ವಿವಾಹ ಎನ್ನುವುದು ಮೂರು ಅಕ್ಷರದ ಪದವಾಗಿದ್ದರು ಅದರ ಮಹತ್ವ ಮೂರು ಗ್ರಂಥಗಳಾದರು ಮುಗಿಯದಷ್ಟು ವಿಸ್ತಾರವಾದದ್ದು. ಮದುವೆ ಎನ್ನುವ ಬಂಧನಕ್ಕೆ ಒಳಗಾದ ಮೇಲೆ ವಧು ಹಾಗೂ ವರ ದಂಪತಿಗಳಾಗಿ ಪತಿ-ಪತ್ನಿ ಸಂಬಂಧದ ಮೂಲಕ ಜೀವನಪೂರ್ತಿ ಎರಡು ದೇಹ ಒಂದು ಉಸಿರು ಎನ್ನುವಂತೆ ಇರುತ್ತಾರೆ. ಇಂತಹ ಸಮಯದಲ್ಲಿ ಪತ್ನಿಯಾದವಳು ಮಾಡುವ ಪ್ರತಿ ಕಾರ್ಯಕ್ಕೂ ಕೂಡ ಪತಿ ಮತ್ತು ಪತಿಯ ಕುಟುಂಬಕ್ಕೂ ಫಲ ಇರುತ್ತದೆ.
ಹಾಗಾಗಿ ಒಂದು ಮನೆ ಏಳಿಗೆಯಾಗಬೇಕು ಎಂದರೆ ಆ ಮನೆಗೆ ಕಾಲಿಡುವ ಗೃಹಣಿಯು ಕಾರಣವಾಗುತ್ತಾಳೆ ಎಂದೇ ಹೇಳಬಹುದು. ಇದೇ ಕಾರಣಕ್ಕಾಗಿ ಈ ಅಂಕಣದಲ್ಲಿ ಪತ್ನಿ ಆದವಳು ಪತಿಯ ಆರೋಗ್ಯ ಆಯಸ್ಸು ಐಶ್ವರ್ಯದ ವೃದ್ಧಿಗಾಗಿ ಯಾವ ನಾಲ್ಕು ಕೆಲಸಗಳನ್ನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.
1. ಪ್ರತಿ ಮನೆಯ ಮುಂದೆ ಕೂಡ ಒಂದು ತುಳಸಿ ಗಿಡ ಇರಲೇಬೇಕು ಎಂದು ಶಾಸ್ತ್ರ ಹೇಳುತ್ತಾರೆ. ತುಳಸಿ ಗಿಡವು ಮನೆಯನ್ನು ಕಾಯುವ ದೇವತೆಯಾಗಿದ್ದಾರೆ. ಮನೆಗೆ ಆಗುವ ಒಳಿತು ಕೆಡುಕುಗಳ ಸೂಚನೆಯನ್ನು ನೀಡುವುದು ಮಾತ್ರವಲ್ಲದೇ ಎಷ್ಟೋ ಬಾರಿ ಮನೆ ಮೇಲೆ ಆಗಬೇಕಿದ್ದ ಕೆಟ್ಟ ಪರಿಣಾಮವನ್ನು ತುಳಸಿ ಗಿಡವು ತಡೆಯುತ್ತದೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಾದ ಸ್ಥಾನ ಇದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮೊದಲು ಆಕೆ ಸ್ವಚ್ಛವಾಗಿ, ಮಡಿಯುಟ್ಟುಕೊಂಡು ತುಳಸಿ ಗಿಡದ ಸುತ್ತಮುತ್ತ ಕ್ಲೀನ್ ಮಾಡಿ ತುಳಸಿ ಗಿಡಕ್ಕೆ ನೀರು ಅರ್ಪಿಸಿ ಕೈಮುಗಿದು ಪ್ರಾರ್ಥನೆಯನ್ನು ಮಾಡಬೇಕು. ತಪ್ಪದೇ ಪ್ರತಿದಿನವೂ ತುಳಸಿ ಗಿಡದ ಪೂಜೆಯನ್ನು ಮಾಡಬೇಕು ಆಗ ಲಕ್ಷ್ಮಿ ಸ್ವರೂಪಿಯಾದ ತುಳಸಿಯು ಆ ಮನೆಗೆ ಸುಖ ಶಾಂತಿ ನೆಮ್ಮದಿ ಸಂಪತ್ತು ಎಲ್ಲವನ್ನು ನೀಡುತ್ತಾರೆ.
40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!
2. ಗೃಹಿಣಿಯರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ಕಸವನ್ನೆಲ್ಲ ತೆಗೆದು ಹೊರಗೆ ಹಾಕಿ ತಾಮ್ರದ ಚೊಂಬಿನಲ್ಲೇ ನೀರನ್ನು ತೆಗೆದುಕೊಂಡು ಮನೆ ಪೂರ್ತಿ ಪ್ರೋಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಮನೆಯನ್ನು ಶುದ್ಧೀಕರಣ ಮಾಡಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕು. ಆಗ ಆ ಮನೆಯ ನಕರಾತ್ಮಕ ಶಕ್ತಿಯೆಲ್ಲಾ ಹೊರ ಹೋಗುತ್ತದೆ. ಯಾವುದೇ ಕಾರಣಕ್ಕೂ ಮದುವೆಯಾದ ಮಹಿಳೆಯರು ಸ್ನಾನ ಮಾಡದೆ ದೇವರ ಕೋಣೆಗೆ ಹಾಗೂ ಅಡುಗೆ ಮನೆಗೆ ಹೋಗಬಾರದು ಮತ್ತು ಆ ವಸ್ತುಗಳನ್ನು ಮುಟ್ಟಬಾರದು.
3. ಗೃಹಿಣಿಯರು ಸಂಜೆ ಆಗುತ್ತಿದ್ದಂತೆ ಸ್ನಾನ ಮಾಡಿ ಅಥವಾ ಕೈಕಾಲು ಮುಖ ತೊಳೆದುಕೊಂಡು ಬೆಳಗ್ಗೆ ಹೊತ್ತು ಹೇಗೆ ದೇವರ ಪೂಜೆ ಧ್ಯಾನ ಮಾಡುತ್ತಿದ್ದರು ಅದೇ ರೀತಿ ಮುಸ್ಸಂಜೆ ಸಮಯದಲ್ಲೂ ದೇವರ ಕೋಣೆ, ತುಳಸಿ ಹಾಗೂ ಮನೆ ಹೊಸ್ತಿಲಿನ ಮುಂದೆ ದೀಪವನ್ನು ಬೆಳಗಿಸಿ ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ಕೂಡ ಮನೆಗೆ ಲಕ್ಷ್ಮಿ ಆಗಮನವಾಗುತ್ತದೆ. ಈ ರೀತಿ ದೀಪ ಬೆಳಗಿ ಪ್ರಾರ್ಥಿಸುವ ಮನೆಗಳಲ್ಲಿ ಧನ-ಧಾನ್ಯದ ಕೊರತೆ ಎಂದು ಕೂಡ ಬರುವುದಿಲ್ಲ. ಮನೆಯಲ್ಲಿ ಗೃಹಿಣಿ ಆದವಳು ತಪ್ಪದೇ ಈ ಕಾರ್ಯವನ್ನು ಮಾಡಿದರೆ ಮನೆಯಲ್ಲಿರುವ ಎಲ್ಲರಿಗೂ ಕೂಡ ಒಳಿತಾಗುತ್ತದೆ.
ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!
4. ಮದುವೆಯಾದ ನಂತರ ಹೆಣ್ಣು ಮಕ್ಕಳು ವ್ರತಗಳನ್ನು ಆಚರಿಸುವುದನ್ನು ರೂಢಿಸಿಕೊಳ್ಳಬೇಕು. ಏಕಾದಶಿ, ಪೌರ್ಣಿಮೆ ಮುಂತಾದ ದಿನಗಳನ್ನು ಆಚರಿಸಿ ಆ ದಿನದ ವಿಶೇಷ ಪೂಜೆಗಳನ್ನು ಮಾಡಿ, ಉಪವಾಸ ಇದ್ದು ಆಯಾ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಆಗ ಅದರ ಉತ್ತಮ ಪರಿಣಾಮಗಳು ಕುಟುಂಬದ ಮೇಲೆ ಬೀಳುತ್ತದೆ, ಕುಟುಂಬದ ಎಲ್ಲ ಸದಸ್ಯರಿಗೂ ಕೂಡ ಒಳಿತಾಗುತ್ತದೆ.