ಇತ್ತೀಚಿನ ದಿನಗಳಲ್ಲಿ ಪಾಸ್ವರ್ಡ್ ಅಥವಾ ಪಿನ್ ಕೋಡ್ ಗಳನ್ನು ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಯಾಕೆಂದರೆ ನಮ್ಮ ಕೈಯಲ್ಲಿರುವ ಮೊಬೈಲ್ ಅನ್ನು ಅನ್ಲಾಕ್ ಮಾಡುವುದರಿಂದ ಹಿಡಿದು ನಮ್ಮ ಸಿಸ್ಟಮ್ ನನ್ನ ಷಟ್ ಆನ್ ಮಾಡುವ ತನಕ ಹೀಗೆ ಪ್ರತಿಯೊಂದು ವಿಚಾರಕ್ಕೂ ಕೂಡ ನಮಗೆ ಪಿನ್ ಕೋಡ್ ಹಾಗೂ ಪಾಸ್ವರ್ಡ್ ಬೇಕು ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೂಡ ಪಿನ್ ಕೋಡ್ ಎನ್ನುವುದು ಹೆಚ್ಚು ಬಳಕೆಯಾಗುತ್ತಿದೆ.
ಯಾಕೆಂದರೆ ಇತ್ತೀಚೆಗೆ ನಾವು ನಮ್ಮ ಖಾತೆಗಳಲ್ಲಿರುವ ಹಣವನ್ನು ಪಡೆಯಲು ಬ್ಯಾಂಕ್ ಶಾಖೆಗೆ ಹೋಗುವುದು ಬಹಳ ಕಡಿಮೆ. ಬ್ಯಾಂಕ್ ಗಳು ನೀಡಿರುವ ATM ಕಾರ್ಡ್ ಗಳ ಅನುಕೂಲತೆ ಮಾಡಿ ಕೊಟ್ಟಿರುವುದರಿಂದ ಅವುಗಳ ಪಾಸ್ವರ್ಡ್ ಅನ್ನು ಹಾಕಿ ATM ಮಿಷನ್ಗಳಲ್ಲಿ ಹಣವನ್ನು ಪಡೆಯುತ್ತೇವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕೆಂಬ ಅಂಶ ಏನೆಂದರೆ, ಆ ಕಾರ್ಡಿಗೆ ಅದೇ ಪಿನ್ ಕೋಡ್ ಅನ್ನು ಹಾಕಿದಾಗ ಮಾತ್ರ ನಮಗೆ ಹಣ ಸಿಗುವುದು ಎನ್ನುವುದು.
ಸಮಸ್ಯೆ ಏನೆಂದರೆ ನಾವು ಒಂದು ATM ಕಾರ್ಡ್ ಹೊಂದಿದ್ದರೆ ಒಂದು ಪಾಸ್ವರ್ಡ್ ಅನ್ನು ನೆನಪು ಇಟ್ಟುಕೊಳ್ಳಬಹುದು. ಆದರೆ ಈಗೀಗ ಪ್ರತಿಯೊಬ್ಬರ ಬಳಿಯೂ ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೀಗೆ ATM ಕಾರ್ಡ್ ಗಳು ಇರುತ್ತದೆ. ಎಲ್ಲಾ ಪಾಸ್ವರ್ಡ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೇ.
ಯಾವುದಾದರೂ ಒಂದು ATM ಕಾರ್ಡನ್ನು ಬಹಳ ದಿನದವರೆಗೆ ಬಳಸದೆ ಇದ್ದಾಗ ನಾವು ಈಸಿಯಾಗಿ ಅದರ ಪಿನ್ ಕೋಡ್ ಅಥವಾ ಪಾಸ್ವರ್ಡ್ ಅನ್ನು ಮರೆತು ಬಿಡುತ್ತೇವೆ. ಅಂತಹ ಸಮಯದಲ್ಲಿ ಹೋಗಿ ಹಲವು ಬಾರಿ ನಾವು ಪ್ರಯತ್ನಗಳನ್ನು ಮಾಡಿದರೆ ಹಣ ನಮಗೆ ಬರುವುದು ಇಲ್ಲ ಮತ್ತು ನಮ್ಮ ATM ಕಾರ್ಡ್ ಕೂಡ ಬ್ಲಾಕ್ ಆಗಬಹುದು.
ಕೆಲವೊಮ್ಮೆ ನಮಗೆ ಪಿನ್ ಕೋಡ್ ನೆನಪಿದ್ದರೂ ಸಹ ಆಗಾಗ ಅವುಗಳನ್ನು ಬದಲಾಯಿಸುವುದು ಅನಿವಾರ್ಯ ಹಾಗೂ ಕ್ಷೇಮ ಕೂಡ. ಇಂತಹ ಸಮಯಗಳಲ್ಲಿ ಕ್ಷಣದಲ್ಲಿಯೇ ನಮ್ಮ ATM ಕಾರ್ಡ್ ಅನ್ನು ಬದಲಾಯಿಸುವ ಅನುಕೂಲತೆಯನ್ನು ಬ್ಯಾಂಕ್ ಗಳು ಮಾಡಿಕೊಟ್ಟಿವೆ. ಹೀಗೆ ಮಾಡಲು ನಮ್ಮ ಮೊಬೈಲ್ ನಂಬರ್ ಗಳು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು. ಮೊಬೈಲ್ ಮತ್ತು ATM ಕಾರ್ಡ್ ನಿಮ್ಮ ಕೈಲಿದ್ದರೆ ನೀವು ATM ಮೆಷಿನ್ ಗಳ ಮೂಲಕವೇ ನಿಮ್ಮ ಪಿನ್ ಕೋಡ್ ಅನ್ನು ಬದಲಾಯಿಸಿಕೊಳ್ಳಬಹುದು.
● ಮೊದಲಿಗೆ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ನಿಮ್ಮ ಬ್ಯಾಂಕ್ ಖಾತೆಯ ATM ಗೆ ಭೇಟಿ ಕೊಡಿ.
● ಬ್ಯಾಂಕಿನಿಂದ ಪಡೆದಿರುವ ATM ಕಾರ್ಡನ್ನು ಮಿಷನ್ ಗೆ ಹಾಕಿ ಬ್ಯಾಂಕಿಂಗ್ ಎನ್ನುವ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.
● ಜನರೇಟ್ ಪಿನ್ ಅಥವಾ ಪಿನ್ ರಿಸೆಟ್ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಅಕೌಂಟ್ ನಂಬರ್ ಅನ್ನು ಕೇಳುತ್ತದೆ.
● ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ. ಹಾಗೆ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಅನ್ನು ಕೂಡ ಎಂಟ್ರಿ ಮಾಡಿ.
● ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. OTPಯನ್ನು ಎಂಟ್ರಿ ಮಾಡಿದ ನಂತರ ನಿಮ್ಮ ಪಿನ್ ಕೋಡ್ ಅನ್ನು ಬದಲಾಯಿಸಲು ಕೇಳುತ್ತದೆ ಆಗ ನಿಮಗೆ ಇಷ್ಟವಾದ ಯಾವುದಾದರೂ ನಾಲ್ಕು ಸಂಖ್ಯೆಯನ್ನು ನಿಮ್ಮ ಪಿನ್ ಕೋಡ್ ಆಗಿ ಸೆಟ್ ಮಾಡಿಕೊಳ್ಳಿ.