ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಯಿರಿ.!

 

ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಂದು ಮಗು ಹುಟ್ಟಿದ ದಿನಾಂಕ ವಾರ ಹಾಗೂ ಸಮಯ ಇವುಗಳ ಆಧಾರದ ಮೇಲೆ ಅವರ ಸ್ವಭಾವ ಯಾವ ರೀತಿ ಇರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಆ ಮಗು ಮುಂದಿನ ದಿನದಲ್ಲಿ ಯಾವ ರೀತಿಯಾದಂತಹ ಬೆಳವಣಿಗೆಯನ್ನು ಹೊಂದುತ್ತಾನೆ ಎಂದು ಸಹ ಕೆಲವೊಂದಷ್ಟು ಜ್ಯೋತಿಷಿಗಳು ಹೇಳುತ್ತಾರೆ. ಹೀಗೆ ಹುಟ್ಟಿದ ದಿನಾಂಕ ಹಾಗೂ ವಾರಕ್ಕೆ ಅಷ್ಟು ಮಹತ್ವವಾದ ದಿನ ಎಂದೇ ಹೇಳಲಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರು ಹುಟ್ಟಿದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಹಾಗಾದರೆ ಈ ದಿನ ಯಾವ ವಾರ ಹುಟ್ಟಿದ ವ್ಯಕ್ತಿಗಳು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಅವರ ಗುಣಲಕ್ಷಣಗಳು ಯಾವ ರೀತಿ ಇರುತ್ತದೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಸೋಮವಾರ ಹುಟ್ಟಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಹಾಗೂ ಅವರು ಜೀವನದಲ್ಲಿ ಯಾವ ರೀತಿಯ ಯಶಸ್ಸುಗಳನ್ನು ಸಾಧಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ಸೋಮವಾರ :- ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ. ಸೋಮವಾರವು ಚಂದ್ರನ ವಾರವಾಗಿದೆ. ಈ ದಿನ ಜನಿಸಿದವರು ಶಾಂತಿಪ್ರಿಯರು ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವವರಾಗಿರು ತ್ತಾರೆ. ಚಂದ್ರನು ತಂಪನ್ನು ನೀಡುವ ದೇವನಾಗಿದ್ದಾನೆ. ಸೋಮವಾರದ ದಿನ ಜನಿಸಿದವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.

ಮಂಗಳವಾರ :- ಮಂಗಳವಾರ ಜನಿಸಿದವರು ಧೈರ್ಯ ಮತ್ತು ಆತ್ಮಸ್ಥೆರ್ಯವನ್ನು ಹೆಚ್ಚಾಗಿ ಹೊಂದಿರುತ್ತಾರೆ. ಈ ದಿನ ಜನಿಸಿದವರು ನ್ಯಾಯ ಪ್ರಿಯರಾಗಿರುತ್ತಾರೆ. ಅಂದರೆ ಇವರು ಯಾವಾಗಲೂ ನ್ಯಾಯದ ಕಡೆ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇವರು ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ಸುಳ್ಳನ್ನು ಹೇಳಲು ಬಯಸುವುದಿಲ್ಲ.

ಬುಧವಾರ :- ಬುಧವಾರ ಜನಿಸಿದವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. ಈ ದಿನ ಜನಿಸಿದವರು ಮೃದುಭಾಷಿ ಗಳಾಗಿರುತ್ತಾರೆ. ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯಿರುತ್ತದೆ. ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣರಾಗಿರುತ್ತಾರೆ.

ಗುರುವಾರ :- ಗುರುವಾರ ಜನಿಸಿದವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಗಂಭೀರ ಸ್ವಭಾವವನ್ನು ಹೊಂದಿರುವ ಈ ವ್ಯಕ್ತಿಗಳು ಇತರರ ಒಳ್ಳೆಯದನ್ನು ಬಯಸುತ್ತಾರೆ. ಗುರು ಗ್ರಹದ ಸ್ಥಿತಿ ನೀಚವಾಗಿದ್ದರೆ ಈ ವ್ಯಕ್ತಿಗಳು ತಪ್ಪುದಾರಿ ತುಳಿಯುವ ಸಾಧ್ಯತೆ ಇರುತ್ತದೆ.

ಶುಕ್ರವಾರ :- ಈ ದಿನ ಜನಿಸಿದವರ ಮೇಲೆ ಶುಕ್ರಗ್ರಹ ಪ್ರಭಾವವಿರು ತ್ತದೆ. ಹಾಗಾಗಿ ಈ ವ್ಯಕ್ತಿಗಳಿಗೆ ಭೌತಿಕ ಸುಖದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಶುಕ್ರವಾರ ಜನಿಸಿದವರು ಕಲೆ-ಕರಕುಶಲತೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಸ್ವಭಾವದಲ್ಲಿ ವಿನಮ್ರತೆಯನ್ನು ಹೊಂದಿರುವ ಈ ವ್ಯಕ್ತಿಗಳು ಆಧುನಿಕ ವಿಚಾರಗಳಿಗೆ ಮಹತ್ವವನ್ನು ನೀಡುತ್ತಾರೆ.

ಶನಿವಾರ :- ಶನಿವಾರ ಜನಿಸಿದವರ ಮೇಲೆ ಶನಿಗ್ರಹದ ಪ್ರಭಾವವಿರು ತ್ತದೆ. ಶನಿಯು ನ್ಯಾಯದ ದೇವನಾಗಿರುವ ಕಾರಣ ಶನಿಯ ಶುಭ ದೃಷ್ಠಿಯಿರುವಾಗ ವ್ಯಕ್ತಿಯು ನ್ಯಾಯ ಪ್ರಿಯ ಮತ್ತು ಕರ್ತವ್ಯ ಪಾಲನೆಯಲ್ಲಿ ದಕ್ಷತೆಯನ್ನು ಹೊಂದಿರುತ್ತಾನೆ. ಈ ವ್ಯಕ್ತಿಗಳು ಮಾತಿಗೆ ಬದ್ಧರಾಗಿರುವುದಲ್ಲದೇ, ಸಿದ್ಧಾಂತಗಳನ್ನು ಪಾಲಿಸುವಲ್ಲಿ ಮೊದಲಿಗರಾಗಿರುತ್ತಾರೆ.

ಭಾನುವಾರ :- ಸೂರ್ಯದೇವನ ಅಧಿಪತ್ಯವಿರುವ ವಾರವೇ ರವಿವಾರ ಅಥವಾ ಭಾನುವಾರ. ಈ ದಿನ ಜನಿಸಿರುವ ವ್ಯಕ್ತಿಗಳ ಮೇಲೆ ಸೂರ್ಯ ದೇವನ ಪ್ರಭಾವವಿರುತ್ತದೆ. ಇವರಲ್ಲಿ ಆತ್ಮಸ್ಥೆರ್ಯ ಹೆಚ್ಚಾಗಿರುತ್ತದೆ. ರವಿವಾರ ಜನಿಸಿದವರು ಉದಾರ ಸ್ವಭಾವವನ್ನು ಹೊಂದಿರುತ್ತಾರೆ. ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿಯಾಗಿರುವುದಲ್ಲದೇ, ಧೈರ್ಯವಂತ ರಾಗಿರುತ್ತಾರೆ. ಯಾವುದೇ ಕೆಲಸವನ್ನು ನಾನು ಮಾಡಿ ಅದರಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎನ್ನುವ ಗುಣವನ್ನು ಹೊಂದಿರುತ್ತಾರೆ. ಮೇಲೆ ಹೇಳಿದ ಇಷ್ಟು ಮಾಹಿತಿಯು ಕೂಡ ಯಾವ ವಾರ ಹುಟ್ಟಿದ ವ್ಯಕ್ತಿಗಳು ಯಾವ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವ ವಿಷಯವಾಗಿದೆ.

Leave a Comment