Sunday, May 28, 2023
HomeDevotionalಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!

ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಸಾಲ ಎನ್ನುವುದು ಒಂದು ಋಣ ಇದ್ದಂತೆ. ಅದರಿಂದ ಮುಕ್ತರಾಗಬೇಕು ಎಂದು ಜನ ತಮ್ಮಿಂದ ಆದಷ್ಟು ಬೇಗ ಸಾಲ ತೀರಿಸಲು ಪ್ರಯತ್ನ ಪಡುತ್ತಾರೆ. ಎಷ್ಟೇ ದುಡಿದರೂ, ಕೈಯಲ್ಲಿ ಹಣಕಾಸು ಓಡಾಡುತ್ತಿದ್ದರು ಕೆಲ ಸಮಯದಲ್ಲಿ ಸಾಲ ತೀರಿಸಲು ಆಗುವುದಿಲ್ಲ.

ಈ ರೀತಿ ಆಗುತ್ತಿದೆ ಎಂದರೆ ಮನೆಯಲ್ಲಿರುವ ವಾಸು ದೋಷ ಕೂಡ ಇದಕ್ಕೆ ಕಾರಣ ಆಗಿರುತ್ತದೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುಶಾಸ್ತ್ರವನ್ನು ಪಾಲಿಸುತ್ತೇವೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯ ಎಲ್ಲವೂ ಇರಬೇಕು ಎಂದರೆ ವಾಸ್ತು ಸರಿಯಾಗಿರಬೇಕು ಎನ್ನುವ ಬಲವಾದ ನಂಬಿಕೆ ಇದೆ. ಹಾಗಾಗಿ ನೀವು ನಿಮ್ಮ ಕೈ ಮೀರಿ ಪ್ರಯತ್ನ ಮಾಡಿಯೂ ಸಮಸ್ಯೆಯಿಂದ ಹೊರ ಬರುತ್ತಿಲ್ಲ ಎಂದರೆ ಅದಕ್ಕೆ ವಾಸ್ತುವೇ ಕಾರಣ ಆಗಿರುತ್ತದೆ.

ಹಾಗಾಗಿ ನಿಮ್ಮ ಎಲ್ಲಾ ರೀತಿಯ ಸಮಸ್ಯೆಯಿಂದ ಹೊರ ಬರಬೇಕಾದರೆ ಮನೆಯಲ್ಲಿ ಈ ಸಣ್ಣಪುಟ್ಟ ವಾಸ್ತುವಿಗೆ ಸಂಬಂಧ ಪಟ್ಟ ಹಾಗೆ ಬದಲಾವಣೆ ಮಾಡಿ ಸಾಕು. ವಾಸ್ತು ಶಾಸ್ತ್ರದಲ್ಲಿ ಒಂದು ಮನೆ ಎಂದ ಮೇಲೆ ಅದರಲ್ಲಿರುವ ಅಡುಗೆಮನೆ ಹಾಗೂ ಶೌಚಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಅಡುಗೆ ಮನೆ ಮತ್ತು ಶೌಚಾಲಯವು ಯಾವ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಇರುತ್ತದೆ ಹಾಗೂ ಶುದ್ಧವಾಗಿರುತ್ತದೆ.

ಆ ಮನೆಯಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ. ಆ ಗೃಹಗಳಲ್ಲಿ ಕಲಹವಾಗಲಿ, ಮನಸ್ತಾಪವಾಗಲಿ, ಆರೋಗ್ಯ ಸಮಸ್ಯೆ ಆಗಲಿ ಹಣಕಾಸಿನ ತೊಂದರೆ ಆಗಲಿ ಇರುವುದಿಲ್ಲ ಎನ್ನುವುದನ್ನು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಈ ಅಂಕಣದಲ್ಲೂ ಕೂಡ ಅಡುಗೆಮನೆ ಮತ್ತು ಶೌಚಾಲಯಕ್ಕೆ ಸಂಬಂಧಪಟ್ಟ ಹಾಗೆ ಕೆಲ ಬದಲಾವಣೆಗಳ ಸಲಹೆಯನ್ನು ಕೊಡುತ್ತಿದ್ದೇವೆ ಇದನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.

ಅಡುಗೆ ಮನೆಯಲ್ಲಿ ಅಡುಗೆ ಆದಮೇಲೆ ಎಲ್ಲಾ ಪದಾರ್ಥಗಳನ್ನು ಹಾಗೆ ಬಿಡುವ ಬದಲು ಶುದ್ಧವಾಗಿ ಸರಿಯಾಗಿ ಜೋಡಿಸಿ ನಂತರ ಊಟ ಮಾಡಿದ ಹಾಗೂ ಅಡುಗೆಗೆ ಬಳಸಿದ ಎಲ್ಲಾ ಪಾತ್ರೆಗಳನ್ನು ತೊಳೆದು ನಂತರ ಮಲಗಬೇಕು. ಯಾಕೆಂದರೆ ರಾತ್ರಿ ನಾವು ಮಲಗಿದ ಮೇಲೆ ಮನೆಗೆ ಗೃಹಲಕ್ಷ್ಮಿ ಬಂದು ನೋಡುತ್ತಾರೆ. ಆಗ ಅಡುಗೆಮನೆ ಅಸ್ತವ್ಯಸ್ತವಾಗಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿ ಸಮಯ ಎಂಜಲು ಪಾತ್ರೆಗಳನ್ನು ಹಾಗೆಯೇ ಬಿಟ್ಟು ಮಲಗಲೇಬಾರದು. ಜೊತೆಗೆ ಊಟ ಮಾಡುವ ಸಮಯದಲ್ಲೂ ಕೂಡ ಯಾವುದೇ ಕಾರಣಕ್ಕೂ ನಾವು ಮಲಗುವ ಹಾಸಿಗೆಯ ಮೇಲೆ ಊಟ ಮಾಡಬಾರದು. ನೆಲದ ಮೇಲೆ ಒಂದು ಚಾಪೆ ಹಾಕಿಕೊಂಡು ನಾವು ತಿನ್ನುವ ಆಹಾರಕ್ಕೆ ಗೌರವ ಕೊಟ್ಟು ಊಟ ಮಾಡಬೇಕು ಇಲ್ಲವಾದಲ್ಲಿ ಅನ್ನಪೂರ್ಣೇಶ್ವರಿ ತಾಯಿಗೆ ಅವಮಾನ ಮಾಡಿದ ರೀತಿ ಆಗುತ್ತದೆ. ಈ ತಪ್ಪನ್ನು ಕೂಡ ಸರಿ ಮಾಡಿಕೊಳ್ಳಿ.

ಬಚ್ಚಲುಮನೆಗೆ ಸಂಬಂಧ ಪಟ್ಟ ಹಾಗೆ ಹೇಳುವುದಾದರೆ ಒಂದಕ್ಕಿಂತ ಹೆಚ್ಚು ಬಕೆಟ್ ಗಳನ್ನು ನಾವು ಬಾತ್ರೂಮಿನಲ್ಲಿ ಆಗಲಿ ಅಥವಾ ಶೌಚಾಲಯದಲ್ಲಿ ಆಗಲಿ ಬಾತ್ ರೂಮಿನಲ್ಲಿ ಆಗಲಿ ಯಾವುದೇ ಕಾರಣಕ್ಕೂ ಇಡಬಾರದು. ಜೊತೆಗೆ ಅಲ್ಲಿಡುವ ಬಕೆಟ್ ಹಾಗೂ ಮಗ್ ಅಲ್ಲಿ ಸದಾ ನೀರು ತುಂಬಿರಬೇಕು. ಯಾವುದೇ ಕಾರಣಕ್ಕೂ ಇವುಗಳನ್ನು ಖಾಲಿ ಇಡಬಾರದು.

ಇವುಗಳು ಖಾಲಿ ಇದ್ದರೆ ಹಣಕಾಸಿನ ಬಿಕ್ಕಟ್ಟು ಉಂಟಾಗುತ್ತದೆ. ಶೌಚಾಲಯದಲ್ಲಿ ಹಾಗೂ ಬಾತ್ರೂಮಿನಲ್ಲಿ ಬಳಸುವ ಬಕೆಟ್ಗಳು ಮತ್ತು ಮಗ್ ಗಳು ಹಾಗೂ ಉಳಿದ ಯಾವುದೇ ಪದಾರ್ಥವಾದರೂ ಕಪ್ಪು ಬಣ್ಣದಲ್ಲಿ ಇರಬಾರದು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಈ ವಿಚಾರ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.