ಬ್ರಾಹ್ಮಿ ಮುಹೂರ್ತ ಎಂದರೆ ಬೆಳಗ್ಗೆ ಸೂರ್ಯೋದಯ ಆಗುವ ಹಿಂದಿನ 96 ನಿಮಿಷಗಳು ಮತ್ತು ಸೂರ್ಯೋದಯದ ನಂತರದ 48 ನಿಮಿಷಗಳನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತೇವೆ. ಈ ಸಮಯದಲ್ಲಿ ಏಳುವುದರಿಂದ ಎಷ್ಟೆಲ್ಲಾ ಅನುಕೂಲತೆಗಳಿವೆ ಎನ್ನುವುದನ್ನು ಬಹುಶಃ ಮನುಷ್ಯನೊಬ್ಬರಿಗೆ ವಿವರಿಸಬೇಕು ಎನಿಸುತ್ತದೆ.
ಯಾಕೆಂದರೆ ಈ ಪ್ರಕೃತಿಯಲ್ಲಿರುವ ಸಕಲ ಚರಾಚರಗಳು ಕೂಡ ಪ್ರಕೃತಿಗೆ ಹೊಂದಿಕೊಂಡು ಬದುಕುತ್ತವೆ. ಕೆಲವು ಬೆರಳೆಣಿಕೆಯಷ್ಟು ಜೀವಿಗಳಿಗೆ ಭಗವಂತನ ಸೃಷ್ಟಿಯೇ ಈ ರೀತಿ ವಿರುದ್ಧವಾಗಿರಬಹುದು ಅದನ್ನು ಹೊರತುಪಡಿಸಿ ಉಳಿದಲ್ಲವೂ ಪ್ರಕೃತಿದತ್ತವಾಗಿಯೇ ನಡೆಯುತ್ತವೆ.
ಪ್ರಾಣಿಪಕ್ಷಿಗಳು, ಸಂಧಿ-ಸರೀಸೃಪಗಳು ಎಲ್ಲವೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಳ್ಳುತ್ತವೆ ಆದರೆ ಮನುಷ್ಯ ಮಾತ್ರ ಬ್ರಾಹ್ಮಿ ಮುಹೂರ್ತ ಮಾತ್ರವಲ್ಲದೆ, ಸೂರ್ಯ ಹುಟ್ಟುವ ಸಮಯ ದಾಟಿ, ಮನುಷ್ಯ ಎದ್ದೇಳಬೇಕಾದ ಸಮಯ ಆದರೂ ಏಳದೇ ಅದನ್ನು ಬಿಟ್ಟು ರಾಕ್ಷಸರು ಏಳುವ ಸಮಯಕ್ಕೂ ಕೂಡ ಹಾಸಿಗೆ ಬಿಟ್ಟು ಏಳಲಾರ.
ಇಂತಹ ದುರಭ್ಯಾಸ ಬಿಟ್ಟು ಮನುಷ್ಯ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಆತನ ಅಂತಃಪ್ರಜ್ಞೆ ಜಾಗೃತವಾಗುತ್ತದೆ ಆತನಿಗೆ ಅತೀಂದ್ರಿಯ ಶಕ್ತಿ ಬರುತ್ತದೆ, ಈ ಸಮಯದಲ್ಲಿ ಎದ್ದು ಆತ ತನ್ನ ದಿನ ಶುರು ಮಾಡುವುದರಿಂದ ಆಟ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ.
ನಾವು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರು ಕೂಡ ಬೆಳಗ್ಗೆ 8 ಕ್ಕೆ ಏಳುತ್ತಿರುವವರು, 5ಕ್ಕೆ ಏಳಲು ಶುರು ಮಾಡಿದರೆ ದಿನದಲ್ಲಿ 3 ಗಂಟೆ ಉಳಿತಾಯ ಮಾಡಿದ ರೀತಿ ಆಗುತ್ತದೆ. ಈ ಪ್ರಕಾರ ತಿಂಗಳಿಗೆ 90 ಗಂಟೆಗಳು ಹೆಚ್ಚಿಗೆ ಸಿಕ್ಕಿದ ರೀತಿ ಆಗುತ್ತದೆ ಇದರಿಂದ ತಿಂಗಳಿಗೆ 3-4 ದಿನ ಹೆಚ್ಚಿಗೆ ಪಡೆದ ರೀತಿ ಆಯಿತು.
ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಆತನ ಎಲ್ಲಾ ಕೆಲಸ ಕಾರ್ಯದಲ್ಲೂ ಅಭಿವೃದ್ಧಿ ಆಗುವುದು ಗ್ಯಾರಂಟಿ ಅಲ್ಲವೇ ವಿದ್ಯಾರ್ಥಿಗಳಿಗೆ ತಿಂಗಳಿಗೆ 90 ಗಂಟೆಗಳು ಹೆಚ್ಚಿಗೆ ಓದಲು ಅವಕಾಶ ಸಿಕ್ಕಿದರೆ ಎಷ್ಟು ಒಳ್ಳೆಯದಲ್ಲವೇ ಅಲ್ಲದೆ ಬ್ರಾಹ್ಮಿ ಮುಹೂರ್ತದಲ್ಲಿ ವಾತಾವರಣ ಸಕರಾತ್ಮಕವಾಗಿರುವುದರಿಂದ ಪ್ರಶಾಂತವಾಗಿರುವುದರಿಂದ ಓದಿರುವ ವಿದ್ಯೆ ಚೆನ್ನಾಗಿ ಅರ್ಥವಾಗುತ್ತದೆ ಹಾಗಾಗಿ ಅಧ್ಯಯನಕ್ಕೆ ಈ ಸಮಯ ಪ್ರಶಸ್ತ್ಯ ಎಂದು ಹೇಳುತ್ತಾರೆ.
ಹಾಗೆಯೇ ಯೋಗ, ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಪೂಜೆ ಇಂತಹ ಕಾರ್ಯಗಳನ್ನು ಈ ಸಮಯದಲ್ಲಿ ಕೈಗೊಳ್ಳುವುದರಿಂದ ಕೂಡ ಮನಸ್ಸಿನ ಆರೋಗ್ಯವೃದ್ಧಿಯಾಗುತ್ತದೆ. ಎಲ್ಲ ಧರ್ಮಗಳಲ್ಲೂ ಕೂಡ ಪೂಜೆಗಳು ಪ್ರಾರ್ಥನೆಗಳು ಬೆಳಗಿನ ಸಮಯದಲ್ಲಿಯೇ ಆರಂಭವಾಗಬೇಕು ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ಎದ್ದು ದೈವತಾರಾಧನೆ ಮಾಡಿದರೆ ಮನುಷ್ಯ ಆತ್ಮಶುದ್ಧಿ ಆಗುತ್ತದೆ,ಮನಸ್ಸಿನ ಆರೋಗ್ಯವು ಉತ್ತಮವಾಗಿ ದಿನಪೂರ್ತಿ ಚಟುವಟಿಕೆಯಿಂದ ಇರುತ್ತಾರೆ. ಈ ಮುಹೂರ್ತದಲ್ಲಿ ಮಾಡುವ ಪೂಜೆಗಳು ಹೆಚ್ಚು ಫಲ ಕೊಡುತ್ತವೆ.
ಈ ಸಮಯದಲ್ಲಿ ದೇವರ ಧ್ಯಾನ ಮಾಡುವುದು ಧರ್ಮ ಗ್ರಂಥಗಳನ್ನು ಓದುವುದು ಈ ರೀತಿಯಾಗಿ ನಾವು ಭೂಮಿಗೆ ಬರಲು ಕಾರಣ ಏನು ಎನ್ನುವ ಅಂತ ಪದ್ಮ ಅರಿತುಕೊಳ್ಳಲು ಅಧ್ಯಯನ ಕೈಗೊಳ್ಳುವುದರಿಂದ ಆತ್ಮ ಸಂತೋಷ ಗೊಳ್ಳುತ್ತದೆ. ಈ ಸಮಯದಲ್ಲಿ ಏಳುವ ವ್ಯಕ್ತಿಗೆ ಪ್ರಕೃತಿದತ್ತವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಾಗಿ ದೇಹದ ಆರೋಗ್ಯ ಉತ್ತಮವಾಗುತ್ತದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಚುರುಕಾಗುವುದು ಕೂಡ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿಯೇ ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳು ಕೂಡ ಈ ಸಮಯದಲ್ಲಿ ಏಳುವವರಿಗೆ ನಿವಾರಣೆಯಾಗುತ್ತದೆ ಎಂದು ಸೈನ್ಸ್ ಮತ್ತು ಆಯುರ್ವೇದ ಹೇಳುತ್ತದೆ.
ತಡವಾಗಿ ಮಲಗುವುದು ಹಾಗೂ ತಡವಾಗಿ ಏಳುವುದು ಆಯುರ್ವೇದ ಹೇಳುವ ಮೂಲಕ ದೇಹದ ಆನೇಕ ವಿಕಾರಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಾವು ಸಹ ಇನ್ನು ಮುಂದೆ ಆದರೆ ಪ್ರಕೃತಿದತ್ತವಾಗಿ ಬದುಕೋಣ. ಈ ರೀತಿ ಅಭ್ಯಾಸವನ್ನು ನೀವು ಕೇವಲ 21 ದಿನಗಳ ವರೆಗೆ ಮಾಡಿ ನೋಡಿ 22ನೇ ದಿನ ನೀವೇ ಆಚಾನಕ್ಕಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತೀರಿ ಮತ್ತು ನಿಮಗೆ ಇದು ಅಭ್ಯಾಸವಾಗಿ ಬಿಡುತ್ತದೆ.
ಇದರ ಫಲಿತಾಂಶ ಅನುಭವಿಸಿದ ನೀವು ಇನ್ನೆಂದು ತಡವಾಗಿ ಏಳುವುದಿಲ್ಲ. ಆದರೆ ಬೆಳಗ್ಗೆ ಎದ್ದ ಕೂಡಲೇ ಈ ಮೇಲೆ ತಿಳಿಸಿದ ಉತ್ತಮ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುತ್ತಾ ಕುಳಿತರೆ ನೀವು ಎದ್ದಿದ್ದು ಕೂಡ ವ್ಯರ್ಥವಾಗುತ್ತದೆ ಯಶಸ್ವಿ ಮನುಷ್ಯರ ಸಕ್ಸಸ್ ಸೀಕ್ರೆಟ್ ಕೂಡ ಇದೆ ಆಗಿದೆ.
ನೀವು ಯಾವುದೇ ಸ್ಟಾರ್ ಆಟಗಾರರು ಅಥವಾ ಸಿನಿಮಾ ಸ್ಟಾರ್ ಗಳನ್ನು ದಿನಚರ್ಯ ನೋಡಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಖಾಡದಲ್ಲಿರುತ್ತಾರೆ. ಮನೆಯಲ್ಲಿ ಮಲಗಿರುವವರ ಬಳಿಗೆ ಅವಕಾಶಗಳು ಹೋಗುವುದಿಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಅಭ್ಯಾಸ ರೂಢಿಸಿಕೊಂಡು ಸಾಧಕರಾಗೋಣ ಏನಂತೀರಿ??