.
ಭಾರತದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ, ಅದರಲ್ಲೂ ಶಿವಭಕ್ತರಿಗೆ ಇದು ಬಹಳ ದೊಡ್ಡ ಹಬ್ಬ. ಸಾಮಾನ್ಯವಾಗಿ ಹಬ್ಬದ ಆಚರಣೆ ಭಾರತದದ್ಯಾಂತ ಒಂದೇ ರೀತಿ ಇರುತ್ತದೆ. ಈ ಹಬ್ಬದಂದು ಉಪವಾಸ ಇದ್ದು ಶಿವಪೂಜೆ ಮಾಡಿ ಶಿವನ ಧ್ಯಾನದಲ್ಲಿ ರಾತ್ರಿ ಪೂರ್ತಿ ಜಾಗರಣೆ ಇರುತ್ತಾರೆ ಈ ದಿನ ಶಿವನಿಗಾಗಿ ಮೀಸಲು ಮತ್ತು ಶಿವನೆಂದರೆ ಬಹಳ ಸರಳ.
ಶುದ್ಧವಾದ ಜಲದಿಂದ ಅಭಿಷೇಕ ಮಾಡಿ ನಿಮ್ಮ ಮನೆಯಲ್ಲಿ ಸಿಗುವ ತುಂಬೆ ಪತ್ರೆ, ಬಿಲ್ವ ಪತ್ರೆ ಅರ್ಪಿಸಿ ಭಕ್ತಿಯಿಂದ ಪಂಚಾಕ್ಷರಿ ಮಂತ್ರ ಪಠಿಸಿದರೆ ಸಾಕು ಆತನ ಅನುಗ್ರಹ ಸಿಗುತ್ತದೆ. ಆದರೆ ಈ ದಿನದಂದು ನೀವು ಕೆಲವು ತಪ್ಪುಗಳನ್ನು ಮಾತ್ರ ಮಾಡಬಾರದು, ಇದರಿಂದ ಮಹಾದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾದರೆ ಶಿವರಾತ್ರಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು ಏನು ಎಂದು ಪ್ರತಿಯೊಬ್ಬರೂ ತಿಳಿದುಕೊಂಡು ಪಾಲಿಸಿ ಶಿವನ ಕೃಪೆಗೆ ಪಾತ್ರರಾಗಿ.
ಮಹಾಶಿವರಾತ್ರಿ ದಿನ ಈ ರೀತಿ ಆಚರಣೆ ಮಾಡಿ
* ಮಹಾಶಿವರಾತ್ರಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಾಡಿಟ್ಟುಕೊಂಡು ದೇವರಿಗೆ ಪೂಜೆ ಮಾಡಬೇಕು
* ಈ ದಿನ ಶುಭನಿಗಾಗಿ ಮೀಸಲು ಆದರೆ ಪೂಜೆ ಮಾಡುವ ಮೊದಲು ಪ್ರಥಮ ಪೂಜೆ ವಂದಿತನಾದ ಗಣೇಶನನ್ನು ಮೊದಲು ಪೂಜಿಸಿ ನಂತರ ಶಿವನ ಪೂಜೆ ಮಾಡಬೇಕು. ಇದು ಈಶ್ವರನ ಆಜ್ಞೆ ಕೂಡ
* ಶಿವರಾತ್ರಿ ದಿನ ಕೆಲವರು ದಿನಪೂರ್ತಿ ನೀರು ಕೂಡ ಕುಡಿಯದೆ ಉಪವಾಸ ಇರುತ್ತಾರೆ.
ಈ ಸುದ್ದಿ ನೋಡಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಆದರೆ ಈ ರೀತಿ ಇರಲು ಆಗದೆ ಇದ್ದವರು ಹಾಲು ಹಾಲಿನ ಉತ್ಪನ್ನಗಳು ಪಾಯಸ ಜೋಳ ಹಣ್ಣುಗಳು ಇವುಗಳನ್ನು ಸೇವಿಸಬಹುದು ಆದರೆ ಸೂರ್ಯಸ್ತದ ನಂತರ ಜಾಗರಣೆ ಸಮಯದಲ್ಲಿ ಮಾತ್ರ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ಮನೆಯಲ್ಲಿ ಶಿವಲಿಂಗ ಇದ್ದರೆ ಶಿವಲಿಂಗಕ್ಕೆ ಅಭಿಷೇಕಗಳನ್ನು ಮಾಡಿ ಪೂಜೆ ಮಾಡಬಹುದು ಒಂದು ವೇಳೆ ಇಲ್ಲದೆ ಇದ್ದರೆ ಶಿವನ ದೇವಾಲಯಗಳಿಗೆ ಅಭಿಷೇಕ ಮಾಡುವ ವಸ್ತುಗಳನ್ನು ಮತ್ತು ಅಲಂಕಾರ ಮಾಡಲು ಪುಷ್ಪಗಳನ್ನು ಪೂಜಾ ಸಾಮಗ್ರಿಗಳನ್ನು ಅರ್ಪಿಸಬಹುದು.
* ಮನೆಯಲ್ಲಿ ಶಿವಪೂಜೆ ಮಾಡುವವರು ಶಿವನಿಗೆ ಅಭಿಷೇಕ ಮಾಡಿ ಗಂಧ, ಚಂದನ, ಭಸ್ಮ ಲೇಪನ ಮಾಡಿ ಪೂಜಿಸಬೇಕು.
* ಈ ದಿನ ಸಾಧ್ಯವಾದಷ್ಟು ಶಿವನ ಮಂತ್ರಗಳು ಪಠಿಸಿ, ಶಿವನ ಮಂತ್ರಗಳಲ್ಲಿ ವಿಶೇಷವಾದ ಶಕ್ತಿಗಳು ಇವೆ ಮತ್ತು ಇವುಗಳ ಜೊತೆಗೆ ತಪ್ಪದೆ 108 ಬಾರಿ ನೀವು ಮನೆಯಲ್ಲಿಯೇ ಕುಳಿತು ಅಥವಾ ದೇವಸ್ಥಾನದಲ್ಲಿ ಕುಳಿತು ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು.
ಈ ದಿನ ಮಾಡಬಾರದ ಸಂಗತಿಗಳು:-
* ಈ ದಿನ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆ ಧರಿಸಬಾರದು ಯಾಕೆಂದರೆ ಶಿವನಿಗೆ ಕಪ್ಪು ಬಟ್ಟೆಗಳು ಎಂದರೆ ಇಷ್ಟ ಇಲ್ಲ
* ಶಿವನಿಗೆ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಅರಿಶಿಣವನ್ನು ಹಚ್ಚಬಾರದು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ
* ಶಿವನಿಗೆ ಕೆಂಪು ಬಣ್ಣದ ಪುಷ್ಪಗಳು ಇಷ್ಟ ಇಲ್ಲ, ಆದ ಕಾರಣ ಈ ದಿನ ಶಿವನಿಗೆ ಪೂಜೆ ಮಾಡುವಾಗ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಬೇಡಿ
* ತುಳಸಿ ವಿಷ್ಣುವಿಗೆ ಪ್ರಿಯ, ತಾಯಿ ಮಹಾಲಕ್ಷ್ಮಿ ಅನುರೂಪ. ಶಿವನೇ ಮೆಚ್ಚಿ ತಾಯಿ ಲಕ್ಷ್ಮಿಯ ಭಕ್ತಿಗೆ ಮೆಚ್ಚಿ ವರ ನೀಡಿರುವುದರಿಂದ ತುಳಸಿಯನ್ನು ಕೂಡ ಶಿವಪೂಜೆಗೆ ಅರ್ಪಿಸಬಾರದು
* ಪುರಾಣಗಳ ಪ್ರಕಾರ ಶಿವಲಿಂಗಕ್ಕೆ ಪೂರ್ತಿಯಾಗಿ ಪ್ರದಕ್ಷಿಣೆ ಮಾಡಬಾರದು.
* ಶಿವನನ್ನು ಬಿಲ್ವಪತ್ರೆಯ ಎಲೆಗಳಿಂದ ಪೂಜಿಸಬೇಕು. ಬಿಲ್ವಪತ್ರೆಯನ್ನು ಮರದಿಂದ ಬಿಡಿಸಿ 48 ದಿನಗಳಾಗಿದ್ದರೂ ಅರ್ಪಿಸಬಹುದು ಆದರೆ ಇದು ಹುಳುಕಾಗಿರಬಾರದು, ಇದಕ್ಕೆ ಹಾನಿಯಾಗಿರಬಾರದು.
ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!
* ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಶಿವರಾತ್ರಿ ದಿನದಂದು ಮಾಂಸಹಾರ ಮತ್ತು ಮಧ್ಯಸೇವನೆಯನ್ನು ಮಾಡಲೇಬಾರದು.
* ಬಹಳ ತಡವಾಗಿ ಪೂಜೆ ಮಾಡಬಾರದು
* ಪ್ಲಾಸ್ಟಿಕ್ ಹಾಗೂ ಸ್ಟೀಲ್ ಪಾತ್ರೆಗಳನ್ನು ಶಿವಪೂಜೆಗೆ ಬಳಸಬಾರದು. ಹಿತ್ತಾಳೆ ಅಥವಾ ತಾಮ್ರದ ವಸ್ತುಗಳನ್ನು ಪೂಜೆಗೆ ಬಳಸಬೇಕು.