40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!

ವಯಸ್ಸಾಗುವುದು ಎಂದರೆ ಯಾರಿಗೂ ಕೂಡ ಇಷ್ಟವಿಲ್ಲ, ವಯಸ್ಸಾಗಿದೆ ಎಂದರೆ ಸೌಂದರ್ಯ ಕ್ಷೀಣಿಸಿದೆ ಎಂದರ್ಥ. ಹೆಣ್ಣು ಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳಿಗಾಗಲಿ ಈ ವಿಷಯವನ್ನು ಸಹಿಸಿಕೊಳ್ಳುವುದು ಬಹಳ ಕ’ಷ್ಟ. ವಯಸ್ಸಾಗಿದ್ದರು ಯಂಗ್ ಆಗಿ ಕಾಣಬೇಕು ಎಂದೇ ಅವರ ಮನಸ್ಸಿನ ಇಚ್ಛೆ ಇರುತ್ತದೆ.

ಈ ರೀತಿಯಾಗಲು ಲಕ್ಷ ಲಕ್ಷ ಹಣ ಸುರಿಯುವ ಅವಶ್ಯಕತೆ ಇಲ್ಲ ನೀವು ಬದುಕುವ ಶೈಲಿ ಹಾಗೂ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಸಾಕು. ನೀವು ಬಹಳ ಯಂಗ್ ಆಗಿ ಹಾಗೂ ಎನರ್ಜಿಟಿಕ್ ಆಗಿ ಕಾಣುತ್ತೀರಿ. ಅದಕ್ಕಾಗಿ ನಾವು ಹೇಳುವ 8 ಸುಲಭ ಟಿಪ್ ಗಳನ್ನು ಪಾಲಿಸಿ ಸಾಕು.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

● ಕೂದಲಿಗೆ ಬಣ್ಣ ಹಚ್ಚಿ – ತಲೆಕೂದಲಿನ ಬಣ್ಣ ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗುವುದು ವಯಸ್ಸಾಗಿರುವ ಸೂಚನೆಯನ್ನು ತಿಳಿಸುತ್ತದೆ. ಈ ರೀತಿ ಆದಾಗ ನಾವು ನಮ್ಮ ವಯಸ್ಸಿಗಿಂತ ದೊಡ್ಡವರ ರೀತಿಯಲ್ಲಿ ಕಾಣುತ್ತೇವೆ ಹಾಗಾಗಿ ಕೂದಲಿಗೆ ಬಣ್ಣ ಹಚ್ಚುವುದರಿಂದ ಇದನ್ನು ಮರೆಮಾಚಬಹುದು. ಆದರೆ ಒಳ್ಳೆಯ ಗುಣಮಟ್ಟದ ಸಾಧ್ಯವಾದರೆ ನೈಸರ್ಗಿಕವಾಗಿ ಇರುವ ಪದಾರ್ಥಗಳಲ್ಲಿ ಬಳಸಿ ಕೂದಲನ್ನು ಕಲರ್ ಮಾಡಿ ಮತ್ತು ಕೂದಲು ತೇವಾಂಶದಿಂದ ಇರುವಂತೆ ನೋಡಿಕೊಳ್ಳಿ. ಆಗ ನೀವು ಬಹಳ ಯಂಗ್ ಆಗಿ ಕಾಣುತ್ತೀರಿ.

● ನಿಮ್ಮ ತ್ವಚೆಗೆ ಸೀರಂ ಸೇರಿಸಿ – ಚರ್ಮ ಸುಕ್ಕು ರಹಿತವಾಗಿ ಇರಬೇಕು ಎಂದರೆ ಚರ್ಮದ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ತ್ವಚೆಗೆ ಸೀರಮ್ ಹಚ್ಚುವುದರಿಂದ ತ್ವಚೆ ಹೆಲ್ದಿಯಾಗಿರುತ್ತದೆ ಹಾಗೂ ಯಂಗ್ ಆಗಿ ಇರುತ್ತದೆ. ರೆಟಿನಾಲ್, ವಿಟಮಿನ್ ಸಿ ಮತ್ತು ಹೈಲುರಾನಿಕ್ ಆಸಿಡ್ ಸೀರಮ್ ಬಳಸಿದರೆ ಒಳ್ಳೆಯದು. ನಿಮ್ಮ ತ್ವಚೆಯ ಆರೈಕೆಯಲ್ಲಿ ಆಂಟಿ ಏಜಿಂಗ್ ಮತ್ತು ಆಂಟಿ ರಿಂಕಲ್ ಕ್ರೀಮ್ ಕೂಡ ಬಳಸಿ.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!

● ದೇಹನಾದಕ್ಕೆ ವ್ಯಾಯಾಮ – ದೇಹವನ್ನು ಒಳ್ಳೆ ಟ್ಯೂನಲ್ಲಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕೆ ತಾಲೀಮು ಕೂಡ ಮಾಡಬೇಕು. ದಿನಕ್ಕೆ 30 ನಿಮಿಷಗಳಾದರು ಎಕ್ಸಸೈಜ್ ಮಾಡುವುದರಿಂದ ದೇಹವು ಆರೋಗ್ಯವಾಗಿರುತ್ತದೆ ಹಾಗೂ ಆಕರ್ಷಣೀಯವಾಗಿ ಕಾಣುತ್ತದೆ. ದೇಹದ ಭಂಗಿ ಕೆಟ್ಟದಾಗಿದ್ದರೆ ವಯಸ್ಸಾಗಿರುವುದು ಗೊತ್ತಾಗುತ್ತದೆ. ಹಾಗಾಗಿ ಬಾಡಿ ಟ್ಯೂನಿಂಗ್ ಬಗ್ಗೆ ಗಮನ ಕೊಡಿ, ಅನುಕೂಲತೆ ಇದ್ದರೆ ಜಿಮ್ ಗೆ ಕೂಡ ಸೇರಬಹುದು.

● ಟ್ರೆಂಡಿ ಬಟ್ಟೆಗಳನ್ನು ಧರಿಸಿ – ಡ್ರೆಸ್ ಸೆನ್ಸ್ ಮೇಲೆ ನಿಮ್ಮ ವಯಸ್ಸನ್ನು ನಿರ್ಧರಿಸಬಹುದು ಹಾಗಾಗಿ ಹೊಸ ಟ್ರೆಂಡ್ ಗಳನ್ನು ಅನುಸರಿಸುವುದು ಮತ್ತು ಅದಕ್ಕೆ ತಕ್ಕಂತೆ ಬದಲಾಗುವುದನ್ನು ರೂಢಿಸಿಕೊಂಡರೆ ಅದು ನಿಮಗೆ ತಾಜಾ ನೋಟವನ್ನು ನೀಡುತ್ತದೆ.

ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!

● ಸಕ್ಕರೆ ಸೇವನೆ ನಿಲ್ಲಿಸಿ – ವಯಸ್ಸಾಗುತ್ತಿದ್ದಂತೆ ವ್ಯಕ್ತಿಯು ಡಯಾಬಿಟಿಕ್ ಒಳಗಾಗೋದು ಸಾಮಾನ್ಯ ಇದನ್ನು ತಪ್ಪಿಸಲು ಸಕ್ಕರೆ ಪದಾರ್ಥಗಳ ಸೇವನೆಯನ್ನು ಕುಂಠಿತಗೊಳಿಸಿ ಅಥವಾ ಬಿಟ್ಟುಬಿಡಿ. ದೇಹವು ಅನಾರೋಗ್ಯಕ್ಕೆ ತುತ್ತಾದರೆ ಮನಸ್ಸು ಸಂತೋಷದಿಂದ ಇರುವುದಿಲ್ಲ ಹೀಗಾಗಿ ಅದು ಮುಖದ ಮೇಲೆ ಗೊತ್ತಾಗುತ್ತದೆ. ಆ ಕಾರಣದಿಂದ ಯಂಗ್ ಆಗಿರಲು ಮತ್ತು ಶಕ್ತಿಯುತವಾಗಿರಲು ಈ ಅಭ್ಯಾಸ ಪಾಲಿಸಿ.

● ಉತ್ತಮ ಆಹಾರವನ್ನು ತೆಗೆದುಕೊಳ್ಳಿ:- ಆಯಸ್ಸು, ಆರೋಗ್ಯ ಹಾಗೂ ಸೌಂದರ್ಯದ ಗುಟ್ಟು ಅಡಗಿರುವುದು ಆಹಾರದಲ್ಲಿ ಹಾಗಾಗಿ ಹಿತವಾಗಿ ಮಿತವಾಗಿ ಪೋಷಕಾಂಶಯುಕ್ತ ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಿ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

● ಉತ್ತಮ ನಿದ್ದೆ ಪಡೆಯಿರಿ – ವಯಸ್ಸಾದಂತೆ ನಿದ್ದೆ ಕಡಿಮೆ ಆಗುತ್ತದೆ ಆದರೆ ನಿದ್ರಾಹೀನತೆಗೆ ಅವಕಾಶ ಕೊಡಬೇಡಿ, ಒಳ್ಳೆಯ ನಿದ್ದೆ ಮಾಡುವುದರಿಂದ ನೀವು ಬಹಳ ಫ್ರೆಶ್ ಆಗಿ ಕಾಣುತ್ತೀರಿ ಮತ್ತು ತುಂಬಾ ಆಕ್ಟಿವ್ ಆಗಿ ಇರುತ್ತೀರಿ ಹಾಗಾಗಿ ಚೆನ್ನಾಗಿ ನಿದ್ರೆ ಮಾಡಿ

● ಹೆಚ್ಚು ನೀರನ್ನು ಕುಡಿಯಿರಿ – ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆದಂತೆ ಎನರ್ಜಿ ಡೌನ್ ಆಗುತ್ತದೆ ಮತ್ತು ಅದು ಇನ್ನಿತರ ಖಾ’ಯಿ’ಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ದೇಹಕ್ಕೆ ಬೇಕಾದ ಅಗತ್ಯ ಪ್ರಮಾಣದ ನೀರಿನ ಸೇವನೆಯನ್ನು ತಪ್ಪದೆ ಮಾಡಿ. ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಿ.

Leave a Comment