ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ. ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ.
ಹಾಗಾಗಿ ಯಾವುದೇ ಅಪಾಯಗಳಿಲ್ಲದೆ ಅಂಚೆ ಕಛೇರಿ ಯೋಜನೆಗಳಲ್ಲಿ ಉಳಿತಾಯ ಮಾಡಬಹುದು. ಈಗಾಗಲೇ ಅಂಚೆ ಕಚೇರಿಯ ಅನೇಕ ಯೋಜನೆಗಳು ದೇಶದಾದ್ಯಂತ ಎಲ್ಲಾ ನಾಗರಿಕರ ಗಮನ ಸೆಳೆದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಮಾಸಿಕ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಅನೇಕ ಹೆಸರಾಂತ ಸ್ಕೀಮ್ ಗಳು ಇವೆ.
ಈ ರೀತಿ ಅಂಚೆಕಛೇರಿಯಲ್ಲಿರುವ ಮತ್ತೊಂದು ಹೆಸರಾಂತ ಯೋಜನೆ ಎಂದರೆ NSC ಸ್ಕೀಮ್. ಇದನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಅಥವಾ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯಲ್ಲಿ ಉಳಿತಾಯ ಮಾಡುವುದರಿಂದ ಅತಿ ಹೆಚ್ಚಿನ ಬಡ್ಡಿ ದರವನ್ನು ಪಡೆಯುವುದು ಮಾತ್ರವಲ್ಲದೆ ನಿಮ್ಮ ಹಣವು ದೇಶದ ಅನುಕೂಲಕ್ಕೆ ಸಹ ವಿನಿಯೋಗವಾದ ಸಮಾಧಾನ ಸಿಗುತ್ತದೆ.
ಗ್ರಾಹಕರ ಹಣವು ದೇಶದ ಅವಶ್ಯಕತೆಗೆ ಬಳಕೆ ಆದರೂ ಗ್ರಾಹಕರಿಗೆ ಹೂಡಿಕೆಗೆ ತಕ್ಕ ಆದಾಯ ಬಡ್ಡಿದರದಲ್ಲಿ ವಾಪಸ್ಸು ಸಿಗುತ್ತದೆ. ಈ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮಿನ ರೂಪರೇಷೆಗಳು ಏನೆಂದು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
● ಯಾವುದೇ ಭಾರತೀಯ ಪ್ರಜೆಯೂ ಈ ಯೋಜನೆಯನ್ನು ಖರೀದಿಸಬಹುದು
● ಸಿಂಗಲ್ ಆಗಿ ಮತ್ತು ಜಂಟಿಯಾಗಿ ಕೂಡ ಖರೀದಿಸುವ ಅವಕಾಶವನ್ನು ಕೊಡಲಾಗಿದೆ.
● ಸದ್ಯಕ್ಕೀಗ ಅಂಚೆಕಛೇರಿ ನ್ಯಾಷನಲ್ ಸೇವಿಂಗ್ ಸ್ಕೀಮ್ ಬಡ್ಡಿದರವು 6.8% ಇದೆ. ಕಾಲಕಾಲಕ್ಕೆ ಇದು ಪರೀಷ್ಕೃವಾಗುತ್ತಿರುತ್ತದೆ. ಒಂದು ವೇಳೆ ನೀವು ಯೋಚನೆ ಖರೀದಿಸಿದ ನಂತರ ಬಡ್ಡಿದರ ಇಳಿಕೆ ಆದರೂ ಕೂಡ ನಿಮ್ಮ ಹಣಕ್ಕೆ ನೀವು ಯೋಚನೆ ಆರಂಭಿಸಿದಾಗ ಯಾವ ಬಡ್ಡಿದರ ನಿಗದಿ ಆಗಿತ್ತು ಅದೇ ಮೊತ್ತದಲ್ಲಿ ಲಾಭ ಸಿಗಲಿದೆ.
● ಇದನ್ನು ಒಂದೇ ಬಾರಿಗೆ ನಿಶ್ಚಿತ ಠೇವಣಿ ಇಡುವ ಮೂಲಕ ಕೂಡ ಖರೀದಿಸಬಹುದು, ಇಂತಹ ಅನುಕೂಲತೆಯನ್ನು ಕೂಡ ಮಾಡಿಕೊಡಲಾಗಿದೆ. ಈ ರೀತಿ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಬಡ್ಡಿ ದರ 7.8% ಅನ್ವಯ ಆಗಲಿದೆ.
● ಉದಾಹರಣೆಯೊಂದಿಗೆ ಹೇಳುವುದಾದರೆ ನೀವು 15 ಲಕ್ಷ ರೂಪಾಯಿಗಳನ್ನು ಒಂದೇ ಬಾರಿಗೆ ಈ ಯೋಜನೆ ಅಡಿ ಹೂಡಿಕೆ ಇಟ್ಟರೆ ಐದು ವರ್ಷದ ಮೆಚುರಿಟಿ ಸಮಯ ಮುಗಿದ ಬಳಿಕ 20.85 ಲಕ್ಷ ರಿಟರ್ನ್ಸ್ ಸಿಗಲಿದೆ. ಐದೇ ವರ್ಷಕ್ಕೆ 5.85 ಲಕ್ಷ ನಿಮಗೆ ಲಾಭ ಸಿಗಲಿದೆ.
● ನೀವು ಐದು ವರ್ಷಗಳವರೆಗೂ ಹೂಡಿಕೆ ಮಾಡುತ್ತಾ ಹೋದರೆ ಕನಿಷ್ಠ 100 ರೂಪಾಯಿಯಿಂದ ಕೂಡ ಇದನ್ನು ಆರಂಭಿಸಬಹುದು.
● ನಾಮಿನಿ ಫೆಸಿಲಿಟಿಗಳು ಕೂಡ ಲಭ್ಯವಿದ್ದು, ಯೋಚನೆ ಖರೀದಿಸಿದವರು ಮರಣ ಹೊಂದಿದ ಪಕ್ಷದಲ್ಲಿ ಅವರ ನಾಮಿನಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಹಣ ಸೇರುತ್ತದ. ಈ ಯೋಜನೆಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿದಲ್ಲಿರುವ ಅಂಚೆ ಕಛೇರಿಗೆ ಹೋಗಿ ವಿಚಾರಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.