ಕೇವಲ 4 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ RCC ಮನೆ ಒಮ್ಮೆ ನೋಡಿ. ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟಲು ಸಾಧ್ಯವಿದೆಯಾ ಎಂದು ಅನುಮಾನ ಪಡುವವರು ಒಮ್ಮೆ ಇದನ್ನು ಓದಿ.!

 

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅರಮನೆಯಂತಹ ಸಕಲ ಸೌಲಭ್ಯಗಳು ಇರುವ ಮನೆಗಳು ಹಾಗೂ ನೋಡಿದವರ ಕಣ್ಣನ್ನು ಮನಸೂರೆ ಗೊಳಿಸುವಂತಹ ಮನಮೋಹಕ ವಿನ್ಯಾಸದ ಮನೆಗಳು ಯಾರಿಗೆ ಇಷ್ಟ ಇರುವುದಿಲ್ಲ ಆದರೆ ಎಲ್ಲರಿಗೂ ಕೂಡ ಅಷ್ಟು ಬಜೆಟ್ ಅಲ್ಲಿ ಮನೆ ಕಟ್ಟಲು ಆಗುವುದಿಲ್ಲ.

ಅದರಲ್ಲೂ ಭಾರತದಂತಹ ದೇಶದಲ್ಲಿ ಬಡವರು ಮತ್ತು ಸಾಮಾನ್ಯ ವರ್ಗದವರೇ ಹೆಚ್ಚಾಗಿರುವುದರಿಂದ ಮೂಲಭೂತ ಅವಶ್ಯಕತೆ ಅದ ಒಂದು ಸ್ವಂತ ಮನೆ ಇದ್ದರೆ ಸಾಕು ಅದರಲ್ಲೂ ಕೂಡ ಸಾಧ್ಯವಾದಷ್ಟು ಕಡಿಮೆ ಬಜೆಟ್ಟಿಗೆ ಇದ್ದರೆ ಸಾಕು ಎಂದು ಆಸೆಪಡುವವರೇ ಹೆಚ್ಚು. ಈಗಿನ ಕಾಲದಲ್ಲಿ RCC ಛಾವಣಿಯ ಒಂದು ಚಿಕ್ಕ ಮನೆ ಕಟ್ಟಬೇಕೆಂದರು ಕನಿಷ್ಠ ಏಳರಿಂದ ಎಂಟು ಲಕ್ಷ ಬಜೆಟ್ ಬೇಕೆ ಬೇಕು.

ಆದರೆ ಕೆಲ ಅಡ್ಜಸ್ಟ್ಮೆಂಟ್ ಗಳನ್ನು ಮಾಡಿಕೊಂಡರೆ ಅದರ ಅರ್ಧ ಖರ್ಚಿನಲ್ಲಿ ಕೂಡ ಮನೆ ಕಟ್ಟಬಹುದು. ಮನೆ ಕಟ್ಟುವಾಗ ಈ ನಿಯಮಗಳನ್ನು ಪಾಲಿಸಿದರೆ ನೀವು ನಾಲ್ಕೇ ಲಕ್ಷದಲ್ಲಿ ಕೂಡ RCC ಮನೆ ಕಟ್ಟಬಹುದು.
● ನೀವು ಈ ಬಜೆಟ್ ಅಲ್ಲಿ 450sq.ft 20:20 ಮನೆ ಕಟ್ಟಬಹುದು ಅಷ್ಟೇ
● ಟೆರೇಸ್ ಗೆ ಹೋಗಲು ಸಿವಿಲ್ ಆಗಿ ಮಾಡುವ ಮೆಟ್ಟಿಲುಗಳನ್ನ ಪೋರ್ಚನ್ನು ನಿರ್ಮಾಣ ಮಾಡಿದರೆ ಖರ್ಚು ಹೆಚ್ಚು,ಹಾಗಾಗಿ ಎಂ ಎಸ್ ಲಾಡರ್ಗಳನ್ನು ಮಾಡಿಕೊಳ್ಳಿ, ಮೆಟ್ಟಿಲು ರೀತಿಯ ಇರುವ ಫ್ಲಾಟ್ ಆಗಿರುವ ಲಾಡರ್ಗಳನ್ನು ಅಳವಡಿಸಿಕೊಳ್ಳಬಹುದು.

● ಹೊರಗಿನ ಗೋಡೆಗಳು 6 ಇಂಚಿನಲ್ಲಿ ಹಾಗೂ ಒಳಗಿನ ಗೋಡೆಗಳು 4 ಇಂಚಿನಲ್ಲಿ ಇರಬೇಕು. ಬೇಕಿದ್ದಲ್ಲಿ ಒಳಗಿನ ಗೋಡೆಗಳು ಗಟ್ಟಿಯಾಗಿರಲಿ ಎನ್ನುವ ಕಾರಣಕ್ಕೆ ಅಲ್ಲಲ್ಲಿ ಭೀಮ್ ಗಳನ್ನು ಹಾಕಿಸಬಹುದು. ಎರಡು ಕಡೆ ಪ್ಲಾಸ್ಟಿಂಗ್ ಇರುವುದರಿಂದ ಗೋಡೆಗಳು ಗಟ್ಟಿಯಾಗಿರುತ್ತವೆ.
● ಫೌಂಡೇಶನ್ ವಿಷಯಕ್ಕೆ ಬಂದಾಗ ಲೋಡ್ ಬೇರಿಂಗ್ ಸೆಕ್ಶನಲ್ಲಿ ಅಥವಾ 3 ಫೀಟ್ ಫೌಂಡೇಶನ್ ಅಲ್ಲಿ ನಿರ್ಮಿಸಬಹುದು. ಮುಂದೆ ಮನೆಯನ್ನು ಎಕ್ಸ್ಟೆಂಡ್ ಮಾಡುವ ಯೋಚನೆ ಇದ್ದರೆ 4:3:3 ಫೌಂಡೇಶನ್ ಮಾಡಿಸಿ.

● ಮೋಲ್ಡ್ ನಾಲ್ಕು ರಿಂದ ಐದು ಇಂಚು ಇದ್ದರೆ ಸಾಕು.
● PPC ಸಿಮೆಂಟ್ ಬಳಸಿ. ಉಳಿದ ಸಿಮೆಂಟ್ ರೇಟ್ ಗಿಂತ ಇದು ಕಡಿಮೆ ಇರುತ್ತದೆ ಆದರೆ ಕ್ಯೂರಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ.
ಸಿಮೆಂಟ್ ರೇಟ್ ವಿಷಯದಲ್ಲಿ ನಿರ್ಲಕ್ಷ ಮಾಡುವಂತಿಲ್ಲ ಯಾಕೆಂದರೆ PPC ಸಿಮೆಂಟ್ ಬಳಸುವುದರಿಂದ ಕನಿಷ್ಠ 20,000 ಆದರೂ ಉಳಿತಾಯ ಹಾಗೆ ಆಗುತ್ತದೆ. PPC ಸಿಗದೆ ಇದ್ದ ಪಕ್ಷದಲ್ಲಿ ಜುವಾರಿ, ಪ್ರಿಯ, ಮಹಾ 43 ಗ್ರೇಡ್ ಇವುಗಳನ್ನು ಸಹ ಬಳಸಬಹುದು.

● ಹಾಲ್ ಸೈಜ್ 10:12 ಇದ್ದರೆ ಸಾಕು, ಟೈಲ್ಸ್ ಗಳನ್ನು ಆರಿಸುವಾಗ 30rs sq.ft ಬೆಲೆಯಲ್ಲಿ ತೆಗೆದುಕೊಳ್ಳಿ ಸಾಕು ಅದಕ್ಕಿಂತ ಹೆಚ್ಚಿನದನ್ನು ಆರಿಸಬೇಡಿ.
● ಹಾಲ್ ಗೆ 2:2 ಅದನ್ನು ಹೊರತುಪಡಿಸಿ ಕಿಚನ್ ಪಾರ್ಕಿಂಗ್ ಬಾತ್ರೂಮ್ ಉಳಿದ ಕಡೆಯೆಲ್ಲ 1:1 ಟೈಲ್ಸ್ ಬಳಸಿ. 1:1 ಟೈಲ್ಸ್ ಗಳ ಬೆಲೆ 20rs sq.ft ಇರುತ್ತದೆ ಅಷ್ಟೇ. ಟೈಲ್ಸ್ ಶಾಪ್ಗಳಲ್ಲಿ ಉಪಯೋಗಿಸದೆ ಇರುವ ಟೈಲ್ಸ್ ಗಳನ್ನು ಖರೀದಿಸಿದರೆ ಅದು ಹತ್ತು ರೂಪಾಯಿಗೆ ಸಿಗುತ್ತದೆ. ಅವುಗಳನ್ನು ನೀವೇ ಡಿಸೈನಾಗಿ ಜೋಡಿಸಿಕೊಂಡು ಬಾತ್ರೂಮ್ ಮುಂತಾದ ಕಡೆ ಉಪಯೋಗಿಸಿಕೊಂಡರೆ ಅದರಲ್ಲೂ ಸಹ ಖರ್ಚನ್ನು ಕಡಿಮೆ ಮಾಡಬಹುದು.

ಈ ರೀತಿ ಖರ್ಚು ಕಡಿಮೆ ಮಾಡಿ ಮನೆ ಕಟ್ಟಲು ಇನ್ನೂ ಅನೇಕ ಟೆಕ್ನಿಕ್ ಗಳು ಇವೆ. ಅವುಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment