ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.

 

ಕಲಿಯುಗದಲ್ಲಿ ಯಂತ್ರ ಶಕ್ತಿಗಳಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ. ಸದ್ಯಕ್ಕೆ ಕಲಿಯುಗದಲ್ಲಿ ಮಂತ್ರ ಗಳಿಗಿಂತ ತಂತ್ರಗಳೇ ಹೆಚ್ಚು ಕೆಲಸ ಮಾಡುತ್ತದೆ ಎಂದರೂ ತಪ್ಪಾಗಲಾರದು. ಆದ್ದರಿಂದ ಎಲ್ಲರೂ ಕೂಡ ಯಾವುದೇ ಸಮಸ್ಯೆ ಬಂದರೂ ತಂತ್ರಗಳ ಮೊರೆ ಹೋಗುತ್ತಾರೆ. ತಂತ್ರಗಳಿಂದ ಚಿಕ್ಕ ಚಿಕ್ಕ ಪ್ರಯೋಗಗಳನ್ನು ಮಾಡಿ ನಮ್ಮನ್ನು ಕಾಡುವ ನೆಗೆಟಿವ್ ಎನರ್ಜಿಗಳನ್ನು ದೂರ ಮಾಡಬಹುದು. ಇದರಿಂದ ಸಕರಾತ್ಮಕತೆ ತುಂಬಿ ಎಲ್ಲವೂ ಶುಭವಾಗಲು ಶುರು ಆಗುತ್ತದೆ.

ತಂತ್ರಕ್ಕೆ ಇರುವ ಶಕ್ತಿ ಅಂತಹದ್ದು. ಯಾವುದೇ ಕಾರಣಕ್ಕೂ ಇದರ ಶಕ್ತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಂಪೂರ್ಣ ನಂಬಿಕೆ ಇಟ್ಟು ಈ ಪ್ರಯೋಗಗಳನ್ನು ಮಾಡಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ. ಇಂತಹ ಒಂದು ತಂತ್ರಶಕ್ತಿ ಉಪಯೋಗವನ್ನು ಇಂದು ನಾವು ಈ ಅಂಕಣದಲ್ಲಿ ಹೇಳಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಕುಟುಂಬಗಳಲ್ಲಿ ಯಾವಾಗಲೂ ಜಗಳ ನಡೆಯುತ್ತಿದ್ದರೆ, ಯಾರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕುಟುಂಬದ ಯಾವ ಸದಸ್ಯರು ಏಳಿಗೆ ಆಗಲು ಸಾಧ್ಯವಾಗುತ್ತಿಲ್ಲವಾದರೆ ಸದಾ ಕಲಹ ಭಿನ್ನಾಭಿಪ್ರಾಯ ಮನಸ್ತಾಪ ಬೇಜಾರು ಮತ್ತು ದುಃಖ ಹಾಗೂ ಹಣದ ಕೊರತೆ ಆರೋಗ್ಯಭಾದೆ ಮುಂತಾದ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಾ ಇದ್ದರೆ ಇದಕ್ಕೆಲ್ಲ ಕಾರಣ ಮನೆಯಲ್ಲಿರುವ ನೆಗೆಟಿವ್ ಎನರ್ಜಿ. ಜೊತೆಗೆ ಶನಿ ಪ್ರಭಾವ ಕಡಿಮೆ ಇರುವುದು, ರಾಹುವಿನ ಪ್ರಭಾವ ಕಡಿಮೆ ಆಗಿರುವುದು ಕೂಡ ಇದಕ್ಕೆ ಕಾರಣ ಆಗುತ್ತದೆ.

ನಮ್ಮ ಜಾತಕದಲ್ಲಿ ರಾಹು ಮತ್ತು ಶನಿಗಳ ಬಲ ಹೆಚ್ಚಾಗಿದ್ದಾಗ ಯಾವುದೇ ಸಮಸ್ಯೆ ಬಂದರೂ ನಮಗೆ ನಿವಾರಿಸಿಕೊಡಲು ಶಕ್ತಿ ಬರುತ್ತದೆ. ಜೊತೆಗೆ ಕೆಲವೊಮ್ಮೆ ನಮಗೆ ಆಗದೇ ಇರುವವರು ನಮ್ಮ ಮೇಲೆ ಮಾಟ ಮಂತ್ರಗಳನ್ನು ಮಾಡಿಸುವುದರಿಂದ ಕೂಡ ಇಂತಹದೊಂದು ಸಮಸ್ಯೆಗೆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಈಡಾಗುತ್ತಾರೆ.

ಈ ಎಲ್ಲ ಸಮಸ್ಯೆಗಳಿಂದ ಹೊರಬರಲು ಈ ಒಂದು ಚಿಕ್ಕ ಪ್ರಯೋಗವನ್ನು ಮಾಡಿ ಸಾಕು. ಅದೇನೆಂದರೆ ಪ್ರತಿ ಶನಿವಾರದಂದು ನೀವು ಈ ಕೆಲಸ ಮಾಡಬೇಕು ಶನಿವಾರದಂದು ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಾ ಸ್ವಚ್ಛಗೊಳಿಸಿ ಮುಂಜಾನೆ ಎಲ್ಲರಿಗಿಂತ ಮುಂಚೆ ನೀವು ಸ್ನಾನ ಮಾಡಿ ದೇವರಲ್ಲಿ ನಂಬಿಕೆಯಿಂದ ಪ್ರಾರ್ಥನೆ ಮಾಡಿ ಕಷ್ಟವನ್ನು ಕಳೆಯುವಂತೆ ಕೇಳಿಕೊಂಡು ಒಂದು ಗಾಜಿನ ಲೋಟ ತೆಗೆದುಕೊಳ್ಳಿ.

ಅದಕ್ಕೆ ನಿಮ್ಮ ಎರಡು ಕೈಗಳಿಂದ ಹಿಡಿಯುವಷ್ಟು ಎರಡು ಬಾರಿ ಉಪ್ಪನ್ನು ತುಂಬಿ, ಅದರ ಕೆಳಗೆ ಒಂದು ಪ್ಲೇಟ್ ಇಟ್ಟು ಅದನ್ನು ನೀವು ಸ್ನಾನ ಮಾಡುವ ಕೋಣೆಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಇಡಿ. ನಂತರ ನಿಮ್ಮ ಮನೆಯ ವಾತಾವರಣದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸಿ. ಉಪ್ಪಿಗೆ ನೆಗೆಟಿವ್ ಎನರ್ಜಿಗಳನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಅದು ಮನೆಯಲ್ಲಿರುವ ಎಲ್ಲ ನೆಗೆಟಿವ್ ಅನ್ನು ಸೆಳೆದು ಇಟ್ಟುಕೊಂಡಿರುತ್ತದೆ.

ನೀವು ಪ್ರತಿ ಶನಿವಾರದಂದು ಈ ಉಪ್ಪನ್ನು ಬದಲಾಯಿಸುತ್ತಿರಬೇಕು. ಈ ಉಪ್ಪನ್ನು ಹೊರಗೆ ಚೆಲ್ಲಿ ಅಥವಾ ಕಸಕ್ಕೆ ಹಾಕಿ ಮುಂದಿನ ಶನಿವಾರ ಆ ಗಾಜಿನ ಲೋಟವನ್ನು ಚೆನ್ನಾಗಿ ಶುದ್ಧಗೊಳಿಸಿ, ಎಂದಿನಂತೆ ಬೆಳಗ್ಗೆ ಬೇಗ ಎದ್ದು ಪೂಜೆ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮತ್ತೆ ಉಪ್ಪುಹಾಕಿ, ಪ್ಲೇಟ್ ಇಟ್ಟು ಸ್ನಾನ ಮಾಡುವ ಕೋಣೆಯಲ್ಲಿ ಇಡಬೇಕು.ನಿಮ್ಮ ಕಷ್ಟಗಳು ಕಳೆಯುವ ತನಕ ನೀವು ಈ ಪ್ರಯೋಗವನ್ನು ಮಾಡಿಕೊಂಡು ಬಂದರೆ ಶೀಘ್ರವಾಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ.

Leave a Comment