ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಹೊಸ ಸೇವಾ ಸಿಂಧು ಪೋರ್ಟಲ್ ತೆರೆದಿದೆ. ಗೃಹಜ್ಯೋತಿ ಯೋಜನೆಯ ಅನುಕೂಲತೆ ಪಡೆಯಲು ಮನೆ ಮಾಲೀಕರು ಮತ್ತು ಸರ್ಕಾರ ಕೇಳಿರುವ ದಾಖಲೆಗಳನ್ನು ಮತ್ತು ವಿವರಗಳನ್ನು ಕೊಟ್ಟು ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಆಫ್ಲೈನಲ್ಲಿ ಅರ್ಜಿ ಸಲ್ಲಿಸುವವರು ಅವರ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ವಿದ್ಯುತ್ ಕಚೇರಿಗಳಿಗೆ ಹೋಗಿ ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಆದರೆ ಇತ್ತೀಚಿನ ದಿನದಲ್ಲಿ ಎಲ್ಲಾ ವ್ಯವಹಾರಗಳು ಕೂಡ ಆನ್ಲೈನ್ ಮೂಲಕ ನಡೆಯುತ್ತಿರುವುದರಿಂದ ಹೆಚ್ಚಿನ ಜನರು ತಮ್ಮ ಮೊಬೈಲ್ ಮೂಲಕ ಮತ್ತು ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳು ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಗಳ ಬಳಕೆದಾರರು ಕೂಡ ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಮುಗಿ ಬೀಳುತ್ತಿರುವುದರಿಂದ ಹಲವೆಡೆ ಸರ್ವರ್ ಪ್ರಾಬ್ಲಮ್ ಎನ್ನುವ ಮಾತು ಕೇಳಿ ಬರುತ್ತಿದೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ವಿದ್ಯುತ್ ಇಲಾಖೆ ಕೂಡ ಶ್ರಮಿಸುತ್ತಿದೆ. ಒಂದು ವೇಳೆ ಸರ್ವರ್ ಸಮಸ್ಯೆಯಿಂದ ಗ್ರಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ತಡವಾಗುತ್ತಿದೆ ಎಂದರೆ ಈ ಟೆಕ್ನಿಕ್ ಬಳಸಿ ಅರ್ಜಿ ಸಲ್ಲಿಸಿ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವಿದ್ಯುತ್ ಬಿಲ್
● ಆಧಾರ್ ಸಂಖ್ಯೆ
● ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಗೂಗಲ್ ಅಲ್ಲಿ ಗೃಹ ಜ್ಯೋತಿ ಯೋಜನೆ ನೋಂದಣಿಗೆ ಅನುಕೂಲವಾಗಲು ಕರ್ನಾಟಕ ಸರ್ಕಾರವು ರೂಪಿಸಿರುವ ಸೇವಾ ಸಿಂಧು ವೆಬ್‌ಸೈಟ್
https://sevasindhuservices.karnataka.gov.in ಬ್ರೌಸ್ ಮಾಡಿ.
● ಮೊದಲ ಬಾರಿಗೆ ಈ ಪೋರ್ಟಲ್ ಬಳಸುತ್ತಿದ್ದರೆ ಹೊಸ ಬಳಕೆದಾರರ ನೋಂದಣಿ ಪ್ರಾರಂಭಿಸಲು ಕ್ಯಾಪ್ಚಾ ಕೋಡ್ ಜೊತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ ಈ ಹಂತ ಪೂರೈಸಿ ಮುಂದಿನ ಹಂತಕ್ಕೆ ಹೋಗಿ.
● ಆಗ ನಿಮ್ಮನ್ನು ಡಿಜಿಲಾಕರ್‌ಗೆ ಮರುನಿರ್ದೇಶಿಸಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
● ಕೇಳಲಾಗುವ ಎಲ್ಲಾ ಅನುಮತಿಗಳಿಗೆ ಪ್ರವೇಶವನ್ನು ಅನುಮತಿಸಿ.
● ಮುಂದಿನ ಪುಟದಲ್ಲಿ, ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಮಾರ್ಗಸೂಚಿಗಳ ಆಧಾರದ ಮೇಲೆ ಹೊಸ ಪಾಸ್‌ವರ್ಡ್ ಅನ್ನು ರಚಿಸಿ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ಸಬ್ಮಿಟ್ ಆಪ್ಷನ್ ಕ್ಲಿಕ್ ಮಾಡಿ.
● ಈಗ, ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ OTP ಗಳನ್ನು ನಮೂದಿಸಿ. ಮೌಲ್ಯೀಕರಿಸು ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ಯಶಸ್ವಿಯಾಗಿ ಈ ಎಲ್ಲಾ ಹಂತಗಳನ್ನು ಪೂರೈಸಿದರೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹೊಸ ಬಳಕೆದಾರ ಖಾತೆಯನ್ನು ರಚನೆಯಾಗುತ್ತದೆ.
● ಈಗ ಮತ್ತೊಮ್ಮೆ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಿ ಟ್ಯಾಬ್ ಅಥವಾ ಮೊಬೈಲ್ ನಲ್ಲಿ ನಿಮ್ಮ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ.
● ನಿಮ್ಮ ಗೃಹ ಜ್ಯೋತಿ ಅಪ್ಲಿಕೇಶನ್‌ನ ವಿವರಗಳು ಮತ್ತು ಸ್ಥಿತಿಯನ್ನು ತೋರಿಸುತ್ತದೆ. ಸರ್ವರ್ ಸಮಸ್ಯೆಯಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಗೊಂದಲವಾದಾಗ ಈ ರೀತಿ ಮಾಡಿ.