ನಮ್ಮ ನಾಡಿನಲ್ಲಿ ಅನೇಕ ದೇವಾಲಯಗಳಿವೆ. ಒಂದಕ್ಕಿಂತ ಒಂದು ವಿಶೇಷ. ಕೆಲವು ಸಾಂಪ್ರದಾಯಿಕ ಹಿನ್ನೆಲೆ ಹೊಂದಿದ್ದರೆ ಇನ್ನು ಕೆಲವು ದೇವಸ್ಥಾನವನ್ನು ಕಟ್ಟಿರುವ ವಾಸ್ತುಶಿಲ್ಪದಿಂದ ಹೆಸರಾಗಿವೆ. ಇನ್ನು ಕೆಲವು ದೇವಸ್ಥಾನಗಳು ಅಲ್ಲಿರುವ ಸ್ಥಳದ ಪ್ರಭಾವದಿಂದ ಜಗದ್ವಿಖ್ಯಾತಿಗೊಂಡಿದೆ ಅಂತಹದೊಂದು ವಿಶೇಷ ದೇವಸ್ಥಾನದ ಬಗ್ಗೆ ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಭಕ್ತರು ಈ ಸ್ಥಳದಲ್ಲಿ ನೆಲೆ ನಿಂತಿರುವ ತಾಯಿಯನ್ನು ನಂಬಿ ಬಳೆ ಹರಕೆ ಮಾಡಿಕೊಂಡರೆ ಸಾಕು ನೂರಕ್ಕೆ ನೂರರಷ್ಟು ಕೋರಿಕೆ ನೆರವೇರುವುದು ಗ್ಯಾರಂಟಿ ಎನ್ನುತ್ತಾರೆ ಈಗಾಗಲೇ ಈ ಪವಾಡ ಕಂಡು ತಾಯಿ ಅನುಗ್ರಹದಿಂದ ಸಮಸ್ಯೆ ಪರಿಹರಿಸಿಕೊಂಡು ಇಲ್ಲಿಗೆ ನಡೆದುಕೊಳ್ಳುತ್ತಿರುವ ಭಕ್ತಾದಿಗಳು.
ಈ ಸುದ್ದಿ ಓದಿ:- ಕನಸಿನಲ್ಲಿ ದೇವರ ವಿಗ್ರಹ ಬಂದರೆ ಏನು ಅರ್ಥ.?
ಈ ದೇವಸ್ಥಾನ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಡನಬೈಲು ಗ್ರಾಮದಲ್ಲಿ. ಇಲ್ಲಿ ಇದ್ದುಕೊಂಡು ಭಕ್ತಾದಿಗಳನ್ನು ಪೋಷಿಸುತ್ತಿರುವುದು ಪದ್ಮಾವತಿ ತಾಯಿ, ವಡನಬೈಲು ಬಳೆ ಪದ್ಮಾವತಿ ಎಂದೇ ಹೆಸರಾಗಿದ್ದಾರೆ. ಇಲ್ಲಿನ ಸ್ಥಳ ಪುರಾಣದ ಕುರಿತು ಹೇಳುವುದಾದರೆ ಶ್ರೀ ಪದ್ಮಾವತಿ ತಾಯಿಯ ಮೂಲ ಊರು ಹೆಬೈಲು. ಲಿಂಗನಮಕ್ಕಿ ಜಲಾಶಯ ಕಟ್ಟಿದ ನಂತರ ಹೆಬೈಲು ಊರು ಮುಳುಗಡೆಯಾಯ್ತು.
1952 ರಲ್ಲಿ ಮೂಲ ವಿಗ್ರಹವನ್ನು ವಡನಬೈಲು ಗ್ರಾಮಕ್ಕೆ ತರಲಾಯಿತಂತೆ. ಈಗ ದೇವಸ್ಥಾನವನ್ನು ನೋಡಿಕೊಳ್ಳುತ್ತಿರುವ ಧರ್ಮದರ್ಶಿಗಳ ಮನೆಯ ದೇವರು ಇದಾಗಿತ್ತಂತೆ. ಕನಸಿನಲ್ಲಿ ತಾಯಿಯು ಬಂದು ತಾನು ಇಲ್ಲಿ ನೆಲೆಸಿರುವುದಾಗಿ ಸರಿಯಾಗಿ ಪೂಜಾ ಕಾರ್ಯ ನಡೆಯುತ್ತಿಲ್ಲ ಎಂದು ಹೇಳಿ ಆಜ್ಞಾಪಿಸಿದರಂತೆ. ಈ ಬಳೆ ಪದ್ಮಾವತಿ ದೇವಿಯು ಹುತ್ತಗಳ ಮಧ್ಯೆ ನೆಲೆ ನಿಂತಿರುವ ತಾಯಿಯಾಗಿದ್ದಾರೆ, ಮೂಲ ವಿಗ್ರಹ ಸ್ಥಳಾಂತರವಾದಾಗ ಹೊಸ ದೇವಸ್ಥಾನದಲ್ಲಿ ಹುತ್ತ ಇರಲಿಲ್ಲ.
ಈ ಸುದ್ದಿ ಓದಿ:-ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…
ಆಗ ಧರ್ಮದರ್ಶಿ ರಾಜಯ್ಯನವರು ಬೇಡಿಕೊಂಡರಂತೆ, ಹುತ್ತ ಇರದ ಕಾರಣ ನಾನು ಪೂಜೆ ಮಾಡುತ್ತಿಲ್ಲ ಒಂದು ವೇಳೆ ಹುತ್ತ ನಿರ್ಮಾಣವಾದರೆ ಖಂಡಿತ ಪೂಜೆಯನ್ನು ಮಾಡುತ್ತೇನೆ. ಒಂದೇ ವಾರದಲ್ಲಿ ದೇವಿಯ ಸುತ್ತ ಹುತ್ತ ಬೆಳೆಯುತ್ತಂತೆ ಈಗಲೂ ಸುತ್ತಲೂ 12 ಅಡಿ ಹುತ್ತದ ಮಧ್ಯೆ ತಾಯಿ ಮೂಲ ವಿಗ್ರಹ ಇರುವುದನ್ನು ಕಾಣಬಹುದು ಮತ್ತು ಕಾಲಕಾಲಕ್ಕೆ ತಾಯಿ ಧರ್ಮದರ್ಶಿಗಳ ಕನಸಿನಲ್ಲಿ ಬಂದು ತನಗೆ ಏನಾಗಬೇಕು ಎಂದು ಆಜ್ಞೆ ಮಾಡುತ್ತಾರಂತೆ.
ಈ ದೇವಸ್ಥಾನದಲ್ಲಿ ಬಳೆಗದ್ದೇ ಸಡಗರ, ಸಂಭ್ರಮ, ಸದ್ದು. ಎಲ್ಲೆಲ್ಲೂ ಹಸಿರು ಬಳೆಗಳೆ ತುಂಬಿರುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಯಾವುದೇ ಕಷ್ಟ ಇದ್ದರೂ ನೆರವೇರಿಸುವಂತೆ ಕೋರಿಕೊಂಡು ಇಷ್ಟಾರ್ಥ ನೆರವೇರಿದರೆ ಶಕ್ತಿಯನುಸಾರ ಬಳೆ ಕಾಣಿಕೆ ಕೊಡುವುದಾಗಿ ಹರಕೆ ಹೊತ್ತು ಕೊಳ್ಳುತ್ತಾರಂತೆ.
ಈ ಸುದ್ದಿ ಓದಿ:-ಮದುವೆ ತಡವಾಗುತ್ತಿದೆಯೇ.? ಹಾಗಾದರೆ ಇಲ್ಲಿದೆ ನೋಡಿ ಪರಿಹಾರ…
ಆ ಪ್ರಕಾರವಾಗಿ ದೇವಸ್ಥಾನ ಆರಂಭವಾದಾಗ 9, 101 ಬಳೆ ಅರ್ಪಿಸುವ ಪದ್ಧತಿ ಈಗ ಬಳೆಗಳನ್ನೇ ತುಲಾಭಾರ ಮಾಡಿಸುವಷ್ಟು ಬೆಳದಿದೆ ಇದುವರೆಗೂ ಬಂದಿರುವ ಬಳೆಗಳನ್ನು ರಾಶಿ ಹಾಕಿದ್ದರೆ ದೇವಸ್ಥಾನದ ಗಾತ್ರ ಆಗುತ್ತಿತ್ತು. ಈಗ ಬಂದ ಭಕ್ತರಿಗೂ ಕೂಡ ಬಳೆಯನ್ನೇ ಪ್ರಸಾದವಾಗಿ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ ದೇವಸ್ಥಾನದ ಸಿಬ್ಬಂದಿ ಇಲ್ಲಿಗೆ ಬರುವ ಭಕ್ತರು ತಪ್ಪದೆ ಜೊತೆಗೆ ಬಳೆ ತರುತ್ತಾರೆ.
ಯಾಕೆಂದರೆ ಒಮ್ಮೆ ದರ್ಶನ ಮಾಡಿಕೊಂಡು ಬಳೆ ಹರಕೆ ಕಟ್ಟಿಕೊಂಡು ಹೋದವರ ಎಲ್ಲರ ಕೋರಿಕೆಗಳು ಕೂಡ ನೆರವೇರಿದೆ. ಸಂತಾನ ಪ್ರಾಪ್ತಿ ಕೋರ್ಟ್ ಕೇಸ್,ನಾಗದೋಷ ಈ ರೀತಿಯೇ ಏನೇ ಸಮಸ್ಯೆಗಳಿದ್ದರು ಕೂಡ ಈ ವಡನಬೈಲು ಪದ್ಮಾವತಿ ದೇವಿಗೆ ಬಳೆ ಹರಕೆ ಹೊತ್ತುಕೊಂಡು ಹೋದಲ್ಲಿ ನಿರ್ವಿಘ್ನವಾಗಿ ಸಮಸ್ಯೆಗಳು ಬಗೆಹರಿಯುತ್ತವೆ.
ಈ ಸುದ್ದಿ ಓದಿ:-ತುಲಾ ರಾಶಿಯವರ ಶಿವರಾತ್ರಿ ಭವಿಷ್ಯ ಮಾರ್ಚ್ – 2024.
ಇಲ್ಲಿ ಕ್ಷೇತ್ರದ ಕ್ಷೇತ್ರಪಾಲಕನಾಗಿ ಭೂತರಾಜರು ನೆಲೆಸಿದ್ದಾರೆ. ಯಾರಾದರೂ ನಿಮ್ಮ ಮೇಲೆ ಮಾಟ ಮಂತ್ರ ಮಾಡಿದ್ದರೆ ಮೋಸ ಆಗಿದ್ದರೆ ಕಳ್ಳತನವಾಗಿದ್ದರೆ ಇಲ್ಲಿ ಪರಿಹಾರಕ್ಕಾಗಿ ಬೇಡಿಕೊಳ್ಳಬಹುದು. 9 ಕುಂಬಳಕಾಯಿ ಮತ್ತು 2Kg ಕುಂಕುಮ ತಂದು ಹರಕೆ ಮಾಡಿಕೊಳ್ಳುತ್ತಾರೆ.
ಹರಕೆ ನೆರವೇರಿದ ಮೇಲೆ ಅನೇಕರು ತ್ರಿಶೂಲ ಕೂಡ ತಂದು ಅರ್ಪಿಸಿದ್ದಾರೆ ಈ ಕ್ಷೇತ್ರದ ಮತ್ತೊಂದು ಮುಖ್ಯ ಆಕರ್ಷಣೆ ಎಂದರೆ ಏಳರ ವಿಶೇಷತೆ ಹೊಂದಿರುವ ನಾಗದೇವರ ವಿಗ್ರಹ, ಮುಕ್ತಿ ನಾಗರ ದೇವರನ್ನು ಇಲ್ಲಿ ನೋಡಬಹುದು. ಈ ನಾಗನ ವಿಗ್ರಹವು 7 ಅಡಿ 7 ಇಂಚು ಎತ್ತರ, 77 ಕ್ವಿಂಟಲ್ ತೂಕವಿದೆ, ಏಳು ಹೆಡೆಗಳನ್ನು ಹೊಂದಿದ್ದಾರೆ.
ಈ ಸುದ್ದಿ ಓದಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಭಕ್ತರೇ ಈ ನಾಗದೇವನನ್ನ ಸ್ಪರ್ಶಸಬಹುದು, ಧರ್ಮದರ್ಶಿಗಳು ಭಕ್ತರ ನಾಡಿಯನ್ನು ನೋಡಿ ನಾಗ ದೋಷವಿದ್ದರೆ ಮುಕ್ತಿನಾಗನಿಗೆ 108 ಪ್ರದಕ್ಷಿಣೆ ಹಾಕಿ ಅಭಿಷೇಕ ಮಾಡಲು ಸೂಚಿಸುತ್ತಾರೆ ನಾಗದೋಷದಿಂದ ಮದುವೆ ವಿಳಂಬ ಸಂತಾನ ವಿಳಂಬವಾಗಿದ್ದರೆ ಮುಕ್ತಿ ನಾಗನ ದರ್ಶನ ಮತ್ತು ಅಭಿಷೇಕ ಕ್ರಮದಿಂದ ಪರಿಹಾರ ತೆಗೆಯುತ್ತದೆ ಎನ್ನುವುದು ನಂಬಿಕೆ.
ಶಿವಮೊಗ್ಗದಿಂದ ಸಾಗರಕ್ಕೆ ತೆರಳಿ ಅಲ್ಲಿಂದ ಜೋಗ ಪಟ್ಟಣಕ್ಕೆ ಹೋಗಬೇಕು. ಜೋಗ ಪಟ್ಟಣದಿಂದ ಶರಾವತಿ ವಿದ್ಯುತ್ಗಾರ ಹೋಗುವ ಮಾರ್ಗದಲ್ಲಿ ಸಾಗಬೇಕು. ಸ್ವಂತ ವಾಹನದಲ್ಲಿ ಹೋಗುವವರು ಕೆಪಿಸಿ ಅವರು ನೀಡುವ ಪಾಸ್ ಪಡೆಯಲೇಬೇಕು ವಾಪಸ್ ಬರುವಾಗ ಆ ಪಾಸನ್ನ ಕೆಪಿಸಿ ಅಧಿಕಾರಿಗಳಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
6364350882
9448873007
9482017330