Sunday, June 4, 2023
HomeEntertainmentಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ...

ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.

ಮದುವೆ ಗುಟ್ಟು ಬಿಟ್ಟುಕೊಟ್ಟ ಡಾಲಿ ಧನಂಜಯ್

ಧನಂಜಯ್(Dananjay) ಅವರ ಬಹು ನಿರೀಕ್ಷಿತ ಸಿನಿಮಾ ಜಮಾಲಿಗುಡ್ಡ(JamaliGudda) ಇದೇ ತಿಂಗಳು 30ನೇ ತಾರೀಕು ಕರ್ನಾಟಕದಾದ್ಯಂತ ರಿಲೀಸ್ ಆಗುತ್ತಿದೆ. ಹಾಗಾಗಿ ಕಳೆದ ಭಾನುವಾರ ಅಂದರೆ ಕ್ರಿಸ್ಮಸ್ ಹಬ್ಬದ ದಿನ 25ನೇ ತಾರೀಕು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜಮಾಲಿ ಗುಡ್ಡದ ಪ್ರಮೋಷನ್ ಕಾರ್ಯವನ್ನು ಏರ್ಪಡಿಸಲಾಗಿದ್ದು. ಈ ಒಂದು ಕಾರ್ಯಕ್ರಮಕ್ಕೆ ಜಮಾಲಿ ಗುಡ್ಡ ಸಿನಿಮಾದ ನಾಯಕ ನಟರಾದಂತಹ ಡಾಲಿ ಧನಂಜಯ್ ಹಾಗೂ ನಾಯಕ ನಟಿ ಆದಂತಹ ಅತಿಥಿ ಪ್ರಭುದೇವ ಹಾಗೂ ಚಿತ್ರತಂಡಕ್ಕೆ ಸೇರಿದಂತಹ ಸಾಕಷ್ಟು ಕಲಾವಿದರು ನಿರ್ಮಾಪಕರು ಮತ್ತು ನಿರ್ದೇಶಕರು ಎಲ್ಲರೂ ಕೂಡ ಭಾಗವಹಿಸುತ್ತಾರೆ.

ಸಿನಿಮಾದ ಕುರಿತು ಒಂದಷ್ಟು ಮಾತನ್ನು ಹೇಳುತ್ತಾರೆ ಅಷ್ಟೇ ಅಲ್ಲದೆ ಧನಂಜಯ್ ಅವರು ಇಲ್ಲಿ ಒಂದು ಸಿನಿಮಾದಲ್ಲಿ ಪ್ರಯೋಗಾತ್ಮಕ ಪಾತ್ರವನ್ನು ನಿರ್ವಹಿಸಿದ್ದರಂತೆ. 90 ರ ದಶಕದಲ್ಲಿ ನಡೆಯುವಂತಹ ಕಾಲಾನುಗಟ್ಟವನ್ನು ಈ ಸಿನಿಮಾದ ಮುಖ್ಯ ಭೂಮಿಕೆಯನ್ನಾಗಿ ಇಟ್ಟುಕೊಂಡು ಸಿನಿಮಾವನ್ನು ಚಿತ್ರೀಕರಣ ಮಾಡಿದ್ದಾರಂತೆ ನಟಿ ಅದಿತಿ ಪ್ರಭುದೇವ ಅವರು ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಧನಂಜಯ್ ಅವರ ಆರು ಸಿನಿಮಾಗಳು ಬಿಡುಗಡೆಯಾಗಿದ್ದವು ಇದೀಗ 7ನೇ ಸಿನಿಮಾ ಜಮಾಲಿಗುಡ್ಡ ಸಿನಿಮಾವಾಗಿದೆ. ಈ ವರ್ಷದ ಕೊನೆಯಲ್ಲಿ ಮೂಡಿಬರುವಂತಹ ಸಿನಿಮಾ ಹೇಗಿರಲಿದೆ ಎಂಬುದನ್ನು ನೋಡುವುದಕ್ಕೆ ಪ್ರೇಕ್ಷಕರೆಲ್ಲರೂ ಕಾತುರದಿಂದ ನಿಂತಿರುವುದು ಸತ್ಯ.

ಇನ್ನು ಸಿನಿಮಾದ ಜೊತೆ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಕೂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಲಿ ಧನಂಜಯ್ ಅವರ ಆತ್ಮೀಯ ಸ್ನೇಹಿತರಾದಂತಹ ವಸಿಷ್ಟ ಸಿಂಹ ಅವರು ಕಳೆದ ತಿಂಗಳಷ್ಟೇ ತಮ್ಮ ಬಹುಕಾಲದ ಗೆಳತಿ ನಟಿ ಹರಿಪ್ರಿಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇವರ ಮದುವೆ ನೆರವೇರಲಿದೆ ಸ್ನೇಹಿತನ ನಿಶ್ಚಿತಾರ್ಥ ಆಗುತ್ತಿದ್ದ ಹಾಗೆ ಎಲ್ಲೆಡೆ ಇದೀಗ ಡಾಲಿ ಅವರ ಮದುವೆ ಮಾತುಕತೆಯ ವಿಚಾರದ ಬಗ್ಗೆಯೇ ಪ್ರಸ್ತಾವನೆ ಮಾಡುತ್ತಿದ್ದಾರೆ.

ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾರನ್ನು ಮದುವೆಯಾಗುತ್ತಿದ್ದಾರೆ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಜನರಿಗೆ ಇರುತ್ತದೆ. ಹಾಗಾಗಿಯೇ ಆ್ಯಂಕರ್ ಅನುಶ್ರೀ(Anushree) ಅವರು ಕೂಡ ಈ ಕಾರ್ಯಕ್ರಮವನ್ನು ಮುನ್ನಡೆಸಿ ಕೊಡಬೇಕಾದರೆ ಧನಂಜಯ್ ಅವರನ್ನು ನಿಮ್ಮ ಮದುವೆ ಯಾವಾಗ ನಿಮ್ಮ ಗೆಳೆಯ ಚಿಟ್ಟೆ ಅಂದರೆ ವಸಿಷ್ಟ ಸಿಂಹ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಅನುಶ್ರೀ ಕೇಳಿದಂತಹ ಪ್ರಶ್ನೆಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತಾನೆ ಮೊದಮೊದಲು ಧನಂಜಯ್ ಅವರಿಗೆ ತಿಳಿಯುವುದಿಲ್ಲ.

ತದನಂತರ ಸ್ವಲ್ಪ ಯೋಚನೆ ಮಾಡಿ ಅನುಶ್ರೀ ಅವರು ಯಾವಾಗ ಮದುವೆ ಮಾಡಿಕೊಳ್ಳುತ್ತಾರೋ ಅದರ ನಂತರ ನಾನು ನನ್ನ ಮದುವೆ ದಿನಾಂಕವನ್ನು ಘೋಷಣೆ ಮಾಡುತ್ತೇನೆ ಎಂದು ತಕ್ಷಣ ಹೇಳಿ ಬಿಡುತ್ತಾರೆ. ಈ ಮಾತನ್ನು ಕೇಳಿದಂತಹ ಫ್ಯಾನ್ಸ್ ಮತ್ತು ಅನುಶ್ರೀ ಸಿಕ್ಕಾಪಟ್ಟೆ ನಗುತ್ತಾರೆ ತದನಂತರ ಅನುಶ್ರೀ ಹಾಗಾದರೆ ನೀವು ಇನ್ನೊಂದಷ್ಟು ವರ್ಷ ಬ್ಯಾಚುಲರ್ ಆಗಿಯೇ ಇರಬೇಕಾಗುತ್ತದೆ ಎಂದು ಹೇಳುತ್ತಾರೆ. ನಟಿ ಅನುಶ್ರೀ ಅವರು ಕೂಡ ಇನ್ನು ಮದುವೆಯಾಗದೆ ಇರುವ ವಿಚಾರ ನಿಮಗೆ ತಿಳಿದೇ ಇದೆ.

ಇವರ ಮದುವೆ ಮಾತುಕತೆಯ ಬಗ್ಗೆ ಆಗಾಗ ಚರ್ಚೆಯಾಗುತ್ತದೆ ಆದರೆ ಇವರು ತಮ್ಮ ದಂಪತ್ಯ ಜೀವನದ ಬಗ್ಗೆ ಯೋಚಿಸಿಲ್ಲ ಸದ್ಯಕ್ಕೆ ಹೊಸ ಮನೆಯನ್ನು ಕಟ್ಟುವಂತಹ ಆಸೆ ಕನಸನ್ನು ಹೊಂದಿದ್ದಾರೆ ಹಾಗಾಗಿ ಆ ಕಡೆ ಗಮನ ನೀಡುತ್ತಿದ್ದಾರೆ. ಈ ಒಂದು ಕಾರ್ಯ ಸಂಪೂರ್ಣವಾದ ನಂತರ ವೈಯಕ್ತಿಕ ಜೀವನದ ಬಗ್ಗೆ ಚಿಂತೆ ಮಾಡುವುದಾಗಿ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು. ಹಾಗಾಗಿಯೇ ಧನಂಜಯ್ ಅವರಿಗೆ ನೀವು ಇನ್ನೊಂದಷ್ಟು ವರ್ಷ ಕಾಯಬೇಕಾಗುತ್ತದೆ ಎಂದು ಅನುಶ್ರೀ ಹೇಳಿದ್ದಾರೆ.