ಈ ಪ್ರಪಂಚದಲ್ಲಿ ಒಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಇರುತ್ತದೆ ಆದರೆ ಒಂದೇ ನಕ್ಷತ್ರದಲ್ಲಿ ಅಥವಾ ಒಂದೇ ರಾಶಿಯಲ್ಲಿ ಜನಿಸಿದವರ ಕೆಲವು ಗುಣಸ್ವಭಾವಗಳು ಒಂದೇ ಆಗಿರುತ್ತವೆ ಹಾಗಾಗಿ ಜನಸಾಮಾನ್ಯರು ಆಡು ಭಾಷೆಯಲ್ಲಿ ಮಾತನಾಡುವಾಗ ಒಳ್ಳೆಯ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಆತನ ರಾಶಿಯಲ್ಲಿ ಈ ಅದೃಷ್ಟದ ಯೋಗ ಬರೆದಿತ್ತು ಎಂದು ಮಾತನಾಡುವುದನ್ನು ನಾವು ಕೇಳಿರಬಹುದು.
ಪ್ರಸ್ತುತ ಜಗತ್ತಿನಲ್ಲಿ ಅದೃಷ್ಟ ಸುಖ ಸಂತೋಷ ಎಲ್ಲವೂ ಕೂಡ ಹಣವೇ ಆಗಿದೆ ಎಂದು ಜನ ಭಾವಿಸುತ್ತಾರೆ ಹಾಗಾಗಿ ಹಣದ ಹಿಂದೆಯೇ ಎಲ್ಲರ ಓಟ. ಹೌದು ಹಣ ಇಲ್ಲದೆ ಇದ್ದರೆ ಯಾವುದೂ ಕೂಡ ನಡೆಯುವುದಿಲ್ಲ ಆದರೆ ಹಣ ಒಂದೇ ಎಲ್ಲವೂ ಅಲ್ಲ ಬದುಕಿನ ಸ್ವಾಸ್ಥ್ಯವನ್ನು ಅನುಭವಿಸಬೇಕು ಎಂದರೆ ತಕ್ಕಮಟ್ಟಿಗೆ ಹಣ ಮತ್ತು ಸಮಯ ಎರಡು ಇರಬೇಕು.
ಕೆಲವು ಜನರು ಭವಿಷ್ಯದ ಬಗ್ಗೆ ನಂಬಿಕೆ ಇಡುವುದಿಲ್ಲ ಅವರು ಒಂದು ತಿಂಗಳು ದುಡಿದು ಪಡೆದ ಸಂಬಳವನ್ನು ಒಂದೇ ವಾರದಲ್ಲಿ ಖರ್ಚು ಮಾಡಿ ಮುಗಿಸುತ್ತಾರೆ ಮತ್ತು ತಿಂಗಳ ಅಂತ್ಯದಲ್ಲಿ ತಮ್ಮ ಅಗತ್ಯತೆಗಳಿಗೂ ಹಣ ಇಲ್ಲದೆ ಪರದಾಡುತ್ತಾರೆ ಅಥವಾ ಸಾಲ ಮಾಡುತ್ತಾರೆ.
ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…
ಇನ್ನು ಕೆಲವರು ಎಷ್ಟೇ ದುಡಿಯುತ್ತಿದ್ದರು ಕೂಡ ಅದನ್ನು ಸುಲಭವಾಗಿ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ ಒಂದೊಂದು ರೂಪಾಯಿಯನ್ನು ಕೂಡ ಕೂಡಿರುತ್ತಾರೆ ಅಥವಾ ಒಳ್ಳೆ ಕಡೆಯಲ್ಲಿ ಹೂಡಿಕೆ ಮಾಡಿ ಹಣದಿಂದ ಹಣ ಗಳಿಸಲು ನೋಡುತ್ತಾರೆ. ಇಂಥವರನ್ನು ನೋಡಿ ಜನ ಸುಲಭವಾಗಿ ಜಿಪುಣರು ಎಂದು ಪಟ್ಟಿ ಕಟ್ಟುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿ ಯಾರ ಬಗ್ಗೆಯೂ ಪೂರ್ತಿಯಾಗಿ ತಿಳಿಯದೆ ಮಾತನಾಡಬಾರದು.
ಕೆಲವೇ ವರ್ಷಗಳ ಹಿಂದೆಯಷ್ಟೇ ನಾವು ಕೊರೊನ ಲಾಕ್ ಡೌನ್ ಪರಿಸ್ಥಿತಿ ನೋಡಿದ್ದೇವೆ. ಎಲ್ಲೂ ವ್ಯಾಪಾರ ವ್ಯವಹಾರ ಇರಲಿಲ್ಲ, ಬಹುತೇಕರ ಕೆಲಸ ಕೂಡ ಹೋಗಿತ್ತು, ಮನೆಯಿಂದ ಆಚೆ ಕಾಲಿಡದ ಪರಿಸ್ಥಿತಿ ಈ ಸಮಯದಲ್ಲಿ ನಮ್ಮ ಬಳಿ ಸ್ವಲ್ಪವೂ ಹಣವಿರದೆ ಇದ್ದರೆ ಏನಾಗಿರುತ್ತಿತ್ತು ಎಂದು ಯೋಚಿಸಿ ನೋಡಿ ಅಥವಾ ರೈತನಾಗಿದ್ದರು ಎರಡು ವರ್ಷಗಳು ಮಳೆ ಬೆಳೆ ಆಗದೇ ಹೋದರೆ ಹೇಗಿರುತ್ತದೆ.
ಇದು ಒಬ್ಬ ವ್ಯಕ್ತಿ ಮಾತ್ರವಲ್ಲದೆ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿಂತಿಸಬೇಕು. ಹಾಗಾಗಿ ಕೆಲವು ಬುದ್ಧಿವಂತರು ಹಣ ಬಂದ ಕೂಡಲೇ ಎಷ್ಟು ಖರ್ಚು ಮಾಡಬೇಕು ಯಾವುದಕ್ಕೆ ಖರ್ಚು ಮಾಡಬೇಕು ಕಡ್ಡಾಯವಾಗಿ ಎಷ್ಟನ್ನು ಉಳಿತಾಯ ಮಾಡಿದ ನಂತರವಷ್ಟೇ ಖರ್ಚು ಮಾಡಬೇಕು ಎನ್ನುವುದನ್ನು ಪ್ಲಾನ್ ಮಾಡಿ ಜೀವನ ನಡೆಸುತ್ತಾರೆ.
ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!
ಈ ರೀತಿ ಹಣಕಾಸಿನ ವಿಚಾರದಲ್ಲಿ ಬಹಳ ಲೆಕ್ಕಚಾರ ಹಾಕುವ ಮನಸ್ಥಿತಿ ಮತ್ತು ಬುದ್ಧಿವಂತಿಕೆ ಎಲ್ಲರಿಗೂ ಇರುವುದಿಲ್ಲ. ಕೆಲವು ರಾಶಿಗಳು ಮಾತ್ರ ಚೆನ್ನಾಗಿ ಶಕ್ತಿ ಇರುವಾಗ ಬಹಳ ಹಣ ದುಡಿದು ನಂತರ ಆ ಹಣವನ್ನು ದುಡಿಸುತ್ತ ನಾವು ನೆಮ್ಮದಿಯಾಗಿ ಜೀವನ ಕಳೆಯಬೇಕು ಎಂದುಕೊಳ್ಳುತ್ತಾರೆ. ಅಲ್ಲಿಯವರೆಗೂ ಕೂಡ ನಮಗೆ ಯಾವುದೇ ರೀತಿಯ ಡಿಸ್ಟ್ರಾಕ್ಷನ್ ಆಗಬಾರದು ಎಂದು ಎಲ್ಲಾ ಆಸೆಗಳಿಗೂ ಕಡಿವಾಣ ಹಾಕಿ ಕಷ್ಟಪಟ್ಟು ಸಾಧನೆ ಮಾಡಿ ಸೆಟಲ್ ಆದ ನಂತರದ ಜೀವನವನ್ನು ಎಂಜಾಯ್ ಮಾಡುತ್ತಾರೆ.
ಇವರು ತಮ್ಮ ಜೀವನದ ಜವಾಬ್ದಾರಿಯಲ್ಲಿ ಯಾರಿಗೂ ಕೊಡಲು ಇಷ್ಟ ಇಲ್ಲ ಮತ್ತು ಸಾಧ್ಯವಾದಷ್ಟು ಕುಟುಂಬದವರನ್ನು ತಾವು ಸೆಟ್ಲ್ ಆದ ಬಳಿಕ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ.