ಹಳದಿ ಲೋಕ ಬಂಗಾರ ಎಲ್ಲರಿಗೂ ಇಷ್ಟ. ಬಂಗಾರ ಲೋಹ ಗುರುಗ್ರಹ ಕಾರಕ ಎನ್ನುತ್ತಾರೆ ಬಂಗಾರ ಧರಿಸುವುದರಿಂದ ಹೆಣ್ಣು ಮಕ್ಕಳ ಅಂದ ಹೆಚ್ಚುತ್ತದೆ ಮಾತ್ರವಲ್ಲದೇ ಗೌರವವೂ ಹೆಚ್ಚುತ್ತದೆ. ಸಾಮಾನ್ಯರು ಬಂಗಾರ ಹಾಕಿರುವವರಿಗೆ ಈಗಿನ ಕಾಲದಲ್ಲಿ ಹೆಚ್ಚು ಬೆಲೆ ಕೊಡುವುದರಿಂದ ಇದು ಪ್ರತಿಷ್ಠೆಯ ವಿಚಾರ ಕೂಡ ಬಂಗಾರ ಒಂದು ಹೂಡಿಕೆಯಾಗಿಯೂ ಚಾಲ್ತಿಯಲ್ಲಿದೆ.
ಬಂಗಾರ ಪ್ರಪಂಚದಲ್ಲಿಯೇ ಅತ್ಯಂತ ಬೆಲೆ ಬಾಳುವ ಲೋಹ. ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದ್ದು, ಭಾರತದಲ್ಲಿ ಬಂಗಾರದ ಮೇಲಿನ ಮೋಹ ಉಳಿದೆಲ್ಲಾ ದೇಶಕ್ಕಿಂತ ಹೆಚ್ಚೇ ಇದೆ ಎನ್ನಬಹುದು. ಬಡವರಾದರು ಕೂಡ ಚೂರಾದರೂ ಚಿನ್ನ ಹಾಕಿಕೊಳ್ಳಬೇಕು ಎಂದೇ ಆಸೆ ಪಡುತ್ತಾರೆ. ಅಷ್ಟರಮಟ್ಟಿಗೆ ಚಿನ್ನದ ಮೇಲಿನ ಮೋಹವಿದೆ. ಹೀಗೆ ಗಳಿಸಿದ ಚಿನ್ನವನ್ನು ಒಂದಲ್ಲ ಒಂದು ಕಾರಣಕ್ಕಾಗಿ ನಾವು ಮನೆಯಿಂದ ಹೊರ ತೆಗೆದುಕೊಂಡು ಹೋಗಬೇಕಾಗುತ್ತದೆ
ಹೀಗೆ ಒಮ್ಮೆ ಮನೆಯಿಂದ ತೆಗೆದುಕೊಂಡು ಹೋದ ಚಿನ್ನವು ಮತ್ತೆ ಮತ್ತೆ ಬ್ಯಾಂಕ್ ಅಥವಾ ಗಿರಿವಿ ಅಂಗಡಿ ಹೋಗುತ್ತಲೇ ಇರುತ್ತದೆ. ಆಗ ನೀವು ಬಹಳ ನೊಂ’ದು ಕೊಂಡಿರುತ್ತೀರಾ. ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟು ಕೊಂಡ ಬಂಗಾರವನ್ನು ಹಾಕಿಕೊಳ್ಳುವ ಭಾಗ್ಯವಿಲ್ಲ, ಯಾವ ಗಳಿಕೆಯಲ್ಲಿ ಚಿನ್ನ ತೆಗೆದುಕೊಂಡೆನೋ, ಯಾವ ಗಳಿಕೆಯಲ್ಲಿ ಮನೆಯಿಂದ ಆಚೆ ತೆಗೆದುಕೊಂಡು ಹೋದೆನೋ ಚಿನ್ನ ಮತ್ತೆ ಮನೆಗೆ ಸೇರುತ್ತಿಲ್ಲ ಎಂದು ದುಃ’ಖಿಸಿರಬಹುದು.
ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!
ಹೀಗೇನಾದರೂ ಯಾವುದೋ ಕಷ್ಟದ ಪರಿಹಾರಕ್ಕೆ ತೆಗೆದುಕೊಂಡು ಹೋದ ಚಿನ್ನ ಮನೆ ಸೇರುತ್ತಿಲ್ಲ ಎಂದರೆ ಅಥವಾ ಪದೇ ಪದೇ ನಿಮ್ಮ ಮನೆಯಿಂದ ಬಂಗಾರ ಗಿರವಿಗೆ ಹೋಗುತ್ತಿದ್ದರೆ ನಾವು ಹೇಳುವ ಈ ಸುಲಭ ವಿಧಾನವನ್ನು ಅನುಸರಿಸಿ ಇನ್ನು ಮುಂದೆ ಆ ಸಮಸ್ಯೆ ತಪ್ಪುತ್ತದೆ, ಅಡ ಇಟ್ಟ ಚಿನ್ನವು ಕೂಡ ಬಹಳ ಬೇಗ ಮನೆಗೆ ಬರುತ್ತದೆ.
ಯಾವಾಗಲು ಚಿನ್ನ ಖರೀದಿಸುವಾಗ ಒಳ್ಳೆಯ ದಿನಗಳಲ್ಲಿ ಖರೀದಿಸಬೇಕು. ಧನತ್ರಯೋದಶಿ ಹಾಗೂ ದೀಪಾವಳಿ ಹಬ್ಬವು ಶುಭ ಇದನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಹಣ ಇರುವಾಗ ಕೊಂಡುಕೊಳ್ಳಬೇಕು ಎಂದರೆ ಮಂಗಳವಾರ ಬುಧವಾರ, ಶುಕ್ರವಾರ ಚಿನ್ನ ಖರೀದಿಗೆ ಶುಭದಿನ.
ಅದಕ್ಕಿಂತ ಪುಷ್ಯಮಿ ನಕ್ಷತ್ರಗಳಂದು ಚಿನ್ನ ಕೊಂಡುಕೊಂಡರೆ ಅಥವಾ ಗುರುಪುಷ್ಯಾಮೃತ ಯೋಗವಿರುವ ಅಂದರೆ ಗುರುವಾರದಂದು ಪುಷ್ಯ ನಕ್ಷತ್ರ ಇರುವ ದಿನ ಕೊಂಡುಕೊಂಡರೆ ಆ ಬಂಗಾರವು ಕಡೆವರೆಗೆ ನಿಮ್ಮ ಬಳಿಗೆ ಶಾಶ್ವತವಾಗಿರುತ್ತದೆ. ಬಂಗಾರ ಖರೀದಿಸುವ ದಿನ ಭಗವಂತನಲ್ಲಿ ಮತ್ತು ತಾಯಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಮನೆಯಿಂದ ಅಂಗಡಿಗೆ ಹೋಗಿ ಖರೀದಿಸಿ ಮತ್ತು ತಂದ ಮೇಲು ಕೂಡ ಮನೆಯಲ್ಲಿ ಇಟ್ಟು ಪೂಜೆ ಮಾಡಿ. ಹಾಲಿನಲ್ಲಿ ಅದನ್ನು ಅದ್ದಿ ನಂತರ ಧರಿಸಬೇಕು.
ಈ ಸುದ್ದಿ ಓದಿ:- ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!
ಒಂದು ವೇಳೆ ತಂದ ಚಿನ್ನವನ್ನು ಕೆಲವೇ ದಿನಗಳಲ್ಲಿ ಅಡ ಇಡಬೇಕಾಗಿ ಬಂತು ಎಂದರೆ ಅದು ಬೇಗ ಮನೆಗೆ ಬರಲು ನೀವು ಒಂದು ಶುಭ ಶುಕ್ರವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ತಾಯಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಮಾಡಬೇಕು.
ಮನೆಯಲ್ಲಿ ಪೂಜೆ ಮಾಡಿದ ನಂತರ ಒಂದು ಬಟ್ಟಲಿನಲ್ಲಿ ಅಕ್ಷತೆ ಇಟ್ಟುಕೊಂಡು ಅದರ ಮೇಲೆ ಒಂದು ಚೆನ್ನಾಗಿರುವ ಅರಿಶಿಣದ ಕೊನೆ ಇಟ್ಟು ಅದಕ್ಕೆ ಕುಂಕುಮ ಇಟ್ಟು ಪೂಜೆ ಮಾಡಿ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಮನಸ್ಸಿನಲ್ಲಿರುವ ಆಸೆ ನೆರವೇರಿಸುವಂತೆ ಕೋರಿ ಕೊಳ್ಳಬೇಕು.
ನೀವು ಮನೆಯಿಂದ ಹೊರ ತೆಗೆದುಕೊಂಡಿರುವ ಬಂಗಾರ ಮನೆಗೆ ಬಂದು ಸೇರಲಿ ಮತ್ತು ಅದು ಮತ್ತೆ ಮತ್ತೆ ಗಿರವಿಗೆ ಹೋಗದಂತೆ ಆಗಲಿ ಎಂದು ಕೇಳಿಕೊಂಡು ಪೂಜೆ ಮಾಡಿದ ಆ ಅರಿಶಿಣದ ಕೊನೆಯನ್ನು ನೀವು ಬಂಗಾರ ತೆಗೆದುಕೊಂಡು ಹೋಗಿ ಇಟ್ಟಿದ್ದ ಖಾಲಿ ಡಬ್ಬದಲ್ಲಿ ಹಾಕಿ ಬಿರುವಿನಲ್ಲಿ ಇಟ್ಟುಕೊಳ್ಳಬೇಕು.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಮನೆಯಲ್ಲಿ ಪೂಜೆ ಮಾಡಬೇಕಾದರೆ ಇದಕ್ಕೂ ಪೂಜೆ ಮಾಡಬೇಕು ಹೀಗೆ ಭಕ್ತಿಯಿಂದ ತಾಯಿ ಮಹಾಲಕ್ಷ್ಮಿಯನ್ನು ಕೇಳಿಕೊಂಡರೆ ದೇವಿಯ ಅನುಗ್ರಹದಿಂದ ಶೀಘ್ರವೇ ಬಂಗಾರ ಬಂದು ನಿಮ್ಮ ಮನೆ ಸೇರುತ್ತದೆ.