ಜೀರಿಗೆ ಒಂದು ಸಾಂಬಾರ ಪದಾರ್ಥ ಇದು ಆಹಾರದ ರುಚಿ ಹೆಚ್ಚಾಸುತ್ತದೆ ಮಾತ್ರವಲ್ಲದೆ ಮನುಷ್ಯನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಜೀರಿಗೆ ನೀರು ಎಂದರೆ ಒಂದು ಲೋಟ ನೀರಿಗೆ ಸುಮಾರು ಕಾಲು ಚಮಚದಷ್ಟು ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದು, ಕೆಲವರು ಜೀರಿಗೆ ಪೌಡರ್ ಕೂಡ ಮಿಕ್ಸ್ ಮಾಡಿ ಕುದಿಸಿ ಕುಡಿಯುತ್ತಾರೆ.
ಈ ರೀತಿ ಜೀರಿಗೆ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇವುಗಳ ಪ್ರಯೋಜನವನ್ನು ತಿಳಿದರೆ ನೀವು ಇಂದಿನಿಂದಲೇ ನೀವು ಇದನ್ನು ಕುಡಿಯಲು ಆರಂಭಿಸುತ್ತೀರಿ. ಯಾವ ಸಮಯದಲ್ಲಿ ಎಷ್ಟು ಹೇಗೆ ಜೀರಿಗೆ ನೀರು ಕುಡಿಯಬೇಕು ಎನ್ನುವ ಬಗ್ಗೆ ಆಯುರ್ವೇದದಲ್ಲಿ ತಿಳಿಸಿರುವ ಅಂಶಗಳು ಹೀಗಿವೆ ನೋಡಿ.
1. ಪ್ರತಿದಿನ ಒಂದು ಲೋಟ ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ಉಸಿರಾಟದ ವ್ಯವಸ್ಥೆ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಏಕೆಂದರೆ ಇದು ಎದೆಯಲ್ಲಿ ಸಂಗ್ರಹವಾದ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುವ ವಿರೋಧಿ ರಕ್ತ ನಾಳದ ಗುಣಲಕ್ಷಣಗಳನ್ನು ಹೊಂದಿದೆ. ಇದು ಅತ್ಯುತ್ತಮ ನಂಜು ನಿರೋಧಕ ಗುಣಗಳನ್ನು ಹೊಂದಿದೆ. ದೇಹದ ರೋಗ ನಿರೋಧಕ ಶಕ್ತಿ ಬೂಸ್ಟ್ ಆಗುವುದರಿಂದ ಶೀತ ಕೆಮ್ಮು ಜ್ವರಕ್ಕೆ ಕಾಣುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ.
2. ಜೀರಿಗೆ ನೀರು ತ್ವಚೆಯನ್ನು ಪೋಷಿಸುತ್ತದೆ. ಇದು ಮೊಡವೆ ಮತ್ತು ಕಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ನಯವಾಗಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಇ ಹೇರಳವಾಗಿರುವುದರಿಂದ ವಯಸ್ಸಾಗಿರುವಂತೆ ಕಾಣುವುದನ್ನು ತಡೆಯುತ್ತದೆ ಎಂದೇ ಹೇಳಬಹುದು.
3. ಜೀರಿಗೆಯಲ್ಲಿ ಕಬ್ಬಿನಾಂಶ ಮತ್ತು ನಾರಿನಾಂಶ ಕೂಡ ಹೇರಳವಾಗಿದೆ. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಾಗಿವೆ. ಇದರಿಂದ ಆರೋಗ್ಯದ ಸಮತೋಲನದಲ್ಲಿರುತ್ತದೆ, ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗಾಗಿ ಪ್ರತಿನಿತ್ಯ ತಪ್ಪದೇ ಒಂದು ಲೋಟ ಜೀರಿಗೆ ನೀರು ಕುಡಿಯಬೇಕು.
4. ಅಜೀರ್ಣ ಮಲಬದ್ಧತೆ ಈ ರೀತಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇರುವವರು ಪ್ರತಿದಿನವೂ ಒಂದು ಲೋಟ ಜೀರಿಗೆ ನೀರು ಕುಡಿಯಬೇಕು. ರಾತ್ರಿ ಊಟ ಆದ ಮೇಲೆ ಒಂದು ತಾಸು ಬಿಟ್ಟು ಒಂದು ಲೋಟ ಜೀರಿಗೆ ನೀರು ಕುಡಿದು ಮಲಗಿ ನಿಯಮಿತವಾಗಿ. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಈ ಸಮಸ್ಯೆ ನಿವಾರಣೆ ಆಗುತ್ತದೆ ದೇಹದ ಜೀರ್ಣಕ್ರಿಯೆ ಕಿಣ್ವಗಳು ಕ್ರಿಯಾ ಶೀಲವಾಗಿ ಹೊಟ್ಟೆಯ ಸಂಬಂಧಿತ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
5. ಜೀರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಂಟಾಗದಂತೆ ಕಾಪಾಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕಾರಿ ಮತ್ತು ಹೃ’ದ’ಯ’ಘಾ’ತದಂತಹ ಅಪಾಯಗಳನ್ನು ತಪ್ಪಿಸುತ್ತದೆ.
6. ಜೀರಿಗೆ ನೀರು ಹೈಡ್ರೇಟ್ ಆಗಿರಲು ರಿಫ್ರೆಶ್ ಮಾರ್ಗವನ್ನು ಒದಗಿಸುತ್ತದೆ. ಬಿಸಿ ವಾತಾವರಣದಲ್ಲಿ ಅಥವಾ ವ್ಯಾಯಾಮದ ನಂತರ ವಿಶೇಷವಾಗಿ ಜೀರಿಗೆ ನೀರು ಕುಡಿಯುವುದು ಒಳ್ಳೆಯದು
7. ಪ್ರತಿದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಜೀರಿಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿರುವ ಟಾಕ್ಸಿನ್ ಅಂಶಗಳು ಹೊರಹಾಕಲು ಸಹಾಯಕವಾಗುತ್ತದೆ.
8. ಊಟದ ನಂತರ ಜೀರಿಗೆ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಅಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಆಮ್ಲಿಯತೆ ಮತ್ತು ಎದೆ ಉರಿಯನ್ನು ಕಡಿಮೆ ಮಾಡುವಂತಹ ಗುಣವನ್ನು ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಈ ಅಭ್ಯಾಸ ಮಾಡಿಕೊಳ್ಳಿ. ಚಿಕ್ಕ ಮಕ್ಕಳು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ವಯಸ್ಕರು ಹಾಗೂ ವೃದ್ಧರು ಪ್ರತಿದಿನವೂ ಒಂದು ಲೋಟದಷ್ಟು ತೆಗೆದುಕೊಳ್ಳಬಹುದು.