
ವಿಷ್ಣು ಅಲಂಕಾರ ಪ್ರಿಯ ಹಾಗೂ ಶಿವನು ಅಭಿಷೇಕ ಪ್ರಿಯ ಎನ್ನುವುದು ಲೋಕೋಕ್ತಿ. ವಿಷ್ಣುವಿಗೆ ಎಷ್ಟು ಅಲಂಕಾರ ಮಾಡಿದರು ಸುಂದರ ಮತ್ತು ಅಲಂಕಾರದಿಂದಲೇ ವಿಷ್ಣು ಪ್ರಸನ್ನನಾಗುವುದು ಮತ್ತು ಶಿವ ಇದಕ್ಕೆ ವಿರುದ್ಧ ಭೈರಾಗಿಯಾದ ಹರನಿಗೆ ಜಟೆಯಂತಿರುವ ಕೂದಲು, ಹುಲಿಯ ಚರ್ಮ, ಮೈತುಂಬ ವಿಭೂತಿ ರುದ್ರಾಕ್ಷಿ ಮಣಿ ಇದೇ ಭೂಷಣ.
ಶಿವನಿಗೆ ಅಭಿಷೇಕವನ್ನು ಭಕ್ತಿಯಿಂದ ಮಾಡಬೇಕು ಈ ರೀತಿ ಮಾಡಿದ ಶಿವಪೂಜೆಗೆ ಬಹಳ ಶಕ್ತಿ ಇದೆ. ಸಕಲ ಜೀವದಲ್ಲಿಯೂ ಶಿವನಿದ್ದಾನೆ ಎನ್ನುವುದನ್ನು ನಂಬುವ ಪದ್ಧತಿ ನಮ್ಮದು ಎಲ್ಲಾ ನರರಲ್ಲೂ ಹರನನ್ನೇ ಕಾಣಬೇಕು ಎನ್ನುವುದು ಶಿವ ತತ್ವ. ಶಿವ ಅಭಿಷೇಕ ಮಾಡುವಾಗ ಆಡಂಬರಕ್ಕಿಂತ ಭಕ್ತಿಯೇ ಮುಖ್ಯ.
ದುಬಾರಿ ದ್ರವ್ಯಗಳ ಬಳಕೆಯನ್ನು ಗಂಗಾಧರ ಕೇಳುವುದಿಲ್ಲ, ನಿಜಭಕ್ತಿಯಷ್ಟೇ ಇಲ್ಲಿ ಕೆಲಸ ಮಾಡುವುದು ಅದೇ ಶ್ರೇಷ್ಠ. ರುದ್ರನಾದ ಈ ಮಹಾಕಾಳೇಶ್ವರ ಅಲಂಕಾರ ಬಯಸುವುದಿಲ್ಲ, ಆದರೆ ಅಭಿಷೇಕಗಳಿಂದ ಮಾಡುವ ಪೂಜೆ ಬೇಗ ಸಲ್ಲುತ್ತದೆ.
ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!
ಅಭಿಷೇಕಗಳಿಂದ ಶಿವನನ್ನು ಬಹಳ ಬೇಗ ಒಲಿಸಿಕೊಳ್ಳಬಹುದು ಇಷ್ಟಾರ್ಥಗಳು ಸಿದ್ಧಿ ಆಗುತ್ತವೆ ಎಂದು ಹೇಳಲಾಗುತ್ತದೆ. ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ ಯಾವ ವಸ್ತುವಿನಿಂದ ಅಭಿಷೇಕ ಮಾಡುವುದರಿಂದ ಯಾವ ಫಲ ದೊರಕುತ್ತದೆ ಎನ್ನುವುದನ್ನು ಎಲ್ಲ ಶಿವಭಕ್ತರಿಗಾಗಿ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
* ಗರಿಕೆಯ ನೀರಿನಿಂದ ಶಿವಾಭಿಷೇಕ ಮಾಡುವುದರಿಂದ ಬದುಕಿನ ತೊಂದರೆಗಳೆಲ್ಲವೂ ನಿವಾರಣೆಯಾಗುತ್ತದೆ, ಕಳೆದುಕೊಂಡ ಹಣವನ್ನು ಮರಳಿ ಪಡೆದುಕೊಳ್ಳಬಹುದು.
* ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅ’ಪ’ಮೃ’ತ್ಯು ಭಯ ನಿವಾರಣೆಯಾಗುತ್ತದೆ
* ಹಸುವಿನ ಹಾಲಿನಿಂದ ಮಾಡಿದ ಅಭಿಷೇಕವು ಸಕಲ ಸೌಕರ್ಯಗಳನ್ನು ಕೊಡುತ್ತದೆ
* ಮೊಸರಿನಿಂದ ಮಾಡಿದ ಅಭಿಷೇಕವು ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ
* ಹಸುವಿನ ತುಪ್ಪದಿಂದ ಅಭಿಷೇಕ ಮಾಡಿದರೆ ಸಂಪತ್ತು ಸಿಗುತ್ತದೆ
* ಕಬ್ಬಿನ ರಸದಿಂದ ಅಭಿಷೇಕ ಮಾಡಿದರೆ ಸಂಪತ್ತು ಅಧಿಕವಾಗುತ್ತದೆ
* ಮೃದುವಾದ ಸಕ್ಕರೆಯಿಂದ ಅಭಿಷೇಕ ಮಾಡಿದರೆ ದುಃ’ಖವು ನಾಶವಾಗುತ್ತದೆ
* ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ನೀರಿನಿಂದ ಅಭಿಷೇಕ ಮಾಡಿದರೆ ಆನಂದ ವೃದ್ಧಿಯಾಗುತ್ತದೆ.
ಈ ಸುದ್ದಿ ಓದಿ:- BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…
* ಜೇನುತುಪ್ಪದಿಂದ ಅಭಿಷೇಕ ಮಾಡಿದರೆ ದೇಹ ಹಾಗೂ ಮಾನಸಿಕ ಅನಾರೋಗ್ಯ ಹಸನಾಗುತ್ತದೆ, ದೇಹದ ಚೈತನ್ಯ ಹೆಚ್ಚಾಗುತ್ತದೆ
* ಎಳನೀರಿನಿಂದ ಮಾಡುವ ಅಭಿಷೇಕದಿಂದ ಸಕಲ ಸುಖ ಸಂಪತ್ತು ದೊರೆಯುತ್ತದೆ
* ರುದ್ರಾಕ್ಷಿ ನೀರಿನ ಜಲಾಭಿಷೇಕವು ಸಕಲ ಸಂಪತ್ತನ್ನು ನೀಡುತ್ತದೆ
* ಭಸ್ಮದಿಂದ ಅಭಿಷೇಕ ಮಾಡಿದರೆ ಹಿಂದಿನ ಜನ್ಮದ ಪಾಪ ಕರ್ಮವೆಲ್ಲಾ ಪರಿಹಾರವಾಗುತ್ತದೆ
* ಗಂದೋಧಕದಿಂದ ಅಭಿಷೇಕ ಮಾಡಿದರೆ ಉತ್ತಮವಾದ ಪುತ್ರ ಸಂತಾನವನ್ನು ಪಡೆಯುತ್ತಾರೆ
* ಚಿನ್ನದ ನೀರಿನ ಅಭಿಷೇಕ ಕಡುಬಡತನವನ್ನು ದೂರ ಮಾಡುತ್ತದೆ
* ಜಲಾಭಿಷೇಕ ಮಾಡುವುದರಿಂದ ಶಿವನ ಅಭಯ ಸಿಗುತ್ತದೆ
* ಅನ್ನದಿಂದ ಅಭಿಷೇಕ ಮಾಡಿದರೆ ದೀರ್ಘಾಯುಷ್ಯ ಹಾಗೂ ಮೋಕ್ಷ ಪ್ರಾಪ್ತಿ
* ಮೊಸರಿನೊಂದಿಗೆ ಅನ್ನವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಿ ನಂತರ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ, ಈ ಪ್ರಸಾದ ದೊರೆತರೆ ಪುಣ್ಯಪ್ರಾಪ್ತಿ
* ದ್ರಾಕ್ಷಾ ರಸದಿಂದ ಅಭಿಷೇಕ ಮಾಡಿದರೆ ಶಿವನ ಕೃಪೆಯಿಂದ ಸಕಲ ಕಾರ್ಯದಲ್ಲೂ ಜಯ
* ಖರ್ಜೂರದ ರಸದಿಂದ ಅಭಿಷೇಕ ಮಾಡುವುದರಿಂದ ಶತ್ರು ಕಾಟದಿಂದ ಮುಕ್ತಿ
* ಕಸ್ತೂರಿ ಮಿಶ್ರಿತ ಹಾಲು ಅಥವಾ ನೀರಿನಿಂದ ಅಭಿಷೇಕ ಮಾಡುವುದರಿಂದ ಕೀರ್ತಿ ಪ್ರಾಪ್ತಿಯಾಗುತ್ತದೆ
* ನವರತ್ನಗಳ ನೀರಿನಿಂದ ಅಭಿಷೇಕ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ದನ ಕನಕಗಳ ಲಾಭ ಉಂಟಾಗುತ್ತದೆ
* ಮಾವಿನ ಹಣ್ಣಿನ ರಸದಿಂದ ಅಭಿಷೇಕ ಮಾಡಿದರೆ ಧೀರ್ಘಕಾಲದ ಖಾಯಿಲೆಗಳಿಂದ ಮುಕ್ತಿ.
ಈ ಸುದ್ದಿ ಓದಿ:-ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!
* ಇವುಗಳಿಂದ ಅಭಿಷೇಕ ಮಾಡಲು ಸಾಧ್ಯವಿಲ್ಲದೆ ಇದ್ದವರು ಪಂಚಾಮೃತದಿಂದ ಅಭಿಷೇಕ ಮಾಡಿದರು ಸಾಕು ಅಥವಾ ತಮ್ಮ ಬಳಿ ಇರುವ ದ್ರವ್ಯಗಳಿಂದಲೇ ಪೂಜೆ ಮಾಡಿದರು ಭಕ್ತಿಯಿಂದ ಶಿವನಿಗೆ ತಮ್ಮ ಶಕ್ತಿ ಅನುಸಾರ ಸಾಧ್ಯವಾಗಿದ್ದನ್ನೇ ಅರ್ಪಿಸುವುದರಿಂದಲೂ ಕೂಡ ಶಿವನು ಪ್ರಸನ್ನರಾಗುತ್ತಾರೆ.