ಮನುಷ್ಯನಿಗೆ ಹಣದ ಅವಶ್ಯಕತೆ ಯಾವ ರೀತಿ ಉಂಟಾಗುತ್ತದೆ ಎಂದು ಊಹಿಸಲು ಅಸಾಧ್ಯ. ಒಳ್ಳೆ ದುಡಿಮೆ ಇದೆ, ಸಂಸಾರ ಸರಿಯಾಗಿ ಸಾಗುತ್ತಿದೆ ಇಷ್ಟಿದ್ದರೆ ಸಾಕು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅನಾರೋಗ್ಯ ಸಮಸ್ಯೆಯೋ ಅಥವಾ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳಿಸುವ ಅನಿವಾರ್ಯತೆಯೋ ಅಥವಾ ಇನ್ಯಾವುದೋ ಹೊಸ ಆಸ್ತಿಯನ್ನು ಖರೀದಿಸುವ ಆಸೆಯ ಕಾರಣದಿಂದ ಇರುವ ಸಂಬಳ, ಉಳಿತಾಯ ಸಾಲದೆ ಮತ್ತೊಬ್ಬರ ಬಳಿ ಸಾಲ ಮಾಡುವ ಅನಿವಾರ್ಯತೆ ಉಂಟಾಗುತ್ತದೆ.
ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವಿತಾವಧಿಯಲ್ಲಿ ಈ ರೀತಿ ಮತ್ತೊಬ್ಬರಿಂದ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ಬಂದೇ ಇರುತ್ತದೆ. ಒಳ್ಳೆಯ ಉದ್ದೇಶಗಳಿಗಾಗಿ ಅಥವಾ ನಮ್ಮ ಕಷ್ಟಗಳನ್ನು ಕಳೆಯುವ ಕಾರಣಕ್ಕಾಗಿ ಈ ರೀತಿ ಮಾಡಿಕೊಂಡ ಸಾಲಗಳನ್ನು ನಾವು ಅಂದುಕೊಂಡಂತೆ ಅದೇ ಸಮಯಕ್ಕೆ ತೀರಿಸುವುದು ಬಹಳ ಕಷ್ಟ. ಕೆಲವೊಮ್ಮೆ ಅದು ನಾವಂದುಕೊಂಡಂತೆ ತೀರದೆ ಸಂಕಷ್ಟವೂ ಆಗುತ್ತದೆ.
ಎಷ್ಟೇ ಪ್ರಯತ್ನ ಪಟ್ಟರು ಕೂಡ ನೀವು ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಎಷ್ಟೇ ಹಣ ಬಂದರೂ ಕೂಡ ಅದನ್ನು ಸಾಲ ತೀರಿಸಲು ಕೊಡಲು ಆಗುತ್ತಿಲ್ಲ ಎಂದರೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ ಎನ್ನುವ ನೋವು ನಿಮ್ಮಲ್ಲಿದ್ದರೆ ಈ ಒಂದು ಸರಳ ಪ್ರಯೋಗ ಮಾಡಿ ನಂತರ ಆಗುವ ಚಮತ್ಕಾರವನ್ನು ನೀವೇ ನೋಡಿ. ಈಗಿನ ಕಾಲದಲ್ಲಿ ಯಂತ್ರ ಶಕ್ತಿ, ಮಂತ್ರ ಶಕ್ತಿಗಳು ಎಷ್ಟು ಕೆಲಸ ಮಾಡುತ್ತವೆಯೋ ಅಷ್ಟೇ ಪ್ರಮಾಣದ ಶಕ್ತಿಯನ್ನು ಈ ತಂತ್ರ ಶಕ್ತಿಗಳು ಕೂಡ ಹೊಂದಿವೆ.
ಮತ್ತು ದೇವರ ಮೇಲೆ ನಂಬಿಕೆ ಇಟ್ಟು ಯಾವುದೇ ಪ್ರಯೋಗ ಮಾಡಿದರೂ ಕೂಡ ಆ ಭಾರವನ್ನು ದೇವರು ಹೊರತ್ತಾರೆ. ನಮ್ಮ ಪ್ರಾಮಾಣಿಕ ಭಕ್ತಿ ನೋಡಿ ಸಮಸ್ಯೆಯಿಂದ ನಮ್ಮನ್ನು ಪರಿಹಾರ ಮಾಡಿ ಕಾಪಾಡುತ್ತಾರೆ. ಆ ನಂಬಿಕೆ ನಿಮ್ಮಲ್ಲೂ ಇದ್ದರೆ ಈ ಒಂದು ಚಿಕ್ಕ ಪ್ರಯೋಗ ಮಾಡಿ ಸಾಕು. ಕಲಿಯುಗದ ಸಾಕ್ಷಾತ್ ದೇವರು ಎಂದರೆ ಅದು ಹನುಮಂತ. ರಾಮ ಭಂಟನಾದ ಈತ ಎಷ್ಟೊಂದು ಹೃದಯವಂತ ಎಂದರೆ ಮನುಷ್ಯನ ಕಷ್ಟಕ್ಕೆ ಬಹಳ ಬೇಗ ಕರಗುವ ದೇವರು ಇವರು.
ಹಾಗಾಗಿ ಹೆಚ್ಚಿನ ಜನರು ಸಾಲ ಕೂಪದಲ್ಲಿ ಸಿಲುಕಿಕೊಂಡಿದ್ದರೆ ಆಂಜನೇಯ ಮೊರೆ ಹೋಗುತ್ತಾರೆ.
ಆದರೆ ಆಂಜನೇಯನ ಬಳಿ ಹೋಗುವಾಗ ಈ ರೀತಿಯ ಒಂದು ಪ್ರಯೋಗ ಮಾಡಿಕೊಂಡು ಹೋದರೆ ಖಂಡಿತವಾಗಿಯೂ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಅದೇನೆಂದರೆ ಎರಡು ಪಾನ್ ಎಲೆ ಅಥವಾ ವೀಳ್ಯದೆಲೆಗಳನ್ನು ತೆಗೆದುಕೊಳ್ಳಿ, ಅದನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಎರಡು ಲವಂಗ ಮತ್ತು ಒಂದು ಹಸಿರು ಏಲಕ್ಕಿಯನ್ನು ಹಾಕಿ ಆ ಎಲೆಯನ್ನು ಪಾನ್ ರೀತಿ ಮಡಚಿ ಒಂದು ಶುದ್ಧವಾದ ಹಾಳೆಯಲ್ಲಿ ಇಟ್ಟುಕೊಳ್ಳಿ. ಲವಂಗವಾಗಲಿ ಅಥವಾ ಏಲಕ್ಕಿ ಆಗಲಿ ಮುರಿದಿರಬಾರದು.
ಮಂಗಳವಾರ ಸಂಜೆ 6:30 – 7:00 ಗಂಟೆ ಸಮಯಕ್ಕೆ ಆಂಜನೇಯನ ದೇವಸ್ಥಾನಕ್ಕೆ ಹೋಗಿ ನೀವು ತೆಗೆದುಕೊಂಡು ಹೋಗಿದ್ದ ಎಲೆ ಲವಂಗ ಮತ್ತು ಏಲಕ್ಕಿಯನ್ನು ಕಟ್ಟಿದ್ದ ಕಾಗದವನ್ನು ಆಂಜನೇಯನಿಗೆ ಅರ್ಪಿಸಿ ನಂತರ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ನಿಮಗೆ ಸಾಧ್ಯವಷ್ಟು ಬಾರಿ ಹನುಮಾನ್ ಚಾಲೀಸರನ್ನು ಪಟಿಸಿ. ನಿಮಗೆ ಎಷ್ಟು ವಾರಗಳ ವರೆಗೆ ಸಾಧ್ಯ ಅಷ್ಟು ವಾರಗಳವರೆಗೆ ಈ ಒಂದು ಅಭ್ಯಾಸವನ್ನು ನಿರಂತರವಾಗಿ ಮಾಡಿ. ಒಂದು ತಿಂಗಳು ತುಂಬುವುದರ ಒಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುವ ಎಲ್ಲಾ ಸೂಚನೆಗಳು ಕೂಡ ನಿಮಗೆ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿಕೊಂಡು ಅವರಿಗೂ ಈ ಪ್ರಯೋಗದ ಶಕ್ತಿ ತಿಳಿಯುವಂತೆ ಮಾಡಿ.