ರಾವಣನಿಗೆ 10 ತಲೆ ಯಾಕೆ ಬಂತು, ನಂತರ ಆ ತಲೆಯನ್ನು ರಾವಣ ಕತ್ತರಿಸಿಕೊಂಡಿದ್ದು ಏಕೆ ಗೊತ್ತಾ.?

ರಾವಣ ತನ್ನ 10 ತಲೆಗಳನ್ನು ಯಾವ ರೀತಿ ಪಡೆದುಕೊಂಡ, ಯಾಕೆ ಪಡೆದುಕೊಂಡ, ಶಿವನಿಗೂ ಹೆದರದೆ ಕೈಲಾಸ ಪರ್ವತವನ್ನು ಅಲ್ಲಾಡಿ ಸಿದ್ದು ಏಕೆ? ಅಷ್ಟಕ್ಕೂ ಅಸಲಿಯಾಗಿ ರಾವಣನಿಗೆ ರಾವಣ ಎಂಬ ಹೆಸರು ಏಕೆ ಬಂತು ಗೊತ್ತಾ? ಹೀಗೆ ಈ ರೀತಿ ರಾವಣನ ಬಗ್ಗೆ ಇರು ವಂತಹ ರಹಸ್ಯ ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳೋಣ.

ವಾಲ್ಮೀಕಿ ರಾಮಾಯಣದಲ್ಲಿ ನಮಗೆ ಗೊತ್ತಿರುವುದೇ ನೆಂದರೆ ರಾವಣ ಸೀತಾ ಮಾತೆಯನ್ನು ಯಾವ ರೀತಿ ಅಪಹರಣ ಮಾಡಿದ ಕೊನೆಗೆ ರಾವಣ ಶ್ರೀ ರಾಮನಿಂದ ಯಾವ ರೀತಿ ಸಂಹರಿಸಲ್ಪಟ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ಕಥೆಯೇ. ಆದರೆ ರಾವಣ ಬ್ರಹ್ಮನನ್ನು ಮತ್ತು ಶಿವನನ್ನು ಇವರಿಬ್ಬರನ್ನು ಕೂಡ ಒಲಿಸಿಕೊಳ್ಳಲು ತಪಸ್ಸನ್ನು ಮಾಡಿದ್ದು ಏಕೆ?

ಎನ್ನುವುದೇ ಇಲ್ಲಿ ತುಂಬಾ ಮುಖ್ಯವಾಗುತ್ತದೆ. ಒಂದೊಮ್ಮೆ ಶ್ರೀರಾಮ ದೇವ ಅಗಸ್ತ್ಯ ಮಹರ್ಷಿಗಳನ್ನು ರಾವಣ ಮತ್ತು ಅವನ ಸೋದರರು ಕಾಡಿನಲ್ಲಿ ಯಾವ ರೀತಿ ವಾಸ ಮಾಡಿದರು ಹಾಗೂ ಯಾವ ರೀತಿ ಕಠಿಣ ತಪಸ್ಸುಗಳನ್ನು ಮಾಡಿದರು ಎಂದು ಕೇಳಿದ್ದಕ್ಕೆ ಅಗಸ್ತ್ಯ ಮಹರ್ಷಿಗಳು ಅದರ ಬಗ್ಗೆ ವಿವರಿಸುವುದಕ್ಕೆ ಶುರು ಮಾಡಿಕೊಂಡರು. ಮೊದಲಿಗೆ ಕುಂಭ ಕರ್ಣನು ಧರ್ಮವಧನಾಗಿ ಪಂಚಾಗ್ನಿ ಮಧ್ಯದಲ್ಲಿ ಕುಳಿತು ತಪಸ್ಸನ್ನು ಮಾಡುತ್ತಾನೆ.

ಇಲ್ಲಿ ಪಂಚಾಗ್ನಿ ಎಂದರೆ ತಾನು ಕುಳಿತಿದ್ದ ನಾಲ್ಕು ದಿಕ್ಕುಗಳಿಗೂ ಅಗ್ನಿಕುಂಡವನ್ನು ಹೊತ್ತಿಸಿ ಸೂರ್ಯನನ್ನು ಐದನೇ ಅಗ್ನಿಯನ್ನಾಗಿ ಭಾವಿಸುವುದು, ಈ ರೀತಿಯಾಗಿ ತುಂಬಾ ಕಠಿಣವಾದ ತಪಸ್ಸನ್ನು ಮಾಡುತ್ತಾನೆ. ನಂತರ ಧರ್ಮಾತ್ಮನಾದಂತಹ ವಿಭೀಷಣ ಐದು ಸಾವಿರ ವರ್ಷಗಳವರೆಗೂ ಒಂಟಿ ಕಾಲಿನಲ್ಲಿ ನಿಂತು ತಪಸ್ಸನ್ನು ಮಾಡುತ್ತಾನೆ. ಅವನು ತಪಸ್ಸನ್ನು ಪೂರ್ಣಗೊಳಿಸಿದ ನಂತರ

ಎಷ್ಟು ಅಪ್ಸರೆಯರು ವಿಭೀಷಣನ ಗೆಲುವನ್ನು ಕಂಡು ನಾಟ್ಯಗಳನ್ನು ಮಾಡಿದರು ದೇವಾನುದೇವತೆಗಳು ಹೂವಿನ ಮಳೆಯನ್ನೇ ಸುರಿಸಿದ್ದರು. ಆದರೆ ಅಲ್ಲಿಗೆ ಮುಗಿಯಲಿಲ್ಲ ಇನ್ನೂ 5000 ವರ್ಷಗಳವರೆಗೂ ನಮಸ್ಕರಿಸುವಂತಹ ಮುದ್ರೆಯಲ್ಲಿಯೇ ನಿಂತು ಸೂರ್ಯನ ಕಡೆಗೆ ನೋಡುತ್ತಾ ತಪಸ್ಸನ್ನು ಮಾಡುತ್ತಾನೆ. ಒಟ್ಟಾರೆಯಾಗಿ ವಿಭೀಷಣನು ಸಹ ಹತ್ತು ಸಾವಿರ ವರ್ಷಗಳವರೆಗೂ ತನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ತಪಸ್ಸನ್ನು ಮಾಡುತ್ತಾನೆ.

ಕೊನೆಯದಾಗಿ ಮುಖ್ಯವಾದ ವನು ದಸಗ್ರೇವ ಅಂದರೆ ರಾವಣ ಈ ರಾವಣ 10,000 ವರ್ಷಗಳವ ರೆಗೂ ಕೂಡ ಏನನ್ನು ತಿನ್ನಲಿಲ್ಲ ಇವನು ತಪಸ್ಸನ್ನು ಮಾಡುತ್ತಿದ್ದಂತಹ ಸಮಯದಲ್ಲಿ ಬ್ರಹ್ಮದೇವನು ನನ್ನ ತಪಸ್ಸನ್ನು ಮೆಚ್ಚಿ ನನ್ನ ಮುಂದೆ ಪ್ರತ್ಯಕ್ಷವಾಗುತ್ತಿಲ್ಲವಲ್ಲ ಎಂಬ ಅಸಮಾನದಿಂದ ತನ್ನ ತಲೆಯನ್ನು ಕತ್ತರಿಸಿ ಅಗ್ನಿಗೆ ಆಹುತಿಯನ್ನು ಮಾಡುತ್ತಿದ್ದ.

ಈ ರೀತಿ ರಾವಣ ಅಸಮಾಧಾನದಿಂದ ತನ್ನ ತಲೆಯನ್ನು ಕತ್ತರಿಸಿ ಬೆಂಕಿಗೆ ಆಹುತಿ ಮಾಡಿದಾಗಲೆಲ್ಲ ರಾವಣನಿಗೆ ಹೊಸದೊಂದು ತಲೆ ಸೃಷ್ಟಿಯಾಗುತ್ತಿತ್ತು. ಹೀಗೆ ರಾವಣ ತಪಸ್ಸು ಮಾಡುತ್ತಿದ್ದಾಗ 9 ಬಾರಿ ತನ್ನ ತಲೆಯನ್ನು ಕತ್ತರಿಸಿಕೊಂಡ ಅಗ್ನಿಗೆ ಆಹುತಿಯನ್ನು ಮಾಡಿದ್ದ. ಇಷ್ಟೆಲ್ಲ ಕಠಿಣವಾದ ತಪಸ್ಸನ್ನು ಮಾಡಿದರು ಕೂಡ ಬ್ರಹ್ಮದೇವ ನನ್ನ ತಪಸ್ಸನ್ನು ಮೆಚ್ಚಲಿಲ್ಲವಲ್ಲ ಅನ್ನೋ ಅಸಮಾಧಾನದಿಂದ ಕೊನೆಯದಾಗಿ ಹತ್ತನೇ ಬಾರಿ ತನ್ನ ತಲೆಯನ್ನು ಕತ್ತರಿಸಿ ಬೆಂಕಿಗೆ ಆಹುತಿಯನ್ನು ಮಾಡುವುದಕ್ಕೆ ಸಿದ್ಧನಾಗುತ್ತಾನೆ.

ಆಗ ಬ್ರಹ್ಮದೇವ ರಾವಣನ ಮುಂದೆ ಪ್ರತ್ಯಕ್ಷನಾಗು ತ್ತಾನೆ. ಕುಂಭಕರ್ಣ, ವಿಭೀಷಣ, ರಾವಣ ಹೀಗೆ ಈ ಮೂರರ ಶ್ರದ್ಧೆ ಭಕ್ತಿ ತಪಸ್ಸನ್ನು ಕಂಡು ಬ್ರಹ್ಮದೇವ ಸಂತಸ ಪಡುತ್ತಾನೆ. ಮೊದಲಿಗೆ ಬ್ರಹ್ಮದೇವ ರಾವಣನ ಮುಂದೆ ಪ್ರತ್ಯಕ್ಷನಾಗಿ ರಾವಣನ ತಪಸ್ಸಿಗೆ ಮೆಚ್ಚಿ ಸಂತಸವನ್ನು ವ್ಯಕ್ತಪಡಿಸುತ್ತಾ ನೀನು ಯಾವ ವರವನ್ನು ಕೇಳಬೇಕು ಎಂದುಕೊಂಡಿದ್ದೀಯೋ ಅದನ್ನು ತಕ್ಷಣವೇ ಕೇಳಿಕೋ ಎಂದು ಬ್ರಹ್ಮದೇವ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment