ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನ ಇದೆ. ಈ ನಾಡಿನಲ್ಲಿ ಹೆಣ್ಣು ಮಕ್ಕಳನ್ನು ಶಕ್ತಿ ಸ್ವರೂಪ, ದೇವಿ ಸ್ವರೂಪವನ್ನು, ಸಾಕ್ಷಾತ್ ದೇವತೆಗಳೆಂದೇ ಕಾಣಲಾಗುತ್ತದೆ. ಸಂಸ್ಕೃತದ ಉಕ್ತಿಯೊಂದು ಹೇಳುವಂತೆ ಎಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಕಾಣುತ್ತಾರೋ ಅಲ್ಲಿ ದೇವರು ದೇವತೆಗಳು ನೆಲೆಸಿರುತ್ತಾರೆ ಇಂದು ನಂಬಲಾಗುತ್ತದೆ.
ಹಾಗಾಗಿ ಈ ಅಂಕಣದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ಇದ್ದರೆ ಒಳಿತು ಎನ್ನುವುದನ್ನು ಹಾಗೂ ಸಾಮುದ್ರಿಕ ಶಾಸ್ತ್ರದಲ್ಲಿ ಹೆಣ್ಣು ಮಕ್ಕಳ ಗುಣಲಕ್ಷಣಗಳು ಮತ್ತು ಅವರ ದೇಹದ ಸ್ವರೂಪದ ಆಧಾರದ ಮೇಲೆ ಅವರ ಅದೃಷ್ಟದ ಬಗ್ಗೆ ಏನು ಹೇಳಲಾಗಿದೆ ಎನ್ನುವ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.
● ಹೆಣ್ಣು ಮಕ್ಕಳ ಮನೆಯಲ್ಲಿ ಸದಾ ನಗುನಗುತ್ತಾ ಇದ್ದರೆ ಆ ಮನೆಯ ಸಮೃದ್ಧಿ ಹಾಗೂ ಅಭಿವೃದ್ಧಿ ಆಗುತ್ತದೆ.
● ಹೆಣ್ಣು ಮಕ್ಕಳ ಹಣೆಯ ಭಾಗವು ಹೆಚ್ಚು ಅಗಲವಾಗಿದ್ದರೆ ಆ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಸುಖವಾಗಿ ಇರುತ್ತಾರೆ.
● ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡನ ಪಾಲಿಗೆ ಅದೃಷ್ಟ ದೇವತೆ ಇದ್ದಂತೆ.
● ಹೆಣ್ಣುಮಕ್ಕಳ ಕುತ್ತಿಗೆ ಉದ್ದವಾಗಿದ್ದರೆ ಆ ಹೆಣ್ಣು ಮಕ್ಕಳು ಇದ್ದ ಮನೆ ಹಾಗೂ ಹೋದ ಮನೆಗೆ ಅಭಿವೃದ್ಧಿಯನ್ನು ತರುತ್ತಾರೆ.
● ದಪ್ಪವಾಗಿರುವ ಹೆಣ್ಣುಮಕ್ಕಳು ಅವರಿಗೆ ಯಾವುದೇ ರೀತಿ ಆರ್ಥಿಕ ಸಮಸ್ಯೆ ಬಂದರು ಕೂಡ ಅದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
● ಹೆಣ್ಣುಮಕ್ಕಳ ತುಟಿಯು ದಪ್ಪವಾಗಿ, ದುಂಡಗೆ ಇದ್ದರೆ ಅಂತಹ ಹೆಣ್ಣುಮಕ್ಕಳ ಜೀವನದಲ್ಲಿ ಯಾವುದೇ ರೀತಿಯ ಕೆಟ್ಟ ಘಟನೆಗಳು ನಡೆಯುವುದಿಲ್ಲ. ಅವರು ಯಾವಾಗಲೂ ಸುಖ-ಶಾಂತಿಯಿಂದ ನೆಮ್ಮದಿಯಾಗಿರುತ್ತಾರೆ.
● ಹೆಣ್ಣುಮಕ್ಕಳ ಹಲ್ಲಿನ ನಡುವೆ ಅಂತರ ಇದ್ದರೆ ಆ ಹೆಣ್ಣುಮಕ್ಕಳು ಬಹಳ ಭಾಗ್ಯಶಾಲಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ.
● ಹೆಣ್ಣುಮಕ್ಕಳ ಕೈ ಬೆರಳುಗಳಲ್ಲಿ ಶಂಖ ಹಾಗೂ ಶುಭಸೂಚಕಗಳು ಇದ್ದರೆ ಅವರು ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.
● ಹೆಣ್ಣುಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಅವರನ್ನು ಲಕ್ಷ್ಮಿ ಸ್ವರೂಪ ಎನ್ನಲಾಗುತ್ತದೆ. ಆ ಹೆಣ್ಣು ಮಕ್ಕಳ ಮನೆಯಲ್ಲಿ ಹೆಚ್ಚಾಗಿ ಹಣಕಾಸಿನ ಸಮಸ್ಯೆ ಇರುವುದಿಲ್ಲ.
● ಚಪ್ಪಟೆ ಕಾಲುಗಳನ್ನು ಹೊಂದಿರುವ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿ ಕಲಹ ಆಗಲು ಬಿಡುವುದಿಲ್ಲ. ಮನೆಯಲ್ಲಿ ಎಲ್ಲರ ಜೊತೆ ಬಹಳ ಹೊಂದಾಣಿಕೆಯಿಂದ ಇರುತ್ತಾರೆ.
● ತುಟಿಯ ಪಕ್ಕ ಮಚ್ಚೆ ಇರುವ ಸ್ತ್ರೀಯು ಮನೆಗೆ ಅದೃಷ್ಟವನ್ನು ತರುತ್ತಾರೆ.
● ಉದ್ದನೆಯ ಹಾಗೂ ಅಗಲದ ಕಿವಿ ಹೊಂದಿರುವ ಮಹಿಳೆಯರು ಅದೃಷ್ಟಶಾಲಿಗಳಾಗಿರುತ್ತಾರೆ. ಇವರು ಆಯಸ್ಸು ಹಾಗೂ ಆರೋಗ್ಯ ಹೆಚ್ಚುತ್ತದೆ.
ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!
● ಮೂಗಿನ ಮೇಲೆ ಹೆಣ್ಣು ಮಕ್ಕಳು ಮಚ್ಚೆಯನ್ನು ಹೊಂದಿರುವುದು ಬಹಳ ಅಪರೂಪ, ಈ ರೀತಿ ಮಚ್ಚೆಯನ್ನು ಹೊಂದಿದ್ದರೆ ಆ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ.
● ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳಿಗೆ ವಿದ್ಯೆಯಲ್ಲಿ ಹೆಚ್ಚು ಆಸಕ್ತಿ. ಇವರನ್ನು ಶಾರದಾ ದೇವಿಗೆ ಹೋಲಿಸಲಾಗುತ್ತದೆ.
● ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಕೂಡ ಬಹಳ ಅದೃಷ್ಟವನ್ನು ಮಾಡಿರುತ್ತಾರೆ, ಇವರು ಬಹಳ ಪುಣ್ಯವಂತರಾಗಿರುತ್ತಾರೆ.
● ಕಾಲಿನ ಹಿಮ್ಮಡಿಯು ತ್ರಿಕೋನ ಆಕಾರದಲ್ಲಿ ಇದ್ದರೆ ಆ ಮಹಿಳೆಯು ಬುದ್ದಿವಂತರಾಗಿದ್ದು, ತನ್ನ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗಟ್ಟಿನಲ್ಲಿ ನಡೆಸಿಕೊಂಡು ಹೋಗುವ ಮನೆಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಾ ಸರಿದೂಗಿಸಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾರೆ.
● ಹೆಣ್ಣುಮಕ್ಕಳ ಮುಖದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅವರು ಮದುವೆಯಾಗಿ ಹೋಗುವ ಮನೆಯ ಎಲ್ಲಾ ಸದಸ್ಯರ ಪ್ರಗತಿ ಆಗುತ್ತದೆ.
● ದೇವಿಯ ಹಾಗೆ ದಟ್ಟವಾಗಿ ಹಾಗೂ ನೇರವಾದ ಕೂದಲು ಹೊಂದಿರುವ ಮಹಿಳೆಯರು ಜೀವನದಲ್ಲಿ ಎಲ್ಲ ರೀತಿಯ ಅದೃಷ್ಟವನ್ನು ಹೊಂದಿರುತ್ತಾರೆ.
● ಕಾಲಿನ ಬೆರಳುಗಳ ಮಧ್ಯೆ ಅಂತರವನ್ನು ಹೊಂದಿರುವ ಮಹಿಳೆಯರು ಸಕಲ ಐಶ್ವರ್ಯವನ್ನು ತರುತ್ತಾರೆ.