ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!


ಆರೋಗ್ಯವೇ ಭಾಗ್ಯ ಎನ್ನುವುದನ್ನು ಎಲ್ಲರೂ ಬಲ್ಲರು. ಅದಕ್ಕಿಂತ ಸಂಪತ್ತು ಬೇರೊಂದಿಲ್ಲ. ಆರೋಗ್ಯ ಕೆಟ್ಟಾಗಲೇ ಅದರ ಬೆಲೆ ಗೊತ್ತಾಗುವುದು, ಹಾಗಾಗಿ ಆರೋಗ್ಯ ಕೆಡಿಸಿಕೊಂಡು ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಕೆಲ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಒಳ್ಳೆಯದು. ಹಾಗಾಗಿ ಉತ್ತಮ ಜೀವನ ಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿಗೆ ಕೆಲವೊಂದು ಟಿಪ್ಗಳನ್ನು ಕೊಡುತ್ತಿದ್ದೇವೆ. ಇವುಗಳನ್ನು ಸಾಧ್ಯವಾದಷ್ಟು ಪಾಲಿಸಿ.

● ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದೆರಡು ಲೋಟ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದು ಶರೀರದಲ್ಲಿರುವ ಟ್ಯಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕರುಳನ್ನು ಕ್ಲೀನ್ ಮಾಡುವುದು ಮಾತ್ರವಲ್ಲದೆ ಈ ಅಭ್ಯಾಸ ರೂಢಿ ಮಾಡಿಕೊಳ್ಳುವುದರಿಂದ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಅಂಗಗಳು ಸ್ವಚ್ಛವಾಗುತ್ತದೆ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

● ರಾತ್ರಿ ವೇಳೆ ಎಣ್ಣೆಯಲ್ಲಿ ಕರಿದ ಅಥವಾ ಅತಿ ಹೆಚ್ಚು ಮಸಾಲೆ ಬಳಸಿ ಮಾಡಿದ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ
● ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುವುದು ಬಹಳ ಮುಖ್ಯ. ಹಾಗಾಗಿ ಪ್ರತಿದಿನವೂ ಕೂಡ ನಿಮ್ಮ ಆಹಾರದಲ್ಲಿ ಪ್ರೋಟಿನ್ ಅಂಶಯುಕ್ತ ಪದಾರ್ಥಗಳ ಇದೆಯೇ ಎನ್ನುವುದನ್ನು ಪರಿಶೀಲಿಸಿ, ಪ್ರೊಟೀನ್ ಸಹಿತ ಆಹಾರಗಳನ್ನು ಸೇರಿಸಿ.

● ಊಟ ಮಾಡುವುದಕ್ಕೂ ಕೂಡ ಒಂದು ಪದ್ಧತಿ ಇದೆ ಊಟ ಮಾಡುವಾಗ ಸಮಾಧಾನವಾಗಿ ತಾಳ್ಮೆಯಿಂದ ಊಟ ಮಾಡಬೇಕು. ಸಿ’ಟ್ಟಿನಲ್ಲಿ, ಕೋ’ಪದಲ್ಲಿ ಊಟ ಮಾಡಬಾರದು, ಮೊಬೈಲ್ ಬಳಕೆ ಅಥವಾ ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸ ಬಿಟ್ಟುಬಿಡಿ.
● ಅತಿ ಹೆಚ್ಚು ಹುಳಿ ಪದಾರ್ಥಗಳ ಸೇವನೆ ದೇಹಕ್ಕೆ ಒಳ್ಳೆಯದಲ್ಲ, ಹಾಗಾಗಿ ನಿಧಾನವಾಗಿ ಇದನ್ನು ಕಡಿಮೆ ಮಾಡಿಕೊಳ್ಳಿ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

● ಪ್ರತಿದಿನವೂ ಆಹಾರದಲ್ಲಿ ಹಸಿರು ತರಕಾರಿಗಳು ಸೊಪ್ಪುಗಳ ಸೇವನೆ ಇರಬೇಕು. ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವನೆ ಮಾಡಬೇಕು.
● ಮಲಗುವ ಕೋಣೆಯಲ್ಲಿ ಒಂದು ಕಿಟಕಿ ಇರಲೇಬೇಕು. ಶುದ್ಧವಾದ ಗಾಳಿ ಬರುವ ಹಾಗೂ ಸ್ವಲ್ಪ ಬೆಳಕಿರುವ ಕೋಣೆಗಳಲ್ಲಿ ಮಲಗುವ ಅಭ್ಯಾಸ ರೂಡಿಸಿಕೊಳ್ಳಿ.
● ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು, ಯಾವಾಗಲೂ ಒತ್ತಡದಿಂದ ಕೂಡಿದ ಜೀವನ ಶೈಲಿಯಲ್ಲಿ ಬದುಕಬಾರದು.

● ಒಬ್ಬ ಮನುಷ್ಯ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆಯನ್ನು ಮಾಡಲೇಬೇಕು, ಇದಕ್ಕಿಂತ ನಿದ್ದೆ ಕಡಿಮೆಯಾದರು ಅಥವಾ ಹೆಚ್ಚಾದರು ಕೂಡ ಅದು ಆರೋಗ್ಯಕ್ಕೆ ಹಾನಿಕರ.
● ಆಹಾರವನ್ನು ಚೆನ್ನಾಗಿ ಆಗಿದು ತಿನ್ನಬೇಕು.
● ಆದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಿ, ಹೊರಗಿನ ತಿಂಡಿ ಅಥವಾ ಬೇಕರಿ ತಿಂಡಿಗಳ ಸೇವನೆ ಕಡಿಮೆ ಮಾಡಿ. ಅದೇ ರೀತಿ ಫಾಸ್ಟ್ ಫುಡ್ಗಳ ಸೇವನೆ ಎಷ್ಟು ಕಡಿಮೆ ಮಾಡುತ್ತಿವೊ ಅಷ್ಟು ಕೂಡ ಅದು ದೇಹದ ಆರೋಗ್ಯಕ್ಕೆ ಒಳ್ಳೆಯದು.

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

● ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕೂಡ ಒಂದು ಒಳ್ಳೆಯ ಅಭ್ಯಾಸ ಇದನ್ನು ರೂಢಿ ಮಾಡಿಕೊಳ್ಳಿ. ಹೊತ್ತಲ್ಲದ ಹೊತ್ತಿನಲ್ಲಿ ಇಷ್ಟ ಬಂದ ಸಮಯಕ್ಕೆ ತಿನ್ನುವುದರಿಂದ ಅದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಈ ಅಭ್ಯಾಸ ಬಿಟ್ಟುಬಿಡಿ.
● ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ಸೇವಿಸಬಾರದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಕೂಡ ಮೆಡಿಕಲ್ ಗೆ ಹೋಗಿ ಮಾತ್ರೆ ತೆಗೆದುಕೊಂಡು ಸೇವಿಸುವ ದುರಭ್ಯಾಸವನ್ನು ಬಿಟ್ಟುಬಿಡಬೇಕು.

● ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು ಹಲ್ಲುಗಳ ಆರೋಗ್ಯಕ್ಕೆ ಹಾಗೂ ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದು.
● ಉಪ್ಪಿನಕಾಯಿ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ, ಸಾಧ್ಯವಾದಷ್ಟು ಉಪ್ಪಿನಕಾಯಿ ಬಳಕೆ ಕಡಿಮೆ ಮಾಡಿ ಇಲ್ಲವಾದರೆ ಪೂರ್ತಿಯಾಗಿ ಬಿಟ್ಟುಬಿಡಿ.

Leave a Comment