ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಅದರಲ್ಲೂ ಪ್ರಸ್ತುತವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Government Gyaranty Scheme) ಚುನಾವಣೆ ಪೂರ್ವವಾಗಿ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯ ಖಾತೆಗೆ (HOF Women) 2,000 ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯು ಮೂಲಕ BPL & AAY ಕಾರ್ಡ್ ದಾರರ ಪ್ರತಿ ಸದಸ್ಯನ ಹೆಚ್ಚುವರಿ ಅಕ್ಕಿಯ 5Kg ಅಕ್ಕಿ ಹಣ ರೂ.170 ಕೂಡ ಕುಟುಂಬದ ಮುಖ್ಯಸ್ಥೆ ಖಾತೆಗೆ ವರ್ಗಾವಣೆ ಆಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 90% ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಅನುದಾನ ದೊರೆಯುತ್ತಿದೆ. ಈ ಯೋಜನೆಯ ಹಣವು DBT ಮೂಲಕ ಫಲಾನುಭವಿಯ ಖಾತೆಗಳಿಗೆ ವರ್ಗಾವಣೆ ಆಗುತ್ತಿರುವುದರಿಂದ ಕೆಲವು ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಲು ಸಮಸ್ಯೆಯಾಗುತ್ತಿದೆ.
ಹಣ ಪಡೆಯಲಾಗದ ಮಹಿಳೆಯರಿಗೆ ಈ ಬಗ್ಗೆ ಇರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಶಿಬಿರಗಳನ್ನು ನಡೆಸಿ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.
ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿ ಮಹಿಳಾ ಹಿರಿಯ ಸದಸ್ಯರ ಹೆಸರೇ ಇರುವುದೇ ಇರುವುದು, ಕೊಟ್ಟಿರುವ ದಾಖಲೆಗಳಲ್ಲಿ ಮಾಹಿತಿ ಒಂದೇ ರೀತಿ ಇಲ್ಲದೆ ಇರುವುದು, ಕೆಲ ತಾಂತ್ರಿಕ ಸಮಸ್ಯೆಗಳು ಇತ್ಯಾದಿ ಕಾರಣದಿಂದ ಹಣ ಬರಲು ಸಮಸ್ಯೆಯಾಗಿದೆ.
ಈ ಸಮಸ್ಯೆಗಳಿಂದ ಹಣ ಪಡೆಯಲು ಆಗದೆ ಇದ್ದವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕೊಟ್ಟು ಮತ್ತು ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿ ನಂತರ ಎಲ್ಲಾ ಕಂತುಗಳ ಹಣವನ್ನು ಕೂಡ ಒಟ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸಮಸ್ಯೆ ಪರಿಹಾರ ಶಿಬಿರಗಳಲ್ಲಿ ಪಾಲ್ಗೊಂಡ ಅನೇಕರ ಸಮಸ್ಯೆ ಪರಿಹಾರವಾಗಿದೆ.
ಆದರೂ ಇಂದು ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ರೇಷನ್ ಕಾರ್ಡ್ ಕುರಿತು ಹೊರ ಬಿದ್ದಿದೆ. ಇದನ್ನು ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವ ನಾಗರಿಕನು ಕೂಡ ತಿಳಿದುಕೊಂಡಿರಬೇಕು. ಸರ್ಕಾರದ ಈ ನಿಯಮದ ಪ್ರಕಾರವಾಗಿ ನಿಮ್ಮ ರೇಷನ್ ಕಾರ್ಡ್ ಇಲ್ಲದೆ ಇದ್ದಲ್ಲಿ ಮುಂದಿನ ತಿಂಗಳದಿಂದ ಗೃಹಲಕ್ಷ್ಮಿ ಹಣವಾಗಲಿ ಅನ್ನ ಭಾಗ್ಯ ಹಣವಾಗಲಿ ಸಿಗುವುದಿಲ್ಲ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ಆರು ತಿಂಗಳಿಂದ ಯಾರು ಪಡಿತರವನ್ನು ಪಡೆದಿಲ್ಲ ಅಂತಹವರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು ನಿರ್ಧರಿಸಿದೆ. ಈ ರೀತಿ ರೇಷನ್ ಕಾರ್ಡ್ ರದ್ದಾದರೆ ರೇಷನ್ ಕಾರ್ಡ್ ಆಧಾರಿತವಾದ ಯಾವ ಸೌಲಭ್ಯವು ಸಿಗುವುದಿಲ್ಲ.
ಹಾಗಾಗಿ ಕೂಡಲೇ ನಿಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬಯೋಮೆಟ್ರಿಕ್ ಕೊಟ್ಟು ರೇಷನ್ ಪಡೆಯಿರಿ ಮತ್ತು ಅದೇ ರೀತಿ ಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರು ಇ-ಕೆವೈಸಿ ಅಪ್ಡೇಟ್ ಕಡ್ಡಾಯಗೊಳಿಸಿದೆ. ಇದನ್ನು ಪೂರೈಸದ ಸದಸ್ಯನ ಹೆಚ್ಚುವರಿ ಅಕ್ಕಿ ಹಣ ಬರುವುದಿಲ್ಲ ಆದ್ದರಿಂದ ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.