ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ನಮ್ಮ ಜನ್ಮ ನಕ್ಷತ್ರ, ರಾಶಿ, ಜನ್ಮನಾಮ, ಹುಟ್ಟಿದ ವಾರ, ದಿನ ಇದೆಲ್ಲವೂ ಕೂಡ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ನಾವು ಹುಟ್ಟಿದ ದಿನಾಂಕವನ್ನೇ ನೋಡಿ ಸಂಖ್ಯಾಶಾಸ್ತ್ರದ ಪ್ರಕಾರವಾಗಿ ನನ್ನ ಗುಣ ಸ್ವಭಾವ ಭವಿಷ್ಯ ಎಲ್ಲವನ್ನು ಹೇಳಬಹುದು ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಕೂಡ ರಾಶಿಗಳ ಆಧಾರದ ಮೇಲೆ ಈ ರೀತಿ ಗುಣಲಕ್ಷಣಗಳನ್ನು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?
ಯಾವ ರಾಶಿಯವರ ಸ್ವಭಾವ ಹೇಗಿರುತ್ತದೆ ಇವುಗಳಲ್ಲಿ ದೋಷಗಳಿದ್ದರೆ ಪರಿಹಾರವೇನು? ಯಾವ ದಿನ ಶುಭ ? ಯಾವ ಸಮಯ ಶುಭ? ಯಾವ ಕ್ಷೇತ್ರ ಆಗಿ ಬರುತ್ತದೆ? ಯಾವ ರಾಶಿಗಳು ಮಿತ್ರ ಹಾಗೂ ಶತ್ರುಗಳು ಇತ್ಯಾದಿ ಎಲ್ಲಾ ಮಾಹಿತಿಯನ್ನು ಕೂಡ ಜ್ಯೋತಿಷ್ಯ ಶಾಸ್ತ್ರವು ಒಳಗೊಂಡಿದೆ. ಇದರಲ್ಲಿ ಒಂದು ರಾಶಿಗಿಂತ ಮತ್ತೊಂದು ರಾಶಿ ಭಿನ್ನವಾಗಿದ್ದರು ದ್ವಾದಶ ರಾಶಿಯಲ್ಲಿ ಈ ನಾಲ್ಕು ರಾಶಿಗಳು ಗುಣದಲ್ಲಿ ಸುಳ್ಳು ಹೇಳುವ ಸಾಮ್ಯತೆ ಹೊಂದಿದ್ದಾರೆ. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮಿಥುನ ರಾಶಿ:-
ಮಿಥುನ ರಾಶಿಯ ಗ್ರಹಾಧಿಪತಿ ಬುಧ, ಬುಧನ ಪ್ರಭಾವದಿಂದ ಬುದ್ಧಿವಂತರಾಗಿರುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ಹೊಂದಿ ಕೀರ್ತಿವಂತರಾಗಿರುತ್ತಾರೆ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ಏನು ಇಲ್ಲ ಸಂಬಂಧಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ, ಆ ಸಾಮರ್ಥ್ಯ ಇವರಲ್ಲಿ ಇರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಸಂಬಂಧಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಥವಾ ತಮ್ಮ ವ್ಯಾಪಾರದ ಉದ್ದೇಶದಿಂದ ಇವರು ಸುಳ್ಳು ಹೇಳಬೇಕಾದ ಅನಿವಾರ್ಯತೆ ಬರುತ್ತದೆ.
ತುಲಾ ರಾಶಿ:-
ತುಲಾ ರಾಶಿಯ ಜನರು ಕೂಡ ಬಹಳ ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಇವರು ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ. ತಮ್ಮವರಿಗಾಗಿ ಏನು ಬೇಕಾದರೂ ಮಾಡುವಂತಹ ಮನಸ್ಥಿತಿ ಇವರದ್ದಾಗಿದ್ದು, ಕೆಲವೊಮ್ಮೆ ತಮಗೆ ಇಷ್ಟ ಇಲ್ಲದೇ ಇದ್ದರೂ ಕೂಡ ತನ್ನವರ ಒತ್ತಾಯದ ಮೇರೆಗೆ ಅವರ ಕಷ್ಟಕ್ಕಾಗಿ ಅಥವಾ ಅವರನ್ನು ಸಮಸ್ಯೆಯಿಂದ ಉಳಿಸುವುದಕ್ಕಾಗಿ, ಸುಳ್ಳು ಹೇಳಬೇಕಾದ ಸಂದರ್ಭ ತಂದುಕೊಡುತ್ತಾರೆ.
ಧನು ರಾಶಿ:-
ಧನು ರಾಶಿಯ ಜನರು ಧರ್ಮಪ್ರಿಯರು ಮತ್ತು ಜೀವನದ ಗುರಿಯನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿರುತ್ತಾರೆ. ಅವರಿಗೆ ಆಧ್ಯಾತ್ಮದ ಸೆಳೆತ ಇದ್ದೇ ಇರುತ್ತಾರೆ ಆಕೆಗೆ ಈ ಜೀವನದಲ್ಲಿ ಕೂಡ ಬಹಳ ಕಷ್ಟಪಟ್ಟು ನೊಂದಿರುವ ಇವರು ಸಾಧನೆ ಮೂಲಕ ಉತ್ತರಿಸಲು ಪ್ರಯತ್ನ ಪಡುತ್ತಿರುತ್ತಾರೆ. ಇವರ ಧೈರ್ಯ, ಆತ್ಮವಿಶ್ವಾಸ ಮತ್ತು ಇವರ ಬುದ್ದಿವಂತಿಕೆ ಆದರ್ಶನಿಯವಾಗಿದ್ದು ಈ ಕಾರಣದಿಂದ ಎಲ್ಲರೂ ಇವರ ಆಕರ್ಷಿತರಾಗುತ್ತಾರೆ. ವಿದ್ಯಾವಂತರು ಮತ್ತು ವಿಚಾರ ಪ್ರಿಯರಾಗಿರುವ ಇವರು ಜೀವನದ ಉದ್ದೇಶವನ್ನು ಸ್ಪಷ್ಟವಾಗಿ ಅರಿತಿರುತ್ತಾರೆ, ಆದರೂ ಕೆಲವೊಂದು ಸಂದರ್ಭದಲ್ಲಿ ಒಳ್ಳೆಯ ಉದ್ದೇಶಗಳಿಗಾಗಿ ಸುಳ್ಳು ಹೇಳುತ್ತಾರೆ.
ಮೀನ ರಾಶಿ:-
ಮೀನ ರಾಶಿಯ ಬಹಳ ಅದೃಷ್ಟವಂತರು ಮತ್ತು ಸ್ವಭಾವತಹಃ ಸಹನೆಯಿಂದ ಕೂಡಿದ ಸ್ವಭಾವದವರಾಗಿರುತ್ತಾರೆ. ಇವರಿಗಿರುವ ಮತ್ತೊಂದು ಪ್ರಶಂಸಾರ್ಹ ಗುಣ ಎಂದರೆ ಸಾಂತ್ವನ ನೀಡುವುದು ಇವರ ಎದುರು ಅದೆಷ್ಟೇ ಕಷ್ಟದ ಜೀವ ಇದ್ದರು ಬದುಕಿನ ಬಗ್ಗೆ ಉತ್ಸಾಹ ಕಳೆದುಕೊಂಡಿದ್ದರು ತಮ್ಮ ಪ್ರೀತಿ ಮಾತಿನಿಂದ ಅವರ ಮನಸ್ಸನ್ನು ಪರಿವರ್ತನೆ ಮಾಡುತ್ತಾರೆ.
ಈ ಸುದ್ದಿ ಓದಿ:-BPL / APL / AAY ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.!
ಈ ಹಾದಿಯಲ್ಲಿ ಇವರು ಕೆಲವೊಮ್ಮೆ ಇತರರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಇಂತಹ ಒಳ್ಳೆಯ ಉದ್ದೇಶಗಳಿಗಾಗಿ ಸುಳ್ಳನ್ನು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ಸುಳ್ಳು ಹೇಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ರಾಶಿಯವರು ಮಾತ್ರ ಸುಳ್ಳು ಹೇಳುತ್ತಾರೆ ಎನ್ನುವ ಅರ್ಥವಲ್ಲ ಉಳಿದ ರಾಶಿಯವರು ಕೂಡ ಇಂತಹ ಗುಣಗಳನ್ನು ಹೊಂದಿರಬಹುದು ಆದರೆ ಇದರಲ್ಲಿ ಈ ರಾಶಿಯವರ ಉದ್ದೇಶದ ಬಗ್ಗೆ ತಿಳಿಸಿದ್ದೇವೆ.