ನಮಗೆ ಒಂದಲ್ಲ ಒಂದು ಕಾರಣಕ್ಕಾಗಿ ನಮ್ಮ ವಾಸಸ್ಥಳ ದೃಢೀಕರಣ ಪತ್ರ ಬೇಕಾಗಿರುತ್ತದೆ. ಆಗ ನಾವು ನಾಡಕಚೇರಿಗೆ ಹೋಗಬೇಕಾಗುತ್ತದೆ ಅಥವಾ ಇದನ್ನು ಪಡೆದುಕೊಳ್ಳುವುದಕ್ಕಾಗಿ ಇನ್ಯಾವುದೇ ವ್ಯಕ್ತಿಗಳ ಸಹಾಯಕ್ಕಾಗಿ ಕಾಯಬೇಕಿರುತ್ತದೆ. ಆದರೆ ಈಗ ನಾವು ಹೇಳುವ ಈ ವಿಧಾನದಿಂದ ನೀವು ಯಾರ ಸಹಾಯವಿಲ್ಲದೆ ನಿಮ್ಮ ಮೊಬೈಲ್ ಮೂಲಕವೇ ಐದು ನಿಮಿಷಗಳೇ ವಾಸ ಸ್ಥಳ ಧೃಢೀಕರಣ ಪತ್ರದ ಫೈನಲ್ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು.
ಇತ್ತೀಚಿಗೆ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ನಲ್ಲಿ ಜರುಗುತ್ತಿರುವುದರಿಂದ ನಾಡ ಕಛೇರಿಗೆ ಸಂಬಂಧಪಟ್ಟ ಭೂಮಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಅದಕ್ಕಾಗಿ ಹಂತ ಹಂತವಾಗಿ ಈ ಕ್ರಮಗಳನ್ನು ಅನುಸರಿಸಿ.
● ಮೊದಲಿಗೆ ನಿಮ್ಮ ಯಾವುದೇ ಬ್ರೌಸರ್ ಮೂಲಕ ಭೂಮಿ ಆನ್ಲೈನ್ ಗೆ ಭೇಟಿ ಕೊಡಿ, ಯೂಸರ್ ಐಡಿ ಹಾಗೂ ಪಾಸ್ವರ್ಡ್ ಹಾಕುವ ಮೂಲಕ ಲಾಗ್ ಇನ್ ಆಗಿ ಮುಂದಿನ ಹಂತಕ್ಕೆ ಹೋಗಿ.
● ಹೊಸ ಪೇಜ್ ಅಲ್ಲಿ ನಾಡಕಛೇರಿ ಸರ್ವಿಸಸ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ನಾಡ ಕಚೇರಿಯಿಂದ ಪಡೆಯುವ ಹಲವಾರು ದಾಖಲೆಗಳ ಅಪ್ಲಿಕೇಶನ್ ಫಾರಂ ಇರುತ್ತದೆ ಅದರಲ್ಲಿ ವಾಸಸ್ಥಳ ದೃಢೀಕರಣಕ್ಕಾಗಿ ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸುವ ಬಗ್ಗೆ ಕೇಳುತ್ತದೆ ಆಗ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಇದರಿಂದ ಶೀಘ್ರವಾಗಿ ನೀವು ವಾಸಸ್ಥಳ ಪತ್ರ ಪಡೆದುಕೊಳ್ಳಬಹುದು.
● ಮುಂದಿನ ಪೇಜ್ ಅಲ್ಲಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ನಿಮ್ಮ ವಾರ್ಡ್ ಅದು ಹರ್ಬಲ್ ಅಥವಾ ರೂರಲ್ ಎನ್ನುವ ಆಪ್ಷನ್ಗಳು ಇರುತ್ತವೆ, ಅದರಲ್ಲಿ ಸರಿಯಾದ ವಿವರ ಫಿಲ್ ಮಾಡಿ, ಅರ್ಜಿದಾರರ ಹೆಸರು ಇರುವಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರು ಇರುತ್ತದೆ. ಅದರಲ್ಲಿ ಯಾರ ಹೆಸರಿನಲ್ಲಿ ವಾಸಸ್ಥಳ ದೃಢೀಕರಣ ಪತ್ರ ಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ ಮತ್ತು ತಂದೆ ಅಥವಾ ಗಂಡನ ಹೆಸರನ್ನು ಕೂಡ ಹಾಕಿ.
● ಈ ಸರ್ಟಿಫಿಕೇಟ್ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬೇಕಾ ಎನ್ನುವುದಕ್ಕೂ ಆಯ್ಕೆ ಇರುತ್ತದೆ ಅದರಲ್ಲಿ ನಿಮ್ಮ ಇಷ್ಟದ ಲಾಂಗ್ವೇಜ್ ಆಯ್ಕೆ ಮಾಡಿ ಸರ್ಚ್ ಕೊಡಿ.
● ಅಷ್ಟಾದ ಮೇಲೆ ನೀವು ಯಾರ ಹೆಸರನ್ನು ಸೆಲೆಕ್ಟ್ ಮಾಡಿದ್ದೀರೋ ಅವರ ಹೆಸರು ಅವರ ತಂದೆಯ ಅಥವಾ ಗಂಡನ ಹೆಸರು ಹೀಗೆ ವಾಸಸ್ಥಳದ ದೃಢೀಕರಣಕ್ಕಾಗಿ ಬೇಕಾದ ಎಲ್ಲ ವಿವರಗಳ ಮಾಹಿತಿ ಇರುತ್ತದೆ. ಇದನ್ನೆಲ್ಲ ಮತ್ತೊಮ್ಮೆ ಚೆಕ್ ಮಾಡಿಕೊಂಡು ಪ್ರಿವಿವ್ಯು ಮೇಲೆ ಕ್ಲಿಕ್ ಮಾಡಿ.
● ಮತ್ತೊಮ್ಮೆ ಯಾವುದಾದರೂ ಮಾಹಿತಿಯನ್ನು ಸರಿಪಡಿಸಬೇಕಾ ಎನ್ನುವ ಆಯ್ಕೆ ಬರುತ್ತದೆ, ತಪ್ಪಿದ್ದರೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಎಡಿಟ್ ಮಾಡಿಕೊಳ್ಳಬಹುದು, ಏನು ಇಲ್ಲ ಎಂದರೆ ಮುಂದಿನ ಹಂತಕ್ಕೆ ಹೋಗಬಹುದು.
● ಡ್ರಾಫ್ಟ್ ವಿವ್ಯೂ ಮೇಲೆ ಕ್ಲಿಕ್ ಮಾಡಿದ ತಕ್ಷಣವೇ ನೀವು ಅಪ್ಲಿಕೇಶನ್ ಹಾಕಿದ ಅರ್ಜಿದಾರರ ಹೆಸರಿನಲ್ಲಿ ವಾಸಸ್ಥಳ ದೃಢೀಕರಣ ಪತ್ರ ಸ್ಕ್ರೀನ್ ಮೇಲೆ ಕಾಣುತ್ತದೆ, ಪ್ರಿಂಟ್ ಹಾಕಲು ಅದು ತಯಾರಾಗಿರುತ್ತದೆ.
● ಎಕ್ನೋಲೆಜ್ಮೆಂಟ್ ನಂಬರ್ಸ್ ಸಮೇತವಾಗಿ ಅವರ ಸಂಪೂರ್ಣ ವಿವರವೂ ಕೂಡ ಇದರಲ್ಲಿ ಇರುತ್ತದೆ.
ಎಲ್ಲಾ ಚೆಕ್ ಮಾಡಿಕೊಂಡ ಮೇಲೆ ಬ್ಯಾಕ್ ಹೋಗಿ ಪೇಜ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿದರೆ ರೂ. 40 ಚಾರ್ಜನ್ನು ನೆಟ್ ಬ್ಯಾಂಕಿಂಗ್ ಮೂಲಕ ಪೇ ಮಾಡಬೇಕು.
● ಈ ವಿಧಾನಗಳ ಮೂಲಕ ಐದರಿಂದ ಹತ್ತು ನಿಮಿಷದೊಳಗೆ ನೀವು ನಿಮ್ಮ ವಾಸಸ್ಥಳ ಧೃಡೀಕರಣ ಪತ್ರವನ್ನು ಪಡೆದುಕೊಳ್ಳಬಹುದು.