ಮದುವೆ ಆದ ಹೆಣ್ಣು ಈ ವಿಷಯಗಳನ್ನು ತಿಳಿದುಕೊಂಡಿಲ್ಲ ಎಂದರೆ ಡಿವೋರ್ಸ್ ಆಗುವುದು ಗ್ಯಾರಂಟಿ…!

ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಅದುವರೆಗೂ ಕೂಡ ಪುರುಷ ಹಾಗೂ ಮಹಿಳೆ ಆಗಿದ್ದ ಇಬ್ಬರು ಬೇರೆ ಬೇರೆ ವ್ಯಕ್ತಿತ್ವದವರು ದಂಪತಿಗಳಾಗಿ ಒಂದೇ ಉಸಿರು ಎರಡು ಜೀವ ಎನ್ನುವಂತೆ ಜೀವನಪೂರ್ತಿ ಜೊತೆಗೆ ಬಾಳವ ಭರವಸೆಯೊಂದಿಗೆ ಒಂದಾಗುವ ಅನುಬಂಧ. ಪ್ರತಿ ಮದುವೆಗಳು ಕೂಡ ಇಂತಹದೇ ಒಂದು ಆಸೆ, ಆಕಾಂಕ್ಷೆ ಹಾಗೂ ನಂಬಿಕೆಯಿಂದ ಶುರುವಾಗುತ್ತದೆ.

ಎಲ್ಲರೂ ಕೂಡ ಇದೇ ರೀತಿ ಜೀವನ ಪೂರ್ತಿ ಬದುಕುತ್ತಾರೆ ಎಂದುಕೊಳ್ಳುವುದು ಸುಳ್ಳು. ಕೆಲವೊಮ್ಮೆ ಪತಿ ಹಾಗೂ ಪತ್ನಿ ನಡುವಿನ ಹೊಂದಾಣಿಕೆ ಸಮಸ್ಯೆ ಗಿಂತ ಮನೆಯಲ್ಲಿರುವ ಇತರ ಸದಸ್ಯರ ಕಾರಣದಿಂದಾಗಿ ಜೋಡಿಗಳು ಬೇರೆ ಆಗಿರುವ ಉದಾಹರಣೆಗಳು ಇವೆ. ಅದರಲ್ಲೂ ಕೂಡ ಈಗಿನ ಕಾಲದಲ್ಲಿ ವಿವಾಹ ನೋಂದಣಿ ಆಗುವಷ್ಟೇ ಕೋರ್ಟಿನಲ್ಲಿ ಡಿವೋರ್ಸ್ ಕೇಸುಗಳು ದಾಖಲಾಗುತ್ತಿರುವುದು ಬಾರಿ ಆತಂಕದ ವಿಷಯವಾಗಿದೆ.

ನಮ್ಮ ದೇಶದ ಸಂಸ್ಕೃತಿಯಲ್ಲಿ ಒಬ್ಬರಿಗೆ ಒಂದೇ ಭಾರಿ ಮದುವೆ ಹಾಗೂ ಅದೇ ಸಂಸ್ಕಾರ. ಹಾಗಾಗಿ ಬಹಳ ತಿಳುವಳಿಕೆಯಿಂದ ಇದನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲಿ ಹೆಚ್ಚಿನ ಹೊರೆ ಮನೆಯಲ್ಲಿ ಇರುವ ಗೃಹಣಿಯ ಮೇಲೆ ಬೀಳುತ್ತದೆ. ಹಾಗಾಗಿ ಮದುವೆ ಆಗಿ ಗೃಹಸ್ಥಾಶ್ರಮಕ್ಕೆ ಕಾಲಿಡುವ ಹೆಣ್ಣು ಮದುವೆ ಸಂಭ್ರಮದ ಜೊತೆಗೆ ಸಾಕಷ್ಟು ಜವಾಬ್ದಾರಿ ಹೊರೆಗಳನ್ನು ಕೂಡ ಹೊತ್ತುಕೊಂಡು ಹೊಸ ಮನೆಗೆ ಕಾಲಿಡುತ್ತಾಳೆ.

ತಂದೆ ತಾಯಿ ಮನೆಯಲ್ಲಿ ಮುದ್ದಿನ ಮಗಳಾಗಿ, ಸೋದರಿಯಾಗಿ ಯುವರಾಣಿಯಂತೆ ಇದ್ದವಳು ಹೋದ ಮನೆಯಲ್ಲಿ ಹೊಸ ತವರಮನೆ ಕಟ್ಟುವ ಯಜಮಾನಿ ಆಗಬೇಕು. ಹಾಗಾಗಿ ತಾಳ್ಮೆ ಹಾಗೂ ತಿಳುವಳಿಕೆ ಮತ್ತು ಬುದ್ಧಿವಂತಿಕೆ ಎಲ್ಲವೂ ಬೇಕಾಗುತ್ತದೆ. ಮದುವೆ ಆಗುವ ಪ್ರತಿ ಹೆಣ್ಣು ಕೂಡ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು. ಆಗ ಮಾತ್ರ ಅವರ ಬದುಕು ನಂದನವನ ಆಗುತ್ತದೆ.

ನಿಮ್ಮ ವಿವಾಹ ಜೀವನವನ್ನು ಇತರರ ವಿವಾಹ ಜೀವನದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ಇಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದ ಬದುಕಿದೆ. ಎಲ್ಲರೂ ಒಂದೇ ರೀತಿ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಜೊತೆಗೆ ಮದುವೆಯಾದ ಕೂಡಲೇ ಬೇರೆ ಮನೆಗೆ ಹೋಗುವ ಯೋಚನೆಯನ್ನು ಮಾಡಬೇಡಿ, ಇದು ನಿಮ್ಮ ಪತಿಯ ಮನಸ್ಸನ್ನು ಒಡೆಯಬಹುದು. ಕೆಲವೊಮ್ಮೆ ಗಂಡನ ತಂದೆ ತಾಯಿಗಳು ವ್ಯಂಗ್ಯವಾಗಿ ಅಥವಾ ಟೀಕೆ ಮಾಡಿ ಮಾತನಾಡುವುದು ಇರುತ್ತದೆ.

ಸಾಧ್ಯವಾಗುವವರೆಗೂ ಮಟ್ಟಿಗೆ ಅದನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡಿ, ಬಹಳ ತೀಕ್ಷ್ಣವಾಗಿ ಅದಕ್ಕೆ ಉತ್ತರಿಸಬೇಡಿ. ನಿಮಗೆ ಯಾವುದೇ ರೀತಿಯ ಸಮಸ್ಯೆ ಆ ಹೊಸ ಮನೆಯಲ್ಲಿ ಆಗುತ್ತಿದ್ದರೆ ನಿಮ್ಮ ಗಂಡನಿಗೆ ಅದು ಅರ್ಥ ಆಗುವ ರೀತಿ ಪ್ರೀತಿಯಿಂದ ಹೇಳಿ ಮತ್ತು ಸಮಸ್ಯೆ ಪರಿಹಾರ ಮಾಡಿಕೊಳ್ಳುವುದರ ಕಡೆ ಮಾತ್ರ ಗಮನ ಕೊಡಿ.

ಗಂಡ ದಿನಪೂರ್ತಿ ದುಡಿದು ಮನೆಗೆ ಬಂದು ತಕ್ಷಣವೇ ಅವರ ಕುಟುಂಬದವರ ಮೇಲೆ ಕಂಪ್ಲೇಟ್ ಗಳನ್ನು ಹೇಳಲು ಶುರು ಮಾಡಬೇಡಿ. ಗಂಡನ ಮನೆಯಲ್ಲಿರುವ ಸಮಸ್ಯೆಗಳ ಬಗ್ಗೆ ಬೇರೆ ಯಾರೊಂದಿಗೂ ಹಂಚಿಕೊಳ್ಳಬೇಡಿ ಪರಿಹಾರ ಕೊಡುವಂತಹ ಆಪ್ತರಲ್ಲಿ ಮಾತ್ರ ಸಲಹೆ ಕೇಳಿ. ವರ್ಷಗಳೇ ಕಳೆದರೂ ಗಂಡನ ಮನೆಯವರ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಾಗ ನಗುನಗುತ್ತಲೆ ಮನೆಯಿಂದ ಹೊರ ಬರುವ ಪ್ರಯತ್ನ ಮಾಡಿ.

ಯಾವುದೇ ನೋವು ಹಾಗೂ ಸಮಸ್ಯೆಗಳ ಬಗ್ಗೆ ಗಂಡನ ಜೊತೆ ತಾಳ್ಮೆಯಿಂದ ಚರ್ಚೆ ಮಾಡಿ. ಜೊತೆಗೆ ಮದುವೆ ಆದ ಪುರುಷನಿಗೆ ತಂದೆ ತಾಯಿ ಸ್ನೇಹಿತೆ ಎಲ್ಲವೂ ಕೂಡ ಮಡದಿ ಮಾತ್ರ ಆಗಿರುವುದರಿಂದ ಅವರ ಭಾವನೆಗಳಿಗೂ ಬೆಲೆ ಕೊಡಿ, ಅವರ ಮಾತುಗಳಿಗೂ ಸಮಯ ಕೊಡಿ. ಯಾವ ವಿಷಯದ ಬಗ್ಗೆಯೂ ವಿಪರೀತವಾಗಿ ವಾಗ್ವಾದ ಮಾಡಬೇಡಿ.

Leave a Comment