ಮನೆಯಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸುವ ಸರಳವಾದ ವಿಧಾನ.! ಕೇವಲ 10 ನಿಮಿಷಗಳಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಸಿದ್ಧ ಆಗುತ್ತೆ ಈ ರೀತಿ ಮಾಡಿ ಸಾಕು.!

ಕೊಬ್ಬರಿ ಎಣ್ಣೆ ಮಾಡಿಸಲು ಗಿರಣಿಗೆ ಹೋಗಬೇಕು ಎಂದು ಅನೇಕರು ಎಂದುಕೊಂಡಿದ್ದಾರೆ ಅಥವಾ ಜಾಸ್ತಿ ತೆಂಗಿನಕಾಯಿ ಬೆಳೆದು ಕೊಬ್ಬರಿ ಮಾಡುವವರು ಮಾತ್ರ ಕೊಬ್ಬರಿ ಎಣ್ಣೆ ಮಾಡಿಸಿಕೊಳ್ಳಬಹುದು. ಸಣ್ಣ ಪುಟ್ಟ ಪ್ರಮಾಣಕ್ಕೆ ಕೊಬ್ಬರಿ ಎಣ್ಣೆ ಮಾಡಿಕೊಳ್ಳಲಾಗದು ಎಂದು ತ’ಪ್ಪು ಭಾವನೆಯಲ್ಲಿ ಇದ್ದಾರೆ. ಆದರೆ ನೀವು ಯಾವುದೇ ಗಿರಣಿಗೆ ಹೋಗದೆ ನಿಮ್ಮ ಮನೆಯಲ್ಲೇ ನಿಮ್ಮ ಅವಶ್ಯಕತೆಗೆ ಬೇಕಾದಷ್ಟು ಕೊಬ್ಬರಿ ಎಣ್ಣೆಯನ್ನು ಫ್ರೆಶ್ ಆಗಿ 10 ನಿಮಿಷಗಳಲ್ಲಿ ತಯಾರಿಸಿಕೊಳ್ಳಬಹುದು.

ಇದಕ್ಕಾಗಿ ಹೆಚ್ಚಿಗೆ ಖರ್ಚು ಕೂಡ ಆಗುವುದಿಲ್ಲ ಮತ್ತು ಸಮಯವು ಹೆಚ್ಚು ಹಿಡಿಯುವುದಿಲ್ಲ ಶುದ್ಧವಾದ ನೈಸರ್ಗಿಕವಾದ ಕೊಬ್ಬರಿ ಎಣ್ಣೆ ಕೆಲವೇ ವಸ್ತುಗಳಲ್ಲಿ ರೆಡಿ ಆಗುತ್ತದೆ. ಕೊಬ್ಬರಿ ಎಣ್ಣೆ ಮಾಡಿಕೊಳ್ಳಲು ಮೊದಲಿಗೆ ಎರಡು ಚೆನ್ನಾಗಿರುವ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ. ಹೊರಗಿನ ಜುಟ್ಟನ್ನು ಪೂರ್ತಿ ಕ್ಲೀನ್ ಮಾಡಿ ಆ ಉಂಡೆಯನ್ನು ಇಡ್ಲಿ ಕುಕ್ಕರ್ ಗೆ ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ ಬೇಯಲು ಇಡಿ.

40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!

ತುಂಬಾ ಎಳಸಾದ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಡಿ, ಕುಕ್ಕರ್ ವಿಶಲ್ ಬಂದ ನಂತರ ಆಫ್ ಮಾಡಿ ಆರಲು ಬಿಡಿ ಹತ್ತು ನಿಮಿಷ ಆರಿದ ನಂತರ ಆ ತೆಂಗಿನ ಕಾಯಿಯನ್ನು ತೆಗೆದುಕೊಂಡು ಒಡೆದು ಒಳಗಿರುವ ತೆಂಗಿನಕಾಯಿಯನ್ನು ಸಣ್ಣ ಸಣ್ಣ ಪೀಸ್ ಗಳನ್ನಾಗಿ ಹೆಚ್ಚಿಕೊಳ್ಳಿ. ನೀವು ತೆಂಗಿನಕಾಯಿ ಬಯಸಿದ ನೀರನ್ನು ವೇಸ್ಟ್ ಮಾಡಬೇಕು ಎಂದು ಬೇಸರಪಟ್ಟುಕೊಳ್ಳಬೇಡಿ ಅದು ಅನೇಕ ರೋಗಗಳಿಗೆ ಮನೆಮದ್ದಾಗಿ ಉಪಯೋಗಕ್ಕೆ ಬರುತ್ತದೆ.

ಅಸಿಡಿಟಿ ಇರುವವರು ಅಥವಾ ಸಕ್ಕರೆ ಕಾಯಿಲೆ ಇರುವವರು ಅಥವಾ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಪ್ರತಿದಿನ ಒಂದು ತಿಂಗಳವರೆಗೆ ಈ ರೀತಿ ತೆಂಗಿನ ಕಾಯಿ ಬೇಯಿಸಿದ ನೀರನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತಾರೆ. ಇದರಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಈಗ ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡಿದ್ದ ಎಲ್ಲ ಪೀಸ್ ಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

ಒಂದು ಜಾಲರಿ ಮೇಲೆ ಕಾಟನ್ ಬಟ್ಟೆ ಇಟ್ಟು ಪೇಸ್ಟ್ ಮಾಡಿಕೊಂಡ ತೆಂಗಿನಕಾಯಿಯನ್ನು ಹಾಕಿ ಅದರ ಹಾಲು ಬರವವರೆಗೂ ಹಿಂಡಿಕೊಳ್ಳಿ. ಈ ರೀತಿ ತೆಂಗಿನಕಾಯಿ ಚೂರುಗಳಲ್ಲಿ ಎಷ್ಟು ಹಾಲು ಬರುತ್ತದೆ ಅಷ್ಟರವರೆಗೂ ಚೆನ್ನಾಗಿ ಹಿಂಡುಕೊಂಡು ಒಂದು ಪಾತ್ರೆಯಲ್ಲಿ ಆ ಹಾಲನ್ನು ಹಾಕಿ ಕಡಿಮೆ ಫ್ಲೇಮ್ ನಲ್ಲಿ ಅಥವಾ ಮಧ್ಯಮ ಪ್ಲೇಮ್ ನಲ್ಲಿ ಅದನ್ನು ಕಾಯಲು ಇಡಿ.

ಅದನ್ನು ಕೈ ಆಡಿಸುತ್ತಲೇ ಇರಿ, ಇಲ್ಲವಾದರೆ ತಳ ಹಿಡಿದುಕೊಳ್ಳಬಹುದು ಒಂದತ್ತು ನಿಮಿಷ ಆದಮೇಲೆ ಅದು ಎಣ್ಣೆ ರೀತಿ ಮೇಲೆ ತೇಲಲು ಆರಂಭ ಆಗುತ್ತದೆ, ಅದು ನಿಮಗೆ ಗೊತ್ತಾಗುತ್ತದೆ. ಅದರ ಬಣ್ಣ ಬದಲಾಗುತ್ತದೆ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಮತ್ತೊಮ್ಮೆ ಅದನ್ನು ಶೋಧಿಸಿಕೊಳ್ಳಿ ಈಗ ಶುದ್ಧವಾದ ನೈಸರ್ಗಿಕವಾದ ಕೊಬ್ಬರಿ ಎಣ್ಣೆ ನಿಮ್ಮ ಬಳಕೆಗೆ ಸಿದ್ಧವಾಗಿರುತ್ತದೆ.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!

ಎಣ್ಣೆ ಬೇರ್ಪಡಿಸಿಕೊಂಡ ಮೇಲೆ ಉಳಿದ ತೆಂಗಿನಕಾಯಿ ಅಂಶ ವೇಸ್ಟ್ ಆಗುತ್ತದೆ ಎಂದುಕೊಳ್ಳಬೇಡಿ ಇದಕ್ಕೆ ರಾಗಿ ಹಿಟ್ಟು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಸ್ನಾಕ್ಸ್ ತಯಾರಾಗುತ್ತದೆ ಹಾಗೂ ರಾಗಿ ಹಿಟ್ಟು, ಬೆಲ್ಲ ಮತ್ತು ಕೊಬ್ಬರಿ ಇರುವುದರಿಂದ ಅನೇಕ ಪೋಷಕಾಂಶಗಳು ಇದರ ಮೂಲಕ ದೇಹ ಸೇರುತ್ತದೆ. ಈ ರೀತಿ ಇನ್ನು ಮುಂದೆ ನೀವೇ ನಿಮ್ಮ ಮನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ರೆಡಿ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment