕ್ಕಿನಿಂದ ನಿರ್ಮಿಸಿ ನೈರುತ್ಯ ದಿಕ್ಕಿನಿಂದ ಪಿಲ್ಲರ್ ಕಟ್ಟಿಕೊಂಡು ಬನ್ನಿ.

ಈ ರೀತಿಯಾಗಿ ಒಳ್ಳೆ ರೀತಿಯಲ್ಲಿ ನಿರ್ಮಾಣ ಕಾರ್ಯ ಶುರು ಮಾಡಿದರೆ, ಒಳ್ಳೆ ಮನೆ ನಿರ್ಮಾಣ ಮಾಡಲು ಬೇಕಾದ ಪರಿಸ್ಥಿತಿ ಅದೇ ಸೃಷ್ಟಿ ಆಗುತ್ತದೆ. ಈ ರೀತಿ ಶುರು ಮಾಡಿದಾಗ ನೀವು ಒಂದು ಮನೆಯ ನಿರ್ಮಾಣಕ್ಕೆ 10 ಲಕ್ಷ ಖರ್ಚು ಆಗುವುದಾದರೆ 2 ಲಕ್ಷ ಕೈಯಲ್ಲಿ ಇಟ್ಟುಕೊಂಡು ಶುರು ಮಾಡಿದರೆ ಸಾಕು, ಉಳಿದ ಹಣ ಅದೇ ಒದಗಿ ಬರುತ್ತದೆ.

Leave a Comment