Sunday, May 28, 2023
HomeDevotionalಶಾಲೆಗೆ ಅಡ್ಮಿಷನ್ ಮಾಡಲು ಆಗದೆ ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದೆ. ಆಗ ರಾಯರು ಮಾಡಿದ ಪವಾಡ...

ಶಾಲೆಗೆ ಅಡ್ಮಿಷನ್ ಮಾಡಲು ಆಗದೆ ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದೆ. ಆಗ ರಾಯರು ಮಾಡಿದ ಪವಾಡ ಇದು.! ಇಂದು ಎಲ್ಲಾ ಕಷ್ಟ ನಿವಾರಣೆಯಾಗಿದೆ.

ಆ.ತ್ಮಹ‌.ತ್ಯೆ ನಿರ್ಧಾರ ಮಾಡಿದವರ ಬದುಕಿನಲ್ಲಿ ರಾಯರು ಮಾಡಿದ ಪವಾಡ ಎಂತಹದ್ದು ಗೊತ್ತಾ? ಮುಡುಪು ಅನುಷ್ಟಾನಕ್ಕೆ ಇಷ್ಟೊಂದು ಶಕ್ತಿ ಇದೆಯಾ?. ಕಲಿಯುಗದ ದೇವರು ಭಕ್ತರಪಾಲಿನ ಕಾಮಧೇನು ಕಲ್ಪವೃಕ್ಷ ಆಗಿರುವ ಗುರುರಾಯರ ಕರುಣೆ ಕೃಪಾಕಟಾಕ್ಷ ಭಕ್ತರ ಮೇಲೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ರಾಯರಿದ್ದಾರೆ ಎನ್ನುವ ಒಂದೇ ಒಂದು ಪದವೇ ಸಾಕು ಶಕ್ತಿಯಂತೆ ನೊಂದವರ ಪಾಲಿಗೆ ಆಸರೆಯಾಗಿ ಕಾಪಾಡುತ್ತದೆ. ಜೀವನದಲ್ಲಿ ಯಾರು ಕೈ ಬಿಟ್ಟರೂ ಕೂಡ ರಾಯರು ಎಂದಿಗೂ ತಮ್ಮ ಭಕ್ತರನ್ನು ಕೈಬಿಡುವುದಿಲ್ಲ.

ಮನಸಾರೆ ರಾಯರನ್ನು ಪ್ರಾರ್ಥಿಸಿ, ನಂಬಿಕೆ ಇಟ್ಟು ಅವರ ಪ್ರಕಾರವಾಗಿ ನಡೆದುಕೊಂಡರೆ ಆ ಭಕ್ತರ ಬದುಕಿನಲ್ಲಿ ಎಂತಹದೇ ಸಂಕಷ್ಟ ಬಂದಿದ್ದರು ಕೂಡ ರಾಯರು ಅದನ್ನೆಲ್ಲ ಪರಿಹರಿಸಿ ಬೆನ್ನು ಹಿಂದೆ ನಿಂತು ಕಾಪಾಡುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿ ಒಮ್ಮೆ ರಾಯರ ಕೃಪಾಕಟಾಕ್ಷಕ್ಕೆ ಪಾತ್ರರಾದರೆ ಜೀವನ ಪೂರ್ತಿ ರಾಯರ ಅನುಗ್ರಹ ಅಂತವರ ಮೇಲೆ ಇರುತ್ತದೆ.

ಇದನ್ನು ಉದಾಹರಣೆಯೊಂದಿಗೆ ಹೇಳುವುದಾದರೆ ಜೀವನದಲ್ಲಿ ಸಾಕಷ್ಟು ನೊಂದು ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಒಂದು ಕುಟುಂಬ ಕೂಡ ರಾಯರನ್ನು ನೆನೆದು ನಂಬಿಕೆ ಇಟ್ಟು ಮುಡುಪು ಅನುಷ್ಠಾನ ಶುರು ಮಾಡಿದ ನಾಲ್ಕೇ ದಿನಗಳಲ್ಲಿ ಪವಾಡ ನಡೆದು ತಮ್ಮ ನಿರ್ಧಾರವನ್ನು ಬದಲಾಯಿಸಿದ ಉದಾಹರಣೆಗಳು ಇವೆ. ಗಂಡ ಹೆಂಡತಿ ಇಬ್ಬರೂ ಮಕ್ಕಳಿದ್ದ ಸಂಸಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು.

ಇದ್ದಕ್ಕಿದ್ದ ಹಾಗೆ ಗಂಡನ ಕೆಲಸವು ಹೊರಟು ಹೋಯಿತು, ಮಕ್ಕಳ್ಳಿಬ್ಬರ ಶಾಲಾ ಖರ್ಚು ಹಾಗೂ ಮನೆಯ ನಿರ್ವಹಣೆ ಖರ್ಚು ಅಧಿಕವಾಗ ತೊಡಗಿತು. ಮಕ್ಕಳನ್ನು ಕಾನ್ವೆಂಟ್ ಸೇರಿಸಿದ ಕಾರಣ ನಂತರ ದಿನಗಳಲ್ಲಿ ಮಕ್ಕಳ ಶಾಲಾ ಫೀಸ್ ಹೊರೆ ಎನಿಸಿತು. ಗೌರ್ಮೆಂಟ್ ಶಾಲೆಗೆ ಹಾಕಲು ಟಿಸಿ ಕೇಳಿದರೆ ಫೀಸ್ ಕಟ್ಟದೆ ಕೊಡುವುದಿಲ್ಲ ಎನ್ನುವ ಆಡಳಿತ ಮಂಡಳಿಯ ವರ್ತನೆ ಬೇರೆ ಏನು ದಾರಿಯೇ ಇಲ್ಲವಾ ಎನ್ನುವ ಹಂತಕ್ಕೆ ತಲುಪಿಸಿತ್ತು.

ಆಗ ಆ ಮನೆಯ ಗೃಹಿಣಿಯು ಮಕ್ಕಳೊಡನೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಹತ್ತಿರದವರ ಬಳಿ ತನ್ನ ಕಷ್ಟವನ್ನೆಲ್ಲ ಹೇಳಿಕೊಂಡಾಗ ಇದನ್ನೆಲ್ಲಾ ಕೇಳಿದವರು ರಾಯರ ಭಕ್ತರಾಗಿದ್ದ ಕಾರಣ ಮುಡುಪು ಅನುಷ್ಠಾನದ ಬಗ್ಗೆ ತಿಳಿಸುತ್ತಾರೆ. ಆಗ ಅವರು ಎಲ್ಲವನ್ನು ಮಾಡಿದ್ದೇವೆ ನೋಡೋಣ ಎಂದು ಭಕ್ತಿಯಿಂದ ಎಲ್ಲಾ ಭಾರವನ್ನು ರಾಯರ ಮೇಲೆ ಹಾಕಿ ಮುಡುಪು ಅನುಷ್ಠಾನವನ್ನು ಶುರು ಮಾಡುತ್ತಾರೆ.

ಶುರುವಾದ ನಾಲ್ಕೇ ದಿನದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅವರ ಸಮಸ್ಯೆಗಳು ಪರಿಹಾರ ಆಗುವ ಸೂಚನೆಗಳು ಕಂಡುಬರುತ್ತವೆ. 9 ದಿನಗಳವರೆಗೆ ಈ ಅನುಷ್ಠಾನವನ್ನು ಪಾಲಿಸುವುದರ ಬಗ್ಗೆ ನಿರ್ಧಾರ ಮಾಡಿಕೊಂಡಿದ್ದ ಅವರು 9 ದಿನಗಳನ್ನು ಪೂರೈಸಿದ ನಂತರ ಅವರ ಬದುಕಿನ ಭವಣೆಯೇ ಬದಲಾಗಿ ಹೋಗುತ್ತದೆ.

ನಂತರದ ದಿನಗಳಲ್ಲಿ ಅವರು ಗುರುರಾಯರ ಭಕ್ತರಾಗಿ ಇಂದಿಗೂ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಜೀವನದಲ್ಲಿ ಒಮ್ಮೆ ಮಾತ್ರ ಮನುಷ್ಯ ಜನ್ಮ ಸಿಗುತ್ತದೆ, ಇದನ್ನು ಸಾರ್ಥಕವಾಗಿ ಬದುಕಬೇಕು ಸಮಸ್ಯೆಗಳು ಬಂದ ತಕ್ಷಣ ಹೇಡಿಗಳ ರೀತಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವ ನಿರ್ಧಾರವನ್ನು ಮಾಡಿದ್ದಾರೆ. ತಮ್ಮಂತೆ ಕಷ್ಟದಲ್ಲಿರುವ ಇತರರಿಗೂ ಕೂಡ ರಾಯರ ಮಹಿಮೆ ಬಗ್ಗೆ ಮುಡುಪು ಅನುಷ್ಠಾನದ ಶಕ್ತಿಯ ಬಗ್ಗೆ ತಿಳಿಸಿ ರಾಯರ ಸೇವೆ ಮಾಡುತ್ತಿದ್ದಾರೆ. ನೀವು ಕೂಡ ಬದುಕಿನಲ್ಲಿ ಸಾಕಷ್ಟು ನೊಂದು ಹೋಗಿದ್ದರೆ, ನಿಮ್ಮಿಂದ ಬಗೆಹರಿಸಲಾಗದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಭಕ್ತಿಯಿಂದ ರಾಯರನ್ನು ಪ್ರಾರ್ಥಿಸಿ ನಡೆದುಕೊಳ್ಳಿ. ಚಮತ್ಕಾರ ನಡೆಯುವುದರಲ್ಲಿ ಅನುಮಾನವೇ ಇಲ್ಲ.