ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನ ಮೊದಲ ಆವೃತ್ತಿಯಲ್ಲಿ ತನ್ನ ಹೈಟ್ ಕಾರಣದಿಂದ ಎಲ್ಲರ ಗಮನ ಸೆಳೆದಿದ್ದ ಸಂಜು ಬಸಯ್ಯ ಅವರು ಕನ್ನಡಿಗರಿಗೆಲ್ಲ ಕುಳ್ಳ ಮಿಂಡ್ರಿ ಎನ್ನುವ ಹೆಸರಿನಿಂದ ಚಿರಪರಿಚಿತರು. ಅದಾದ ಬಳಿಕ ಕಾಮಿಡಿ ಚಾಂಪಿಯನ್, ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಹಾಗೂ ಕನ್ನಡದ ಕೆಲವು ಹಲವು ಚಿತ್ರಗಳಲ್ಲಿ ಸೂಪರ್ ಸ್ಟಾರ್ಗಳ ಜೊತೆಗೆ ಕಾಮಿಡಿ ಆಕ್ಟರ್ ಆಗಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಅವರು ಈಗ ಕರ್ನಾಟಕದ ಮನೆಮನೆಗಳಿಗೂ ಪರಿಚಯವಿರುವ ಫೇಮಸ್ ಸೆಲೆಬ್ರಿಟಿ.
ಈಗಲೂ ಸಹ ಹೈಸ್ಕೂಲ್ ಹುಡುಗನಂತೆ ಕಾಣಿಸುವ ಸಂಜು ಬಸಯ್ಯ ಅವರು ಪ್ರೇಮ ವಿವಾಹವಾಗಿ ಎಲ್ಲರಿಗೂ ಶಾ’ಕ್ ಆಗುವಂತೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅನೇಕ ಗಾಸಿಪ್ ಗಳು ಸಂಜು ಬಸಯ್ಯ ಪ್ರೀತಿ ಕುರಿತು ಹರಿದಾಡಿದ್ದರು, ಈ ಜೋಡಿಗಳ ಫೋಟೋಗಳು ವೈರಲ್ ಆಗಿದ್ದರೂ ಕೂಡ ಅಧಿಕೃತವಾಗಿ ಇದರ ಬಗ್ಗೆ ಜೋಡಿಗಳು ಎಂದು ಮಾತನಾಡಿರಲಿಲ್ಲ.
ಆದರೆ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆ ಆಗಿರುವ ಬಗ್ಗೆ ಸ್ವತಃ ಸಂಜು ಬಸಯ್ಯ ಅವರೇ ಅನೌನ್ಸ್ ಮಾಡಿದ್ದಾರೆ. ಸಂಜು ಬಸಯ್ಯ ಅವರು ತಮ್ಮ instagram ಖಾತೆಯಲ್ಲಿ ತಾವು ತಮ್ಮ ಬಹಳ ಕಾಲದ ಗೆಳತಿ ಪಲ್ಲವಿ ಬಳ್ಳಾರಿ ಅವರನ್ನು ರಿಜಿಸ್ಟರ್ ಮ್ಯಾರೇಜ್ ಆಗಿರುವ ಬಗ್ಗೆ ಬರೆದುಕೊಂಡು ಅವರ ಒಟ್ಟಿಗಿದ್ದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ರೀತಿ ಮಾಡುವ ಮೂಲಕ ಕನ್ನಡಿಗರಿಗೆ ಬಹಳ ದಿನದಿಂದ ಇದ್ದ ಕೆಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ತಮ್ಮ ಮದುವೆ ಬಗ್ಗೆ ಸಂಜು ಬಸಯ್ಯ ಅವರು ಬರೆದಿರುವ ಮಾತುಗಳು ಈ ರೀತಿ ಇದೆ. ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ ಎಂದು ಹೇಳಿದ್ದಾರೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ.
ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ’ ಎಂದು ಬರೆದುಕೊಂಡಿದ್ದಾರೆ.
ಪಲ್ಲವಿ ಬಳ್ಳಾರಿ ಅವರು ಮೂಲತಃ ರಂಗಭೂಮಿ ಕಲಾವಿದೆ ಆಗಿದ್ದು, ಅವರು ಅನೇಕ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಲವಾದ ಮೂಲಗಳ ಮೂಲಕ ಬಂದ ಸುದ್ದಿಯ ಪ್ರಕಾರ ಈ ಜೋಡಿ ಮದುವೆ ಆಗಿ ನಾಲ್ಕು ವಾರಗಳು ಕಳೆದಿವೆಯಂತೆ ಆದರೆ ಕುಟುಂಬಸ್ಥರು ಇನ್ನೂ ಒಪ್ಪಿಲ್ಲ ಎನ್ನುವ ಮಾಹಿತಿಗಳು ಇವೆ. ಆದಷ್ಟು ಬೇಗ ಕುಟುಂಬದ ಆಶೀರ್ವಾದ ಕೂಡ ಈ ಜೋಡಿಗೆ ಸಿಗಲಿ. ಅವರು ಕನ್ನಡದ ಹೆಸರಾಂತ ಪ್ರತಿಭೆಯಾಗಿ ಇನ್ನು ಅನೇಕ ವರ್ಷಗಳ ಕಾಲ ತಮ್ಮ ಹಾಸ್ಯದ ಮೂಲಕ ಕನ್ನಡಿಗರನ್ನು ರಂಜಿಸುವಂತೆ ಆಗಲಿ ಎಂದು ಹಾರೈಸೋಣ.