Sunday, May 28, 2023
HomePublic Vishya4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ...

4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!

 

ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ನಮಗೆಲ್ಲರಿಗೂ ತಿಳಿಯುವುದು ಒಂದೇ ಜನರ ಹೆಸರಿನಲ್ಲಿ ರಾಜಕಾರಣಿಗಳು ಹಣ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಭ್ರ’ಷ್ಟ ರಾಜಕಾರಣಿಗಳ ನಡುವೆ ಎಲೆ ಮರಿ ಕಾಯಿಯಂತೆ ಅಲ್ಲೊಬ್ಬರು ಇನ್ನೊಬ್ಬರು ರಾಜಕಾರಣಿಗಳು ಜನರಿಗೆ ಸೇವೆಯನ್ನು ಮಾಡಿ ಯಾರಿಗೂ ಗೊತ್ತಾಗದ ಹಾಗೆ ಉಳಿದುಕೊಂಡಿದ್ದಾರೆ.

ಅಪಾರವಾದ ಸೇವೆಯನ್ನು ಜನರಿಗೆ ಮಾಡಿದ್ದರು ಸಹ ಅವರು ಜನರಿಂದ ಏನನ್ನು ಸಹ ಅಪೇಕ್ಷೆ ಮಾಡಿಲ್ಲ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುವಂತಹ ಒಬ್ಬ ನಾಯಕನ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ ಹೌದು ಮುಖ್ಯಮಂತ್ರಿ ಆಗಿ 20 ವರ್ಷಗಳ ಕಾಲ ಆಡಳಿತವನ್ನು ನಡೆಸಿದಂತಹ ಮಾಣಿಕ್ ಸರ್ಕಾರ್ ಅವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದಂತಹ ಸಾಕಷ್ಟು ಮಾಹಿತಿಗಳು ಇವೆ.

ಸರ್ಅವರು ಧೀಮಂತ ನಾಯಕ ವಿದ್ಯಾಭ್ಯಾಸ ಮಾಡುತ್ತಿರುವಂತಹ ಸಂದರ್ಭದಲ್ಲಿ ಕಾಲೇಜು ಚುನಾವಣೆಯಲ್ಲಿ ನಾಯಕನಾಗಿದ್ದರು. ಕೇವಲ 31ನೇ ವಯಸ್ಸಿಗೆ ಶಾಸಕರಾಗಿ ಕಾಣಿಸಿಕೊಳ್ಳುತ್ತಾರೆ ಸಿಸಿಐ ಪಕ್ಷದ ನಾಯಕರಾಗಿರುವ ಇವರು ರಾಜಕಾರಣದಲ್ಲಿ ತಮ್ಮದೇ ಆದಂತಹ ಇತಿಹಾಸವನ್ನು ಒಳಗೊಂಡಿದ್ದಾರೆ.

ಮೊದಲಿಗೆ 1998ರಲ್ಲಿ ಮೊದಲ ಬಾರಿಗೆ ಸರ್ಕಾರ್ ಅವರು ತ್ರಿಪುರ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾಗುತ್ತಾರೆ ಅದಾದ ನಂತರ ಮತ್ತೆ ಅವರು ರಾಜ್ಯದ ರಾಜಕಾರಣದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಮಾಣಿಕ್ ಸರ್ಕಾರ್ ಅವರು ಸತತ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ಸೇವೆಯನ್ನು ಮಾಡಿದ್ದಾರೆ ಹಾಗೆಯೇ ಜನ ಮೆಚ್ಚಿದ ನಾಯಕ ಎನಿಸಿಕೊಂಡಿದ್ದಾರೆ.

1998ರಿಂದ 2018 ರ ವರೆಗೂ ಕೂಡ ಸತತವಾಗಿ ಇವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ ಅಷ್ಟರಮಟ್ಟಿಗೆ ತ್ರಿಪುರ ರಾಜ್ಯದಲ್ಲಿ ಇವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಹರಡಿತ್ತು. ಇವರು ಯಾವುದೇ ರೀತಿಯಾದಂತಹ ಹಣದ ಗಳಿಕೆ ಅಥವಾ ಇನ್ನಿತರ ಭ್ರ’ಷ್ಟಾ’ಚಾ’ರ ಯಾವುದಕ್ಕೂ ಸಹ ತಲೆಕೊಡದೆ ಜನರ ಸೇವೆಯಲ್ಲಿ ನಿರತರಾಗಿದ್ದರಿಂದ ಸತತವಾಗಿ ಇವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

ತಮ್ಮ ಕೈಯಲ್ಲಿ ಅಧಿಕಾರ ಇದ್ದರೂ ಸಹ ಇವರು ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಜನರಿಗೆ ಸಾಕಷ್ಟು ರೀತಿಯಾದಂತಹ ಉತ್ತಮ ಕೆಲಸಗಳನ್ನು ನಡೆಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಿ ಆಯ್ಕೆಗೊಂಡಂತಹ ಮಾಣಿಕ್ ಅವರಿಗೆ ಸರ್ಕಾರದ ಕಡೆಯಿಂದ ನೀಡಿದಂತಹ ನಿವಾಸವನ್ನು ಅವರು ತೊರೆದು ತಮ್ಮ ತಾತನ ಗುಡಿಸಲ ಹಳೆಯ ಮನೆಯಲ್ಲಿ ವಾಸ ಮಾಡುತ್ತಾರೆ ಕೈಯಲ್ಲಿ 2500 ರೂಪಾಯಿ ಹಾಗೂ ಅಕೌಂಟ್ ನಲ್ಲಿ 2500 ರೂಪಾಯಿ ಒಟ್ಟಾಗಿ ಐದು ಸಾವಿರ ಹಣ ಇರುತ್ತದೆ.

ಸರ್ಕಾರ್ ಹೆಸರಿನಲ್ಲಿ ಯಾವುದೇ ರೀತಿಯಾದಂತಹ ಆಸ್ತಿ ಸಹ ಇರಲಿಲ್ಲ ಎಷ್ಟು ಪ್ರಾಮಾಣಿಕರಾಗಿದ್ದರು ಎಂದರೆ ಇವರ ಪಾರದರ್ಶಕ ರಾಜಕೀಯವನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ. ಈಗಿನ ರಾಜಕೀಯ ಅಧಿಕಾರಿಗಳನ್ನು ನೋಡಿದರೆ ಇಂತಹ ಒಬ್ಬ ನಿಷ್ಠಾವಂತ ರಾಜಕೀಯ ನಾಯಕ ಸಿಕ್ಕಿರುವುದು ನಿಜಕ್ಕೂ ತ್ರಿಪುರ ರಾಜ್ಯದ ಅದೃಷ್ಟ ಎಂದು ಹೇಳಬಹುದು.

ಈ ನಿಷ್ಠಾವಂತ ಅಧಿಕಾರಿಯ ಬಗ್ಗೆ ಎಷ್ಟು ಹೇಳಿದರು ಸಹ ಸಾಕಾಗುವುದಿಲ್ಲ ಅಷ್ಟರಮಟ್ಟಿಗೆ ಇವರ ರಾಜಕೀಯ ಪ್ರಜ್ಞೆ ಹಾಗೂ ಇವರ ಪಾರದರ್ಶಕ ವಾದಂತಹ ಸೇವೆ ಇಂದಿಗೂ ಸಹ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಇವರನ್ನು ಹಾಡಿ ಹೊಗಳದೇ ಇರುವಂತಹ ವ್ಯಕ್ತಿಯೇ ಇಲ್ಲ ತ್ರಿಪುರ ರಾಜ್ಯದಲ್ಲಿ ಮಾಣಿಕ್ ಸರ್ಕಾರ್ ಅವರು ಎಂದರೆ ಎಲ್ಲರಿಗೂ ಸಹ ಎಲ್ಲಿಲ್ಲದ ಗೌರವ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ