ಸಾಮಾನ್ಯವಾಗಿ ಜನರು ಮಾತನಾಡುವಾಗ ದೇವರು ನಿನ್ನ ಕಡೆಯಲ್ಲಿ ಇದ್ದಾನೆ, ದೇವರು ನಿನ್ನ ಜೊತೆಯಿದ್ದಾನೆ, ನಿಮ್ಮ ಮನೆಗೆ ಬಂದರೆ ದೇವಸ್ಥಾನಕ್ಕೆ ಬಂದ ರೀತಿ ಆಗುತ್ತದೆ ಎಂದು ಹೇಳಿರುವುದನ್ನು ಕೇಳಿರಬಹುದು.
ಈ ರೀತಿ ಸಾಧ್ಯವೇ ಎಂದರೆ ಹೌದು ಯಾವ ಮನೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ದೇವರನ್ನು ಪೂಜಿಸುತ್ತಾರೆ ಮತ್ತು ಧರ್ಮ ಮಾರ್ಗವಾಗಿ ನಡೆದು ದೈವ ಗುಣಗಳನ್ನು ರೂಢಿಸಿಕೊಂಡು ಬದುಕುತ್ತಿರುತ್ತಾರೆ ಅಂತಹವರ ಮನೆಯಲ್ಲಿ ದೇವರು ನೆನೆಸಿರುತ್ತಾನೆ. ಕೆಲವರಿಗೆ ಅದು ಅನುಭವಕ್ಕೆ ಬಂದಿರುತ್ತದೆ.
ಇನ್ನು ಕೆಲವರಿಗೆ ತಿಳಿದಿರುವುದಿಲ್ಲ ಹಾಗಾಗಿ ಇದು ಈ ಅಂಕಣದಲ್ಲಿ ದೇವರು ನಮ್ಮ ಜೊತೆ ಇದ್ದಾರೆ ಅಥವಾ ನಮ್ಮ ಮನೆಯಲ್ಲಿ ಇದ್ದಾರೆ ಎನ್ನುವುದನ್ನು ಯಾವ ಸಂಕೇತಗಳ ಮೂಲಕ ತಿಳಿಸುತ್ತಾರೆ ಎನ್ನುವುದನ್ನು ಹೇಳುತ್ತಿದ್ದೇವೆ.
ಈ ಸುದ್ದಿ ಓದಿ:- ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!
* ನೀವು ಪ್ರತಿದಿನ ಭ್ರಾಹ್ಮಿಮುಹೂರ್ತದಲ್ಲಿ ಎಚ್ಚರಗೊಳ್ಳುವುದು, ಎಚ್ಚರವಾಗುವ ಮುನ್ನ ಈ ಸಮಯದಲ್ಲಿ ಬೀಳುವ ಕನಸಿನಲ್ಲಿ ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದೇವಸ್ಥಾನಗಳಲ್ಲಿ ದೇವರ ಸೇವೆ ಮಾಡುತ್ತಿರುವ ರೀತಿ ದೇವರ ಮಂತ್ರಗಳನ್ನು ಪಠಿಸುತ್ತಿರುವ ರೀತಿ ದೇವಸ್ಥಾನದಲ್ಲಿ ಇರುವ ರೀತಿ ಕನಸು ಕಂಡರೆ ದೇವರು ನಿಮ್ಮ ಜೊತೆ ನಿಮ್ಮ ಮನೆಯಲ್ಲಿ ನೆಲೆಸಿದ್ದಾರೆ ಎಂದು ಅರ್ಥ.
* ಕೆಲವರು ಭವಿಷ್ಯವನ್ನು ಮೊದಲು ತಿಳಿದು ಆ ಪ್ರಕಾರವಾಗಿ ಎಚ್ಚರಿಕೆ ಕೊಡುತ್ತಿರುತ್ತಾರೆ. ಅದು ಸಣ್ಣ ವಿಷಯವೇ ಇರಬಹುದು, ದೊಡ್ಡ ವಿಚಾರವೇ ಇರಬಹುದು. ನೀನು ಈ ದಿನ ಈ ಕೆಲಸ ಮಾಡಲು ಹೋಗಬೇಡ ನಿನ್ನ ಮೇಲೆ ಗೋಡೆ ಬೀಳಲಿದೆ ಪಕ್ಕಕ್ಕೆ ಬಾ, ಆ ಮರ ಎರಡು ದಿನಗಳಲ್ಲಿ ಬಿದ್ದು ಹೋಗುತ್ತದೆ. ಈ ರೀತಿ ಹೇಳಿದ್ದು ಆ ಪ್ರಕಾರವಾಗಿ ನಡೆಯುತ್ತಿರುತ್ತದೆ ಇಂಥವರ ಮೇಲೆ ದೇವರ ಆಶೀರ್ವಾದವಿದೆ ದೈವೀ ಶಕ್ತಿ ಪಡೆದಿದ್ದಾರೆ ಎಂದು ಅರ್ಥ.
ಈ ಸುದ್ದಿ ಓದಿ:- ಬಳೆ ಪದ್ಮಾವತಿ ಅಮ್ಮ ಎಷ್ಟು ಶಕ್ತಿಶಾಲಿ ಎಂದರೆ ಇಲ್ಲಿ ಬಳೆ ಹರಕೆ ಮಾಡಿಕೊಂಡರೆ ನಿಮ್ಮ ಇಚ್ಚೆಗಳು 100% ನೆರವೇರುತ್ತದೆ.!
* ಕೆಲವೊಂದು ವಿಚಾರ ನಿಮಗೆ ಬಹಳ ಗೊಂದಲ ಉಂಟುಮಾಡುತ್ತದೆ. ನಾನು ಈ ಮಾತು ಆಡಬೇಕೆ? ಬೇಡವೇ? ನಾನು ಈ ಸ್ಥಳಕ್ಕೆ ಹೋಗಬೇಕೆ? ಬೇಡವೇ? ಎಂದು ಆದರೂ ಅದನ್ನೆಲ್ಲಾ ಮೀರಿ ಅನುಮಾನದಲ್ಲಿ ಆ ಕಾರ್ಯ ಮಾಡಲು ಮುಂದಾದರೂ ಏನಾದರೂ ಅಡಚಣೆಯಾಗಿ ತಡೆದರೆ ಆ ಪ್ರಕಾರವಾಗಿ ನಿಮಗೆ ಆಗಬಹುದಿದ್ದ ಯಾವುದಾದರು ಅನಾಹುತ ತಪ್ಪಿದರೆ ಆಗಲು ನಿಮ್ಮ ಜೊತೆ ಭಗವಂತನಿದ್ದಾನೆ ಎಂದು ಅರ್ಥ.
* ಬಡವರಾಗಿದ್ದರೆ ಕೂಡ ನಿಮಗೆ ಎಲ್ಲೆಡೆ ಗೌರವ ಲಭಿಸುತ್ತದೆ ಎಂದರೆ ನೀವು ಸರಿಯಾದ ದಾರಿಯಲ್ಲಿ ಬದುಕುತ್ತಿರುವುದು ಅದಕ್ಕಾಗಿ ನಿಮ್ಮ ಮೇಲೆ ದೇವರ ಆಶೀರ್ವಾದ ಇರುವುದು ಕಾರಣ
* ಎಷ್ಟೇ ಕಷ್ಟವಿದ್ದರೂ ನೀವು ಜೀವನದಲ್ಲಿ ನಗುತ್ತಿದ್ದರೆ ಮತ್ತು ನಿಮ್ಮ ಸಂಗಾತಿ ಮಕ್ಕಳು ನಿಮಗೆ ಹೊಂದಿಕೊಂಡು ಕಷ್ಟ-ಸುಖ ಹಂಚಿಕೊಂಡು ಬದುಕುತ್ತಿದ್ದರೆ ಭಗವಂತ ನಿಮ್ಮ ಕುಟುಂಬದವನು ಆಶೀರ್ವದಿಸಿದ್ದಾನೆ ಎಂದು ಅರ್ಥ.
ಈ ಸುದ್ದಿ ಓದಿ:- ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…
* ನಿಮಗೆ ಯಾವುದಾದರೂ ಕಷ್ಟ ಬಂದರೂ ಆ ಸಂದರ್ಭದಲ್ಲಿ ಯಾರಿಂದಲಾದರೂ ನೆರವು ತಲುಪುತ್ತಿದೆ ಎಂದರೆ ದೇವರಿಗೆ ನಿಮ್ಮ ಮೇಲೆ ಕರುಣೆ ಇರುವುದರಿಂದ ಆ ರೂಪದಲ್ಲಿ ಭಗವಂತ ಯಾರನ್ನೋ ತಲುಪಿಸುತ್ತಿದ್ದಾನೆ ಎಂದು ಅರ್ಥ
* ನಿಮಗೆ ಒಳ್ಳೆಯ ಮಕ್ಕಳಾಗಿ ಅವರು ಕೀರ್ತಿವಂತರಾಗಿದ್ದರೆ ಅಷ್ಟೇ ಸದ್ಗುಣಗಳನ್ನು ಹೊಂದಿದ್ದರೆ ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ವಿಧೇಯತೆಯನ್ನು ಹೊಂದಿದ್ದರೆ ಅದು ಭಗವಂತನ ಕೃಪಕಟಾಕ್ಷ ನಿಮ್ಮ ಮೇಲೆ ಇರುವುದರಿಂದ ಸಾಧ್ಯ. ಯಾಕೆಂದರೆ ಈಗಿನ ಕಾಲದಲ್ಲಿ ಎಲ್ಲರಿಗೂ ಈ ರೀತಿ ಮಕ್ಕಳು ಸಿಗುವುದಿಲ್ಲ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!
* ನೀವು ಸರಿ ತಪ್ಪುಗಳನ್ನು ನಡುವೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಹಾಗೂ ಒಳ್ಳೆಯವರು ಕೆಟ್ಟವರ ನಡುವೆ ವ್ಯತ್ಯಾಸವನ್ನು ಸರಿಯಾಗಿ ಗುರುತಿಸುತ್ತಿದ್ದರೆ ನಿಮ್ಮಲ್ಲಿ ದೈವೀಶಕ್ತಿ ಇದೆ ಎಂದು ಅರ್ಥ.
* ಯಾವಾಗಲೂ ಕನಸಿನಲ್ಲಿ ದೇವರ ಬರುವುದು. ದೇವರು ನಿಮ್ಮ ಜೊತೆ ಮಾತನಾಡುತ್ತಿರುವ ರೀತಿ ದೇವರು ನಿಮ್ಮನ್ನು ಆಶೀರ್ವದಿಸುತ್ತಿರುವ ರೀತಿ ಕನಸು ಬಿದ್ದರೂ ಕೂಡ ಇದೆ ಅರ್ಥವನ್ನು ಕೊಡುತ್ತದೆ.