ಉಪ್ಪು ಪ್ರತಿಯೊಂದು ಮನೆಯಲ್ಲಿ ಕೂಡ ಇರುವ ವಸ್ತು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಈ ಗಾದೆ ಮಾತ್ರ ಎಲ್ಲರಿಗೂ ಗೊತ್ತಿದೆ ಆದರೆ ಉಪ್ಪಿನಿಂದ ಇನ್ನೆಷ್ಟು ಅನುಕೂಲ ಇದೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಉಪ್ಪು ಅಡಿಕೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದದಲ್ಲಿ ಔಷಧಿಯಾಗಿ ಕೂಡ ಬಳಕೆಗೆ ಬರುತ್ತದೆ ಮತ್ತು ವಾಸ್ತು ಶಾಸ್ತ್ರ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ಕೂಡ ಉಪ್ಪಿಗೆ ಬಹಳ ಪ್ರಾಶಸ್ತ್ಯ ಇದೆ.
ಸಮುದ್ರದಲ್ಲಿ ಸಿಗುವ ಈ ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಬಗೆ ಹರಿಯಲು ಮತ್ತು ಹಣಕಾಸಿನ ಅಭಿವೃದ್ಧಿಗೆ ಉಪ್ಪಿನಿಂದ ಪರಿಹಾರ ಇದೆ. ಪ್ರಪಂಚದಲ್ಲಿ ಬಹಳಷ್ಟು ಜನರು ಉಪ್ಪಿನ ಕಾರಣದಿಂದಾಗಿ ಶ್ರೀಮಂತರಾಗಿದ್ದಾರೆ. ಹಾಗಾಗಿ ಇಂದು ಈ ಅಂಕಣದಲ್ಲಿ ಉಪ್ಪಿಗಿರುವ ಮೌಲ್ಯದ ಜೊತೆಗೆ ಉಪ್ಪಿನ ಕುರಿತಾದ ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
* ಉಪ್ಪಿನಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಗುಣ ಇದೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಮನೆ ಮೇಲೆ ಬೀಳುವ ನರ ದೃಷ್ಟಿ ದೋಷ ಮತ್ತು ಕುಟುಂಬದ ಒಳಗೆ ಉಂಟಾಗುವ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಮಾಡಲು ಉಪ್ಪನ್ನು ಬಳಸಲು ಸೂಚಿಸಲಾಗಿದೆ. ಯಾವಾಗಲು ಮನೆ ಕ್ಲೀನ್ ಮಾಡುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿಕೊಂಡು ಮನೆ ಸಾರಿಸಬೇಕು.
ಇದರಿಂದ ಮನೆಯ ವಾತಾವರಣ ತಿಳಿ ಆಗುತ್ತದೆ ಮನೆಯಲ್ಲಿ ವಿನಾಕಾರಣ ಜ’ಗ’ಳ ,ಮನಸ್ತಾಪ, ಕಿರಿಕಿರಿ ಆಗುವುದು ತಪ್ಪುತ್ತದೆ. ಹಾಗೆಯೇ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನದಂದು, ಮನೆಗೆ ದೃಷ್ಟಿ ತೆಗೆದು ಆ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆ ಮುಂದೆ ಕಟ್ಟಿದರೆ ನಕಾರಾತ್ಮಕ ಶಕ್ತಿಗಳು ಮನೆ ಒಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ, 15 ದಿನಗಳಿಗೊಮ್ಮೆ ಇದನ್ನು ಬದಲಾಯಿಸಬೇಕು.
* ಯಾವುದೇ ರೀತಿ ವಾಸ್ತು ದೋಷದಿಂದ ಸಮಸ್ಯೆಪಡುತ್ತಿದ್ದರೆ ರಾಹುವಿನ ಕಾರಕವಾಗಿರುವ ಗಾಜಿನಲ್ಲಿ ಉಪ್ಪನ್ನು ತುಂಬಿಸಿ ಮನೆ ಶೌಚಾಲಯದಲ್ಲಿ ಇಡಬೇಕು ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ತಂದು ಇದನ್ನು ತೆಗೆದು ನೀರಿನಲ್ಲಿ ಕರಗಿಸಿ ನಿರ್ಜನ ಪ್ರದೇಶದಲ್ಲಿ ತೆರವುಗೊಳಿಸಿ ಮತ್ತೆ ಹೊಸದಾಗಿ ಇಡಬೇಕು.
ಈ ಸುದ್ದಿ ಓದಿ:- ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!
* ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲು ನೀವು ನಿಮ್ಮ ಸಾಲಗಳಿಂದ ಮುಕ್ತಿ ಹೊಂದಿ ಹೆಚ್ಚು ಹಣ ಗಳಿಸಬೇಕು ಮತ್ತು ಗಳಿಸಿದ ಹಣವನ್ನು ಉಳಿಸಿ ಬಹಳ ಬೇಗ ಶ್ರೀಮಂತರಾಗಬೇಕು ಎಂದು ಬಯಸಿದರೆ ನಿಮ್ಮ ದೇವರ ಕೋಣೆಯಲ್ಲಿ ಒಂದು ಗಾಜು ಅಥವಾ ಪಿಂಗಾಣಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನ ತುಂಬಾ ಉಪ್ಪನ್ನು ಇಟ್ಟು.
ಶುಕ್ರವಾರದ ಲಕ್ಷ್ಮಿ ಪೂಜೆ ಸಮಯದಲ್ಲಿ ಇದಕ್ಕೂ ಕೂಡ ಅರಿಶಿಣ ಕುಂಕುಮ ಅಕ್ಷತೆ ಇಟ್ಟು ಪೂಜೆ ಮಾಡಬೇಕು. ಒಂದು ವಾರ ಆದ ನಂತರ ಮುಂದಿನ ಗುರುವಾರ ಇದನ್ನು ತೆಗೆದು ನೀರಿನಲ್ಲಿ ಕರಗಿಸಿ ತುಳಸಿ ಗಿಡಕ್ಕೆ ಅಥವಾ ತೆಂಗಿನ ಮರಕ್ಕೆ ಹಾಕಬೇಕು ಈ ರೀತಿ ಭಕ್ತಿಯಿಂದ ಮಾಡುವುದರಿಂದ ಕೂಡ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
* ಅಮಾವಾಸ್ಯೆ ದಿನ ಸಂಜೆ ಇದೇ ರೀತಿ ಗಾಜು ಅಥವಾ ಪಿಂಗಾಳಿ ಬಟ್ಟೆಯಲ್ಲಿ ಉಪ್ಪು ತೆಗೆದುಕೊಂಡು ಅದಕ್ಕೆ ಭಕ್ತಿಯಿಂದ ಪೂಜೆ ಮಾಡಿ ಮನೆ ಪೂರ್ತಿ ಓಡಾಡಿ ನಂತರ ಅದನ್ನು ತಂದು ನೀವು ಹಣ ಇಡುವ ಬೀರು ಅಥವಾ ಕಪಾಟಿನ ಕೆಳಗಡೆ ಇಡಬೇಕು.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
ನೀವು ಅಲ್ಲಿ ಉಪ್ಪು ಇಟ್ಟಿರುವ ವಿಷಯ ಯಾರಿಗೂ ಗೊತ್ತಾಗಬಾರದು ಮತ್ತು ಯಾರಿಗೂ ಕಾಣದಂತೆ ಅದನ್ನು ಬಚ್ಚಿಡಬೇಕು ಈ ರೀತಿ ಮಾಡುವುದರಿಂದ ಕೂಡ ನೀವು ಹಣಕಾಸಿನ ವಿಚಾರವಾಗಿ ಬಹಳ ಉನ್ನತ ಸ್ಥಾನಕ್ಕೆ ಇರುತ್ತೀರಿ, ಈ ಆಚರಣೆ ಮಾಡುವಾಗ ತಾಯಿ ಮಹಾಲಕ್ಷ್ಮಿ ಮೇಲೆ ನಿಶ್ಚಲ ನಂಬಿಕೆ ಇಡುವುದು ಮುಖ್ಯ.