ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಆರ್ಥಿಕವಾಗಿ ಸ್ವಾಬಲಂಬಿಗಳಾಗಿ ಬದುಕಲು ಇಚ್ಛಿಸುವ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ತಂದು ನೆರವಾಗುತ್ತಿದೆ. ಇದುವರೆಗೂ ಕೂಡ ಈ ಬಗ್ಗೆ ಹಲವು ಯೋಜನೆಗಳು ಜಾರಿಗೆ ಬಂದಿದ್ದು 2020ರಲ್ಲಿ ಉದ್ಯೋಗಿನಿ (Udyogini) ಎನ್ನುವ ಹೊಸ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ.
ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
80ಕ್ಕೂ ಹೆಚ್ಚು ವಿವಿಧ ಬಗೆಯ ಉದ್ಯಮದಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಅಭಿವೃದ್ಧಿಪಡಿಸಲು ಅಥವಾ ಹೊಸದಾಗಿ ಉತ್ತಮ ಆರಂಭಿಸಲು ಈ ಉದ್ಯೋಗಿನಿ ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ. ಇದರ ವಿಶೇಷತೆ ಏನೆಂದರೆ 3 ಲಕ್ಷ ಸಾಲವನ್ನು 0% ಬಡ್ಡಿದರದಲ್ಲಿ ನೀಡಲಾಗುತ್ತದೆ, 1.5 ಲಕ್ಷದವರೆಗೆ ಕೆಲ ಮಹಿಳೆಯರಿಗೆ ಸಬ್ಸಿಡಿ ಕೂಡ ಇರುತ್ತದೆ. ಯಾರೆಲ್ಲ ಈ ಅನುಕೂಲತೆ ಪಡೆದುಕೊಳ್ಳಬಹುದು ಎನ್ನುವ ವಿವರ ಹೀಗಿದೆ ನೋಡಿ.
ಯೋಜನೆ ಹೆಸರು:- ಉದ್ಯೋಗಿನಿ ಯೋಜನೆ
ಸಿಗುವ ಸಹಾಯಧನ:-
* ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗೆ ಗರಿಷ್ಟ ರೂ.3.00 ಲಕ್ಷದವರೆಗೆ ಸಾಲ
ಸಹಾಯಧನ ಶೇ.50%
* ಸಾಮಾನ್ಯ ವರ್ಗದ (OBC) ಫಲಾನುಭವಿಗಳಿಗೆ ಗರಿಷ್ಟ ರೂ. 3.00 ಲಕ್ಷದವರೆಗೆ ಸಾಲ
ಸಹಾಯಧನ ಶೇ.30%
ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಲು ಕಂಡಿಷನ್ ಗಳು:-
* ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000 ಕ್ಕಿಂತ ಕಡಿಮೆಯಿರಬೇಕು.
* ವಯಸ್ಸಿನ ಮಿತಿ 18 ರಿಂದ 55 ವರ್ಷದ ಒಳಗಿರಬೇಕು
* ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.
ಈ ಕೆಳಗಿನ ಉದ್ಯಮಗಳಿಗೆ ಸಾಲ ದೊರೆಯುತ್ತದೆ.
* ನರ್ಸರಿ ತೆರೆಯಲು
* ಮಸಾಲೆ ಮಾಡಲು
* ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು
* ಪಡಿತರ ಅಂಗಡಿ ತೆರೆಯಲು
* ಬಳೆಗಳನ್ನು ಮಾಡಲು
* ಕಾಫಿ ಅಥವಾ ಚಹಾ ಮಾಡಲು
* ಉಡುಗೊರೆ ಅಂಗಡಿ ತೆರೆಯಲು
* ಬ್ಯೂಟಿ ಪಾರ್ಲರ್ ತೆರೆಯಲು
* ಫೋಟೋ ಸ್ಟುಡಿಯೋ
* ಗಿರವಿ ಅಂಗಡಿ
* ಪುಸ್ತಕ ಬೈಂಡಿಂಗ್
* ಪ್ಲಾಸ್ಟಿಕ್ ವಸ್ತುಗಳ ಅಂಗಡಿ
* ಐಸ್ ಕ್ರೀಮ್ ಅಂಗಡಿ ತೆರೆಯಲು
* ಮಡಿಕೆ ಅಂಗಡಿ
* ಡೈರಿ ಅಥವಾ ಕೋಳಿ ಸಾಕಣೆ
* ಗೃಹೋಪಯೋಗಿ ವಸ್ತುಗಳ ಅಂಗಡಿ ತೆರೆಯಲು
* ಟೇಲರ್ ಅಂಗಡಿ ತೆರೆಯಲು
* ಕಬ್ಬಿನ ವ್ಯಾಪಾರಕ್ಕೆ
* ಹತ್ತಿ ದಾರವನ್ನು ತಯಾರಿಸಲು
* ಹೂಗಳು ಅಂಗಡಿಗೆ
* ಕೇಟರಿಂಗ್ ಬಿಸಿನೆಸ್ ಮಾಡಲು
* ಸಾಬೂನು ತಯಾರಿಸುವ ವ್ಯಾಪಾರ
* ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ
* ಚಹಾ ಟ್ಯಾಪ್ ತೆರೆಯಲು
* ಧೂಪದ್ರವ್ಯವನ್ನು ತಯಾರಿಸಲು
* ಕರಕುಶಲ ವ್ಯಾಪಾರ
* ತೆಂಗಿನಕಾಯಿ ವ್ಯಾಪಾರ
* ಪ್ರಯಾಣ ಸಂಸ್ಥೆ
* ಬೇಕರಿ ತೆರೆಯಲು
* ಸಿಹಿ ಅಂಗಡಿ ತೆರೆಯಲು
* ರೇಷ್ಮೆ ನೇಯ್ಗೆ
* ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ
* STD ಬೂತ್ ತೆರೆಯಲು
* ಮೇಣದ ಬಣ್ಣವನ್ನು ಮಾಡಲು
* ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು
* ವೈದ್ಯಕೀಯ ಪ್ರಯೋಗಾಲಯಕ್ಕಾಗಿ
* ಸ್ಟೇಷನರಿ ಅಂಗಡಿ ತೆರೆಯಲು
* ಹಪ್ಪಳ ವ್ಯಾಪಾರ,
* ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು
* ಕಂಪ್ಯೂಟರ್ ಕಲಿಕೆ ಕೇಂದ್ರ
* ಕ್ಯಾಂಟೀನ್ ಅಥವಾ ಧಾಬಾ ತೆರೆಯಲು
* ನ್ಯೂಸ್ ಪೇಪರ್, ಮ್ಯಾಗಜೀನ್ ಅಂಗಡಿ ತೆರೆಯಲು,
* ಪಾನ್ ಅಂಗಡಿ
* ಕ್ಲಿನಿಕ್ ತೆರೆಯಲು
* ಹಾಲಿನ ಡೈರಿ ತೆರೆಯಲು
* ಟ್ಯೂಟೋರಿಯಲ್ ವ್ಯವಹಾರ
* ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು
* ಹಾಸಿಗೆಗಳ ವ್ಯಾಪಾರ
* ಶಕ್ತಿ ಆಹಾರ ವ್ಯಾಪಾರ
* ಡ್ರೈ ಕ್ಲೀನಿಂಗ್
* ಚಾಪೆ ನೇಯುವ ವ್ಯಾಪಾರ
* ಗ್ರಂಥಾಲಯವನ್ನು ತೆರೆಯಲು
ಬೇಕಾಗುವುದು ದಾಖಲೆಗಳು:-
* 2 ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
* ಆಧಾರ್ ಕಾರ್ಡ್
* ಜನ್ಮ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್ ಪ್ರತಿ
* ಆದಾಯ ಪ್ರಮಾಣ ಪತ್ರ
* ಜಾತಿ ದೃಢೀಕರಣ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಬುಕ್ (ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್/ಲಿಂಕ್ ಮಾಡಿಸಿರಬೇಕು.)
ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!
* ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಮಾನ್ಯ ಸಚಿವರು / ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ /ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಸುವುದು ಹೇಗೆ?
* ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
* ಯಾವುದೇ ಖಾಸಗಿ ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲ ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಆಯಾ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ಕೊಡಿ.
ವಿಳಾಸ:
6ನೇ ಮಹಡಿ,
ಜಯನಗರ ವಾಣಿಜ್ಯ ಸಂಕೀರ್ಣ,
4ನೇ ಬ್ಲಾಕ್,
ಜಯನಗರ,
ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307